Subscribe to Gizbot

ರೆಡ್ಮಿ ನೋಟ್ 4 ಸ್ಫೋಟಕ್ಕೆ ಕಾರಣ ತಿಳಿಸಿದ ಶಿಯೋಮಿ ಕಂಪೆನಿ!! ಏನು ಗೊತ್ತಾ?

Written By:

ಬೆಂಗಳೂರಿನಲ್ಲಿ ರೆಡ್ಮಿ ನೋಟ್ 4 ಸ್ಮಾರ್ಟ್‌ಫೋನ್ ಸ್ಫೋಟ ಸಂಭಂದಿಸಿದಂತೆ ಶಿಯೋಮಿ ವರದಿ ಬಿಡುಗಡೆ ಮಾಡಿದೆ.! ಬೆಂಗಳೂರಿನಲ್ಲಿ ಮೊಬೈಲ್ ಸ್ಫೋಟಗೊಂಡ ಬಗ್ಗೆ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದ್ದ ವಿಡಿಯೋ ಭಾರೀ ವಿವಾದಕ್ಕೆ ಕಾರಣವಾಗಿದ್ದು, ಇದೀಗ ಶಿಯೋಮಿ ಈ ಪ್ರಕರಣದ ಬಗ್ಗೆ ಉತ್ತರ ನೀಡಿದೆ.!!

ಇಂಟರ್ನೆಟ್‌ನಲ್ಲಿ ಹರಿದಾಡಿದ ಕೆಲವು ವಿಡಿಯೋಗಳಿಗೂ ಮತ್ತು ಬೆಂಗಳೂರಿನಲ್ಲಿ ನಡೆದ ರೆಡ್ಮಿ ನೋಟ್-4 ಸ್ಮಾರ್ಟ್‌ಫೋನ್ ಸ್ಪೋಟಗೊಂಡಿದ್ದಕ್ಕೆ ಸಂಬಂಧವಿಲ್ಲ. ಆದರೆ, ಬೆಂಗಳೂರಿನಲ್ಲಿ ಬಳಕೆದಾರನ ತಪ್ಪಿನಿಂದಲೇ ರೆಡ್ಮಿ ನೋಟ್-4 ಸ್ಫೋಟಗೊಂಡಿರುವುದು ನಿಜ ಎಂದು ಶಿಯೋಮಿ ಹೇಳಿದೆ.

ರೆಡ್ಮಿ ನೋಟ್ 4 ಸ್ಫೋಟಕ್ಕೆ ಕಾರಣ ತಿಳಿಸಿದ ಶಿಯೋಮಿ ಕಂಪೆನಿ!! ಏನು ಗೊತ್ತಾ?

ತನಿಖೆ ವೇಳೆ ಈ ಸತ್ಯ ಧೃಡಪಟ್ಟಿದ್ದು, ಮೊಬೈಲ್ ಮಾಲೀಕ ಅನ್ಯ ಚಾರ್ಜರ್ ಬಳಸಿದ್ದರಿಂದ ಫೋನ್ ಸ್ಫೋಟಗೊಂಡು ಬೆಂಕಿಜ್ವಾಲೆ ಹೊತ್ತಿಕೊಂಡಿದೆ. ರೆಡ್ಮಿ ನೋಟ್ 4 ಮೊಬೈಲ್ ಸ್ಫೋಟ ಅನ್ಯ ಚಾರ್ಜರ್ ಬಳಕೆಯಿಂದ ಸಂಭವಿಸಿದೆ ಎಂದ ಸಂಸ್ಥೆ ಶಿಯೋಮಿ ಸ್ಪಷ್ಟಪಡಿಸಿದೆ.!!

ರೆಡ್ಮಿ ನೋಟ್ 4 ಸ್ಫೋಟಕ್ಕೆ ಕಾರಣ ತಿಳಿಸಿದ ಶಿಯೋಮಿ ಕಂಪೆನಿ!! ಏನು ಗೊತ್ತಾ?

ಬೆಂಗಳೂರಿನಲ್ಲಿ ಶಿಯೋಮಿ ರೆಡ್ಮಿ ನೋಟ್-4 ಖರೀದಿಸಿದ್ದ ಇತರ ಗ್ರಾಹಕರೂ ಸಹ ಈ ಸ್ಫೋಟದ ಸುದ್ದಿಕೇಳಿ ಬೆಚ್ಚಿಬಿದ್ದಿದ್ದರು. ಲಕ್ಷಾಂತರ ಶಿಯೋಮಿ ಗ್ರಾಹಕರಿಗೂ ಈ ಬಗ್ಗೆ ಆತಂಕ ಶುರುವಾಗಿತ್ತು. ಇದೀಗ, ಎಲ್ಲಾ ಆತಂಕಗಳಿಗೆ ಶಿಯೋಮಿ ಇಂಡಿಯಾ ತೆರೆ ಎಳೆದಿದೆ.

ರೆಡ್ಮಿ ನೋಟ್ 4 ಸ್ಫೋಟಕ್ಕೆ ಕಾರಣ ತಿಳಿಸಿದ ಶಿಯೋಮಿ ಕಂಪೆನಿ!! ಏನು ಗೊತ್ತಾ?

ಸ್ಫೋಟಗೊಂಡ ಮೊಬೈಲ್ಗೆ ಬದಲಾಗಿ ಬೇರೆ ಮೊಬೈಲ್ ನೀಡಿಲ್ಲವೆಂದು ದೂರು ದಾಖಲಿಸಿದ್ದ ಮೊಬೈಲ್ ಮಾಲಿಕನಿಗೆ ಅದರ ಬದಲಾಗಿ ಉಚಿತವಾಗಿ ಹೊಸ ಫೋನ್ ನೀಡಿರುವುದಾಗಿ ಶಿಯೋಮಿ ಇಂಡಿಯಾ ತಿಳಿಸಿದೆ. ಮತ್ತು ಶಿಯೋಮಿ ಫೋನ್‌ಗಳಿಗೆ ಅದರದ್ಧೇ ಚಾರ್ಜರ್ ಬಳಸುವಂತೆ ಸಂಸ್ಥೆ ಸ್ಪಷ್ಟವಾಗಿ ಹೇಳಿದೆ.

Read more about:
English summary
Xiaomi says video showing Redmi Note 4 blast is fake. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot