ಶಿಯೋಮಿ ಸ್ಮಾರ್ಟ್‌ಫೋನ್ ಖರೀದಿಸುವವರಿಗೆ ಸಿಗಲಿದೆ ಸುಲಭ ಸಾಲ! ಏನಿದು ಯೋಜನೆ?
ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಶಿಯೋಮಿ ಕಂಪೆನಿ ತನ್ನದೇ ಆದ ಪ್ರಾಬಲ್ಯವನ್ನು ಸಾಧಿಸಿದೆ. ಎಂಟ್ರಿ ಲೆವೆಲ್, ಮಿಡ್‌ರೇಂಜ್ ಮಾತ್ರವಲ್ಲದೆ ಟಾಪ್ ಎಂಡ್ ಸ್ಮಾರ್ಟ್‌ಫೋನ್‌ಗಳನ್ನು ಕೂಡ ಪರಿಚಯಿಸುತ್ತಾ ಬಂದಿದೆ. ಇದೀಗ ತಮ್ಮ ಪ್ರಾಡಕ್ಟ್‌ಗಳನ್ನು ಹೆಚ್ಚಿನ ಜನರಿಗೆ ಪರಿಚಯಿಸುವ ನಿಟ್ಟಿನಲ್ಲಿ ಹೊಸ ಡಿಜಿಟಲ್ ಲೋನ್ ಸ್ಕೀಮ್ ಅನ್ನು ಪರಿಚಯಿಸಿದೆ.
ಹೌದು, ಶಿಯೋಮಿ ಕಂಪೆನಿ ಭಾರತದಲ್ಲಿ "Xiaomi Easy Finance" ಎಂಬ ಹೊಸ ಕಾರ್ಯಕ್ರಮವನ್ನು ಪರಿಚಯಿಸಿದೆ. ಇದರ ಮೂಲಕ ಗ್ರಾಹಕರು ತ್ವರಿತ ಮತ್ತು ಸುಲಭವಾಗಿ ಡಿಜಿಟಲ್ ಲೋನ್ ಪಡೆಯಲು ಸಾಧ್ಯವಾಗಲಿದೆ. ಇದರಿಂದ ನಿಮಗೆ ವಿವಿಧ ಹಣಕಾಸಿನ ಆಯ್ಕೆಗಳ ಲಾಭವನ್ನು ಕೂಡ ಪಡೆಯಬಹುದು. ಹಾಗಾದ್ರೆ ಶಿಯೋಮಿ ಪರಿಚಯಿಸಿರುವ ಹೊಸ ಡಿಜಿಟಲ್ ಲೋನ್ ಸ್ಕೀಮ್‌ನ ವಿವರಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಶಿಯೋಮಿ ಸುಲಭ ಹಣಕಾಸು ( Xiaomi Easy Finance) ಯೋಜನೆ ಹೇಗಿದೆ?
ಶಿಯೋಮಿ ಕಂಪೆನಿ ಭಾರತದಲ್ಲಿ ತನ್ನ ಗ್ರಾಹಕರಿಗೆ ಸ್ಮಾರ್ಟ್‌ಫೋನ್ ಖರೀದಿಸುವುದಕ್ಕೆ Xiaomi Easy Finance ಸ್ಕೀಮ್ ಪರಿಚಯಿಸಿದೆ. ಇದು ಡಿಜಿಟಲ್ ಲೋನ್ ಪ್ರೋಗ್ರಾಂ ಆಗಿದೆ. ಇದನ್ನು ನೀವು ಶಿಯೋಮಿ ರೆಡ್ಮಿ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸುವ ಭಾರತೀಯ ಗ್ರಾಹಕರಿಗೆ ಹೊಂದಿಕೊಳ್ಳುವ ಆಯ್ಕೆಗಳನ್ನು ನೀಡಲಿದೆ. ಈ ಪ್ರೋಗ್ರಾಂ ಡಿಜಿಟಲ್ ಹಣಕಾಸು ಸೇವೆ ಒದಗಿಸುವ ಆಕ್ಸಿಯೊ ಮತ್ತು ಭದ್ರತಾ ತಜ್ಞರಾದ ಟ್ರಸ್ಟೋನಿಕ್ ಸಹಭಾಗಿತ್ವದಲ್ಲಿದೆ.
ಇನ್ನು ಶಿಯೋಮಿ ಸುಲಭ ಹಣಕಾಸು ಯೋಜನೆಯು ಮಿ ಹೋಮ್ಸ್, ಮಿ ಸ್ಟುಡಿಯೋಸ್, ಮಿ ಸ್ಟೋರ್, ಮಿ ಆದ್ಯತೆಯ ಪಾಲುದಾರರು, ಲೋಕಲ್ ರಿಟೇಲ್ ಸ್ಟೋರ್‌ಗಳು ಮತ್ತು ದೇಶಾದ್ಯಂತ ಹರಡಿರುವ ಎಲ್ಲಾ ಅಧಿಕೃತ ಶಿಯೋಮಿ ಔಟ್‌ಲೆಟ್‌ಗಳಲ್ಲಿ ಲಭ್ಯವಾಗಲಿದೆ. ಇನ್ನು ಈ ಯೋಜನೆಯಲ್ಲಿ ಸಾಲವನ್ನು ಪಡೆಯಲು, ಗ್ರಾಹಕರು ತಮ್ಮ KYC ದಾಖಲೆಗಳು ಮತ್ತು PAN ಕಾರ್ಡ್ ವಿವರಗಳನ್ನು ಸಲ್ಲಿಸಬೇಕಾಗುತ್ತದೆ.
ಶಿಯೋಮಿ ಸುಲಭ ಹಣಕಾಸು ಯೋಜನೆಯಲ್ಲಿ ಸಾಲದ ಅರ್ಜಿ ಪ್ರಕ್ರಿಯೆಯು ಡಿಜಿಟಲ್ ಮತ್ತು ಪೇಪರ್‌ಲೆಸ್ ಆಗಿದ್ದು, ಗ್ರಾಹಕರು ತ್ವರಿತ ಸಾಲದ ಅನುಮೋದನೆಯನ್ನು ಪಡೆಯಬಹುದು. ಒಮ್ಮೆ ಸಾಲವನ್ನು ಅನುಮೋದಿಸಿದ ನಂತರ, ಗ್ರಾಹಕರು ನೋ ಕಾಸ್ಟ್ EMI ಆಯ್ಕೆಗಳಲ್ಲಿ ಯಾವುದೇ ಶಿಯೋಮಿ ಸ್ಮಾರ್ಟ್‌ಫೋನ್ ಅನ್ನು ಖರೀದಿಸಬಹುದಾಗಿದೆ. ಶಿಯೋಮಿ ಸುಲಭ ಹಣಕಾಸು ಯೋಜನೆಯನ್ನು ಸ್ಮಾರ್ಟ್‌ಫೋನ್ ಖರೀದಿಸುವವರಿಗೆ ಇನ್ನಷ್ಟು ಹತ್ತಿರವಾಗುವ ನಿಟ್ಟಿನಲ್ಲಿ ವಿನ್ಯಾಸಗೊಳಿಸಲಾಗಿದೆ ಎಂದು ಶಿಯೋಮಿ ಹೇಳಿದೆ.
ಇನ್ನು ಈ ಯೋಜನೆಯು ಭಾರತದಲ್ಲಿ ತನ್ನ ಮಾರುಕಟ್ಟೆ ಪಾಲನ್ನು ಇನ್ನಷ್ಟು ವಿಸ್ತರಿಸಲು ಸಹಾಯ ಮಾಡಲಿದೆ ಎಂದು ಶಿಯೋಮಿ ಕಂಪೆನಿ ಹೇಳಿದೆ. ಇದರಿಂದ 2023ರ ಮೊದಲ ತ್ರೈಮಾಸಿಕದಲ್ಲಿ ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯು 10% ರಷ್ಟು ಬೆಳೆದಿದೆ. ಭಾರತದಲ್ಲಿ ಶಿಯೋಮಿ ಕಂಪೆನಿ 23% ಮಾರುಕಟ್ಟೆ ಪಾಲನ್ನು ಹೊಂದುವ ಮೂಲಕ ಪ್ರಮುಖ ಸ್ಮಾರ್ಟ್‌ಫೋನ್ ಮಾರಾಟಗಾರ ಎಂದೆನಿಸಿಕೊ೦ಡಿದೆ.
ಇದಲ್ಲದೆ ಶಿಯೋಮಿ ಕಂಪೆನಿಯು ಇತ್ತೀಚಿಗೆ ಶಿಯೋಮಿ 13T ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್ 6.67 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದೆ. ಇದು 4nm ಮೀಡಿಯಾ ಟೆಕ್ ಡೈಮೆನ್ಸಿಟಿ 8200 ಅಲ್ಟ್ರಾ SoC ಪ್ರೊಸೆಸರ್ ವೇಗವನ್ನು ಹೊಂದಿದೆ. ಹಾಗೆಯೇ 12GB RAM ಮತ್ತು 256GB, 8GB RAM + 256GB ಮತ್ತು 12GB RAM + 256GB ಸ್ಟೋರೇಜ್ ಸಾಮರ್ಥ್ಯದ ಮೂರು ವೇರಿಯೆಂಟ್ ಆಯ್ಕೆಗಳಲ್ಲಿ ಬರಲಿದೆ. ಇನ್ನು ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿದೆ.


Click it and Unblock the Notifications








