ಶಿಯೋಮಿಯಿಂದ 'ಟ್ರಾನ್ಸ್‌ಪರೆಂಟ್‌ ಬ್ಲೂಟೂತ್‌ ಸ್ಪೀಕರ್‌' ಬಿಡುಗಡೆ!

|

ಕಳೆದ ವರ್ಷ ಶಿಯೋಮಿ ಕಂಪೆನಿ ಚೀನಾ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ ಪ್ರಾಡಕ್ಟ್‌ಗಳ ಮೂಲಕ ಸಂಚಲನ ಸೃಷ್ಟಿಸಿತ್ತು. ಗ್ರಾಹಕರಿಗೆ ಅತಿ ಉಪಯುಕ್ತವಾದ ಸ್ಮಾರ್ಟ್‌ ಪ್ರಾಡಕ್ಟ್‌ಗಳ ಜೊತೆಗೆ ಕೂಲ್‌ ಸ್ಮಾರ್ಟ್‌ ಪ್ರಾಡಕ್ಟ್‌ಗಳನ್ನು ಬಿಡುಗಡೆ ಮಾಡಿ ಸೈ ಎನ್ನಿಸಿಕೊಂಡಿತ್ತು. ಅಲ್ಲದೆ ಸ್ಮಾರ್ಟ್‌ ಜಾಕೆಟ್‌,60w ಫಾಸ್ಟ್‌ ಚಾರ್ಜರ್‌, ಎಫ್‌ಎಂ ರೇಡಿಯೋ ಒಳಗೊಂಡ ಪವರ್‌ ಬ್ಯಾಂಕ್‌, ಸೇರಿದಂತೆ ಇತರೆ ಸ್ಮಾರ್ಟ್‌ ಪ್ರಾಡಕ್ಟ್‌ಗಳನ್ನ ಸಹ ಗ್ರಾಹಕರಿಗೆ ಪರಿಚಯಿಸಿತ್ತು. ಇದೀಗ ಟ್ರಾನ್ಸ್‌ಪರೆಂಟ್‌ ಬ್ಲೂಟೂತ್‌ ಸ್ಪೀಕರ್‌ ಅನ್ನ ಚೀನಾದಲ್ಲಿ ಲಾಂಚ್‌ ಮಾಡಿದೆ.

ಹೌದು

ಹೌದು ಶಿಯೋಮಿ ಕಂಪೆನಿ ಚೀನಾ ಮಾರುಕಟ್ಟೆಯಲ್ಲಿ ಟ್ರಾನ್ಸ್‌ಪರೆಂಟ್‌ ಬ್ಲೂಟೂತ್‌ ಸ್ಪೀಕರ್‌ ಅನ್ನ ಬಿಡುಗಡೆ ಮಾಡಿದೆ. ಇದರಲ್ಲಿ ಸಂಗೀತದ ಜೊತೆಗೆ ಸಾಹಿತ್ಯವನ್ನು ಸಹ ನೋಡಬಹುದಾಗಿದೆ.ಅಲ್ಲದೆ ಇದರಲ್ಲಿ ಧ್ವನಿ ಮಾಧುರ್ಯವನ್ನ ಅಗತ್ಯಕ್ಕೆ ತಕ್ಕಂತೆ ಬದಲಾಯಿಸುವ ಸಿಸ್ಟಂ ಅನ್ನು ಸಹ ಅಳವಡಿಸಲಾಗಿದೆ. ಈ ಟ್ರಾನ್ಸ್‌ಪರೆಂಟ್‌ ಬ್ಲೂಟೂತ್‌ ಸ್ಪೀಕರ್‌ ಗೆ ಶಿಯೋಮಿ MORROR ART ಎಂದು ಹೆಸರಿಸಲಾಗಿದೆ

ಇದು

ಇದು 21.5 ಇಂಚಿನ ಡಿಸ್‌ಪ್ಲೇಯನ್ನ ಹೊಂದಿದ್ದು, ಈ ಡಿಸ್‌ಪ್ಲೇಯ ಪ್ಯಾನೆಲ್ 1920 x 1080 ರೆಸಲ್ಯೂಶನ್‌ ಆಪರೇಟರ್ಸ್‌ ಅನ್ನ ಹೊಂದಿದೆ. ಇನ್ನು ಈ ಡಿವೈಸ್‌ AR ಕೋಟೆಡ್‌ನ ಗ್ಲಾಸ್‌ ಹೊಂದಿದ್ದು, ಸ್ಕ್ರೀನ್‌ ಟು ಬ್ರೈಟ್‌ನೆಶ್‌ ಅನ್ನು ಉತ್ತಮವಾಗಿಡುವಂತೆ ಮಾಡುತ್ತದೆ. ಅಲ್ಲದೆ ಬೆಳಕಿನ ತೀವ್ರತೆಯಿಂದ ಕಣ್ಣುಗಳನ್ನ ರಕ್ಷಿಸುತ್ತದೆ. ಇನ್ನು ಇದರಲ್ಲಿ ಮ್ಯೂಸಿಕ್‌ನ ಸಂಗೀತದ ಲಯವನ್ನು ಸಹ ಇದರಲ್ಲಿ ನೋಡಬಹುದಾಗಿದ್ದು, ಡೈನಾಮಿಕ್‌ ಫ್ಲೋಟಿಂಗ್‌ ಸಾಹಿತ್ಯವನ್ನ ಹೊಂದಿದೆ.

ಶಿಯೋಮಿ

ಇದಲ್ಲದೆ, ಶಿಯೋಮಿಯ ಈ ಬ್ಲೂಟೂತ್ ಸ್ಪೀಕರ್ 6 ಸೀರಿಸ್‌ನ ಅಲ್ಯೂಮಿನಿಯಂ ಮಿಶ್ರಲೋಹದ ಶೆಲ್ ಅನ್ನು ಹೊಂದಿದ್ದು, ಇದು ತೇವಾಂಶ ಮತ್ತು ತುಕ್ಕಿನಿಂದ ರಕ್ಷಿಸುತ್ತದೆ. ಇನ್ನು ಈ ಪ್ರಾಡಕ್ಟ್‌ 100mm ಕಾನ್ಫಿಗರ್ ಸ್ಪೀಕರ್ ಆಗಿ ಇದನ್ನ ಬಳಸಬಹುದಾಗಿದೆ. ಇನ್ನು ಈ ಸ್ಪೀಕರ್ ಅಪ್‌ಗ್ರೇಡೆಬಲ್‌ 32-ಬಿಟ್ ಕಂಟ್ರೋಲ್‌ ಯೂನಿಟ್‌ ಅನ್ನ ಹೊಂದಿದ್ದು, ಇದು 3 ರೀತಿಯ ಟ್ಯೂನಿಂಗ್‌ ಮೋಡ್‌ ಬೆಂಬಲವನ್ನು ನೀಡುತ್ತದೆ. ಇವುಗಳಲ್ಲಿ ಹೈ-ಫಿಡೆಲಿಟಿ ಮೋಡ್, ಸ್ವೀಟ್‌ ವಾಯ್ಸ್‌ ಮೋಡ್ ಮತ್ತು ರಿದಮ್ ಮೋಡ್ ಸೇರಿವೆ.

ಸ್ಪೀಕರ್‌

ಈ ಸ್ಪೀಕರ್‌ ಮೂಲಕ ಒಬ್ಬನೇ ಬಳಕೆದಾರ ಏಕಕಾಲದಲ್ಲಿ ಹಲವು ಮಾದರಿಯ ಸಂಗೀತ ಮಾದರಿಯನ್ನ ಅನುಭವಿಸಬಹುದಾಗಿದೆ. ಅಷ್ಟೇ ಅಲ್ಲ ಒಂದೇ ಬಾರಿಗೆ ವಿವಿಧ ರೀತಿಯ ಸಂಗೀತ ಶೈಲಿಗಳನ್ನು ನಿಯಂತ್ರಿಸಲು ಬಹುದಾಗಿದೆ. ಇದಲ್ಲದೆ ಇದರ ವಿನ್ಯಾಸವು ಏರ್ ಸ್ಪ್ರಿಂಗ್ ನಂತಿದ್ದು, ಸ್ಪೀಕರ್‌ನ ಪ್ರತಿಕ್ರಿಯೆಯನ್ನ ಸುಧಾರಿಸಲು ಅನುಕೂಲವಾಗಲಿದೆ ಎಂದು ಶಿಯೋಮಿ ಕಂಪೆನಿ ಹೇಳಿಕೊಂಡಿದೆ. ಇನ್ನು ಈ ಸ್ಪೀಕರ್‌ ಚೀನಾ ಮಾರುಕಟ್ಟೆಯಲ್ಲಿ ಯುವಾನ್‌ 3,799(30,650ರೂ) ಪ್ರೈಸ್‌ ಟ್ಯಾಗ್‌ ಅನ್ನ ಹೊಂದಿದ್ದು, ಯೂಪಿನ್‌ ತಾಣದಲ್ಲಿ ಖರೀದಿಗೆ ಲಭ್ಯವಿದೆ.

Best Mobiles in India

English summary
Xiaomi has launched a Transparent Bluetooth speaker. With this Xiaomi speaker, you can listen to music as well as see lyrics. Check out more details here.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X