ಮೊಟೋವನ್ನು ಕಾಪಿ ಮಾಡುತ್ತಿದೆಯಾ ಶಿಯೋಮಿ? ಮೊಟೋ ಕಾಮ್ಶೆಲ್ ಡಿಸೈನ್ ನಲ್ಲಿ ಶಿಯೋಮಿ ಸಂಸ್ಥೆಯೂ ಫೋನ್ ತಯಾರಿಕೆ

By Gizbot Bureau
|

ಭವಿಷ್ಯದ ಮಡಚಬಹುದಾದ ಫೋನ್ ಗಳಿಗೆ ಕಾಮ್ಶೆಲ್ ಡಿಸೈನ್ ಬಹುಮುಖ್ಯ ಅಂಶವಾಗಿರುವಂತೆ ಕಾಣುತ್ತದೆ. ಮೊಟೋರೊಲಾ ರೇಜರ್ ಮಡಚುವ ಫ್ಲಿಪ್ ಫೋನ್ ನ್ನು ಪರಿಚಯಿಸಿದ ನಂತರ ಇದೀಗ ಶಿಯೋಮಿ ಕೂಡ ಅದೇ ರೀತಿಯ ಕಾಮ್ಶೆಲ್ ಡಿಸೈನ್ ಹೊಂದಿರುವಂತ ಫೋಲ್ಡೇಬಲ್ ಫೋನ್ ಗಳ ತಯಾರಿಕೆಗಾಗಿ ಕೆಲಸ ಮಾಡುತ್ತಿದೆ. ಮೊಟೋವನ್ನೇ ಶಿಯೋಮಿ ಕೂಡ ಕಾಪಿ ಮಾಡುತ್ತಿರುವ ಲಕ್ಷಣಗಳು ಕಾಣಿಸುತ್ತಿದೆ.

ಪೇಟೆಂಟ್ ಸಂಸ್ಥೆಯಿಂದ ಮಾಹಿತಿ ಬಹಿರಂಗ:

ಪೇಟೆಂಟ್ ಸಂಸ್ಥೆಯಿಂದ ಮಾಹಿತಿ ಬಹಿರಂಗ:

ಶಿಯೋಮಿ ಸಂಸ್ಥೆಯ ಪೇಟೆಂಟ್ ಫೈಲಿಂಗ್ ಮೂಲಕ ಫೋಲ್ಡೇಬಲ್ ಫೋನಿನ ಮೊದಲ ನೋಟ ಹೊರಗೆ ಬಿಡುಗಡೆಯಾಗಿದೆ.ಕಾಮ್ಶೆಲ್ ಡಿಸೈನ್ ಶಿಯೋಮಿ ಮತ್ತು ರೇಜರ್ ನಡುವಿನ ಮಡಚುವ ಫೋನಿನ ಏಕೈಕ ಹೋಲಿಕೆಯಾಗಿರುತ್ತದೆ. ಪೇಟೆಂಟ್ ಸಂಸ್ಥೆ ಬಹಿರಂಗಪಡಿಸಿರುವಂತೆ ಸಣ್ಣ ಆಯಾತಾಕಾರದ ಕವರ್ ಸ್ಕ್ರೀನ್ ಮತ್ತು ಡುಯಲ್ ಹಿಂಭಾಗದ ಕ್ಯಾಮರಾ ವ್ಯವಸ್ಥೆಯು ಮಡಚಿದಾಗ ಲಭ್ಯವಾಗುವಂತೆ ಡಿಸೈನ್ ಇರುವ ಬಗ್ಗೆ ತಿಳಿಸಿದೆ.

ಶಿಯೋಮಿಯ ಹೊಸ ಪೇಟೆಂಟ್ ಸಂಸ್ಥೆ

ಒಳಭಾಗದಲ್ಲಿ ಫೋನಿಗೆ ದಪ್ಪನೆಯ ಬೆಝಲ್ ಇದ್ದು ಫೋನ್ ತೆರೆದಾಗ ಅದು ಮೇಲ್ಬಾಗವಾಗಿರುತ್ತದೆ. ಬೆಝಲ್ ನಲ್ಲಿ ಡುಯಲ್ ಹಿಂಭಾಗದ ಕ್ಯಾಮರಾ ವ್ಯವಸ್ಥೆ, ಮೈಕ್ ಮತ್ತು ಇತರೆ ಕೆಲವು ಸೆನ್ಸರ್ ಗಳನ್ನು ಅಳವಡಿಸಲಾಗಿರುತ್ತದೆ.

ಶಿಯೋಮಿಯ ಹೊಸ ಪೇಟೆಂಟ್ ಸಂಸ್ಥೆ ಇತ್ತೀಚೆಗೆ ಹೊಸ ಫೋಲ್ಡೇಬಲ್ ಡಿಸೈನ್ ಬಗ್ಗೆ ಕಳೆದ ಕೆಲವು ತಿಂಗಳ ಮುಂಚೆ ಸಂಪೂರ್ಣ ಮಾಹಿತಿಯನ್ನು ಬಹಿರಂಗಗೊಳಿಸಿತ್ತು. ಹಳೆಯ ಪೇಟೆಂಟ್ ಸ್ಯಾಮ್ ಸಂಗ್ ಗ್ಯಾಲಕ್ಸಿ ಫೋಲ್ಡ್ ರೀತಿಯ ಮಡಚುವ ಫೋನ್ ಬಗ್ಗೆ ಬಹಿರಂಗ ಪಡಿಸಿತ್ತು.ಅದು ಪುಸ್ತಕದಂತೆ ಮಡಚಿಕೊಳ್ಳುತ್ತದೆ ಎಂಬ ಬಗ್ಗೆಯೂ ಹೇಳಲಾಗಿತ್ತು.ಈ ಮಡಚುವ ಫೋನ್ ಪಾಪ್ ಅಪ್ ಕ್ಯಾಮರಾ ಮಾಡ್ಯೂಲ್ ಜೊತೆಗೆ ಐದು ಲೆನ್ಸ್ ಗಳನ್ನು ಹೊಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು.

ವೈಶಿಷ್ಟ್ಯತೆಗಳು:

ವೈಶಿಷ್ಟ್ಯತೆಗಳು:

ಮೊಟೋರೊಲಾ ಫ್ಲಿಪ್ ಫೋಲ್ಡಿಂಗ್ ವಿನ್ಯಾಸದೊಂದಿಗೆ ರೇಜರ್ ರಿಡಕ್ಸ್ ಅನ್ನು ಪರಿಚಯಿಸಿದ ಸ್ವಲ್ಪ ಸಮಯದ ನಂತರ ಫೋಲ್ಡಬಲ್ ವಿನ್ಯಾಸದಲ್ಲಿ ಪರಿಷ್ಕರಣೆ ಬರುತ್ತದೆ. ಮೊಟೋರೊಲಾ ರೇಜರ್ 6.2-ಇಂಚಿನ OLED ಫೋಲ್ಡೇಬಲ್ ಡಿಸ್ಪ್ಲೇ (ಸಂಪೂರ್ಣ ತೆರೆದಾಗ) ಜೊತೆಗೆ 21:9 ಆಸ್ಪೆಕ್ಟ್ ಅನುಪಾತ ಮತ್ತು 2,142x876 ಪಿಕ್ಸಲ್ ರೆಸಲ್ಯೂಷನ್ ನ್ನು ಹೊಂದಿರುತ್ತದೆ. ಒಮ್ಮೆ ನೀವು ಫೋನ್ ನ್ನು ಮಡಚಿದಾಗ 2.7-ಇಂಚಿನ OLED ಟಚ್ ಸ್ಕ್ರೀನ್ ಸಿಗುತ್ತದೆ. ಇದು ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 712 ಪ್ರೊಸೆಸರ್ ನಿಂದ ರನ್ ಆಗುತ್ತದೆ. ಮೋಟೋ ರೇಜರ್ 2019 6GB RAM ಮತ್ತು 128GB ಸ್ಟೋರೇಜ್ ವ್ಯವಸ್ಥೆಯನ್ನು ಹೊಂದಿರುತ್ತದೆ. ಈ ಫೋಲ್ಡೇಬಲ್ ಫೋನಿನಲ್ಲಿ ಇ-ಸಿಮ್ ವ್ಯವಸ್ಥೆ ಇರುತ್ತದೆ.

ಸ್ಯಾಮ್ ಸಂಗ್ ಕೂಡ ಕಾಮ್ಶೆಲ್ ಡಿಸೈನ್ ಬಗ್ಗೆ ಕೆಲಸ ಮಾಡುತ್ತಿದ್ದು ಮುಂದಿನ ಜನರೇಷನ್ನಿನ ಗ್ಯಾಲಕ್ಸಿ ಫೋಲ್ಡ್ ಬಿಡುಗಡೆಗೊಳಿಸುವ ಉತ್ಸುಕತೆಯಲ್ಲಿದೆ. ಕಳೆದ ತಿಂಗಳು ಫ್ಲಿಪ್ ಫೋನ್ ಮಾದರಿಯ ಫೋಲ್ಡೇಬಲ್ ಕಾನ್ಸೆಪ್ಟ್ ಜೊತೆಗೆ ಮೇಲ್ಬಾಗದಲ್ಲಿ ಪಂಚ್ ಹೋಲ್ ಕ್ಯಾಮರಾವಿರುವ ಮತ್ತು ಆನ್ ಸ್ಕ್ರೀನ್ ನೇವಿಗೇಷನ್ ಟಚ್ ಬಟನ್ ಕೆಳಭಾಗದಲ್ಲಿರುವ ಫೋನ್ ನ್ನು ಸ್ಯಾಮ್ ಸಂಗ್ ಪರಿಚಯಿಸಿದೆ.

Best Mobiles in India

English summary
Xiaomi Is Working On A RAZR Like Clamshell Folding Smartphone

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X