ಶ್ಯೋಮಿಯಿಂದ ಅದ್ಭುತ ವಿಶೇಷತೆಯ ಡಿವೈಸ್ ಲಾಂಚ್

ಶ್ಯೋಮಿ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಧಾಳಿ ಇಟ್ಟು ಹೊಸ ಹವಾ ಸೃಷ್ಟಿಸುತ್ತಿದ್ದು, ಬಜೆಟ್ ಬೆಲೆಯ ಫೋನ್‌ಗಳನ್ನು ಕಂಪೆನಿ ಲಾಂಚ್ ಮಾಡಿಕೊಂಡು ಬಳಕೆದಾರರ ಮನಸೆಳೆಯುತ್ತಿದೆ.

By Shwetha Ps
|

ಶ್ಯೋಮಿಯು ತನ್ನ ಎಮ್ಐ 5 ಎಕ್ಸ್ ಮತ್ತು MIUI 9 ಡಿವೈಸ್‌ಗಳನ್ನು ಜುಲೈ ನಂತರ ಲಾಂಚ್ ಮಾಡುವುದಾಗಿ ಘೋಷಿಸಿತ್ತು. ಸ್ಮಾರ್ಟ್‌ಫೋನ್ ಮಾರಾಟಕ್ಕೆ ಆಗಸ್ಟ್ 1 ರಿಂದ ತೊಡಗಿಕೊಂಡಿದ್ದು MIUI 9 ಎಮ್‌ಐ 6 ಮತ್ತು ರೆಡ್ಮೀ ನೋಟ್ 4/4ಎಕ್ಸ್ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡುವ ನಿಟ್ಟಿನಲ್ಲಿದೆ.

ಶ್ಯೋಮಿಯಿಂದ ಅದ್ಭುತ ವಿಶೇಷತೆಯ ಡಿವೈಸ್ ಲಾಂಚ್

ಎಮ್ಐ 6 ಫ್ಲ್ಯಾಗ್‌ಶಿಪ್ ಫೋನ್‌ಗಳು ಭಾರತದಲ್ಲಿ ಲಾಂಚ್ ಆಗಬೇಕಷ್ಟೇ ಕಂಪೆನಿ ಎಮ್ಐ 5 ಎಕ್ಸ್ ಅನ್ನು ಭಾರತದಲ್ಲಿ ಆರಂಭಿಸುವಂತೆ ಕಾಣುತ್ತಿದ್ದು ಭಾರತದ ಶ್ಯೋಮಿ ಮುಖ್ಯಸ್ಥ ಮನು ಕುಮಾರ್ ಜೈನ್ ಕುರಿತು ಟ್ವೀಟ್ ಮಾಡಿದ್ದಾರೆ. ಸಪ್ಟೆಂಬರ್‌ನಲ್ಲಿ ಶ್ಯೋಮಿಯು ತನ್ನ ಪ್ರಥಮ ಡ್ಯುಯಲ್ ಕ್ಯಾಮೆರಾ ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಲಿದೆ. ಹೀಗೆಯೇ ಮನು ಕುಮಾರ್ ಟ್ವೀಟ್ ಕೂಡ ಮಾಡಿದ್ದಾರೆ.

ಶ್ಯೋಮಿ ಹೊರತರಲಿರುವ ಡಿವೈಸ್ ಕುರಿತ ಮಾಹಿತಿಯನ್ನು ಮಾತ್ರವಲ್ಲದೆ ಡ್ಯುಯಲ್ ಕ್ಯಾಮೆರಾದ ಲಾಂಚ್ ಬಗ್ಗೆ ಕೂಡ ಟ್ವೀಟ್ ಮಾಹಿತಿ ನೀಡಿದೆ. ಎಮ್ಐ 6 ಗಿಂತ ಮುಂಚೆಯೇ ಎಮ್‌ಐ 5 ಎಕ್ಸ್ ಭಾರತದ ಮಾರುಕಟ್ಟೆಯನ್ನು ಧೂಳೀಪಟ ಮಾಡುವುದು ಶತಸಿದ್ಧವಾಗಿದೆ.

ಎಮ್ಐ 5 ಎಕ್ಸ್ 5 ಇಂಚಿನ ಎಫ್‌ಎಚ್‌ಡಿ 1080ಪಿ ಡಿಸ್‌ಪ್ಲೇಯನ್ನು ಹೊಂದಿದೆ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 625 ಸಾಕ್ ಇದರಲ್ಲಿದ್ದು 4 ಜಿಬಿ RAM ಅನ್ನು ಡಿವೈಸ್ ಪಡೆದುಕೊಂಡಿದೆ.

ಜಿಯೋ ಎಫೆಕ್ಟ್..299 ರೂ.ಗೆ ಕರೆ ಮಾತ್ರವಲ್ಲಾ ಡೇಟಾ ಕೂಡ ಅನ್‌ಲಿಮಿಟೆಡ್!!ಜಿಯೋ ಎಫೆಕ್ಟ್..299 ರೂ.ಗೆ ಕರೆ ಮಾತ್ರವಲ್ಲಾ ಡೇಟಾ ಕೂಡ ಅನ್‌ಲಿಮಿಟೆಡ್!!

64 ಜಿಬಿ ಸಂಗ್ರಹಣೆ ಇದರಲ್ಲಿದೆ. ಫೋನ್ ಬ್ಯಾಟರಿ 3080mAh ಆಗಿದ್ದು ದಿನಪೂರ್ತಿ ಇದು ಚಾರ್ಜಿಂಗ್ ಅನ್ನು ಹಾಗೆಯೇ ಇರಿಸುತ್ತದೆ. ಇದರ ಇನ್ನೊಂದು ವಿಶೇಷತೆ ಎಂದರೆ MIUI 9 ಆಧಾರಿತ ಆಂಡ್ರಾಯ್ಡ್ ನಾಗಟ್ ಇದರಲ್ಲಿದೆ. ಶ್ಯೋಮಿ ಎಮ್ಐ 5 ಎಕ್ಸ್ ಅನ್ನು ಮೂರು ಬಣ್ಣಗಳಲ್ಲಿ ಲಾಂಚ್ ಮಾಡಲಾಗಿದೆ ಕಪ್ಪು, ಚಿನ್ನದ ಬಣ್ಣ ಮತ್ತು ಗುಲಾಬಿ ಚಿನ್ನದ ಬಣ್ಣವಾಗಿದೆ. ಇದರ ಬೆಲೆ 1499 ಯುವಾನ್ (ಭಾರತೀಯ ಬೆಲೆ ರೂ 14,000) ಆಗಿದೆ.

Best Mobiles in India

Read more about:
English summary
It looks like the Xiaomi Mi 5X might be launched in India in the next month as the tweet from Manu Kumar Jain hints the same.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X