Home
ಸುದ್ದಿಜಾಲ

108MP ಕ್ಯಾಮೆರಾ ಸ್ಮಾರ್ಟ್‌ಫೋನ್‌ ಬಿಡುಗಡೆಗೆ ಶಿಯೋಮಿ ರೆಡಿ..!

By Gizbot Bureau

ಸ್ಮಾರ್ಟ್‌ಫೋನ್‌ ಕ್ಷೇತ್ರದಲ್ಲಿ ಕ್ರಾಂತಿ ಸೃಷ್ಟಿಸಿರುವ ಚೀನಾ ಮೂಲದ ಶಿಯೋಮಿ ಮತ್ತೊಂದು ದೊಡ್ಡ ಸಾಹಸಕ್ಕೆ ಮುಂದಾಗಿದೆ. ಇತರ ಸ್ಮಾರ್ಟ್‌ಫೋನ್‌ ಕಂಪನಿಗಳು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದೆ. ಹೌದು, ಶಿಯೋಮಿ ಬಿಡುಗಡೆ ಮಾಡಲಿರುವ ಹೊಸ ಸ್ಮಾರ್ಟ್‌ಫೋನ್‌ಗಳಲ್ಲಿ ಉನ್ನತ ಗುಣಮಟ್ಟದ ಕ್ಯಾಮೆರಾ ವ್ಯವಸ್ಥೆ ಇರಲಿದೆ. ಅದು ಅಂತಿಂತಹ ವ್ಯವಸ್ಥೆಯಲ್ಲ ಬರೋಬ್ಬರಿ 108MP ಸೆನ್ಸಾರ್‌ ಹೊಂದಿರುವ ಕ್ಯಾಮೆರಾ ವ್ಯವಸ್ಥೆ ಆಗಿರಲಿದೆ.

ಸ್ಯಾಮ್‌ಸಂಗ್‌ನ 108MP

ಸ್ಯಾಮ್‌ಸಂಗ್‌ನ 108MP ಐಸೊಸೆಲ್ ಬ್ರೈಟ್ ಎಚ್‌ಎಂಎಕ್ಸ್ ಕ್ಯಾಮೆರಾ ಸೆನ್ಸಾರ್‌ನ್ನು ಸ್ಮಾರ್ಟ್‌ಫೋನ್‌ನಲ್ಲಿ ಅಳವಡಿಸುವ ಕಾರ್ಯವನ್ನು ಶಿಯೋಮಿ ಪ್ರಾರಂಭಿಸಿರುವುದು ಈ ಹಿಂದೆಯೇ ಬಹಿರಂಗವಾಗಿತ್ತು. ಆದರೆ, ಇತ್ತೀಚಿನ ವರದಿ ಪ್ರಕಾರ ಶಿಯೋಮಿ 108MP ಕ್ಯಾಮೆರಾ ಹೊಂದಿದ 4 ಸ್ಮಾರ್ಟ್‌ಫೋನ್‌ಗಳನ್ನು ಗ್ರಾಹಕರ ಕೈಗಿಡಲು ಯೋಜನೆ ರೂಪಿಸಿದೆ. ಕಂಪನಿ ಅಂದುಕೊಂಡಂತೆ ಎಲ್ಲಾ ನಡೆದರೆ ಈ ವರ್ಷಾಂತ್ಯ ಅಥವಾ ಹೊಸ ವರ್ಷಾರಂಭದಲ್ಲಿ 108MP ಕ್ಯಾಮೆರಾ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಬರಲಿವೆ.

ಎಂಐ ಗ್ಯಾಲರಿ ಆಪ್‌ನಲ್ಲಿ ಮಾಹಿತಿ

ಎಂಐ ಗ್ಯಾಲರಿ ಆಪ್‌ನಲ್ಲಿ ಮಾಹಿತಿ

ಮುಂಬರುವ 108MP ಕ್ಯಾಮೆರಾ ಸ್ಮಾರ್ಟ್‌ಫೋನ್‌ಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಎಂಐಯುಐನ ಎಂಐ ಗ್ಯಾಲರಿ ಆಪ್ ಮೂಲಕ ಬಹಿರಂಗಪಡಿಸಲಾಗಿದೆ. ಆದರೆ, ಹೊಸ ಸ್ಮಾರ್ಟ್‌ಫೋನ್‌ಗಳಿಗೆ ಸಂಬಂಧಿಸಿದಂತೆ ಯಾವುದೇ ಫೀಚರ್‌ನ್ನು ಕಂಪನಿ ಬಿಡುಗಡೆ ಮಾಡಿಲ್ಲ.

ಕೋಡ್‌ನೇಮ್‌ ಬಹಿರಂಗ

ಕೋಡ್‌ನೇಮ್‌ ಬಹಿರಂಗ

MIUIನ Mi ಗ್ಯಾಲರಿ ಅಪ್ಲಿಕೇಶನ್ 108MP ಕ್ಯಾಮೆರಾ ಹೊಂದಿದ ನಾಲ್ಕು ಸ್ಮಾರ್ಟ್‌ಫೋನ್‌ಗಳ ಕೋಡ್‌ನೇಮ್‌ಗಳನ್ನು ಬಹಿರಂಗಪಡಿಸಿದೆ. "ಟುಕಾನಾ", "ಡ್ರಾಕೊ", "ಉಮಿ" ಮತ್ತು "ಸೆಮಿ" ಎಂಬ ನಾಲ್ಕು ಕೋಡ್‌ನೇಮ್‌ಗಳನ್ನು ಆಪ್‌ ಹೆಸರಿಸಿದ್ದು, ಕೋಡ್‌ನೇಮ್‌ಗಳಂತೆ ನಾಲ್ಕು ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗುವುದು ಖಚಿತ ಎನ್ನಲಾಗುತ್ತಿದೆ.

ಎಂಐ ಮಿಕ್ಸ್‌ 4 ಅಲ್ಲ

ಎಂಐ ಮಿಕ್ಸ್‌ 4 ಅಲ್ಲ

ಈ ಹಿಂದೆ ಹಬ್ಬಿದ ವದಂತಿಗಳಂತೆ 108MP ಕ್ಯಾಮೆರಾ ಹೊಂದಿರುವ ಸ್ಮಾರ್ಟ್‌ಫೋನ್‌ ಎಂಐ ಮಿಕ್ಸ್‌ 4 ಅಲ್ಲ ಎಂದು ವರದಿ ಹೇಳಿದ್ದು, ನಾಲ್ಕು ಸ್ಮಾರ್ಟ್‌ಫೋನ್‌ಗಳಲ್ಲಿ ಎಂಐ ಮಿಕ್ಸ್‌ 4 ಇಲ್ಲ ಎಂಬುದು ಈ ಮೂಲಕ ಸ್ಪಷ್ಟವಾಗಿದೆ.

ಸ್ಯಾಮ್‌ಸಂಗ್‌ನಿಂದ ಉತ್ಪಾದನೆ ಪ್ರಾರಂಭ

ಸ್ಯಾಮ್‌ಸಂಗ್‌ನಿಂದ ಉತ್ಪಾದನೆ ಪ್ರಾರಂಭ

ಈಗಾಗಲೇ ಐಸೊಸೆಲ್ ಬ್ರೈಟ್ ಎಚ್‌ಎಂಎಕ್ಸ್ ಕ್ಯಾಮೆರಾ ಸಂವೇದಕದ ಸಾಮೂಹಿಕ ಉತ್ಪಾದನೆಯನ್ನು ಸ್ಯಾಮ್‌ಸಂಗ್ ಪ್ರಾರಂಭಿಸಿದೆ. ಹೊಸ ಸೆನ್ಸಾರ್ 12032×9024 ಪಿಕ್ಸೆಲ್‌ ರೆಸಲ್ಯೂಶನ್‌ನಲ್ಲಿ 108MP ದರ್ಜೆಯ ಫೋಟೋಗಳನ್ನು ಸೆರೆಹಿಡಿಯುತ್ತದೆ. ಇನ್ನು, ಹೊಸ ಸೆನ್ಸಾರ್‌ 64MP ಸೆನ್ಸಾರ್‌ನ ಮುಂದಿನ ಆವೃತ್ತಿ ಎಂಬಂತೆ 0.8 ಮೈಕ್ರೊಮೀಟರ್ (µm) ಪಿಕ್ಸೆಲ್ ಗಾತ್ರದೊಂದಿಗೆ ಬರಲಿದೆ.

Best Mobiles in India

English summary
Xiaomi Is Planning To Launch Four Phones With 108MP Camera: Can Take DSLR Quality Images
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+