Subscribe to Gizbot

ಆಗಸ್ಟ್ 1ರಿಂದ ಕ್ಸಿಯೋಮಿ ಎಂಐ 5ಎಕ್ಸ್ ಮಾರುಕಟ್ಟೆಗೆ ಲಗ್ಗೆ

By: Prathap T

ಸ್ಮಾರ್ಟ್ಫೋನ್ ವಲಯದಲ್ಲಿ ಪೈಪೋಟಿಗೆ ಇಳಿದಿರುವ ಒಪ್ಪೋ ಹಾಗೂ ವಿವೋ ಕಂಪನಿಗಳ ಜೊತೆ ತನ್ನ ದೇಶದಲ್ಲೇ ಪ್ರತಿಸ್ಪರ್ಧೆ ಒಡ್ಡಲು ಸನ್ನದ್ಧಗೊಂಡಿರುವ ಕ್ಸಿಯೋಮಿ ತನ್ನ ಹೊಸ ಕ್ಸಿಯೋಮಿ ಎಂಐ 5ಎಕ್ಸ್ ಸ್ಮಾರ್ಟ್ಫೋನ್ ಅನ್ನು ಕಳೆದ 26ರಂದು ಬಿಡುಗಡೆ ಮಾಡಿದ್ದು, ಆಗಸ್ಟ್ 1ರಿಂದ ಮಾರುಗಟ್ಟೆಗೆ ಪರಿಚಯಿಸುವ ಮೂಲಕ ಗ್ರಾಹಕರ ವಿಶ್ವಾಸರ್ಹತೆ ಗಿಟ್ಟಿಸಿಕೊಳ್ಳುವ ತವಕದಲ್ಲಿದೆ.

ಆಗಸ್ಟ್ 1ರಿಂದ ಕ್ಸಿಯೋಮಿ ಎಂಐ 5ಎಕ್ಸ್ ಮಾರುಕಟ್ಟೆಗೆ ಲಗ್ಗೆ

ಆನ್ಜ್ಯೋ.ಸಿನ್ ವರದಿ ಪ್ರಕಾರ ಆಗಸ್ಟ್ 1ರಂದು ಬೆಳಿಗ್ಗೆ 10:00 ಗಂಟೆಗೆ ಮಾರಾಟಕ್ಕೆ ಮುಂದಾಗಿದೆ ಎನ್ನಲಾಗಿದೆ. ಈಗಾಗಲೇ ಅಧಿಕೃತ ವೆಬ್ಸೈಟ್ಗಳಲ್ಲಿ ಖರೀದಿಗಾಗಿ ಪೂರ್ವ ನೊಂದಣಿಗೆ ಗ್ರಾಹಕರು ಮುಗಿಬಿದ್ದಿದ್ದು, ಆರಂಭಿಕ 12 ಗಂಟೆಗಳಲ್ಲೇ ಒಂದು ಲಕ್ಷ ಗ್ರಾಹಕರು ನೊಂದಾಯಿಸಿಕೊಂಡಿರುವುದು ಗಮನಾರ್ಹ ವಿಷಯವಾಗಿದೆ. ಹೀಗಾಗಿ ಕ್ಸಿಯೋಮಿ ಎಂಐ 5ಎಕ್ಸ್ ಸ್ಮಾರ್ಟ್ಫೋನ್ ಬಗ್ಗೆ ನಿರೀಕ್ಷೆ ಮತ್ತಷ್ಟ ಗರಿಗೆದರಿದ್ದು, ಇತರೆ ರಾಷ್ಟ್ರಗಳಲ್ಲಿ ಮಾರಾಟವನ್ನು ಪಸರಿಸುವ ನಿಟ್ಟಿನಲ್ಲಿ ಕಂಪನಿ ಚಿಂತನೆ ನಡೆಸಿದೆ ಎನ್ನಲಾಗಿದೆ.

ಕ್ಸಿಯೋಮಿ ಎಂಐ 5ಎಕ್ಸ್ ಗ್ರಾಹಕರ ಕೈ ಸೇರುವ ಮುನ್ನವೇ ಅದರ ವೈಶಿಷ್ಟ್ಯತೆ ಹಾಗೂ ಗುಣ ವಿಶೇಷತೆಗಳ ಬಗ್ಗೆ ಅಪಾರ ನಿರೀಕ್ಷೆ ಹುಟ್ಟು ಹಾಕಿಸಿದೆ. 5.5ಇಂಚಿನ ಎಫ್ಹೆಚ್ಡಿ ಡಿಸ್ಪ್ಲೇ ಜೊತೆಗೆ 1080ಡಿ ಸಾಮರ್ಥ್ಯದ ರೆಸ್ಯೂಲೇಶನ್ ಹೊಂದಿದೆ ಎನ್ನಲಾಗಿದೆ.

ಕ್ವಾಲ್ಕೋಮ್ ಸ್ನ್ಯಾಪ್ಡ್ರ್ಯಾಗನ್ 626 ಪ್ರೊಸಸರ್ನೊಂದಿಗೆ 4ಜಿಬಿ ರಾಮ್ ಹೊಂದಿದೆ ಎಂದು ಹೇಳಲಾಗುತ್ತಿದೆ. ಕೆಲವು ಮಾಹಿತಿ ಪ್ರಕಾರ ಅತಿ ಹೆಚ್ಚಿನ ಉತ್ಕೃಷ್ಟತೆಯೊಂದಿಗೆ ವಿನ್ಯಾಸಗೊಂಡಿದೆ ಎನ್ನಲಾಗುತ್ತಿದೆ. ಸ್ನ್ಯಾಪ್ಡ್ರ್ಯಾಗನ್ 660ಎಸ್ಒಸಿಯೊಂದಿಗೆ 6ಜಿಬಿ ರಾಮ್ ಒಳಗೊಂಡಿದೆ ಎಂದು ಕೆಲವು ಮೂಲಗಳು ತಿಳಿದುಬಂದಿದ್ದು, ಖಚಿತಗೊಂಡಿಲ್ಲ. ಜೊತೆಗೆ ಮುಂಭಾಗದ ಕ್ಯಾಮರಾ ದಿಗ್ವಿಜ್ಞಾನ ಗುಣಮಟ್ಟದೊಂದಿಗೆ ಹಿಂಬದಿಯಲ್ಲಿ ಡ್ಯುಯಲ್ ಕ್ಯಾಮೆರಾ ಅಳವಡಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಹೆಚ್ಚುವರಿಯಾಗಿ, ಕ್ಸಿಯೋಮಿ ಎಂಐ 5ಎಕ್ಸ್ 3000ಎಂಎಎಚ್ ಬ್ಯಾಟರಿ, 3.5 ಎಂಎಂ ಆಡಿಯೊ ಜ್ಯಾಕ್, ಮತ್ತು ಯುಎಸ್ಬಿ ಟೈಪ್-ಸಿ ಪೋರ್ಟ್ ಅನ್ನು ಹೊಂದಿರುತ್ತದೆ.

ಈ ಸ್ಮಾರ್ಟ್ಫೋನ್ ಮಾರುಕಟ್ಟೆ ಬೆಲೆ ವಿಚಾರಕ್ಕೆ ಬಂದಾಗ ಸುರಿಸುಮಾರು ರೂ.19,000 ಎಂದು ಅಂದಾಜಿಸಲಾಗಿದೆ.

Read more about:
English summary
The Xiaomi Mi 5X will get unveiled on July 26 in China.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot