ಬ್ಲಾಸ್ಟ್ ಆಯ್ತು ಮತ್ತೊಂದು ಶಿಯೋಮಿ ಫೋನ್: ಕಾರಣ ಮಾತ್ರ ಶಾಕಿಂಗ್...!
ಭಾರತೀಯ ಮಾರುಕಟ್ಟೆಯಲ್ಲಿ ನಂಬರ್ ಒನ್ ಸ್ಮಾರ್ಟ್‌ಫೋನ್ ಮಾರಾಟ ಮಾಡುವ ಸಂಸ್ಥೆ ಎನ್ನುವ ಖ್ಯಾತಿಯನ್ನು ಪಡೆದುಕೊಂಡಿರುವ ಶಿಯೋಮಿ ಸ್ಮಾರ್ಟ್‌ಫೋನ್ ವೊಂದು ಬ್ಲಾಸ್ ಅಗಿದ್ದು, ಚೀನಾದಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿರುವ ಶಿಯೋಮಿ ಸ್ಮಾರ್ಟ್‌ಫೋನ್‌ಗಳಲ್ಲಿ ಬೆಸ್ಟ್ ಎನ್ನಿಸಿಕೊಂಡಿರುವ ಶಿಯೋಮಿ Mi 5 ಬ್ಲಾಸ್ ಆಗಿದ್ದು, ಆದರೆ ಸ್ಟೋಟಕ್ಕೆ ಕಾರಣವೇನು ಎಂಬುದು ತಿಳಿದುಬಂದಿಲ್ಲ ಎನ್ನಲಾಗಿದೆ.

ಭಾರತೀಯ ಮಾರುಕಟ್ಟೆಯಲ್ಲಿ ಶಿಯೋಮಿ Mi MAX 2 ಸ್ಮಾರ್ಟ್‌ಫೋನ್ ನಂತರದಲ್ಲಿ ಕಾಣಿಸಿಕೊಂಡಿರುವ ಶಿಯೋಮಿ Mi 5 ಸ್ಮಾರ್ಟ್‌ಫೋನ್ ಈಗ ಬೇಡದಿರುವ ಕಾರಣಕ್ಕೆ ಸುದ್ದಿಯಲ್ಲಿದೆ. ಈ ಕುರಿತು ಚೀನಾ ಮೂಲದ ವೆಬ್‌ಸೈಟ್‌ಗಳು ವರದಿ ಮಾಡಿದ್ದು, ಶಿಯೋಮಿ Mi 5 ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ಗ್ಲಾಸ್ ಡಿಸೈನ್ ಹೊಂದಿದೆ. ಈ ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿಯೇ ಬ್ಲಾಸ್ ಆಗಿದೆ ಎನ್ನಲಾಗಿದೆ.

ಕಾರಣ ತಿಳಿದಿಲ್ಲ:
ಶಿಯೋಮಿ Mi 5 ಸ್ಮಾರ್ಟ್‌ಫೋನ್ ಸ್ಟೋಟಕ್ಕೆ ಸರಿಯಾದ ಕಾರಣವೇನು ಎಂಬುದು ತಿಳಿದು ಬಂದಿಲ್ಲ ಎನ್ನಲಾಗಿದೆ. ಆದರೆ ಆ ಸ್ಮಾರ್ಟ್‌ಫೋನ್ ಅನ್ನು ಬಳಕೆ ಮಾಡುತ್ತಿದ್ದವರು ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಮಾಹಿತಿಯನ್ನು ಹಾಕಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ಚಿತ್ರವನ್ನು ನೋಡಿದರೆ ಫೋನ್ ಸಂಪೂರ್ಣವಾಗಿ ಸುಟ್ಟು ಕರಕಲು ಆಗಿದೆ.

ಮೊದಲ ಪ್ರೀಮಿಯಮ್ ಫೋನ್:
ಈ ಹಿಂದೆ ಶಿಯೋಮಿಯ ಹಲವು ಸ್ಮಾರ್ಟ್‌ಫೋನ್‌ಗಳು ಬ್ಲಾಸ್ಟ್ ಆಗಿತ್ತು. ಆದರೆ ಶಿಯೋಮಿಯ ಯಾವುದೇ ಪ್ರೀಮಿಯಮ್ ಫೋನ್‌ಗಳು ಬ್ಲಾಸ್ಟ್ ಆಗಿರುವ ಘಟನೆಗಳು ವರದಿಯಾಗಿಲ್ಲ ಎನ್ನಲಾಗಿದೆ. ಇದೇ ಮೊದಲ ಬಾರಿಗೆ ಶಿಯೋಮಿಯ ಪ್ರೀಮಿಯಮ್ ಫೋನ್ ಆಗಿರುವ ಶಿಯೋಮಿ Mi 5 ಸ್ಮಾರ್ಟ್‌ಫೋನ್ ಬ್ಲಾಸ್ಟ್ ಆಗಿದ್ದು, ಇದೆ ಮೊದಲು ಎನ್ನಲಾಗಿದೆ.

ಬ್ಲಾಸ್‌ಗೆ ಚಾರ್ಜರ್ ಕಾರಣ:
ಶಿಯೋಮಿ Mi 5 ಸ್ಮಾರ್ಟ್‌ಫೋನ್ ಬ್ಲಾಸ್ಟ್‌ಗೆ ಚಾರ್ಜರ್ ಕಾರಣ ಎನ್ನಲಾಗಿದೆ. ಕಂಪನಿಯೂ ನೀಡಿರುವ ಚಾರ್ಜರ್ ಅನ್ನು ಬಿಟ್ಟರೆ ಬೇರೆ ಚಾರ್ಜರ್ ಗಳನ್ನು ಬಳಕೆ ಮಾಡಿದರೆ ಮಾತ್ರವೇ ಸ್ಮಾರ್ಟ್‌ಫೋನ್ ಬ್ಲಾಸ್ಟ್ ಆಗಲಿದೆ ಎನ್ನಲಾಗಿದೆ. ಇದರಿಂದಾಗಿ ನೀವು ಮುಂದಿನ ಸಂದರ್ಭದಲ್ಲಿ ಬೇರೆ ಯಾವುದೇ ಚಾರ್ಜ್‌ಗಳನ್ನು ಬಳಕೆ ಮಾಡಿಕೊಳ್ಳಬೇಡಿ. ಓರ್ಜಿನಲ್ ಚಾರ್ಜರ್ ಬಳಸಿಕೊಳ್ಳಿ.


Click it and Unblock the Notifications








