ಬರ್ತಿದೆ ಶಿಯೋಮಿಯ ಮತ್ತೊಂದು ಫ್ಲಾಗ್‌ಶಿಫ್ ಕಿಲ್ಲರ್ MI 9T..!
ಜಾಗತಿಕ ಮೊಬೈಲ್ ಮಾರುಕಟ್ಟೆಯಲ್ಲಿ ಕ್ರಾಂತಿಯನ್ನೇ ಸೃಷ್ಟಿಸಿರುವ ಚೀನಾದ ಸ್ಮಾರ್ಟ್‌ಫೋನ್ ದೈತ್ಯ ಶಿಯೋಮಿ, ಈಗ ಮತ್ತೊಮ್ಮೆ ಎದುರಾಳಿಗಳಿಗೆ ದೊಡ್ಡ ಹೊಡೆತ ನೀಡಲು ಸಜ್ಜಾಗಿದೆ. ಹೌದು, ಕಳೆದ ಫೆಬ್ರವರಿಯಲ್ಲಷ್ಟೇ MI 9 ಫ್ಲಾಗ್‌ಶಿಫ್ ಸ್ಮಾರ್ಟ್‌ಫೋನ್‌ನ್ನು ಬಿಡುಗಡೆಗೊಳಿಸಿದ್ದ ಶಿಯೋಮಿ ಕಂಪನಿ ಸದ್ಯ ಮತ್ತೊಂದು ಫ್ಲಾಗ್‌ಶಿಫ್ ಸ್ಮಾರ್ಟ್‌ಫೋನ್ ಬಿಡುಗಡೆಗೊಳಿಸಲು ವೇದಿಕೆ ಸೃಷ್ಟಿಸಿದೆ. ಈಗಾಗಲೇ ಕಂಪನಿ ತನ್ನ ಟ್ವಿಟ್ಟರ್ ಪೇಜ್ ನಲ್ಲಿ ಈ ಬಗ್ಗೆ ಹೇಳಿಕೊಂಡಿದ್ದು, ಹೊಸ ಸ್ಮಾರ್ಟ್‌ಫೋನ್ ಹೇಗಿರಲಿದೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ.

MI 9ನ ಹೊಸ T ಆವೃತ್ತಿ
ಕಂಪನಿ ತನ್ನ ಟ್ವಿಟ್ಟರ್ ಪೇಜ್‌ನಲ್ಲಿ ತಿಳಿಸಿರುವಂತೆ ಇದು MI 9ನ ಹೊಸ T ಆವೃತ್ತಿಯಾಗಿರಲಿದೆಯಂತೆ. ಅದಲ್ಲದೇ MI 9T ಫೀಚರ್‌ಗಳನ್ನು ಗಮನಿಸಿದರೆ ಇದು ಹೊಸ ಸ್ಮಾರ್ಟ್‌ಫೋನ್ ಅಲ್ಲ ಎಂಬ ಮಾತುಗಳು ಕೇಳಿಬರುತ್ತಿದ್ದು, ಇತ್ತೀಚೆಗೆ ಬಿಡುಗಡೆಯಾಗಿದ್ದ ರೆಡ್‌ಮಿ K20 ಸ್ಮಾರ್ಟ್‌ಫೋನ್‌ನ ರಿಬ್ರಾಂಡೆಡ್ ಸ್ಮಾರ್ಟ್‌ಫೋನ್ ಆಗಿದೆ ಎಂದು ಟೆಕ್ ತಜ್ಞರು ಹೇಳುತ್ತಿದ್ದಾರೆ.

ಯಾವಾಗ ಬಿಡುಗಡೆ..? ಕಂಪನಿಯ ಟ್ವೀಟ್‌ನಲ್ಲೇನಿದೆ..?
ಹೊಸ MI 9T ಸ್ಮಾರ್ಟ್‌ಫೋನ್ ಇದೇ, ಅಂದ್ರೇ ಜೂನ್ 12ಕ್ಕೆ ಬಿಡುಗಡೆಯಾಗಲಿದೆ. ಇನ್ನು, ಕಂಪನಿಯ ಟ್ವೀಟ್ ಗಮನಿಸುವುದಾದ್ರೆ, ಕೇವಲ 10 ದಿನ ಮಾತ್ರ ಬಾಕಿಯಿದ್ದು, MI 9ನ ಹೊಸ ಸದಸ್ಯ ಜೂನ್ 12ಕ್ಕೆ ಲಾಂಚ್ ಆಗಲಿದ್ದು, MI 9Tಯ ಹೆಚ್ಚಿನ ಆಧುನೀಕತೆಯನ್ನು ಬಳಸಲು ನೀವು ತಯಾರಾಗಿದ್ದೀರಾ..? ಎಂದು ಪ್ರಶ್ನೆ ಮಾಡಿದ್ದು, ಕೊನೆಗೆ ಪಾಪ್‌ಅಪ್ ಇನ್ ಸ್ಟೈಲ್ ಎಂಬ ಹ್ಯಾಷ್‌ಟ್ಯಾಗ್ ಬಳಸಿದ್ದು, ಹೊಸ ಸ್ಮಾರ್ಟ್‌ಫೋನ್ ಪಾಪ್‌ಅಪ್ ಕ್ಯಾಮೆರಾ ಹೊಂದಿದೆ ಎಂಬುದನ್ನು ಕಂಪನಿ ಸೂಚ್ಯವಾಗಿ ಹೇಳಿದೆ.

2 ಸ್ಮಾರ್ಟ್‌ಫೋನ್ ಬರೋದು ಪಕ್ಕಾ..!
ಜೂನ್ 12ಕ್ಕೆ ಎರಡು ಸ್ಮಾರ್ಟ್‌ಫೋನ್ ಬಿಡುಗಡೆಗೊಳ್ಳೋದು ಪಕ್ಕಾ ಎಂಬ ಮಾಹಿತಿ ಲಭ್ಯವಾಗುತ್ತಿದ್ದು, MI 9Tಯ ಪ್ರೋ ಆವೃತ್ತಿ ಕೂಡ ಬಿಡುಗಡೆಯಾಗೋ ಸಾಧ್ಯತೆಯಿದೆ. ಟ್ವೀಟ್‌ನಲ್ಲಿ ಹೇಳಿದಂತೆ ಸ್ಮಾರ್ಟ್‌ಫೋನ್ ಪಾಪ್ಅಪ್ ಸೆಲ್ಫೀ ಕ್ಯಾಮೆರಾ ಹೊಂದಿರಲಿದೆ. ಅದಲ್ಲದೇ ರೆಡ್‌ಮಿ K20 ಮತ್ತು ರೆಡ್‌ಮಿ K20 Pro ಎರಡು ಕೂಡ ಪಾಪ್‌ಅಪ್ ಸೆಲ್ಫೀ ಕ್ಯಾಮೆರಾ ಹೊಂದಿದ್ದರಿಂದ ಎರಡು ಸ್ಮಾರ್ಟ್‌ಫೋನ್ ಬಿಡುಗಡೆಯಾಗುತ್ತವೆ ಎಂಬ ಲೆಕ್ಕಾಚಾರದಲ್ಲಿ ಮೊಬೈಲ್ ಪ್ರಿಯರು ಇದ್ದಾರೆ.

ಭಾರತದಲ್ಲಿ ಯಾವಾಗ ಲಾಂಚ್..?
ಕೆಲವು ದಿನಗಳ ಹಿಂದಷ್ಟೇ ಶಿಯೋಮಿ ಇಂಡಿಯಾ ರೆಡ್‌ಮಿ K20 ಮತ್ತು ರೆಡ್‌ಮಿ K20 Pro ಬಿಡುಗೊಳಿಸುವುದನ್ನು ಖಚಿತ ಪಡಿಸಿದೆ. ಶಿಯೋಮಿಯ ಭಾರತದ ಎಂಡಿ ಮಧು ಕುಮಾರ್ ಜೈನ್ ಕೂಡ ಟ್ವಿಟ್ಟರ್‌ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದು, 6 ವಾರಗಳ ನಂತರ ಸ್ಮಾರ್ಟ್‌ಫೋನ್ ಲಾಂಚ್ ಮಾಡುವುದಾಗಿ ಹೇಳಿದ್ದಾರೆ. ಈ ಮೂಲಕ ಹೊಸ ಸ್ಮಾರ್ಟ್‌ಫೋನ್‌ಗಳೇ ಭಾರತದಲ್ಲಿ ಬಿಡುಗಡೆಯಾದ್ರೂ ಅಚ್ಚರಿ ಪಡಬೇಕಿಲ್ಲ.

ಹೇಗಿದೆ ಫೀಚರ್ಸ್..?
MI 9T ಸ್ಮಾರ್ಟ್‌ಫೋನ್‌ನ ಫೀಚರ್ಸ್ ಗಮನಿಸುವುದಾದರೆ ರೆಡ್‌ಮಿ K20 ಮತ್ತು ರೆಡ್‌ಮಿ K20 Pro ಫೀಚರ್‌ಗಳನ್ನು ನೋಡಬಹುದು. ಎರಡು ಸ್ಮಾರ್ಟ್‌ಫೋನ್‌ಗಳು 19.5:9 ಆಸ್ಪೆಕ್ಟ್ ರೇಷಿಯೋದೊಂದಿಗೆ 6.39 ಇಂಚ್ ಫುಲ್ HD+ ಡಿಸ್‌ಪ್ಲೇ ಹೊಂದಿವೆ. ಇನ್ನು, ಕಂಪನಿಯ MIUI 10 ಬೆಂಬಲಿತ ಆಂಡ್ರಾಯ್ಡ್ 9.0 ಪೈ ಆಪರೇಟಿಂಗ್ ಸಿಸ್ಟಮ್ ಮೂಲಕ ಸ್ಮಾರ್ಟ್‌ಫೋನ್‌ಗಳು ಕಾರ್ಯನಿರ್ವಹಿಸಲಿವೆ. ರೆಡ್‌ಮಿ K20 ಸ್ಮಾರ್ಟ್‌ಫೋನ್ ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ 730 ಪ್ರೊಸೆಸರ್ ಹೊಂದಿದ್ರೆ, ರೆಡ್‌ಮಿ K20 Pro ಅತ್ಯಾಧುನಿಕ ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ 855 ಪ್ರೊಸೆಸರ್ ಹೊಂದಿದೆ.

ಕ್ಯಾಮೆರಾ ಹೇಗಿರಲಿದೆ..?
ರೆಡ್‌ಮಿ K20 ಮತ್ತು ರೆಡ್‌ಮಿ K20 Proನಲ್ಲಿದ್ದಂತೆ MI 9T ಸ್ಮಾರ್ಟ್‌ಫೋನ್‌ನಲ್ಲೂ ಕೂಡ ಪಾಪ್‌ಅಪ್ ಸೆಲ್ಫೀ ಕ್ಯಾಮೆರಾ ಇರಲಿದೆ. ಅದಲ್ಲದೇ ತ್ರಿವಳಿ ರಿಯರ್ ಕ್ಯಾಮೆರಾ ಹೊಂದಿರಲಿದೆ. ಡ್ಯುಯಲ್ LED ಫ್ಲಾಶ್‌ನೊಂದಿಗೆ 48MP ಮುಖ್ಯ ಸೆನ್ಸಾರ್ ಹೊಂದಿದ್ದು, ಟೆಲಿಫೋಟೊ ಲೆನ್ಸ್ ಮತ್ತು 13MP ಸೆನ್ಸಾರ್ ಹೊಂದಿರಲಿದ್ದು, ಸೆಲ್ಫೀ ಕ್ಯಾಮೆರಾ f/2.2 ಅಪಾರ್ಚರ್‌ನೊಂದಿಗೆ 20MP ಸೆಲ್ಫೀ ಶೂಟರ್ ಹೊಂದಿರಲಿದೆ.


Click it and Unblock the Notifications








