ಶ್ಯೋಮಿ ಡಿವೈಸ್‌ಗಳನ್ನು ಸೋಲಿಸಲು ಇನ್ನಾರಿಗೂ ಸಾಧ್ಯವಿಲ್ಲ ಏಕೆಂದು ಗೊತ್ತೇ?
ವಿಶೇಷ ಫೀಚರ್‌ನೊಂದಿಗೆ ಶ್ಯೋಮಿ ಎಮ್ಐ 7 ಶೀಘ್ರದಲ್ಲೇ ಲಾಂಚ್
ಶ್ಯೋಮಿ ಎಮ್ಐ 6 ಕೆಲವೇ ದಿನಗಳ ಹಿಂದೆಯಷ್ಟೇ ಲಾಂಚ್ ಆಗಿದ್ದರೂ ಜಾಗತಿಕ ಮಾರುಕಟ್ಟೆಯಲ್ಲಿ ಜನಪ್ರಿಯತೆಯನ್ನು ಗಳಿಸಿಕೊಳ್ಳುತ್ತಿದೆ. ಇದರ ಜೊತೆಗೆಯೇ ಕಂಪನಿ ಎಮ್ಐ 7 ಅನ್ನು ಲಾಂಚ್ ಮಾಡುವ ನಿಟ್ಟಿನಲ್ಲಿದ್ದು, ಹೆಚ್ಚು ಕಡಿಮೆ ಕೆಲವೊಂದು ದಾಖಲೆಗಳು ಡಿವೈಸ್ ಕುರಿತಾಗಿ ನಮ್ಮ ಗಿಜ್‌ಬಾಟ್ ಸುದ್ದಿತಾಣಕ್ಕೆ ದೊರಕಿದೆ.

ವೈಬೊ ಫೋಸ್ಟ್ ಹೇಳುವಂತೆ ಶ್ಯೋಮಿ ಎಮ್ಐ 7 ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 845 ಸಾಕ್ ಅನ್ನು ಒಳಗೊಂಡಿದ್ದು ಇನ್ನೊಂದು ಫ್ಲ್ಯಾಗ್‌ಶಿಪ್ ಪ್ರೊಸೆಸರ್ ಆಗಿ ಡಿವೈಸ್ ಹೊರಹೊಮ್ಮಲಿದೆ. 6 ಇಂಚಿನ ಓಲೆಡ್ ಡಿಸ್‌ಪ್ಲೇಯನ್ನು ಡಿವೈಸ್ ಒಳಗೊಂಡಿದ್ದು 2018 ರ ತ್ರೈಮಾಸಿಕದಲ್ಲಿ ಡಿವೈಸ್ ಲಾಂಚ್ ಆಗಬಹುದು. ಗ್ಯಾಲಕ್ಸಿ ಎಸ್9 ಮತ್ತು ಎಲ್‌ಜಿ ಜಿ7 ಕೂಡ ಸ್ನ್ಯಾಪ್‌ಡ್ರ್ಯಾಗನ್ 845 ಸಾಕ್ ಅನ್ನು ಒಳಗೊಂಡಿದೆ.
ಇದರ RAM 6ಜಿ/8ಜಿಬಿ ಆಗಿರಲಿದ್ದು ಕ್ಯಾಮೆರಾ ವಿಭಾಗದಲ್ಲಿ ಡಿವೈಸ್ ವೈಡ್ ಆಂಗಲ್ ಲೆನ್ಸ್ ಅನ್ನು ಪಡೆದುಕೊಳ್ಳಲಿದೆ ಮತ್ತು ಟೆಲಿಫೋಟೋ ಲೆನ್ಸ್ ಕೂಡ ಇದರಲ್ಲಿದೆ. ಗ್ಲಾಸ್ ಮತ್ತು ಸಿರಾಮಿಕ್ ಬಾಡಿ ರಚನೆ ಈ ಡಿವೈಸ್ ಹೊಂದಲಿದೆ.
ದೊಡ್ಡ ಡಿಸ್‌ಪ್ಲೇಯನ್ನು ಫೋನ್ ಪಡೆದುಕೊಳ್ಳಲಿದ್ದು ಫಿಸಿಕಲ್ ಹೋಮ್ ಬಟನ್ ಮುಂಭಾಗದಲ್ಲಿ ನೆಲೆಗೊಳ್ಳಲಿದೆ. ಇನ್ ಸ್ಕ್ರೀನ್ ಫಿಂಗರ್‌ಪ್ರಿಂಟ್ ಇದರಲ್ಲಿದ್ದು ಇನ್ನು ಡಿವೈಸ್ ಕುರಿತ ಹೆಚ್ಚಿನ ಮಾಹಿತಿ 2018 ಕ್ಕೆ ನಮಗೆ ಲಭ್ಯವಾಗಬಹುದು.


Click it and Unblock the Notifications








