ಶಿಯೋಮಿಯಿಂದ ಹೊಸ 60W ಫಾಸ್ಟ್ ಚಾರ್ಜರ್ ಲಾಂಚ್‌!

|

ಚೀನಾ ಮೂಲದ ಸ್ಮಾರ್ಟ್‌ಫೋನ್‌ ಕಂಪೆನಿ ಶಿಯೋಮಿ ತನ್ನ ಹೊಸ 60W ಫಾಸ್ಟ್ ಚಾರ್ಜರ್ ಅನ್ನು ಚೀನಾ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಎರಡು ಯುಎಸ್‌ಬಿ ಇಂಟರ್ಫೇಸ್‌ಗಳು ಮತ್ತು ಒಂದು ಟೈಪ್-ಸಿ ಇಂಟರ್ಫೇಸ್ ಚಾರ್ಜಿಂಗ್‌ ಇದಾಗಿದ್ದು. ಯುಎಸ್‌ಬಿ-ಸಿ ಇಂಟರ್ಫೇಸ್ 60W ವಿದ್ಯುತ್‌ ಉತ್ಪಾದನೆಯನ್ನು ಬೆಂಬಲಿಸಲಿದೆ. ಸದ್ಯ ಕಂಪನಿಯ ಪ್ರಕಾರ ಆಪಲ್‌ನ ಮ್ಯಾಕ್‌ಬುಕ್ ಏರ್ (13) ಸ್ಮಾರ್ಟ್‌ಫೋನ್‌ ಅನ್ನು ಈ ಪವರ್‌ ಬ್ಯಾಂಕ್‌ನಿಂದ ಕೇವಲ 90 ನಿಮಿಷಗಳಲ್ಲಿ ಚಾರ್ಜ್ ಮಾಡಬಹುದಾಗಿದೆ.

ಹೌದು

ಹೌದು, ಶಿಯೋಮಿ ಈಗಾಗಲೇ ಟೆಕ್‌ ಮಾರುಕಟ್ಟೆಗೆ ಹಲವು ಮಾದರಿಯ ಪವರ್‌ ಬ್ಯಾಂಕ್‌ಗಳನ್ನ ಬಿಡುಗಡೆ ಮಾಡಿದೆ. ಇದೀಗ ತನ್ನ ಹೊಸ ಮಾದರಿಯ 60W ಶಿಯೋಮಿ ಫಾಸ್ಟ್ ಚಾರ್ಜರ್ ಅನ್ನ ಬಿಡುಗಡೆ ಮಾಡಿದ್ದು, ಚೀನಾದಲ್ಲಿ ಸಿಕ್ಕಾಪಟ್ಟೆ ಸೌಂಡ್‌ ಮಾಡೋ ಲಕ್ಷಣ ಕಾಣಿಸ್ತಿದೆ. ಇನ್ನು ಸ್ಮಾರ್ಟ್‌ಫೋನ್‌ಗಳ ಪವರ್‌ ದಾಹವನ್ನ ತೀರಿಸೋದಕ್ಕೆ ಹಲವು ಮಾದರಿಯ ಹೊಸ ಫಿಚರ್ಸ್‌ಗಳ ಪವರ್‌ ಬ್ಯಾಂಕ್‌ಗಳು ಮಾರುಕಟ್ಟೆಗೆ ಲಗ್ಗೆ ಹಾಕುತ್ತಿವೆ. ಈ ಸಾಲಿಗೆ ಶಿಯೋಮಿಯ ಈ ಹೊಸ ಚಾರ್ಜರ್ ಕೂಡ ಸೇರಿಕೊಂಡಿದೆ.

ಪವರ್‌

ಇನ್ನು ಈ ಪವರ್‌ ಬ್ಯಾಂಕ್‌ನ ಯುಎಸ್‌ಬಿ-ಎ ಪೋರ್ಟ್‌ಗಳು ತಲಾ 45 ಡಬ್ಲ್ಯೂ output ಅನ್ನ ಹೆಚ್ಚಿನ ಡಿಜಿಟಲ್ ಸಾಧನಗಳೊಂದಿಗೆ ಹೊಂದಿಕೊಳ್ಳಲಿದ್ದು, ಇದು ಟ್ರಿಪಲ್ ಪವರ್‌ ಬ್ಯಾಂಕ್‌ ಆಘಿದೆ. ಅಂದರೆ ಏಕಾಕಾಲದಲ್ಲಿ ಮೂರು ಸ್ಮಾರ್ಟ್‌ಫೋನ್‌ಗಳನ್ನ ಚಾರ್ಜಿಂಗ್‌ ಮಾಡಬಹುದಾಗಿದೆ. ಅಷ್ಟೇ ಅಲ್ಲ ಒಂದೇ ಸಮಯದಲ್ಲಿ ಫೋನ್‌ಗಳು ಮತ್ತು ಕಂಪ್ಯೂಟರ್‌ಗಳನ್ನು ಪವರ್ ಮಾಡಬಹುದು. ಜೊತೆಗೆ ಈ ಪವರ್‌ ಬ್ಯಾಂಕ್‌ ಅನ್ನ ಸುಲಭವಾಗಿ ಸಾಗಿಸಬಹುದಾಗಿದ್ದು ಚಾರ್ಜರ್‌ಪಿನ್ ಅನ್ನು 90 ಡಿಗ್ರಿಗಳಲ್ಲಿ ಮಡಚಬಹುದಾಗಿದೆ.

ಫಾಸ್ಟ್

ಶಿಯೋಮಿಯ 60W ಫಾಸ್ಟ್ ಚಾರ್ಜರ್ ಆಪಲ್‌ನ ಪಿಡಿ 3.0, ಕ್ಯೂಸಿ 4.0, ಕ್ಯೂಸಿ 3.0, ಎಫ್‌ಸಿಪಿ, ಎಎಫ್‌ಸಿ, ಎಂಟಿಕೆ ಮತ್ತು ಮಾರುಕಟ್ಟೆಯಲ್ಲಿನ ಇತರ ಜನಪ್ರಿಯ ಫಾಸ್ಟ್ ಚಾರ್ಜ್ ಪ್ರೊಟೋಕಾಲ್‌ಗಳನ್ನ ಬೆಂಬಲಿಸಲಿದೆ.ಇನ್ನು ಈ ಪವರ್‌ ಬ್ಯಾಂಕ್‌ ಸ್ಮಾರ್ಟ್ ವೋಲ್ಟೇಜ್ ಪತ್ತೆಹಚ್ಚುವಿಕೆಯನ್ನು ಸಹ ಹೊಂದಿದೆ. ಇದು ಸಾಧನಕ್ಕೆ ಅಗತ್ಯವಿರುವ ವೋಲ್ಟೇಜ್ ಅನ್ನು ಪತ್ತೆ ಮಾಡುತ್ತದೆ. ಇನ್ನು ಈ ಪವರ್‌ ಬ್ಯಾಂಕ್‌ ಚಾರ್ಜರ್ ಓವರ್‌ವೋಲ್ಟೇಜ್, ಓವರ್‌ಕರೆಂಟ್, ಸ್ಥಿರ ವಿದ್ಯುತ್, ತಾಪಮಾನ ಮತ್ತು ಶಾರ್ಟ್ ಸರ್ಕ್ಯೂಟ್ ರಕ್ಷಣೆಗಳನ್ನು ಸಹ ಹೊಂದಿದೆ. ಇನ್ನು ಈ ಚಾರ್ಜರ್‌ನ ಬೆಲೆ ಯುವಾನ್ 149 (1,513ರೂ) ಆಗಿದ್ದು, ಚೀನಾ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಖರೀದಿಗೆ ಲಭ್ಯವಿದೆ.

ಶಿಯೋಮಿ

ಇನ್ನು 60W ಶಿಯೋಮಿ ಚಾರ್ಜರ್ ಜೊತೆಗೆ ಪ್ರತ್ಯೇಕವಾಗಿ, ಶಿಯೋಮಿ ವೈರ್‌ಲೆಸ್ ಕೀಬೋರ್ಡ್ ಮತ್ತು ಮೌಸ್‌ನ ಕಾಂಬೊವನ್ನು ಸಹ ಬಿಡುಗಡೆ ಮಾಡಿದ್ದು. ಇದು ಕೇವಲ ಆರ್‌ಎಂಬಿ 99 ಕ್ಕೆ ಲಭ್ಯವಿದೆ (ಸುಮಾರು 1,005 ರೂ.). ಇದು ಮಾರುಕಟ್ಟೆಯಲ್ಲಿ ವೈರ್‌ಲೆಸ್ ಕೀಬೋರ್ಡ್ ಮತ್ತು ಮೌಸ್ ಕಾಂಬೊದಲ್ಲಿ ಒಂದಾಗಿದೆ. ಕೀಬೋರ್ಡ್‌ನಲ್ಲಿ ಸರಿಯಾಗಿ 104 ಕೀಲಿಮಣೆಯಾಗಿದ್ದು ಪ್ರತ್ಯೇಕ ಸಂಖ್ಯಾ ಕೀಪ್ಯಾಡ್ ಅನ್ನು ಹೊಂದಿದೆ. ಫಂಕ್ಷನ್ ಕೀಗಳು ವಾಲ್ಯೂಮ್ ಕಂಟ್ರೋಲ್, ಮೀಡಿಯಾ, ಮೇಲ್ ಮತ್ತು ಇತರ ಉಪಯುಕ್ತ ಕಾರ್ಯಗಳಿಗೆ ಶಾರ್ಟ್‌ಕಟ್‌ಗಳನ್ನು ಸಹ ನೀಡಲಾಗಿದೆ.

Best Mobiles in India

Read more about:
English summary
Xiaomi has launched a new 60W fast charger in China. The latest charger from Xiaomi offers two USB interfaces and one Type-C interface. However, only the USB-C interface supports the output of 60W.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X