Home
ಸುದ್ದಿಜಾಲ

ಶಿಯೋಮಿಯಿಂದ ಎರಡು ಹೊಸ ಬ್ಲೂಟೂತ್‌ ಹೆಡ್‌ಫೋನ್‌ ಬಿಡುಗಡೆ!

ಚೀನಾದ ಜನಪ್ರಿಯ ಸ್ಮಾರ್ಟ್‌ಫೋನ್‌ ತಯಾರಕ ಕಂಪೆನಿ ಶಿಯೋಮಿ ತನ್ನ ಜನಪ್ರಿಯ ಸ್ಮಾರ್ಟ್‌ಫೋನ್‌ಗಳ ಮೂಲಕ ಗುರುತಿಸಿಕೊಮಡಿದೆ. ಹಲವು ಆಕರ್ಷಕ ಫಿಚರ್ಸ್‌ಗಳು ಹಾಗೂ ಹೊಸ ವಿನ್ಯಾಸದ ಸ್ಮಾರ್ಟ್‌ಫೋನ್‌ಗಳಿಂದಾಗಿ ಗ್ರಾಹಕರ ನೆಚ್ಚಿನ ಬ್ರ್ಯಾಂಡ್‌ ಆಗಿ ಗುರುತಿಸಿಕೊಂಡಿದೆ. ಸದ್ಯ ಇದೀಗ ನೆನ್ನೆಯಷ್ಟೇ ಶಿಯೋಮಿ ಮಿ 10 ಯೂತ್ ಎಡಿಷನ್ 5G ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ್ದ ಕಂಪೆನಿ ಇದೀಗ ತನ್ನ ಹೊಸ ಮಾದರಿಯ ಎರಡು ಹೊಸ ಬ್ಲೂಟೂತ್ ಹೆಡ್‌ಸೆಟ್‌ಗಳನ್ನು ಬಿಡುಗಡೆ ಮಾಡಿದೆ.

ಶಿಯೋಮಿ

ಹೌದು, ಶಿಯೋಮಿ ಕಂಪೆನಿ ಹೊಸ ಮಾದರಿಯ ಎರಡು ಹೆಡ್‌ಫೋನ್‌ಗಳನ್ನ ಬಿಡುಗಡೆ ಮಾಡಿದೆ. ಇವುಗಳನ್ನ ಶಿಯೋಮಿ ಲೈನ್ ಫ್ರೀ ಬ್ಲೂಟೂತ್ ಹೆಡ್‌ಫೋನ್‌ ಮತ್ತು ಮಿ ಬ್ಲೂಟೂತ್ ಹೆಡ್‌ಸೆಟ್ ಯೂತ್ ಎಡಿಷನ್ ಎಂದು ಹೆಸರಿಸಲಾಗಿದೆ. ಇನ್ನು ಈ ಹೆಡ್‌ಫೋನ್‌ಗಳು ಹೊಸ ಮಾದರಿಯ ವಿನ್ಯಾಸವನ್ನ ಒಳಗೊಂಡಿದ್ದು, ಯುವಜನತೆಯ ಆಶಯಕ್ಕೆ ತಕ್ಕಂತೆ ವಿನ್ಯಾಸಗೊಳಿಸಲಾಗಿದೆ ಎನ್ನಲಾಗ್ತಿದೆ. ಇದಲ್ಲದೆ ಈ ಹೆಡ್‌ಫೋನ್‌ಗಳು ಯಾವೆಲ್ಲಾ ಫೀಚರ್ಸ್‌ಗಳನ್ನ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿರಿ.

ಶಿಯೋಮಿ ಲೈನ್ ಫ್ರೀ ಬ್ಲೂಟೂತ್ ಹೆಡ್‌ಫೋನ್‌

ಶಿಯೋಮಿ ಲೈನ್ ಫ್ರೀ ಬ್ಲೂಟೂತ್ ಹೆಡ್‌ಫೋನ್‌

ಶಿಯೋಮಿ ಲೈನ್ ಫ್ರೀ ಬ್ಲೂಟೂತ್ ಹೆಡ್‌ಫೋನ್‌ ನೆಕ್‌ಬ್ಯಾಂಡ್ ಶೈಲಿಯ ಬ್ಲೂಟೂತ್ ಹೆಡ್‌ಫೋನ್ ಆಗಿದೆ. ಇದು ಒನ್‌ಪ್ಲಸ್ ಮತ್ತು ರಿಯಲ್‌ಮಿ ಬ್ರ್ಯಾಂಡ್‌ಗಳಿಗೆ ಸೆಡ್ಡು ಹೊಡೆಯಬಲ್ಲ ಹೆಡ್‌ಫೋನ್‌ ಆಗಿದೆ. ಇನ್ನು ಈ ಹೆಡ್‌ಫೋನ್‌ಗಳಲ್ಲಿ ಮ್ಯಾಗ್ನೆಟಿಕ್ ಲ್ಯಾಚಿಂಗ್ ಅನ್ನು ನೀಡಲಾಗಿದೆ. ಇದಲ್ಲದೆ ಈ ಹೆಡ್‌ಫೋನ್‌ಗಳು ಶಿಯೋಮಿ 80mm ಕಡಿಮೆ ಸುಪ್ತತೆಯನ್ನು ಹೊಂದಿವೆ. ಇನ್ನು ಶಿಯೋಮಿ ಲೈನ್ ಫ್ರೀ ಬ್ಲೂಟೂತ್ ಹೆಡ್‌ಫೋನ್‌ಗಳು ಕ್ವಾಲ್ಕಾಮ್‌ನ ಆಪ್ಟಿಎಕ್ಸ್ ಅಡಾಪ್ಟಿವ್ ಟೆಕ್ನಾಲಜಿಯನ್ನ ಒಳಗೊಂಡಿದ್ದು, ಕಡಿಮೆ-ಶಕ್ತಿಯ ಆಡಿಯೊ ಅನುಭವಕ್ಕಾಗಿ ಕ್ವಾಲ್ಕಾಮ್‌ನ QCC5125 ಆಡಿಯೊ ಚಿಪ್‌ಸೆಟ್‌ ಅನ್ನು ಬೆಂಬಲಿಸುತ್ತದೆ.

ಹೆಡ್‌ಫೋನ್‌

ಇನ್ನು ಈ ಹೆಡ್‌ಫೋನ್‌ ಸ್ಪಷ್ಟವಾದ ಆಡಿಯೊ ಪ್ಲೇಬ್ಯಾಕ್ ಮತ್ತು ಕರೆಗಳಿಗಾಗಿ ಡಿಎಸ್‌ಪಿ + ಸಿವಿಸಿ ಟೆಕ್ನಾಲಜಿಯನ್ನು ಸಂಯೋಜಿಸುತ್ತದೆ ಎಂದು ಹೇಳಲಾಗಿದೆ. ಇದಲ್ಲದೆ ಈ ಹೆಡ್‌ಫೋನ್‌ಗಳು 9 ಗಂಟೆಗಳ ಬ್ಯಾಟರಿ ಬಾಳಿಕೆಯನ್ನು ನೀಡುತ್ತವೆ. ಅಲ್ಲದೆ ಈ ಹೆಡ್‌ಫೋನ್‌ ಯುಎಸ್‌ಬಿ ಟೈಪ್-ಸಿ ಪೋರ್ಟ್ ಮೂಲಕ ಚಾರ್ಜ್ ಆಗುತ್ತದೆ. ಜೊತೆಗೆ 10 ನಿಮಿಷಗಳ ಚಾರ್ಜ್‌ನಲ್ಲಿ 2.5 ಗಂಟೆಗಳ ಪ್ಲೇಬ್ಯಾಕ್ ಸಮಯವನ್ನು ಒದಗಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಇನ್ನು ಈ ಹೆಡ್‌ಫೋನ್‌ ಪರಿಮಾಣ ಮತ್ತು ಸಂಗೀತ ಪ್ಲೇಬ್ಯಾಕ್ ಅನ್ನು ನಿಯಂತ್ರಿಸಲು ಇನ್-ಲೈನ್ ರಿಮೋಟ್ ಅನ್ನು ಸಹ ಒಳಗೊಂಡಿದೆ. ಅಲ್ಲದೆ ಕ್ಸಿಯಾವೋಎಐ, ಸಿರಿ ಮತ್ತು ಗೂಗಲ್ ಅಸಿಸ್ಟೆಂಟ್‌ನಂತಹ ಡಿಜಿಟಲ್ ಸಹಾಯಕರಿಗೆ ಇದು ಬೆಂಬಲವನ್ನು ಸಹ ಒಳಗೊಂಡಿದೆ. ಇನ್ನು ಈ ಹೆಡ್‌ಫೋನ್‌ ಕಪ್ಪು ಮತ್ತು ಗ್ರೇ ಬಣ್ಣಗಳ ಆಯ್ಕೆಯಲ್ಲಿ ಲಬ್ಯವಾಗಲಿದ್ದು, ಚೀನಾ ಮಾರುಕಟ್ಟೆಯಲ್ಲಿ RMB 199 (ಸುಮಾರು 2,140 ರೂ.) ಬೆಲೆಯನ್ನ ಹೊಂದಿದೆ.

ಮಿ ಬ್ಲೂಟೂತ್ ಹೆಡ್‌ಸೆಟ್ ಯೂತ್‌ ಎಡಿಷನ್‌

ಮಿ ಬ್ಲೂಟೂತ್ ಹೆಡ್‌ಸೆಟ್ ಯೂತ್‌ ಎಡಿಷನ್‌

ಮಿ ಬ್ಲೂಟೂತ್ ಹೆಡ್‌ಸೆಟ್ ಯೂತ್ ಎಡಿಷನ್ ಬ್ಲೂಟೂತ್ ಆಡಿಯೊ ಪ್ರಾಡಕ್ಟ್‌ ಆಗಿದೆ. ಇದು ಸಿಂಗಲ್‌ ಇಯರ್‌ ಬ್ಲೂಟೂತ್ ಹೆಡ್‌ಸೆಟ್ ಆಗಿದ್ದು, ಕರೆ ಮಾಡುವಾಗ ಉತ್ತಮ ಅನುಭವಕ್ಕಾಗಿ ಇದನ್ನು ವಿನ್ಯಾಸಗಳಿಸಲಾಗಿದೆ. ಅಲ್ಲದೆ ಈ ಹೊಸ ಉತ್ಪನ್ನದ ವಿನ್ಯಾಸವು ಒಂದೆರಡು ವರ್ಷಗಳ ಹಿಂದೆ ಬಿಡುಗಡೆಯಾದ ಮಿ ಬ್ಲೂಟೂತ್ ಹೆಡ್‌ಸೆಟ್ ಬೇಸಿಕ್‌ನಂತೆಯೇ ಇದೆ. ಸದ್ಯ ಈ ಹೆಡ್‌ಫೋನ್‌ ಬ್ಲೂಟೂತ್ 5.0 ಅನ್ನು ಬೆಂಬಲಿಸುತ್ತದೆ. ಜೊತೆಗೆ ಪರಿಮಾಣ ಮತ್ತು ಮ್ಯೂಸಿಕ್‌ ಕಂಟ್ರೋಲ್‌ಗಾಗಿ ಗುಂಡಿಗಳನ್ನು ಹೊಂದಿದೆ.

ಮ್ಯೂಸಿಕ್‌

ಇನ್ನು ಮ್ಯೂಸಿಕ್‌ ಟ್ರ್ಯಾಕ್‌ಗಳನ್ನು ಬದಲಾಯಿಸಲು, ಕರೆಗಳನ್ನು ತಿರಸ್ಕರಿಸಲು ಅಥವಾ ಸ್ವೀಕರಿಸಲು ಅಥವಾ ಸಂಖ್ಯೆಗಳನ್ನು ಮರುಹೊಂದಿಸಲು ಸಹ ಅದೇ ಗುಂಡಿಯನ್ನು ಬಳಸಬಹುದಾಗಿದೆ. ಜೊತೆಗೆ ಇದರಲ್ಲಿ ಹೆಡ್ಸೆಟ್ ಸೌಂಡ್‌ ಡಿಸೆಬಲ್‌ಗಾಗಿ ಡಿಎಸ್‌ಪಿ ಟೆಕ್ನಾಲಜಿಯನ್ನ ನೀಡಲಾಗಿದೆ. ಸದ್ಯ ಈ ಹೆಡ್‌ಫೋನ್‌ ನಾಲ್ಕು ಗಂಟೆಗಳ ರೇಟಿಂಗ್ ಬ್ಯಾಟರಿಯನ್ನ ಹೊಂದಿದ್ದು, ಸ್ಟ್ಯಾಂಡ್‌ಬೈನಲ್ಲಿ 80 ಗಂಟೆಗಳವರೆಗೆ ಇರುತ್ತದೆ. ಇನ್ನು ಈ ಹೆಡ್‌ಫೋನ್‌ ಬೆಲೆ RMB 59 (ಸುಮಾರು 635 ರೂ.) ಆಗಿದ್ದು, ಇದನ್ನು ಕಪ್ಪು ಅಥವಾ ಬಿಳಿ ಬಣ್ಣದಲ್ಲಿ ಖರೀದಿಸಬಹುದಾಗಿದೆ.

Best Mobiles in India

English summary
Alongside the Mi 10 Youth Edition and MIUI 12, Xiaomi also introduced two new Bluetooth audio products. Check out their price, features and availability.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+