ಶಿಯೋಮಿಯ ಮಧ್ಯಮ ಬೆಲೆಯ ಸ್ಮಾರ್ಟ್ ಫೋನ್ Mi 6X: ರೂ. 19,000ಕ್ಕೆ ದೊರೆಯಲಿದೆಯಂತೆ..!!!

By: Precilla Dias

ಬಜೆಟ್ ಬೆಲೆಯ ಸ್ಮಾರ್ಟ್ ಫೋನ್ ತಯಾರಿಕೆಯಲ್ಲಿ ಮತ್ತು ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಚೀನಾ ಮೂಲದ ಶಿಯೋಮಿ ಕಂಪನಿಯೂ ಈ ಬಾರಿ ಮಧ್ಯಮ ಬೆಲೆಯ ಸ್ಮಾರ್ಟ್ ಫೋನ್ ಪರಿಚಯಿಸಲು ಮುಂದಾಗಿದೆ. ಈ ಹಿಂದೆ ಶಿಯೋಮಿ Joson ಎನ್ನುವ ಸ್ಮಾರ್ಟ್ ಫೋನ್ ಲಾಂಚ್ ಮಾಡಲಿದೆ ಎನ್ನುವ ಮಾಹಿತಿ ಇತ್ತು ಆದರೆ ಸದ್ಯ ಈ ಫೋನಿನ ಹೆಸರನ್ನು Mi 6X ಎಂದು ನಾಮಕರಣ ಮಾಡಲಾಗಿದೆ.

ಶಿಯೋಮಿಯ ಮಧ್ಯಮ ಬೆಲೆಯ ಸ್ಮಾರ್ಟ್ ಫೋನ್ Mi 6X: ರೂ. 19,000ಕ್ಕೆ ದೊರೆಯಲಿದೆಯಂತೆ!

ಇಲ್ಲಿಯವರೆಗೂ ಶಿಯೋಮಿ ಮಧ್ಯಮ ಬೆಲೆಯ ಸ್ಮಾರ್ಟ್ ಫೋನಿನ ಬಗ್ಗೆ ಯಾವುದೇ ಮಾಹಿತಿಯನ್ನು ಹೊರ ಹಾಕಿಲ್ಲವಾದರೂ Mi 6X ಫೋನಿನ ಕುರಿತು ಭಾರಿ ರೂಮರ್ಸ್ ಗಳು ಹರಿದಾಡುತ್ತಿದೆ. ಈ ಸ್ಮಾರ್ಟ್ ಫೋನ್ ಯುವ ಜನತೆಯನ್ನು ಮನದಲ್ಲಿ ಇಟ್ಟು ಕೊಂಡು ನಿರ್ಮಿಸಿರುವಂತಹದಾಗಿದ್ದು, ಕೇಲವೇ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದೆ.

Mi 6X ಸ್ಮಾರ್ಟ್ ಫೋನಿನಲ್ಲಿ ಸ್ನಾಪ್ ಡ್ರಾಗನ್ 660 ಪ್ರೋಸೆಸರ್ ಅಳವಡಿಸಲಾಗಿದ್ದು, 12 MP ಹಿಂಭಾಗದ ಕ್ಯಾಮೆರಾ, 4 MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ ಎಂಬ ಮಾಹಿತಿ ಸಿಕ್ಕಿದೆ. ಅದರೊಂದಿಗೆ 6GB RAM ಮತ್ತು 64 GB ಮೆಮೊರಿಯ್ನು ಕಾಣಬಹುದು. ಈ ಫೋನಿನ ಬೆಲೆ ರೂ. 19,000 ಇರಬಹುದು ಎಂದು ಅಂದಾಜಿಸಲಾಗಿದೆ.

Mi 6X ಸ್ಮಾರ್ಟ್ ಫೋನ್ ಆಗಸ್ಟ್ ನಲ್ಲಿ ಮಾರುಕಟ್ಟೆಯನ್ನು ಪ್ರವೇಶಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಮುಂದಿನ ಕೆಲವು ತಿಂಗಳು ಗಳಲ್ಲಿ ಶಿಯೋಮಿ ಸೇರಿದಂತೆ ಹಲವು ಕಂಪನಿಗಳು ಮಧ್ಯಮ ಬೆಲೆಯ ಮತ್ತು ಟಾಪ್ ಎಂಡ್ ಬೆಲೆಯ ಸ್ಮಾರ್ಟ್ ಫೋನ್ ಗಳನ್ನು ಲಾಂಚ್ ಮಾಡಲು ತಯಾರಿಯನ್ನು ನಡೆಸಿದ್ದಾರೆ.

ಒಪ್ಪೋ R11 ಸ್ಮಾರ್ಟ್ ಫೋನ್ ಲಾಂಚ್ ಮಾಡಲಿದೆ. ಇದೇ ಮಾದರಿಯಲ್ಲಿ ಶಿಯೋಮಿಯೂ ಮತ್ತೊಂದು ಸ್ಮಾರ್ಟ್ ಫೋನ್ ಲಾಂಚ್ ಮಾಡುವ ಸಾಧ್ಯತೆ ಇದೆ. ಒಟ್ಟಿನಲ್ಲಿ Mi 6X ರೂಮರ್ ಗಳು ಸತ್ಯವಾಗುವುದೋ ಇಲ್ಲವೋ ಎಂಬುದನ್ನು ಕಾದು ನೋಡಬೇಕು.English summary
Xiaomi is rumored to be working on a smartphone called Xiaomi Mi 6X, which is likely the Youth Version of the Mi 6.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot