ಕ್ಸಯೋಮಿ ಉತ್ಪನ್ನಗಳು ಭಾರತದಲ್ಲಿ ಕೂಡಲೇ ಲಭ್ಯ

Written By:

ತನ್ನ ಅಧಿಕೃತ ಮತ್ತು ನಿರೀಕ್ಷಿತ ಪ್ರಸ್ತುತತೆಯಾದ, ಚೈನೀಸ್ ಸ್ಮಾರ್ಟ್‌ಫೋನ್ ತಯಾರಕರು ತನ್ನ ಬ್ರ್ಯಾಂಡ್ ಹೊಸ ವೆಬ್‌ಸೈಟ್ ಅನ್ನು ಲಾಂಚ್ ಮಾಡುತ್ತಿದೆ. ಆದರೆ ಈ ವೆಬ್‌ಸೈಟ್ ಅಸ್ತಿತ್ವಕ್ಕೆ ಬರಲು ಕೆಲವು ವಾರಗಳು ಬೇಕಾಗಬಹುದು.

ಭಾರತೀಯ ಕಾರ್ಯಭಾರಕ್ಕಾಗಿ ಜನರಲ್ ಮ್ಯಾನೇಜರ್ ಆಗಿ ಮನು ಕುಮಾರ್‌ರನ್ನು ಕಂಪೆನಿ ಅಧಿಕೃತವಾಗಿ ಘೋಷಿಸಿದ್ದು ಕ್ಸಿಯೋಮಿ ಉತ್ಪನ್ನಗಳು ಖರೀದಿಗಾಗಿ ಭಾರತದಲ್ಲಿ ಎಂದಿನಿಂದ ದೊರೆಯಲಿದೆ ಎಂಬುದು ಇನ್ನೂ ದೃಢಪಟ್ಟಿಲ್ಲ.

ಕ್ಸಯೋಮಿ ವೆಬ್‌ಸೈಟ್ ಭಾರತದಲ್ಲಿ ಲಾಂಚಿಂಗ್

ಈ ಕಂಪೆನಿ ಈಗಾಗಲೇ ಸ್ಮಾರ್ಟ್‌ಫೋನ್‌ಗಳು ಮತ್ತು ಉಪಕರಣಗಳನ್ನು ನಿಮ್ಮ ಪಾಕೆಟ್‌ಗೆ ಸರಿಯಾಗಿ ಮಾರುತ್ತಿದ್ದು ಕಡಿಮೆ ಪ್ರೈಸ್ ಟ್ಯಾಗ್‌ನಲ್ಲಿ ಮಾರುತ್ತದೆ. ಕಂಪೆನಿಯು ಈಗಾಗಲೇ ತನ್ನ ಕಾರ್ಯಾಚರಣೆಯನ್ನು ಚೈನಾ, ಹಾಂಕ್‌ಕಾಂಗ್, ತೈವಾನ್, ಸಿಂಗಾಪುರ್ ಮತ್ತು ಮಲೇಶಿಯಾದಲ್ಲಿ ಪ್ರಾರಂಭಿಸಿದ್ದು ಯಶಸ್ಸನ್ನು ಗಳಿಸಿದೆ.

ಇದು ಪ್ರಸ್ತುತ ರೀಟೈಲ್ ಉತ್ಪನ್ನಗಳನ್ನು ಇಲ್ಲಿ ಮಾರುತ್ತಿದ್ದು ಮಿ3, ರೆಡ್‌ಮೀ, ರೆಡ್‌ಮೀ 1 ಎಸ್ ಮತ್ತು ರೆಡ್‌ಮೀ ನೋಟ್ ಅನ್ನು ಈ ದೇಶಗಳಲ್ಲಿ ಸರಬರಾಜು ಮಾಡುತ್ತಿದೆ, ಕ್ಸಯೋಮಿ ಫಿಲಿಫೈನ್ಸ್ ಹಾಗೂ ಇಂಡೋನೇಶಿಯಾದಲ್ಲಿ ಕೂಡಲೇ ತನ್ನ ವ್ಯಾಪಾರೀ ಕಾರ್ಯಾಚರಣೆಯನ್ನು ಆರಂಭಿಸುವ ನಿಟ್ಟಿನಲ್ಲಿದೆ.

ಕಂಪೆನಿಯೂ ಭಾರತದಲ್ಲಿ ಕೂಡ ತನ್ನ ಉತ್ಪನ್ನಗಳನ್ನು ಸರಬರಾಜು ಮಾಡಹೊರಟಿದ್ದು ದೀಪಾವಳಿಗೆ ಉತ್ಪನ್ನಗಳು ಲಭ್ಯವಾಗಲಿದೆ. ಆದರೆ ಕಂಪೆನಿಯು ಭಾರತದಲ್ಲಿ ತನ್ನ ವೆಬ್‌ಸೈಟ್ ಲಾಂಚಿಂಗ್ ಅನ್ನು ಮಾಡಿದ್ದು, ಉತ್ಪನ್ನಗಳು ಯಾವಾಗ ಬರುತ್ತವೆ ಎಂಬುದನ್ನು ನಾವು ಕಾದುನೋಡಬೇಕಿರುವುದು ಅನಿವಾರ್ಯವಾಗಿದೆ.

Read more about:
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot