Home
ಸುದ್ದಿಜಾಲ

ಗೂಗಲ್ ಪೇಗೆ ಟಕ್ಕರ್!..ಭಾರತದಲ್ಲಿ ಶಿಯೋಮಿ 'ಮಿ ಪೇ' ಆಪ್ ಬಿಡುಗಡೆ!

ಭಾರತದ ಮೊಬೈಲ್ ಮತ್ತು ಟಿವಿ ಮಾರುಕಟ್ಟೆಯಲ್ಲಿ ಭರ್ಜರಿ ಸದ್ದು ಮಾಡುತ್ತಿರುವ ಚೀನಾ ಮೂಲದ ಶಿಯೋಮಿ ಕಂಪೆನಿ ಮತ್ತೊಂದು ಸಿಹಿಸುದ್ದಿ ನೀಡಿದೆ. ನೆನ್ನೆಯಷ್ಟೇ ಶಿಯೋಮಿ ರೆಡ್‌ಮಿ ಗೋ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ ಶಿಯೋಮಿ, ಶೀಘ್ರದಲ್ಲೇ ಭಾರತದಲ್ಲಿ 'ಶಿಯೋಮಿ ಮಿ ಪೇ' ಬಿಡುಗಡೆ ಮಾಡುವುದಾಗಿ ತಿಳಿಸಿದೆ. ಈ ಪೇಮೆಂಟ್ ಸರ್ವಿಸ್ ಯುಪಿಐ ಆಧರಿಸಿದೆ.

ಹೌದು, ಗೂಗಲ್ ಮೇಲ್, ಅಮೆಜಾನ್ ಪೇ ಮತ್ತು ಫೋನ್‌ ಪೇ ಆಪ್‌ಗಳುಗಳಿಗೆ ಸೆಡ್ಡುಹೊಡೆಯಲು ಶಿಯೋಮಿ ಮುಮದಾಗಿದ್ದು, ಗೂಗಲ್ ಪೇಯಂತೆಯೇ ಹಣಕಾಸು ಕೆಲಸ ಮಾಡಲು 'ಮಿ ಪೇ' ಆಪ್ ಬಿಡುಗಡೆ ಮಾಡುತ್ತಿದೆ ಎನ್ನಲಾಗಿದೆ. ಈ ಆಪ್ ಚೀನಾದಲ್ಲಿ ಈಗಾಗಲೇ ಬಿಡುಗಡೆಯಾಗಿದ್ದು, ಸದ್ಯ ದೇಶದ ಮಾರುಕಟ್ಟೆಯಲ್ಲಿರುವ ಮನಿ ಆಪ್ ಗಳಿಗೆ ಟಕ್ಕರ್ ನೀಡಲು ಬರುತ್ತಿದೆ.

ಗೂಗಲ್ ಪೇಗೆ ಟಕ್ಕರ್!..ಭಾರತದಲ್ಲಿ ಶಿಯೋಮಿ 'ಮಿ ಪೇ' ಆಪ್ ಬಿಡುಗಡೆ!

'ಶಿಯೋಮಿ ಮಿ ಪೇ ಆಪ್ ಮೂಲಕ ಮೊಬೈಲ್ ನಂಬರ್, ಅಕೌಂಟ್ ನಂಬರ್ ಮತ್ತು ಕ್ಯೂಆರ್ ಕೋಡ್ ಮೂಲಕವೂ ಹಣ ವರ್ಗಾವಣೆ ಮಾಡಬಹುದಾಗಿದ್ದು, ಹಣಕ್ಕೆ ವಿನಂತಿ ಕೂಡ ಮಾಡಬಹುದು ಎಂದು ಕಂಪೆನಿ ತಿಳಿಸಿದೆ. ಜೊತೆಗೆ ಮಿ ಪೇ ಬಳಕೆದಾರರಿಗೆ ಕಂಪನಿ ತನ್ನ ಪ್ರಾಡೆಕ್ಟ್‌ಗಳ ಮೇಲೆ ಹೊಸ ಹೊಸ ಆಫರ್‌ಗಳನ್ನು ಕೂಡ ನೀಡುವುದಾಗಿ ತಿಳಿಸಿದೆ.

ಶಿಯೋಮಿ ಕಂಪನಿ ಪ್ರಕಾರ, ಶಿಯೋಮಿಯ ಸ್ಮಾರ್ಟ್‌ಫೋನ್ ನಿಮ್ಮ ಬಳಿಯಿದ್ದರೆ ಮಾತ್ರ ನೀವು ನೀವು ಕಂಪನಿಗೆ ಎಸ್ಎಂಎಸ್ ಕಳುಹಿಸಿ ಈ ಮಿ ಪೇ ಸೌಲಭ್ಯ ಪಡೆಯಬಹುದಾಗಿದೆ. ಮೊಬೈಲ್ ರಿಚಾರ್ಜ್, ಕರೆಂಟ್ ಮತ್ತು ನೀರಿನ ಬಿಲ್ ಸೇರಿದಂತೆ ಎಲ್ಲವಕ್ಕೂ ಇದರಲ್ಲಿ ಪಾವತಿ ಮಾಡಬಹುದಾಗಿದ್ದರೂ, ಈ ಆಪ್ ಅನ್ನು ಶಿಯೋಮಿ ಬಳಕೆದಾರರು ಮಾತ್ರ ಬಳಸಬಹುದು.

ಗೂಗಲ್ ಪೇಗೆ ಟಕ್ಕರ್!..ಭಾರತದಲ್ಲಿ ಶಿಯೋಮಿ 'ಮಿ ಪೇ' ಆಪ್ ಬಿಡುಗಡೆ!

ಶಿಯೋಮಿ ಗ್ರಾಹಕರು ನೂತನ MIUI ಅಪ್ ಡೇಟ್ ಮಾಡಿದಾಗ 'ಮಿ ಪೇ' ಸೌಲಭ್ಯ ನಿಮಗೆ ಸಿಗಲಿದೆ. ಇದನ್ನು ಗೂಗಲ್ ಸ್ಟೋರ್ ನಿಂದ ಡೌನ್ಲೋಡ್ ಮಾಡಲು ಸಾಧ್ಯವಿಲ್ಲವಾದ್ದರಿಂದ, ಇ-ಕಾಮರ್ಸ್ ಮಾರುಕಟ್ಟೆಯಲ್ಲಿ ಮಿ ಪೇ ಭಾರೀ ಪೈಫೋಟಿ ಯನ್ನು ಎದುರಿಸಬೇಕಾಗುತ್ತದೆ. ಏಕೆಂದರೆ, ಗೂಗಲ್ ಪೇ, ಫೋನ್ ಪೇ ಆಪ್ಗಳು ಭಾರತದಲ್ಲಿ ಈಗಾಗಲೇ ಭಾರೀ ಬೆಳೆದು ನಿಂತಿವೆ.

Best Mobiles in India

English summary
Mi Pay is a payments solution which offers many easy ways to transfer money using Unified Payments Interface (UPI). to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+