ಶಿಯೋಮಿಯ 'ಮಿ10 ಮತ್ತು ಮಿ10 ಪ್ರೊ' ಸ್ಮಾರ್ಟ್‌ಫೋನ್‌ಗಳ ಫೀಚರ್ಸ್‌ ಬಹಿರಂಗ!

|

ಚೀನಾ ಮೂಲದ ಜನಪ್ರಿಯ ಸ್ಮಾರ್ಟ್‌ಫೋನ್‌ ಕಂಪೆನಿ ಶಿಯೋಮಿ ತನ್ನ ಹೊಸ ಆವೃತ್ತಿಯ ಶಿಯೋಮಿ ಮಿ 10 ಮತ್ತು ಮಿ 10 ಪ್ರೊ ಸ್ಮಾರ್ಟ್‌ಫೋನ್‌ ಅನ್ನ ಬಿಡುಗಡೆ ಮಾಡಲು ತಯಾರಿ ನಡೆಸಿದೆ. ಆದರೆ ಬಿಡುಗಡೆಗೂ ಮುನ್ನವೇ ಹೊಸ ಮಾದರಿಯ ಈ ಎರಡು ಸ್ಮಾರ್ಟ್‌ಫೋನ್‌ಗಳು ಯಾವೆಲ್ಲಾ ಫೀಚರ್ಸ್‌ ಒಳಗೊಂಡಿದೆ ಅನ್ನೊ ಮಾಹಿತಿ ಅನ್‌ಲೈನ್‌ನಲ್ಲಿ ಲೀಕ್‌ ಆಗಿದೆ. ಅದರಲ್ಲೂ ಶಿಯೋಮಿ ಮಿ 10 ಸ್ಮಾರ್ಟ್‌ಫೋನ್‌ ಸ್ನಾಪ್‌ಡ್ರಾಗನ್‌ 865 ಪ್ರೊಸೆಸರ್‌ ಹೊಂದಿರಲಿದೆ ಎಂದು ಹೇಳಲಾಗ್ತಿದೆ.

ಹೌದು

ಹೌದು, ಶಿಯೋಮಿ ಕಂಪೆನಿಯ ಶಿಯೋಮಿ ಮಿ 10 ಮತ್ತು ಮಿ 10 ಪ್ರೊ ಸ್ಮಾರ್ಟ್‌ಫೋನ್‌ ಗಳ ಫೀಚರ್ಸ್‌ ಆನ್‌ಲೈನ್‌ನಲ್ಲಿ ಲೀಕ್‌ ಆಗಿದ್ದು, ಶಿಯೋಮಿ ಮಿ10 ಮೂರು ಮಾದರಿಗಳಲ್ಲಿ ವೇರಿಯೆಂಟ್‌ ಆಯ್ಕೆಯಲ್ಲಿ ಲಭ್ಯವಾಗಲಿದೆ ಎಂದು ಹೇಳಲಾಗ್ತಿದೆ. ಜೊತೆಗೆ ಶಿಯೋಮಿ ಮಿ 10 ಪ್ರೊ ಎರಡು ಮಾದರಿಗಳಲ್ಲಿ ಲಭ್ಯವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಇನ್ನು ಈ ಫೋನ್‌ 5 G ನೆಟ್‌ವರ್ಕ್‌ ಅನ್ನು ಬೆಂಬಲಿಸಲಿದ್ದು. ಈ ಎರಡು ಸ್ಮಾರ್ಟ್‌ಫೊನ್‌ಗಳು ಯಾವೆಲ್ಲಾ ವಿಶೇಷತೆಗಳನ್ನ ಹೊಂದಿವೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಕೊಡ್ತೀವಿ ಓದಿ.

ಡಿಸ್‌ಪ್ಲೇ

ಡಿಸ್‌ಪ್ಲೇ

ಶಿಯೋಮಿ ಕಂಪೆನಿಯ ಮಿ 10 ಮತ್ತು ಮಿ10 ಪ್ರೊ ಎರಡು ಸ್ಮಾರ್ಟ್‌ಫೋನ್‌ಗಳು ಕೂಡ 6.5 ಇಂಚಿನ ಒಎಲ್‌ಇಡಿ ಡಿಸ್‌ಪ್ಲೇ ಯನ್ನು ಹೊಂದಿರಲಿದ್ದು, 90Hz ರಿಫ್ರೇಶ್‌ ರೇಟ್‌ ಅನ್ನ ಹೊಂದಿರಲಿದೆ ಎನ್ನಲಾಗ್ತಿದೆ. ವಾಟರ್‌ ಡ್ರಾಪ್‌ ನಾಚ್‌ ಶೈಲಿಯನ್ನ ಹೊಂದಿವೆ. ಅಲ್ಲದೆ ಈ ಎರಡು ಸ್ಮಾರ್ಟ್‌ಫೋನ್‌ಗಳ ಡಿಸ್‌ಪ್ಲೇ ವಿನ್ಯಾಸ ಉತ್ತಮ ವಾಗಿದ್ದು ಉತ್ತಮ ವಿಡೀಯೋ ವಿಕ್ಷಣೆಯ ಅನುಭವವನ್ನ ನೀಡಲಿದೆ ಎಂದು ಅಂದಾಜಿಸಲಾಗಿದೆ.

ಪ್ರೊಸೆಸರ್‌

ಪ್ರೊಸೆಸರ್‌

ಇನ್ನು, ಶಿಯೋಮಿ ಮಿ 10 ಮತ್ತು ಮಿ 10 ಪ್ರೊ ಎರಡೂ ಸ್ಮಾರ್ಟ್‌ಫೋನ್‌ಗಳು ಕೂಡ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 865 ಪ್ರೊಸೆಸರ್ ಹೊಂದಿದ್ದು ಅಂಡ್ರಾಯ್ಡ್9 ಒಎಸ್‌ ಬೆಂಬಲದೊಂದಿಗೆ ಕಾರ್ಯನಿರ್ವಹಿಲಿದೆ. ಜೊತೆಗೆ ಮಿ 10 ಮೂರು ಮಾದರಿಗಳಲ್ಲಿ ಲಭ್ಯವಿರಲಿದ್ದು ಟಾಪ್-ಎಂಡ್ ಮಾದರಿಯ 12GB RAM ಮತ್ತು 256GB ಸ್ಟೋರೇಜ್ ಸಾಮರ್ಥ್ಯ ಹೊಂದಿದ್ದು, 8GB RAM, 128GB ಸ್ಟೋರೇಜ್ ಮತ್ತು 8GB RAM, 256GB ಸ್ಟೋರೇಜ್ ಸಾಮರ್ಥ್ಯದ ವೇರಿಯೆಂಟ್‌ ಆಯ್ಕೆಯನ್ನ ಹೊಂದಿರಲಿದೆ. ಇನ್ನು ಶಿಯೋಮಿ ಮಿ 10 ಪ್ರೊ 12GB RAM ಜೊತೆಗೆ 128GB ಸಂಗ್ರಹವನ್ನು ಹೊಂದಿದೆ. ಇತರ ಎರಡು ಮಾದರಿಗಳು 12GB RAM ಮತ್ತು 256GB ಮತ್ತು 512GB ಶೇಖರಣಾ ಸಾಮರ್ಥ್ಯವನ್ನು ಹೊಂದಿರುತ್ತವೆ.

ಕ್ಯಾಮೆರಾ

ಕ್ಯಾಮೆರಾ

ಇನ್ನು ಶಿಯೋಮಿ ಮಿ10 ಸ್ಮಾರ್ಟ್‌ಫೋನ್‌ ಕ್ವಾಡ್‌ ಕ್ಯಾಮೆರಾ ಸೆಟ್‌ಆಪ್‌ ಹೊಂದಿದ್ದು ಮುಖ್ಯ ಕ್ಯಾಮೆರಾ ಸೋನಿ ಐಎಂಎಕ್ಸ್ 686 ಸೆನ್ಸಾರ್‌ ಹೊಂದಿದ್ದು ಎರಡನೇ ಕ್ಯಾಮೆರಾ 20 ಮೆಗಾಪಿಕ್ಸೆಲ್, ಮೂರನೇ ಕ್ಯಾಮೆರಾ 12 ಮೆಗಾಪಿಕ್ಸೆಲ್, ಮತ್ತು ನಾಲ್ಕನೇ ಕ್ಯಾಮೆರಾ 5 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನ ಒಳಗೊಂಡಿರಲಿದೆ. ಇನ್ನು ಶಿಯೋಮಿ ಮಿ10 ಪ್ರೊ ಕೂಡ ಕ್ವಾಡ್‌ ಕ್ಯಾಮೆರಾ ಸೆಟಪ್‌ ಹೊಂದಿದ್ದು ಮುಖ್ಯ ಕ್ಯಾಮೆರಾ 108 ಮೆಗಾಪಿಕ್ಸೆಲ್, ಎರಡನೇ ಕ್ಯಾಮೆರಾ 48 ಮೆಗಾಪಿಕ್ಸೆಲ್ , ಮೂರನೇ ಕ್ಯಾಮೆರಾ 12 ಮೆಗಾಪಿಕ್ಸೆಲ್ , ಮತ್ತು ಒಂದು ಟೆಲಿಫೋಟೋ ಲೆನ್ಸ್ ಕ್ಯಾಮೆರಾ ವಿಶೇಷತೆಯನ್ನ ಒಳಗೊಂಡಿರಲಿದೆ.

ಬ್ಯಾಟರಿ ಮತ್ತು ಲಭ್ಯತೆ

ಬ್ಯಾಟರಿ ಮತ್ತು ಲಭ್ಯತೆ

ಸದ್ಯ ಶಿಯೋಮಿ ಮಿ 10 ಮತ್ತು ಮಿ10 ಪ್ರೊ ಸ್ಮಾರ್ಟ್‌ಫೋನ್‌ಗಳು 4,500mAh ಬ್ಯಾಟರಿ ಪ್ಯಾಕಪ್‌ ಅನ್ನ ಹೊಂದಿದ್ದು, 66W ಫಾಸ್ಟ್ ಚಾರ್ಜಿಂಗ್ ವೇಗವನ್ನ ಹೊಂದಿರಲಿದೆ. ಬ್ಲೂಟೂತ್‌ ವೈಫೈ ಕನೆಕ್ಟಿವಿಟಿ ಆಯ್ಕೆಯನ್ನ ಹೊಂದಿರಲಿವೆ. ಇನ್ನು ಮಿ10 ಸ್ಮಾರ್ಟ್‌ಫೋನ್‌ ಮತ್ತು ಮಿ10ಪ್ರೊ ಸ್ಮಾರ್ಟ್‌ಫೋನ್‌ ಕ್ರಮವಾಗಿ ಸಿಎನ್‌ವೈ 3,199 (ಅಂದಾಜು 32,700ರೂ ) ಮತ್ತು ಸಿಎನ್‌ವೈ 3,799 (ಅಂದಾಜು 38,900 ರೂ) ಬೆಲೆಯನ್ನ ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ.

Best Mobiles in India

Read more about:
English summary
Xiaomi has already confirmed it will launch Snapdragon 865-powered Mi 10-series this year. The new lineup, comprised of Mi 10 and Mi 10 Pro, has already leaked online multiple times. Now, a new leak reveals the key specifications of the two smartphones. The leak also hints at the pricing of the upcoming Xiaomi smartphones.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X