ಶಿಯೋಮಿಯಿಂದ ಮಲ್ಟಿ ಫಂಕ್ಷನ್‌ ಪವರ್‌ ಬ್ಯಾಂಕ್‌ ಲಾಂಚ್‌!

|

ಚೀನಾ ಮೂಲದ ಜನಪ್ರಿಯ ಸ್ಮಾರ್ಟ್‌ಫೋನ್‌ ಕಂಪೆನಿ ಶಿಯೋಮಿ ಚೀನಾದಲ್ಲಿ ಎರಡು ದಿನಗಳ ಹಿಂದೆಯಷ್ಟೇ ಎಲೆಕ್ಟ್ರಿಕ್‌ ಬೆಡ್‌ ಅನ್ನು ಪರಿಚಯಿಸಿತ್ತು. ಇದೇ ಕಂಪೆನಿ ಇದೀಗ ಚೀನಾದಲ್ಲಿ ವಿಶಿಷ್ಟ ಮಲ್ಟಿ-ಫಂಕ್ಷನ್ ಪವರ್‌ ಬ್ಯಾಂಕ್‌ ಅನ್ನ ಪರಿಚಯಿಸಿದೆ. ಈ ಪವರ್‌ ಬ್ಯಾಂಕ್‌ ಕೇವಲ ಸ್ಮಾರ್ಟ್‌ಫೋನ್‌ಗಳ ವಿದ್ಯುತ್‌ ದಾಹ ತಣಿಸೋದಿಲ್ಲ. ಬದಲಿಗೆ ಅವಶ್ಯಕತೆಗೆ ತಕ್ಕಂತೆ ಇದನ್ನ ಬಳಸುವ ಅವಕಾಶ ನೀಡಿರೋದು ಬಹಳ ವಿಶೇಷವಾಗಿದೆ.

ಶಿಯೋಮಿ

ಹೌದು ಶಿಯೋಮಿಯ ಈ ಹೊಸ ಪ್ರಾಡಕ್ಟ್‌ ತ್ರಿ-ಇನ್ -ಒನ್‌ ಸಾಧನವಾಗಿದ್ದು ಫ್ಲ್ಯಾಷ್‌ಲೈಟ್, ಡೆಸ್ಕ್ ಲ್ಯಾಂಪ್ ಮತ್ತು ಪವರ್ ಬ್ಯಾಂಕ್ ಆಗಿ ಬಳಸಬಹುದಾಗಿದೆ. 2,600mAh ಲಿಥಿಯಂ-ಐಯಾನ್ ಬ್ಯಾಟರಿ ಶಕ್ತಿಯನ್ನು ಹೊಂದಿರುವ ಈ ಪ್ರಾಡಕ್ಟ್‌ ಮಾರುಕಟ್ಟೆಯಲ್ಲಿ ಒಳ್ಳೆ ಕಮಾಲ್‌ ಮಾಡ್ತಿದೆ. ಶಿಯೋಮಿ ಕಂಪೆನಿ ಹೊರ ತಂದಿರುವ ಈ ಪ್ರಾಡಕ್ಟ್‌ ತ್ರಿ ಇನ್‌ ಒನ್‌ ಮಾದರಿಯಲ್ಲಿ ಕಾರ್ಯನಿರ್ವಹಿಸಲಿದೆ.

ಪವರ್‌ ಬ್ಯಾಂಕ್‌

ಈ ಸಾಧನವನ್ನ ಸಂದರ್ಭಕ್ಕೆ ತಕ್ಕಂತೆ ಬಳಸಬಹುದಾಗಿದೆ. ಮನೆಯಲ್ಲಿ ಕತ್ತಲಿದ್ದರೆ ಇದನ್ನ ಗೊಡೆ ಮೇಲಿನ ದೀಪವಾಗಿ ಬಳಸಬಹುದು, ರೂಮಿನಲ್ಲಿ ಮೆದು ಬೆಳಕಿನ ಅವಶ್ಯಕತೆ ಇದ್ದರೆ ಇದನ್ನ ಡೆಸ್ಕ್‌ ಲ್ಯಾಂಪ್‌ಆಗಿಯೂ ಬಳಸಬಹುದಾಗಿದೆ. ಅಷ್ಟೇ ಅಲ್ಲ ಅವಶ್ಯಕತೆ ಬಿದ್ದರೆ ಇದನ್ನ ಬ್ಯಾಟರಿಯಾಗಿಯೂ ಬಳಸಿಕೊಳ್ಳಬಹುದಾಗಿದೆ. ಇನ್ನು ಕೆಲವೊಮ್ಮೆ ಸ್ಮಾರ್ಟ್‌ಫೋನ್‌ಗಳಿಗೆ ಪವರ್‌ ಬ್ಯಾಂಕ್‌ ಆಗಿ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಒಳಗೊಂಡಿದೆ.

ಡ್ಯುಯಲ್ ಫೋಟೋ

ಇನ್ನು ಈ ಪವರ್‌ ಬ್ಯಾಂಕ್‌ ಡ್ಯುಯಲ್ ಫೋಟೋ ಸೆನ್ಸಾರ್‌ ಒಳಗೊಂಡಿದ್ದು ನಿಗದಿತ ಪ್ರದೇಶದವರೆಗೂ ಬೆಳಕನ್ನು ಚೆಲ್ಲುವ ಸಾಮರ್ಥ್ಯ ಹೊಂದಿದೆ. ಜೊತೆಗೆ ಈ ಪವರ್‌ ಬ್ಯಾಂಕ್‌ ತನ್ನ ಸುತ್ತಲಿನ ಪರಿಸರವನ್ನು ಸೂಕ್ಷ್ಮವಾಗಿ ಗುರುತಿಸಬಲ್ಲ ಸಂವೇದಕವನ್ನು ಒಳಗೊಂಡಿದೆ. ಈ ಮಲ್ಟಿ-ಫಂಕ್ಷನ್‌ನ ಮತ್ತೊಂದು ವಿಶೇಷತೆ ಅಂದ್ರೆ ಇದು 120 ಡಿಗ್ರಿ ಸೆನ್ಸಾರ್‌ ಸಂವೇದಕವನ್ನು ಹೊಂದಿದ್ದು ತನ್ನ ಸುತ್ತಲ್ಲಿನ 3 ಮೀಟರ್‌ ವರೆಗೆ ಮನುಷ್ಯ ಇದ್ದರೆ ಮಾತ್ರ ಇದು ಪ್ಲ್ಯಾಷ್‌ ಲೈಟ್‌ ಅಥವಾ ಗೋಡೆ ದೀಪವಾಗಿ ಆಗಿ ಕಾರ್ಯ ನಿರ್ವಹಿಸಲಿದೆ. ಇಲ್ಲದೆ ಹೋದರೆ ತನ್ನಷ್ಟಕ್ಕೆ ತಾನೇ ಆಫ್‌ ಆಗಿ ಬಿಡುತ್ತದೆ.

ಸ್ಮಾರ್ಟ್‌ಫೋನ್‌

ಇದು ದೀಪದ ಹೊರತಾಗಿಯೂ, ಸ್ಮಾರ್ಟ್‌ಫೋನ್‌ಗಳು ಮತ್ತು ಇತರ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ಚಾರ್ಜ್ ಮಾಡಲು ಪವರ್ ಬ್ಯಾಂಕ್ ಆಗಿ ಕಾರ್ಯನಿರ್ವಹಿಸುತ್ತದೆ. ಕುತೂಹಲಕಾರಿ ಎಂದರೆ ಕೆಲ ತುರ್ತು ಸಂದರ್ಭಗಳಲ್ಲಿ ಇದನ್ನು ಬ್ಯಾಟರಿ ದೀಪವಾಗಿಯೂ ಬಳಸಬಹುದಾಗಿದೆ. ಇನ್ನು ಇದರ ಬೆಲೆ ಭಾರತದಲ್ಲಿ ಸುಮಾರು 1,200 ರೂ. ಗೆ ಲಭ್ಯವಿದೆ.

Most Read Articles
Best Mobiles in India

English summary
The latest product from Xiaomi can be used as a flashlight, desk lamp as well as a power bank. This is basically a 3-in-1 one device, which is powered by a 2,600mAh lithium-ion battery.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X