Subscribe to Gizbot

ಶಿಯೋಮಿಯ ನೂತನ 4G ಪೋನ್ ಬೆಲೆ 5 ಸಾವಿರಕ್ಕಿಂತ ಕಡಿಮೆ!..ಮಾಹಿತಿ ಲೀಕ್!!

Written By:

'ದೇಶ್ ಕಾ ಸ್ಮಾರ್ಟ್‌ಫೋನ್' ಟ್ಯಾಗ್‌ನಲ್ಲಿ ಶಿಯೋಮಿಯ ಹೊಸ ರೆಡ್‌ಮಿ ಸ್ಮಾರ್ಟ್‌ಫೋನ್ ಅನ್ನು ನಾಳೆ ಬಿಡುಗಡೆ ಮಾಡುವ ಸುದ್ದಿ ನೀಡಿದೆ.! ಆದರೆ, ಶಿಯೋಮಿ ಯಾವ ಫೋನ್ ಬಿಡುಗಡೆ ಮಾಡುತ್ತಿದೆ ಮತ್ತು ಅದರ ಬೆಲೆ ಎಷ್ಟು ಎಂಬುದನ್ನು ಮಾತ್ರ ಈವರೆಗೂ ಸ್ಪಷ್ಟವಾಗಿ ತಿಳಿಸಿಲ್ಲ. ಆದರೂ ಈ ಫೋನ್ ಬಿಡುಗಡೆ ಸುದ್ದಿ ಟ್ರೆಂಡ್ ಆಗಿದೆ.!!

ಹೌದು, 'ದೇಶ್ ಕಾ ಸ್ಮಾರ್ಟ್‌ಫೋನ್' ಬಿಡುಗಡೆ ಬಗ್ಗೆ ಶಿಯೋಮಿಯ ಮೂಲಗಳಿಂದಲೇ ಮಾಹಿತಿ ಲೀಕ್ ಆಗಿದೆ ಎನ್ನಲಾಗಿದ್ದು, ಶಿಯೋಮಿಯ ದೇಶ್ ಕಾ ಸ್ಮಾರ್ಟ್‌ಫೋನ್ ಬಿಡುಗಡೆಯಾಗುವ ಮುನ್ನವೇ ಸದ್ದು ಮಾಡಲು ಕಾರಣ ಈ ಪೋನ್ ಭಾರತೀಯರಿಗಾಗಿಯೇ ರೂಪಿತವಾಗಿರುವ ಅತ್ಯಂತ ಕಡಿಮೆ ಬೆಲೆಯ ಫೋನ್ ಎಂದು! ಹಾಗಾದರೆ, ಈ ಫೋನ್ ಬಗ್ಗೆ ಲೀಕ್ ಆಗಿರುವ ಇನ್ನಿತರ ಮಾಹಿತಿಗಳು ಏನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕಡಿಮೆ ಬೆಲೆಯ 4G ಫೋನ್!!

ಕಡಿಮೆ ಬೆಲೆಯ 4G ಫೋನ್!!

ಭಾರತದಲ್ಲಿ ಕಡಿಮೆ ಬೆಲೆಯ ಉತ್ತಮ ಫೋನ್‌ಗಳನ್ನು ಜನರು ಹೆಚ್ಚು ಇಷ್ಟಪಡುತ್ತಿರುವುದರಿಂದ ಶಿಯೋಮಿ ಅತ್ಯಂತ ಕಡಿಮೆ ಬೆಲೆಯಲ್ಲಿ 4G ಸ್ಮಾರ್ಟ್‌ಫೋನ್ ಪರಿಚಯಿಸುವ ಹಂಬಲದಲ್ಲಿದೆ.! ಹಾಗಾಗಿ, 5000 ರೂಪಾಯಿಗಳಿಗಿಂತ ಕಡಿಮೆ ಬೆಲೆಯಲ್ಲಿ ಶಿಯೋಮಿ ಭಾರತೀಯರಿಗಾಗಿ 4G ಸ್ಮಾರ್ಟ್‌ಫೋನ್ ಪರಿಚಯಿಸುತ್ತಿದೆ ಎನ್ನಲಾಗಿದೆ.!!

ಮೇಡ್ ಇಂಡಿಯಾ ಫೋನ್!!

ಮೇಡ್ ಇಂಡಿಯಾ ಫೋನ್!!

ಭಾರತದಲ್ಲಿ ನಾಳೆ ಶಿಯೋಮಿ ಲಾಂಚ್ ಮಾಡುತ್ತಿರುವ ನೂತನ ಸ್ಮಾರ್ಟ್‌ಫೋನ್ ಭಾರತದಲ್ಲಿಯೇ ತಯಾರಿಸಲ್ಪಟ್ಟಿರುವ ಫೋನ್ ಆಗಿದೆ.! ಭಾರತದಲ್ಲಿಯೇ ಫೋನ್ ತಯಾರಿಸಿದ್ದು ಭಾರತೀಯರಿಗಾಗಿಯೇ ಈ ಫೋನ್ ತಯಾರಾಗಿದೆ ಮತ್ತು ಭಾರತದಲ್ಲಿಯೇ ಮೊದಲು ಲಾಂಚ್ ಆಗುತ್ತಿದೆ!!

ಯಾವುದೇ Xiaomi ಫೋನ್‌ಗಳಲ್ಲಿ Multi Window Screen ಬಳಕೆ ಹೇಗೆ?
ಗ್ರಾಮೀಣ ಭಾಗದತ್ತ ಶಿಯೋಮಿ!!

ಗ್ರಾಮೀಣ ಭಾಗದತ್ತ ಶಿಯೋಮಿ!!

ಈಗಾಗಲೇ ನಗರ ಪ್ರದೇಶಗಳಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿರುವ ಶಿಯೋಮಿ ಗ್ರಾಮೀಣ ಬಾಗದತ್ತ ಮುಖಮಾಡಿದೆ. ಹಾಗಾಗಿ, 5000 ರೂಪಾಯಿಗಳಿಗಿಂತ ಕಡಿಮೆ ಬೆಲೆಯಲ್ಲಿ 4G ಸ್ಮಾರ್ಟ್‌ಫೋನ್ ಪರಿಚಯಿಸುವ ಮೂಲಕ ಗ್ರಾಮೀಣ ಭಾಗಕ್ಕೂ ತನ್ನ ಲಗ್ಗೆಹಾಕಲು ಶಿಯೋಮಿ ಮುಂದಾಗಿದೆ ಎನ್ನಲಾಗಿದೆ.!!

 ಶಿಯೋಮಿ ರೆಡ್‌ಮಿ 4A ಪರ್ಯಾಯ?

ಶಿಯೋಮಿ ರೆಡ್‌ಮಿ 4A ಪರ್ಯಾಯ?

ಶಿಯೋಮಿ ಕಂಪೆನಿ ರೆಡ್‌ಮಿ ಸ್ಮಾರ್ಟ್‌ಫೋನ್‌ ರಿಲೀಸ್ ಮಾಡುವುದಾಗಿ ಹೇಳಿಕೊಂಡಿರುವುದರಿಂದ ಶಿಯೋಮಿ ''ರೆಡ್‌ಮಿ 4A'' ಪರ್ಯಾಯ ಸ್ಮಾರ್ಟ್‌ಫೋನ್ ಬಿಡುಗಡೆಯಾಗಬಹುದು ಎಂದು ಹೇಳಲಾಗಿದೆ. ಏಕೆಂದರೆ, ಶಿಯೋಮಿ ಕಂಪೆನಿ ಅತ್ಯಂತ ಕಡಿಮೆ ಬೆಲೆಯ ಫೋನ್ 5,999 ರೂಪಾಯಿಗಳಿಗೆ "ಶಿಯೋಮಿ 'ರೆಡ್‌ಮಿ 4A".!!

 ರೆಡ್‌ಮಿ ನೋಟ್ 5 ಸಹ ಆಗಿರಬಹುದು!!

ರೆಡ್‌ಮಿ ನೋಟ್ 5 ಸಹ ಆಗಿರಬಹುದು!!

ಇಷ್ಟಲ್ಲದೆ, ಶಿಯೋಮಿ ರೆಡ್‌ಮಿ ನೋಟ್ 5 ಫೋನ್ ಸಹ ಬಿಡುಗಡೆ ಮಾಡುವ ನಿರೀಕ್ಷೆ ಸಹ ಹಲವರಲ್ಲಿ ಮೂಡಿದೆ. ರೆಡ್‌ಮಿ ನೋಟ್ 4 ಯಶಸ್ಸಿನ ಉತ್ತುಂಗದಲ್ಲಿರುವ ಶಿಯೋಮಿ ರೆಡ್‌ಮಿ ನೋಟ್ 5 ಫೋನ್ ಪರಿಚಯಿಸಿ ಭಾರತದ ಮೊಬೈಲ್ ದಿಗ್ಗಜನಾಗಿ ಬೆಳೆಯುವ ಗುರಿಯನ್ನು ಹೊಂದಿದೆ.!!

ಓದಿರಿ:ಇನ್ಮುಂದೆ ಬೆಂಗಳೂರಿನೆಲ್ಲೆಡೆ ಉಚಿತ ವೈ-ಫೈ, ಸಿಸಿಟಿವಿ ಮತ್ತು ಡ್ರೋಣ್ ರಕ್ಷಣೆ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
‘Desh ka Smartphone’ tomorrow: Everything you need to know.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot