Home
ಸುದ್ದಿಜಾಲ

ಶಿಯೋಮಿ ತಂದಿದೆ ನೂತನ ಡೋರ್ ಲಾಕ್, ಫಿಂಗರ್ಪ್ರಿಂಟ್ ಸ್ಕ್ಯಾನರ್ ಫೀಚರ್ ಸಹಿತ!!

ಶಿಯೋಮಿಯು ಕ್ಲಾಸಿಕ್ ಇಂಟಲಿಜೆಂಟ್ ಫಿಂಗರ್ಪ್ರಿಂಟ್ ಡೋರ್ ಲಾಕ್ ಅನ್ನು ಲಾಂಚ್ ಮಾಡಿದ್ದು ಫಿಂಗರ್ಪ್ರಿಂಟ್ ಸ್ಕ್ಯಾನರ್ ಮೊದಲಾದ ಆಧುನಿಕ ಫೀಚರ್ಗಳನ್ನು ಹೊಂದಿರುವ ಇದರ ಬೆಲೆ 1699 ಯುವಾನ್.

By Tejaswini P G

ಶಿಯೋಮಿ ಕೇವಲ ಸ್ಮಾರ್ಟ್ಫೋನ್ ತಯಾರಿಕೆಯಲ್ಲಿ ಮಾತ್ರ ತೊಡಗಿರದೆ ವಿಶಿಷ್ಟ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನೂ ತಯಾರಿಸುತ್ತಿದೆ. ಪವರ್ ಬ್ಯಾಂಕ್,ಫಿಟ್ನೆಸ್ ಬ್ಯಾಂಡ್, ಸ್ಮಾರ್ಟ್ ಸಾಧನಗಳು, ಲ್ಯಾಪ್ಟಾಪ್, ಟಿವಿ ಹೀಗೆ ಶಿಯೋಮಿಯ ಬತ್ತಳಿಕೆಯಲ್ಲಿದೆ ಹಲವಾರು ಸಾಧನಗಳು.

ಶಿಯೋಮಿ ತಂದಿದೆ ನೂತನ ಡೋರ್ ಲಾಕ್, ಫಿಂಗರ್ಪ್ರಿಂಟ್ ಸ್ಕ್ಯಾನರ್ ಫೀಚರ್ ಸಹಿತ!!

ಇಷ್ಟೆಲ್ಲಾ ಉತ್ಪನ್ನಗಳನ್ನು ತಯಾರಿಸುತ್ತಿರುವ ಚೀನೀ ದಿಗ್ಗಜ ಈಗ ಹೊಸದೊಂದು ಸಾಧನವನ್ನು ಲಾಂಚ್ ಮಾಡಿದ್ದು, ಕಂಪೆನಿಯ ಕ್ರೌಡ್ ಫಂಡಿಂಗ್ ಪ್ಲ್ಯಾಟ್ಫಾರ್ಮ್ ಮೂಲಕ ಬರುತ್ತಿರುವ 123ನೇ ಉತ್ಪನ್ನ ಇದಾಗಿದೆ. ಇದೊಂದು ಸ್ಮಾರ್ಟ್ ಮನೆಬಳಕೆಯ ಗ್ಯಾಜೆಟ್ ಆಗಿದ್ದು, ಶಿಯೋಮಿ ಕಂಪೆನಿಯು ಇದನ್ನು ಕ್ಲಾಸಿಕ್ ಇಂಟಲಿಜೆಂಟ್ ಫಿಂಗರ್ಪ್ರಿಂಟ್ ಡೋರ್ ಲಾಕ್ ಎಂದು ಕರೆದಿದೆ.ಇದರ ಬೆಲೆ 1699 ಯುವಾನ್(ಅಂದಾಜು ರೂ 16687 ) ಆಗಿದ್ದು ಇನ್ಸ್ಟಲೇಶನ್ ಚಾರ್ಜ್ ಕೂಡ ಈ ಬೆಲೆಯಲ್ಲೇ ಸೇರಿದೆ.

ಏನಿದು ಕ್ಲಾಸಿಕ್ ಇಂಟಲಿಜೆಂಟ್ ಫಿಂಗರ್ಪ್ರಿಂಟ್ ಡೋರ್ ಲಾಕ್, ಏನಿದರ ವಿಶೇಷತೆ ಎಂದು ಕೇಳಿದಿರಾ?ಇದು ಮಾಮೂಲಿ ಬಾಗಿಲ ಬೀಗವಲ್ಲ!! ಈ ಸ್ಮಾರ್ಟ್ ಡೋರ್ ಲಾಕ್ ನಲ್ಲಿದೆ ಎಮ್ಬೆಡೆಡ್ ಫಿಂಗರ್ಪ್ರಿಂಟ್ ರೆಕಗ್ನಿಶನ್ ಸ್ಕ್ಯಾನರ್ ಆಕರ್ಷಕ ವಿನ್ಯಾಸದ ಜೊತೆಗೆ.

ಶಿಯೋಮಿ ತಂದಿದೆ ನೂತನ ಡೋರ್ ಲಾಕ್, ಫಿಂಗರ್ಪ್ರಿಂಟ್ ಸ್ಕ್ಯಾನರ್ ಫೀಚರ್ ಸಹಿತ!!

ಅಲ್ಲದೆ ಶಕ್ತಿಯುತವಾದ ಆಂಟಿ-ಬ್ರೇಕಿಂಗ್ ಸಾಮರ್ಥ್ಯವುಳ್ಳ ಈ ಡೋರ್ ಲಾಕ್ ಅನ್ನು ಅನ್ಲಾಕ್ ಮಾಡಲು 4 ವಿಭಿನ್ನ ರೀತಿಗಳನ್ನು ಅಳವಡಿಸಿಕೊಳ್ಳಬಹುದು. ಫಿಂಗರ್ ಪ್ರಿಂಟ್ ,ಬ್ಲೂಟೂತ್ ಮೂಲಕ ಕನೆಕ್ಟ್ ಮಾಡಿದ ಮೊಬೈಲ್ ಫೋನ್ ಆಪ್ , ಪಾಸ್ವರ್ಡ್ ಮೂಲಕ ಅಥವ ಕೀ ಬಳಸಿ ಈ ವಿಶಿಷ್ಟ ಬೀಗವನ್ನು ತೆರೆಯಬಹುದು!

ಅಷ್ಟೇ ಏಕೆ, 10 ವರ್ಷಗಳ ಕಾಲ ಯಾವುದೇ ತೊಂದರೆ ಇಲ್ಲದೆ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿದೆಯಂತೆ ಈ ಬೀಗ, 100000 ಸಲ ಪ್ರೆಶರ್ ಟೆಸ್ಟ್ ಅನ್ನು ಆರಾಮಾಗಿ ಎದುರಿಸುವ ಸಾಮರ್ಥ್ಯವೂ ಇದಕ್ಕಿದೆ ಎಂದು ಹೇಳಿದೆ ಶಿಯೋಮಿ! ಈ ಡೋರ್ ಲಾಕ್ ನ ಫಿಂಗರ್ಪ್ರಿಂಟ್ ಸ್ಕ್ಯಾನರ್ ನ ತಂತ್ರಜ್ಞಾನದ ಬಗ್ಗೆ ಹೇಳುವುದಾದರೆ,ಇಲ್ಲಿ ಲೈವ್ ಫಿಂಗರ್ಪ್ರಿಂಟ್ ಚಿಪ್ ಒಂದನ್ನು ಬಳಸಲಾಗಿದ್ದು, ಫಿಂಗರ್ಪ್ರಿಂಟ್ ಡೇಟಾ ಅನ್ನು ಸುರಕ್ಷಿತ ಪ್ರದೇಶವೊಂದರಲ್ಲಿ ಸಂರಕ್ಷಿಸಲಾಗುತ್ತದೆ.

ಇದರಲ್ಲಿದೆ ಇನ್ನೂ ಹಲವು ವಿಶೇಷತೆಗಳು. ಶಿಯೋಮಿ ಕಂಪೆನಿಯು ಈ ಡೋರ್ ಲಾಕ್ ನ ಫಿಂಗರ್ಪ್ರಿಂಟ್ ಚಿಪ್ ತಪ್ಪಾಗಿ ಕೆಲಸ ಮಾಡುವ ಸಾಧ್ಯತೆ ಕೇವಲ 0.0005% ಎಂದು ಹೇಳಿಕೊಂಡಿದ್ದು ಬೇರೆ ಬೇರೆ ವಯಸ್ಸಿನ ( 7 ರಿಂದ 70 ವರ್ಷವರೆಗಿನ) ವಿವಿಧ ವ್ಯಕ್ತಿಗಳು ಇದನ್ನು ಅನ್ಲಾಕ್ ಮಾಡಬಹುದಂತೆ.

ಅಲ್ಲದೆ ಕ್ಲಾಸಿಕ್ ಇಂಟಲಿಜೆಂಟ್ ಫಿಂಗರ್ಪ್ರಿಂಟ್ ಡೋರ್ ಲಾಕ್ ಅತೀ ಹೆಚ್ಚು ಅಥವಾ ಕಡಿಮೆ ತಾಪಮಾನಗಳಲ್ಲೂ ಕೆಲಸ ಮಾಡುವಂತೆ ವಿನ್ಯಾಸ ಮಾಡಲಾಗಿದೆ. ಅಲ್ಲದೆ ಇದು ಸ್ಮಾರ್ಟ್ ಡೋರ್ ಲಾಕ್ ಆಗಿದ್ದು ಹೆಚ್ಚಾಗಿ ಡೋರ್ ಅನಲಾಕ್ ಮಾಡುವ ಗ್ರಾಹಕರನ್ನು ಸುಲಭವಾಗಿ ಗುರುತಿಸುವ ಸಾಮರ್ಥ್ಯವೂ ಇದಕ್ಕಿದೆ.

ಅಲಾರ್ಮ್ ಸಿಸ್ಟಮ್ ಹೊಂದಿರುವ ಈ ಡೋರ್ ಲಾಕ್, ಬಳಕೆದಾರರು ಡೋರ್ ಲಾಕ್ ಅನ್ನು 15 ಪ್ರಯತ್ನಗಳಲ್ಲಿ ಅನ್ಲಾಕ್ ಮಾಡಲು ವಿಫಲವಾದರೆ ಎಚ್ಚರಿಕೆಯ ಘಂಟೆಯನ್ನು ಬಾರಿಸುತ್ತದೆ. ಕಳ್ಳ ಖದೀಮರು ಈ ಡೋರ್ ಲಾಕ್ ಅನ್ನು ಮುರಿಯಲು ಪ್ರಯತ್ನಿಸಿದರೂ ಅಲಾರ್ಮ್ ಬಾರಿಸುತ್ತದೆ.

ಈ ಡೋರ್ ಲಾಕ್ ಅನ್ನು ಲಾಕ್/ಅನ್ಲಾಕ್ ಮಾಡಲು ಪಾಸ್ವರ್ಡ್ ವಿಧಾನವನ್ನೂ ಬಳಸಬಹುದಾಗಿದ್ದು, 6-ಡಿಜಿಟ್ ಕೋಡ್ ಅನ್ನು ಸೆಟ್ ಮಾಡಬೇಕು. ಆಂಟಿ-ಪೀಪಿಂಗ್ ವರ್ಚ್ಯುವಲ್ ಪಾಸ್ವರ್ಡ್ ಫೀಚರ್ ಕೂಡ ಇದರಲ್ಲಿದ್ದು, ಇದಕ್ಕಾಗಿ 16-ಡಿಜಿಟ್ ಪಾಸ್ವರ್ಡ್ ಸೆಟ್ ಮಾಡಬಹುದು!

Best Mobiles in India

English summary
Chinese manufacturing giant Xiaomi has launched a Classic Intelligent Fingerprint Door Lock with a price tag of 1699 Yuan (roughly Rs. 16,687).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+