Home
ಸುದ್ದಿಜಾಲ

ಶಿಯೋಮಿ ಮಿ 7 ಪ್ಲಸ್ ನಲ್ಲಿರಬಹುದು ಇನ್-ಸ್ಕ್ರೀನ್ ಫಿಂಗರ್ಪ್ರಿಂಟ್ ಸೆನ್ಸರ್

By Tejaswini P G

ಕಳೆದ ಮಂಗಳವಾರ ಶಿಯೋಮಿ ತನ್ನ ನೂತನ ಮಿ ಮಿಕ್ಸ್ 2S ಅನ್ನು ಅನಾವರಣಗೊಳಿಸಿತ್ತು. ಈ ಸ್ಮಾರ್ಟ್ಫೋನ್ ಅನಾವರಣಗೊಂಡ ನಂತರ ಶಿಯೋಮಿಯಿಂದ ಬರಲಿರುವ ಮುಂದಿನ ಹೈ-ಎಂಡ್ ಸ್ಮಾರ್ಟ್ಫೋನ್ ಎಂದರೆ ಅದು ಶಿಯೋಮಿ ಯ ಫ್ಲ್ಯಾಗ್ಶಿಪ್ ಮೊಬೈಲ್ ಆದ ಮಿ 7. ಇತ್ತೀಚೆಗೆ ಬಂದ ಕೆಲ ವರದಿಗಳ ಅನುಸಾರ ಮಿ 7 ನ ಡಿಸ್ಪ್ಲೇಯಲ್ಲಿ ಐಫೋನ್ X ಮಾದರಿಯ ನಾಚ್ ಮತ್ತು ಫೋನ್ ನ ಹಿಂಬದಿಯಲ್ಲಿ ಸಾಮಾನ್ಯ ಫಿಂಗರ್ಪ್ರಿಂಟ್ ಸೆನ್ಸರ್ ಒಂದು ಇರಲಿದೆ. ಆದರೆ ಇದೀಗ ಸೋರಿಕೆಯಾಗಿರುವ ಫರ್ಮ್ವೇರ್ ಫೈಲ್ಗಳ ಮೂಲಕ ಮತ್ತೊಂದು ಕುತೂಹಲಕಾರಿ ಮಾಹಿತಿ ಹೊರಬಂದಿದೆ.

ಶಿಯೋಮಿ ಮಿ 7 ಪ್ಲಸ್ ನಲ್ಲಿರಬಹುದು ಇನ್-ಸ್ಕ್ರೀನ್ ಫಿಂಗರ್ಪ್ರಿಂಟ್ ಸೆನ್ಸರ್

@FunkyHuawei ಎಂಬ ಟ್ವಿಟ್ಟರ್ ಬಳಕೆದಾರರೊಬ್ಬರು ಶೀಘ್ರದಲ್ಲಿ ಬಿಡುಗಡೆಯಾಗಲಿರುವ ಮತ್ತೊಂದು ಶಿಯೋಮಿ ಸ್ಮಾರ್ಟ್ಫೋನ್ ಒಂದರ ಕುರಿತು ಸಾಕಷ್ಟು ಮಾಹಿತಿಯನ್ನು ಅದರ ಬಿಡುಗಡೆಗೆ ಮುನ್ನವೇ ನೀಡಿದ್ದಾರೆ. ಅವರು ಆ ಸ್ಮಾರ್ಟ್ಫೋನ್ ನ ಫರ್ಮ್ವೇರ್ ಫೈಲ್ಗಳನ್ನು XDA ಡೆವಲಪರ್ಗಳಿಗೆ ಸೋರಿಕೆ ಮಾಡಿದ್ದು , ಮಿ 7 ಪ್ಲಸ್ ನಲ್ಲಿ ಅಂಡರ್-ಡಿಸ್ಪ್ಲೇ ಫಿಂಗರ್ಪ್ರಿಂಟ್ ಸೆನ್ಸರ್ ಇರಬಹುದೆಂಬ ಮುಖ್ಯವಾದ ಅಂಶ ಈ ಫರ್ಮ್ವೇರ್ ಫೈಲ್ಗಳ ಮೂಲಕ ಅರಿವಿಗೆ ಬಂದಿದೆ.

XDA ಡೆವಲಪರ್ಸ್ ನ ಮಂದಿ ಈ ಫರ್ಮ್ವೇರ್ ಫೈಲ್ಗಳ ಕುರಿತು ಸಂಶೋಧನೆ ನಡೆಸಿದ್ದು ಡಿಪ್ಪರ್ ಮತ್ತು ಡಿಪ್ಪರೋಲ್ಡ್ ಹೆಸರಿನ ಎರಡು MIUI ಕೋಡ್ಬೇಸ್ ಗಳನ್ನು ಕಂಡುಹಿಡಿದಿದ್ದಾರೆ. ಡಿಪ್ಪರ್ ಎಂಬುದು ಮಿ 7 ನ ಕೋಡ್ನೇಮ್ ಇರಬಹುದೆಂಬ ವರದಿಗಳಿವೆ. ಡಿಪ್ಪರೋಲ್ಡ್ ನಲ್ಲಿ ಗೂಡಿಕ್ಸ್ ಮತ್ತು ಸಿನ್ಯಾಪ್ಟಿಕ್ಸ್ ನ ಇನ್-ಸ್ಕ್ರೀನ್ ಫಿಂಗರ್ಪ್ರಿಂಟ್ ಸೆನ್ಸರ್ ಇರಲಿದೆ ಎನ್ನುವ ಅಂಶ ಈ ಸಂಶೋಧನೆಯ ಮೂಲಕ ತಿಳಿದುಬಂದಿದೆ. ನಾಚ್ ಮತ್ತು ಇನ್-ಸ್ಕ್ರೀನ್ ಫಿಂಗರ್ಪ್ರಿಂಟ್ ಸೆನ್ಸರ್ ಹೊಂದಿರುವ ಶಿಯೋಮಿ ಸ್ಮಾರ್ಟ್ಫೋನ್ ಒಂದರ ಚಿತ್ರಗಳು ಆನ್ಲೈನ್ ನಲ್ಲಿ ಹರಿದಾಡುತ್ತಿದೆ.

'ಅರ್ಸಾ' ಎಂಬ ಕೋಡ್ನೇಮ್ ಹೊಂದಿರುವ ಮತ್ತೊಂದು ಸ್ಮಾರ್ಟ್ಫೋನ್ ಕೂಡ ಕಂಡುಬಂದಿದ್ದು, ಇದು ಡಿಪ್ಪರ್ ಫೋನ್ ನ ಮಾದರಿಯ ಫೀಚರ್ಗಳನ್ನೇ ಹೊಂದಿದೆಯಂತೆ. ಇದೊಂದು ಫ್ಲ್ಯಾಗ್ಶಿಪ್ ಮೊಬೈಲ್ ಆಗಿರುವ ಸಾಧ್ಯತೆಗಳಿದ್ದು ನಾಚ್ ಇರುವ OLED ಡಿಸ್ಪ್ಲೇ, ಆಪ್ಟಿಕಲ್ ಝೂಮ್, ಸ್ನ್ಯಾಪ್ಟ್ರಾಗನ್ 845 SoC, 4000mAH ಸಾಮರ್ಥ್ಯದ ಬ್ಯಾಟರಿ ಮೊದಲಾದ ಫೀಚರ್ಗಳು ಇದರಲ್ಲಿ ಇದೆಯಂತೆ. ಅರ್ಸಾ ದಲ್ಲಿಯೂ ಸಿನ್ಯಾಪ್ಟಿಕ್ಸ್ ಮತ್ತು ಗೂಡಿಕ್ಸ್ ನವರ ಇನ್-ಸ್ಕ್ರೀನ್ ಫಿಂಗರ್ಪ್ರಿಂಟ್ ಸೆನ್ಸರ್ ಇರುವ ಸಾಧ್ಯತೆ ಇದೆ.

ಶಿಯೋಮಿ ಅರ್ಸಾ ಮಿ 7 ಪ್ಲಸ್ ನ ಕೋಡ್ನೇಮ್ ಆಗಿರುವ ಸಾಧ್ಯತೆಗಳಿವೆ. ಹಾಗಾಗಿ ಮಿ 7 ಪ್ಲಸ್ ಇನ್-ಸ್ಕ್ರೀನ್ ಫಿಂಗರ್ಪ್ರಿಂಟ್ ಸೆನ್ಸರ್ ಹೊಂದಿರುವ ಸಾಧ್ಯತೆ ಇದ್ದು ಅದು ಕೂಡ ಮಿ 7 ನೊಂದಿಗೆ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಆದರೆ ಈ ಅರ್ಸಾ ಮಿ 7 ಪ್ಲಸ್ ಆಗಿ ಬಿಡುಗಡೆಯಾಗಲಿರುವ ಕುರಿತು ಯಾವುದೇ ಖಚಿತ ಮಾಹಿತಿ ಲಭ್ಯವಿಲ್ಲ.

ಈ ವರದಿಗಳ ಅನುಸಾರ ಸೋರಿಕೆಯಗಿರುವ ಫರ್ಮ್ವೇರ್ ಫೈಲ್ಗಳಲ್ಲಿ ಇನ್ನೂ ಕೆಲವು ಇತರ ಫೋನ್ಗಳಿಗೆ ಸಂಬಂಧಿಸಿದ ಮಾಹಿತಿಗಳು ಲಭ್ಯವಾಗಿದ್ದು, ಡಿಪ್ಪರ್ ಮತ್ತು ಅರ್ಸಾ ಮಾತ್ರವಲ್ಲದೆ ಶಿಯೋಮಿ ಬೇರೆ ಫೋನ್ಗಳ ಮೇಲೂ ಕೆಲಸ ಮಾಡುತ್ತಿರುವ ಸಾಧ್ಯತೆಗಳಿವೆ. ಇತರ ಶಿಯೋಮಿ ಸ್ಮಾರ್ಟ್ಫೋನ್ ಗಳ ಕುರಿತು ಹೆಚ್ಚಿನ ಮಾಹಿತಿಯನ್ನು ಭವಿಷ್ಯದಲ್ಲಿ ನೋಡಬಹುದು ಎಂದು ನಮ್ಮ ಅನಿಸಿಕೆ.

Best Mobiles in India

English summary
Xiaomi Mi 7 Plus is rumored to arrive with an under-display fingerprint sensor. The leaked firmware files of this smartphone have also revealed that the smartphone might feature a Snapdragon 845 SoC and a 4000mAh battery. According to this leak, the Xiaomi Mi 7 Plus could be codenamed ursa and there could be many others in the making.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+