ಶಿಯೋಮಿ 65 ಇಂಚಿನ OLED ಸ್ಮಾರ್ಟ್‌ಟಿವಿ ಫೀಚರ್ಸ್‌ ಬಹಿರಂಗ!

|

ಪ್ರಸ್ತುತ ದಿನಗಳಲ್ಲಿ ಟಿವಿ ಲೋಕ ಸಾಕಷ್ಟು ಕಲರ್ ಫುಲ್‌ ಆಗಿದೆ. ಸಾಕಷ್ಟು ವಿಭಿನ್ನ ಮಾದರಿಯ ಸ್ಮಾರ್ಟ್‌ಟಿವಿಗಳು ಮಾರುಕಟ್ಟೆಗೆ ಎಂಟ್ರಿ ನೀಡಿವೆ. ಟೆಕ್ನಾಲಜಿ ಮುಂದುವರೆದಂತೆ ಸಾಕಷ್ಟು ವಿಭಿನ್ನ ಶೈಲಿಯ ಸ್ಮಾರ್ಟ್‌ಟಿವಿಗಳು ಇಂದು ಲಬ್ಯವಿದ್ದು, ಹಲವಾರು ಕಂಪೆನಿಗಳು ವೈವಿಧ್ಯಮಯವಾದ ಸ್ಮಾರ್ಟ್‌ಟಿವಿಗಳನ್ನ ಪರಿಚಯಿಸಿವೆ. ಇದರಲ್ಲಿ ಶಿಯೋಮಿ ಕಂಪೆನಿ ಕೂಡ ಒಂದಾಗಿದೆ. ಸದ್ಯ ಇದೀಗ ಶಿಯೋಮಿ ಕಂಪೆನಿ ಹೊಸ ಮಾದರಿಯ ಸ್ಮಾರ್ಟ್‌ಟಿವಿಯನ್ನ ಬಿಡುಗಡೆ ಮಾಡಲು ಸಿದ್ದತೆ ನಡೆಸಿದೆ.

ಚೀನಾದ

ಹೌದು, ಚೀನಾದ ಜನಪ್ರಿಯ ಸ್ಮಾರ್ಟ್‌ಫೋನ್‌ ತಯಾರಕ ಶಿಯೋಮಿ ಸ್ಮಾರ್ಟ್‌ಫೋನ್‌ ವಲಯದಲ್ಲಿ ಉತ್ತಮ ಬ್ರ್ಯಾಂಡ್‌ ಆಗಿ ಗುರುತಿಸಿಕೊಂಡಿದೆ. ಸ್ಮಾರ್ಟ್‌ಫೋನ್‌ ಮಾತ್ರವಲ್ಲದೆ ಜನಸಾಮಾನ್ಯರಿಗೆ ಬೇಕಾಗುವ ಹಲವು ಮಾದರಿಯ ಸ್ಮಾರ್ಟ್‌ ಪ್ರಾಡಕ್ಟ್‌ಗಳನ್ನ ಸಹ ಬಿಡುಗಡೆ ಮಾಡಿದೆ. ಇವುಗಳಲ್ಲದೆ ಸ್ಮಾರ್ಟ್‌ಟಿವಿ ವಲಯದಲ್ಲೂ ಕೂಡ ಶಿಯೋಮಿ ಉತ್ತಮ ಜನಪ್ರಿಯತೆ ಸಾಧಿಸಿದ್ದು, ಇದೀಗ ಶಿಯೋಮಿ 65 ಇಂಚಿನ ಟಿವಿ L65M5-OD ಟಿವಿಯನ್ನ ಬಿಡುಗಡೆ ಮಾಡಲು ವೇದಿಕೆ ಸಿದ್ದಪಡಿಸಿಕೊಳ್ಳುತ್ತಿದೆ. ಸದ್ಯ ಈ ಸ್ಮಾರ್ಟ್‌ಟಿವಿ ವಿನ್ಯಾಸ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿರಿ.

ತಿಳಿದಿರುವಂತೆ

ನಿಮಗೆಲ್ಲಾ ತಿಳಿದಿರುವಂತೆ ಶಿಯೋಮಿ ಮಿ ಟಿವಿ 4A ಪ್ರೊ ಮತ್ತು ಇತ್ತೀಚೆಗೆ ಬಿಡುಗಡೆಯಾದ ಮಿ ಟಿವಿ 4x ಕಂಪೆನಿಯ ಜನಪ್ರಿಯ ಸ್ಮಾರ್ಟ್‌ಟಿವಿ ಆಗಿ ಗುರುತಿಸಿಕೊಂಡಿದೆ. ಇದೀಗ ಈ ಸಾಲಿಗೆ ಈ ಸ್ಮಾರ್ಟ್‌ಟಿವಿ ಕೂಡ ಸೇರಿಕೊಳ್ಳುವ ಸಾಧ್ಯತೆ ಇದೆ. ಸದ್ಯ ಶಿಯೋಮಿ ಶೀಘ್ರದಲ್ಲೇ 65 ಇಂಚಿನ ಫಲಕ ಮತ್ತು ಡಾಲ್ಬಿ ವಿಷನ್ ಬೆಂಬಲಿಸುವ ಹೊಸ ಸ್ಮಾರ್ಟ್ ಟಿವಿಯನ್ನು ಬಿಡುಗಡೆ ಮಾಡಬಹುದೆಂದು ಹೇಳಲಾಗ್ತಿದೆ. ಸದ್ಯ ಆನ್‌ಲೈನ್‌ನಲ್ಲಿ ಲೀಕ್‌ ಆದ ಮಾಹಿತಿ ಪ್ರಕಾರ ಶಿಯೋಮಿ 65 ಇಂಚಿನ ಟಿವಿ ಎಲ್ 65 ಎಂ 5-ಒಡಿ ಮಾದರಿಯನ್ನು ಹೊಂದಿರುತ್ತದೆ ಎಂದು ಹೇಳಲಾಗ್ತಿದೆ.

ಟಿವಿಗೆ

ಅಲ್ಲದೆ ಈ ಟಿವಿಗೆ ಇದೀಗ ಡಾಲ್ಬಿ ವಿಷನ್ ಪ್ರಮಾಣೀಕರಣ ಸಿಕ್ಕಿದ್ದು, ಈ ಫೀಚರ್ಸ್‌ ಅನ್ನು ಒಳಗೊಂಡಿರುವ ಮೊದಲ ಶಿಯೋಮಿ ಟಿವಿ ಇದಾಗಿದೆ. ಇದಲ್ಲದೆ, ಕಂಪನಿಯು ಈ ಸ್ಮಾರ್ಟ್‌ಟಿವಿಯಲ್ಲಿ ಒಎಲ್ಇಡಿ ಸ್ಕ್ರೀನ್‌ ಅನ್ನು ಬಳಸಿದ್ದು, ಮಿ ಟಿವಿ 5 ಸರಣಿಯಲ್ಲಿ ಈ ಸ್ಮಾರ್ಟ್‌ಟಿವಿಯನ್ನು ಪ್ರಾರಂಭಿಸಬಹುದು ಎಂದು ಹೇಳಲಾಗುತ್ತದೆ. ಸದ್ಯ ಸೋರಿಕೆಯಾದ ಚಿತ್ರದ ಮೂಲಕ ಹೊಸ ಟಿವಿಯ ಬಗ್ಗೆ ಹೆಚ್ಚು ಬಹಿರಂಗಗೊಂಡಿಲ್ಲ. ಆದರೆ, ಸದ್ಯದಲ್ಲಿಯೇ ಈ ಸ್ಮಾರ್ಟ್‌ಟಿವಿಯ ವಿವರಗಳು ಲಬ್ಯವಾಗಲಿವೆ ಎಂದು ಹೇಳಲಾಗ್ತಿದೆ.

ಸ್ಮಾರ್ಟ್‌ಟಿವಿ

ಇನ್ನು ಈ ಸ್ಮಾರ್ಟ್‌ಟಿವಿ ಎಚ್‌ಡಿಆರ್ 10 ಪ್ರಮಾಣೀಕರಿಸಲ್ಪಟ್ಟಿದೆ, ಅಲ್ಲದೆ ಇದು ಹೆಚ್ಚಿನ ರೆಸಲ್ಯೂಶನ್ ಅನ್ನು ಸಹ ಒಳಗೊಂಡಿದೆ. ಇದಲ್ಲದೆ ಈ ಸ್ಮಾರ್ಟ್‌ಟಿವಿಯನ್ನ ಡಾಲ್ಬಿ ವಿಷನ್‌ನೊಂದಿಗೆ ಬಿಡುಗಡೆ ಮಾಡುವುದರಿಂದ ಪ್ರೀಮಿಯಂ ಟಿವಿ ವಿಭಾಗದಲ್ಲಿ ಈ ಸ್ಮಾರ್ಟ್‌ಟಿವಿ ಬಿಡುಗಡೆ ಆಗುವ ಸಾಧ್ಯತೆ ಇದೆ. ಅಲ್ಲದೆ ನೆಟ್‌ಫ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್ ವೀಡಿಯೊಗಳಂತಹ ಒಟಿಟಿ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳೊಂದಿಗೆ ಇದು ವರ್ಧಿತ ಕಾರ್ಯಕ್ಷಮತೆಯನ್ನು ನೀಡುತ್ತದೆ ಎಂದು ನಿರೀಕ್ಷಿಸಬಹುದಾಗಿದೆ.

Best Mobiles in India

English summary
Dolby Vision is currently the leading HDR format available.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X