Home
ಸುದ್ದಿಜಾಲ

ಶ್ಯೋಮಿಯಿಂದ ಎಮ್ಐ 6 ಸಿಲ್ವರ್ ಆವೃತ್ತಿಯ ಹೊಸ ಫೋನ್ ಲಾಂಚ್

ಶ್ಯೋಮಿ ಎಮ್ಐ 6 ಸಿಲ್ವರ್ ಆವೃತ್ತಿಯನ್ನು ಬಿಡುಗಡೆ ಮಾಡಲಿದ್ದು ಇದು ಆಗಸ್ಟ್ 3 ಕ್ಕೆ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.

By Shwetha Ps

ಮೊಬೈಲ್ ಕ್ಷೇತ್ರದಲ್ಲೇ ಅದ್ಭುತ ಸ್ಥಾನವನ್ನು ಗಳಿಸಿಕೊಂಡಿರುವ ಶ್ಯೋಮಿ ತನ್ನ ಎಮ್ಐ 5ಎಕ್ಸ್ ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಲಿದ್ದು ರೋಮ್‌ನಲ್ಲಿ ನಡೆಯುವ ಎಮ್‌ಯುಐ 9 ಈವೆಂಟ್‌ನಲ್ಲಿ ಈ ಲಾಂಚ್ ಕಾರ್ಯಕ್ರಮ ನಡೆಯಲಿದೆ. ಲಾಂಚ್ ಈವೆಂಟ್ ಸಂದರ್ಭದಲ್ಲಿ ಲೇ ಜೂನ್ ಶ್ಯೋಮಿ ಸಿಇಒ ಎಮ್ಐ 6 ನ ಸಿಲ್ವರ್ ಆವೃತ್ತಿಯನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ.

ಶ್ಯೋಮಿಯಿಂದ ಎಮ್ಐ 6 ಸಿಲ್ವರ್ ಆವೃತ್ತಿಯ ಹೊಸ ಫೋನ್ ಲಾಂಚ್

ಇತರ ಬಣ್ಣಗಳೊಂದಿಗೆ ಈ ಬಣ್ಣದ ಆವೃತ್ತಿ ಕೂಡ ಶೀಘ್ರದಲ್ಲೇ ಬಳಕೆದಾರರ ಕೈ ಸೇರಲಿದೆ. ಮೂಲಗಳ ಪ್ರಕಾರವಾಗಿ ಏಪ್ರಿಲ್ ತಿಂಗಳಿನಲ್ಲೇ ಇದು ಬಳಕೆದಾರರ ಕೈ ಸೇರಬೇಕಾಗಿತ್ತು ಆದರೆ ಕೆಲವೊಂದು ಸಮಸ್ಯೆಗಳಿಂದ ಇದರ ಬಿಡುಗಡೆ ಮುಂದಕ್ಕೆ ಹೋಗಿದೆ ಎಂಬುದು ಅವರ ಮಾತಾಗಿದೆ.

ಶ್ಯೋಮಿ ಎಮ್ಐ 6 ನ ಸಿಲ್ವರ್ ಆವೃತ್ತಿಯು 6 ಜಿಬಿ RAM ಅನ್ನು ಒಳಗೊಂಡಿದ್ದು 128 ಜಿಬಿ ಸಂಗ್ರಹಣೆಯನ್ನು ಇದು ಪಡೆದುಕೊಂಡಿದೆ. ಇದರ ಬೆಲೆ 3999 ಯುವಾನ್ (ರೂ.38,000) ಆಗಿದ್ದು ಇದರ 100 ಯೂನಿಟ್‌ಗಳನ್ನು ಕಂಪೆನಿಯು ಬಿಡುಗಡೆ ಮಾಡಲಿದ್ದು ಇದರ ಸೇಲ್ ಆಗಸ್ಟ್ 3 ರಂದು ನಡೆಯಲಿದೆ.

ಕಡಿಮೆ ಉತ್ಪಾದನೆಯಿಂದಾಗಿ ಹ್ಯಾಂಡ್‌ಸೆಟ್‌ಗಳು ಸೀಮಿತವಾಗಿವೆ. ಬರೇ ಸೆಕೆಂಡ್‌ಗಳಲ್ಲಿ 100 ಯೂನಿಟ್‌ಗಳು ಖಾಲಿಯಾಗಲಿವೆ ಎಂಬುದು ನಮಗೆ ತಿಳಿದಿದೆ ಇದು ಲೇ ಜೂನ್ ಮಾತಾಗಿದೆ.

ಇದು ವಿಶೇಷ ವಿನ್ಯಾಸವನ್ನು ಒಳಗೊಂಡಿದ್ದು ಇದನ್ನು ಸ್ಟೈನ್‌ಲೆಸ್ ಸ್ಟೀಲ್ ಮಾದರಿಯಲ್ಲಿ ಹೊರತರಲಾಗಿದೆ. ಇದು ತನ್ನದೇ ಆದ ಗ್ಲಾಸ್ ಕವರಿಂಗ್ ಅನ್ನು ಪಡೆದುಕೊಂಡಿದ್ದು ಇದು ಅಲ್ಟ್ರಾ ಮಿರರ್‌ನಂತಹ ಫಿನಿಶಿಂಗ್ ಅನ್ನು ಪಡೆದುಕೊಂಡಿದೆ. ಇದು ಹ್ಯಾಂಡ್‌ಸೆಟ್‌ಗೆ ಉನ್ನತ ನೋಟವನ್ನು ನೀಡಲಿದೆ. ಫೋನ್ ದೇಹವಿನ್ಯಾಸವು ಎಲೆಕ್ಟ್ರೋ ಪ್ಲೇಟೆಡ್ ಆಗಿದ್ದು ಇದನ್ನು ವಿಶೇಷ ಪ್ರಕ್ರಿಯೆಗೆ ಒಳಪಡಿಸಲಾಗಿದೆ. ಇದಕ್ಕಾಗಿ ವಾಕ್ಯೂಮ್ ಚೇಂಬರ್ ಸಹಾಯವನ್ನು ಬಳಸಲಾಗಿದೆ.

Best Mobiles in India

English summary
It has been announced that only 100 units of the Xiaomi Mi 6 Silver edition will be made available and the sale will happen on August 3.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+