'ಶಿಯೋಮಿ ಎಂಐ ಎ1' ಫೋನ್‌ಗಾಗಿ ಮತ್ತೆ ಫ್ಲಾಶ್‌ಸೇಲ್ ಆಯೋಜನೆ!!..ಯಾವಾಗ ಗೊತ್ತಾ?
ಶಿಯೋಮಿಯ ಅಫಿಷಿಯಲ್ ವೆಬ್‌ಸೈಟ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಈ ಫ್ಲಾಶ್‌ಸೇಲ್ ಲಭ್ಯವಿದೆ.!!
ಶಿಯೋಮಿಯ ಅತಿ ನೂತನ "ಆಂಡ್ರಾಯ್ಡ್ ಒನ್" ಸ್ಮಾರ್ಟ್‌ಫೋನ್ 'ಎಂಐ ಎ1' ಮೊದಲು ಫ್ಲಾಶ್‌ಸೇಲ್ ನೆನ್ನೆಯೇ ಮುಗಿದಿದ್ದು, ಮತ್ತೆ ಫ್ಲಾಶ್‌ಸೇಲ್ ಅನ್ನು ಇದೇ ತಿಂಗಳು 19 ನೇ ತಾರೀಖು ಆಯೋಜನೆ ಮಾಡಲಾಗಿದೆ.!! ಶಿಯೋಮಿಯ ಅಫಿಷಿಯಲ್ ವೆಬ್‌ಸೈಟ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಈ ಫ್ಲಾಶ್‌ಸೇಲ್ ಲಭ್ಯವಿದೆ.!!
'ಆಂಡ್ರಾಯ್ಡ್ ಒನ್'ಮೂಲದ ಮೊದಲ ಸ್ಮಾರ್ಟ್‌ಫೋನ್ 'ಶಿಯೋಮಿ ಎಂಐ ಎ1' ಭಾರಿ ಫೀಚರ್ಸ್ ಮೂಲಕ ಹೊರಬಂದಿದ್ದು, ಶಿಯೋಮಿಯ ರೆಡ್‌ಮಿ ನೋಟ್4 ಗೆ ಸಿಕ್ಕಷ್ಟೆ ಅಭೂತಪೂರ್ವ ಸ್ವಾಗತ ಜನರಿಂದ 'ಶಿಯೋಮಿ ಎಂಐ ಎ1' ಫೋನ್‌ಗೂ ಲಭ್ಯವಿದೆ.!! ಇನ್ನು ಕಡಿಮೆ ಬೆಲೆಗೆ ಅತ್ಯಂತ ಯೋಗ್ಯ ಸ್ಮಾರ್ಟ್‌ಪೋನ್ ಇದಾಗಿದ್ದು, ಫೋನ್ ಏನೆಲ್ಲಾ ಫೀಚರ್ಸ್ ಹೊಂದಿದೆ? ಬೆಲೆ ಎಷ್ಟು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಡಿಸ್‌ಪ್ಲೇ ಮತ್ತು ವಿನ್ಯಾಸ ಹೇಗಿದೆ?
5.5 ಇಂಚ್ ಎಚ್‌ಡಿ ಡಿಸ್‌ಪ್ಲೇ ಹೊಂದಿರುವ ‘ಎಂಐ ಎ1' ಗೆ ಗೊರಿಲ್ಲಾ ಗ್ಲಾಸ್ ಅಳವಡಿಸಲಾಗಿದೆ. ಅತಿ ಕಡಿಮೆ ತೂಕದ ಮೆಟಲ್ ಕವಚ (168 ಗ್ರಾಂ) ಇರಲಿದ್ದು, 7.3 ಮಿ.ಮೀ.ದಪ್ಪ ಇರಲಿದೆ. ಜೊತೆಗೆ ಮಲ್ಟಿಮೀಡಿಯಾಗೆ ಹೆಚ್ಚು ಸಪೋರ್ಟ್ ಮಾಡುವ ಹಾಗೆ 1080*1920 ಡಿಸ್‌ಪ್ಲೇ ರೆಸ್ಯುಲೇಷನ್ ಒಳಗೊಂಡಿರಲಿದೆ.!!

ಡುವಲ್ ಕ್ಯಾಮರಾ ಹೊಂದಿದೆ.!!
12 ಎಂಬಿ +12 ಎಂಬಿ ಡುವಲ್ ರಿಯರ್ ಕ್ಯಾಮೆರಾ ಮೂಲಕ 'ಶಿಯೋಮಿ ಎಂಐ ಎ1' ಹೊರಬರುತ್ತಿದೆ.!! ವೈಡ್ ಆಂಗಲ್ ಲೆನ್ಸ್, ಟೆಲಿ ಫೋಟೊ ಲೆನ್ಸ್ ಜತೆಗೆ 2ಎಕ್ಸ್ ಡಿಜಿಟಲ್ ಜೂಮ್ ಮತ್ತು 10 ಎಕ್ಸ್ ಆಪ್ಟಿಕಲ್ ಜೂಮ್ ಸಾಮರ್ಥ್ಯ ಕ್ಯಾಮೆರಾದಲ್ಲಿ ಇರಲಿದೆ. ಅದ್ಬುತ ಫೋಟೊಗಳನ್ನು ಸೆರೆಹಿಡಿಯಬಹುದು.!!

ಪ್ರೊಸೆಸರ್ ಯಾವುದು?
ಮೊದಲೇ ಹೇಳಿದಂತೆ 'ಶಿಯೋಮಿ ಎಂಐ ಎ1' ಕ್ವಾಲ್ಕಮ್ ಸ್ನ್ಯಾಪ್‌ಡ್ರ್ಯಾಗನ್ 625 2.5GHz ಅಕ್ಟಾ-ಕೋರ್ ಪ್ರೊಸೆಸರ್ ಮೂಲಕ ಮಾರುಕಟ್ಟೆಗೆ ಕಾಲಿಡುತ್ತಿದೆ. ಜೊತೆಗೆ ಆಂಡ್ರಾಯ್ಡ್ 7.1.2 ಮೂಲಕ ಫೋನ್ ಅದ್ಬುತ ಕಾರ್ಯ ನಿರ್ವಹಣೆ ನೀಡಲಿದೆ!!

RAM ಮತ್ತು ROM!!
ಶಿಯೋಮಿ ಎಂಐ ಎ1' 4ಜಿಬಿ RAM ಮತ್ತು 64 ಜಿಬಿ ಇಂಟರ್‌ನಲ್ ಮೆಮೊರಿ ಹೊಂದಿದ್ದು, ಎಸ್‌ಡಿ ಕಾರ್ಡ್ ಮೂಲಕ ಮೆಮೊರಿಯನ್ನು 128GB ವರೆಗೂ ಹೆಚ್ಚಿಸಬಹುದಾಗಿದೆ.!! 4ಜಿಬಿ RAM ಮೂಲಕ 50 ಆಪ್‌ಗಳನ್ನು ಒಮ್ಮೆಲೆ ರನ್ ಮಾಡಿದರೂ ಸಹ ಸ್ಮಾರ್ಟ್‌ಫೋನ್ ವೇಗ ಕಡಿಮೆಯಾಗುವುದಿಲ್ಲ ಎಂದು ಶಿಯೋಮಿ ಹೇಳಿಕೊಂಡಿದೆ.!!


ಬ್ಯಾಟರಿ ಮತ್ತು ಬೆಲೆ!!
ಕಪ್ಪು, ಚಿನ್ನದ ಬಣ್ಣ ಮತ್ತು ರೋಸ್ ಗೋಲ್ಡ್ ಬಣ್ಣಗಳಲ್ಲಿ ಲಭ್ಯವಿರುವ ಎಂಐ ಎ1 ಹೈಬ್ರಿಡ್ ಸಿಮ್ ಸ್ಲಾಟ್ ಮತ್ತು 3080 ಎಂಎಎಚ್ ಬ್ಯಾಟರಿ ಹೊಂದಿದೆ.!! ಇಷ್ಟೆಲ್ಲಾ ಫೀಚರ್ಸ್ ಹೊಂದಿರುವ ಈ ಸ್ಮಾರ್ಟ್‌ಫೋನ್ ಬೆಲೆ ₹ 14,999 ಆಗಿರಲಿದೆ.!!


Click it and Unblock the Notifications








