Subscribe to Gizbot

ಶ್ಯೋಮಿಯ ಇನ್ನೊಂದು ಫೋನ್‌ಗೆ ಮೂಹೂರ್ತ ನಿಗದಿ

Written By:

ಎಮ್ಐ 4 ಸಕ್ಸೆಸರ್ ಆಗಿರುವ ಎಮ್ಐ 5 ನ ಲಾಂಚ್ ಅನ್ನು ಬೀಜಿಂಗ್‌ನಲ್ಲಿ ನಡೆಸುವ ಉದ್ದೇಶವನ್ನು ಶ್ಯೋಮಿ ಇಟ್ಟುಕೊಂಡಿದ್ದು ಜನವರಿ 15 ರಂದು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಶ್ಯೋಮಿಯ ಹೊಸ ಬ್ರ್ಯಾಂಡ್ ಫೋನ್ ಲಾಂಚ್ ಎಂಬ ಶೀರ್ಷಿಕೆ ಎಲ್ಲೆಡೆ ರಾರಾಜಿಸುತ್ತಿದ್ದು "2015.1.15" ಎಂಬ ಈ ದಿನಾಂಕವೇ ಎಲ್ಲರ ಅಚ್ಚರಿಯ ಕೇಂದ್ರಬಿಂದುವಾಗಿದೆ.

ಶ್ಯೋಮಿಯ ಇನ್ನೊಂದು ಫೋನ್‌ಗೆ ಮೂಹೂರ್ತ ನಿಗದಿ

ಇನ್ನು ಫೋನ್ ಲಾಂಚ್ ಆಹ್ವಾನದಲ್ಲಿ ದಿನಾಂಕವನ್ನು ಹೊರತುಪಡಿಸಿ ಡಿವೈಸ್ ಬಗ್ಗೆ ಯಾವುದೇ ಮಾಹಿತಿ ದೊರಕಿಲ್ಲ. ಇನ್ನು ಕಂಪೆನಿ ಹೊಸ ಫೋನ್ ಕುರಿತ ಕುತೂಹಲವನ್ನು ಬಳಕೆದಾರರಲ್ಲಿ ಕೆರಳುವಂತೆ ಫೋನ್ ಕುರಿತ ರೋಚಕ ಸಂಗತಿಗಳನ್ನು ಪ್ರಶ್ನೆ ಮೂಲಕ ಕೇಳಿದ್ದು ಚೀನಾದ ಆಪಲ್ ಏನೋ ಹೊಸತನವನ್ನು ಹೊಸವರ್ಷಕ್ಕಾಗಿ ನಿರ್ಮಿಸುವ ಇರಾದೆಯಲ್ಲಿರುವುದು ಖಚಿತವಾಗಿದೆ.

ವದಂತಿಗಳು ಹೇಳುವಂತೆ ಎಮ್ಐ 5, 5.7 ಇಂಚಿನ ಕ್ವಾಡ್ ಎಚ್‌ಡಿ (1440x2560 ಪಿಕ್ಸೆಲ್‌ಗಳು) ಡಿಸ್‌ಪ್ಲೇ; 64 ಬಿಟ್ ಸ್ನ್ಯಾಪ್‌ಡ್ರಾಗನ್ 810 ಪ್ರೊಸೆಸರ್; 3 ಜಿಬಿ RAM ಮತ್ತು 20.7 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ ಡಿವೈಸ್‌ನಲ್ಲಿದೆ.

English summary
Xiaomi has shared an invite for its January 15 event in Beijing, where the company is likely to announce the successor to its Mi 4 flagship - the Mi 5.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot