Home
ಸುದ್ದಿಜಾಲ

ಶಿಯೋಮಿ 'ಎಂಐ ಎ2' VS 'ಹಾನರ್ ಪ್ಲೇ'..ಯಾವ ಸ್ಮಾರ್ಟ್‌ಪೋನ್ ಬೆಸ್ಟ್?

By Bhaskar N J

ನೀವು ಒಂದು ಸ್ಮಾರ್ಟ್‌ಫೋನ್ ಖರೀದಿಸಬೇಕು ಎಂದು ಯಾವಾಗ ಬಯಸಿರುತ್ತಿರೂ ಆಗಲೇ ಆ ಸ್ಮಾರ್ಟ್‌ಫೋನ್‌ ಅನ್ನು ಖರೀದಿಸಿಬಿಡಿ. ಏಕೆಂದರೆ, ಆ ಸ್ಮಾರ್ಟ್‌ಫೋನ್ ಖರೀದಿಸುವುದಕ್ಕೆ ಸ್ವಲ್ಪ ತಡವಾದರೂ ಸಹ ಮತ್ತೊಂದು ಅತ್ಯುತ್ತಮ ಸ್ಮಾರ್ಟ್‌ಫೋನ್ ಒಂದು ಬಿಡುಗಡೆಯಾಗಿರುತ್ತದೆ. ಆದರೆ, ಈ ಬಾರಿ ಒಂದಲ್ಲ..ಎರಡು ಅದ್ಬುತ ಸ್ಮಾರ್ಟ್‌ಪೋನ್‌ಗಳು ಬಿಡುಗಡೆಯಾಗಿವೆ.

ಹೌದು, ಕೇವಲ ಒಂದು ವಾರದಲ್ಲಿ ಹತ್ತು ಹಲವು ಸ್ಮಾರ್ಟ್‌ಫೋನ್‌ಗಳು ಬಜೆಟ್ ಮಾರುಕಟ್ಟೆಗೆ ಬಿಡುಗಡೆಯಾಗಿವೆ. ಇವುಗಳಲ್ಲಿ ಗ್ರಾಹಕರ ಸದಭಿರುಚಿಯನ್ನು ಪೂರೈಸುವ ಕೆಲವೇ ಕೆಲವು ಸ್ಮಾರ್ಟ್‌ಫೋನ್‌ಗಳಲ್ಲಿ ಮೊಬೈಲ್ ಪ್ರಿಯರ ನಿದ್ದೆಗೆಡಿಸಲು ಶಿಯೋಮಿಯ ಎಂಐ ಎ2 ಮತ್ತು ಹುವಾವೆ ಕಂಪೆನಿ ಹಾನರ್ ಪ್ಲೇ ಸ್ಮಾರ್ಟ್‌ಪೋನ್‌ಗಳು ಭಾರತದ ಮಾರುಕಟ್ಟೆಯಲ್ಲಿ ಈಗ ಲಭ್ಯವಿವೆ.

ಶಿಯೋಮಿ 'ಎಂಐ ಎ2' VS 'ಹಾನರ್ ಪ್ಲೇ'..ಯಾವ ಸ್ಮಾರ್ಟ್‌ಪೋನ್ ಬೆಸ್ಟ್?

ಈ ಎರಡೂ ಸ್ಮಾರ್ಟ್‌ಪೋನ್‌ಗಳು ಬಜೆಟ್ ಬೆಲೆಯಲ್ಲಿ ಮಾರಾಟಕ್ಕಿರುವ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳಾಗಿದ್ದು, ಹಾಗಾದರೆ, ಶಿಯೋಮಿಯ ಎಂಐ ಎ2 VS ಹಾನರ್ ಪ್ಲೇ ಸ್ಮಾರ್ಟ್‌ಫೋನ್‌ಗಳಲ್ಲಿ ಯಾವ ಸ್ಮಾರ್ಟ್‌ಫೋನ್ ಬೆಸ್ಟ್ ಖರೀದಿಸಲು ಬೆಸ್ಟ್ ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿದು ನಂತರ ಖರೀದಿಸಲು ಮುಂದಾಗಿ.

ಶಿಯೋಮಿ 'ಮಿ ಎ2' ಬೆಲೆ?

ಶಿಯೋಮಿ 'ಮಿ ಎ2' ಬೆಲೆ?

ಇನ್ನು ನೆನ್ನೆಯಷ್ಟೆ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿರುವ ಶಿಯೋಮಿ 'ಮಿ ಎ2' ಸ್ಮಾರ್ಟ್‌ಫೋನ್ 4 GB RAM ಮತ್ತು 64 GB ಇಂಟರ್ನಲ್ ಮೆಮೊರಿಯೊಂದಿಗೆ ಬಿಡುಗಡೆಯಾಗಿದೆ. 4 GB RAM ಮತ್ತು 64 GB ಆವೃತ್ತಿಯ ಸ್ಮಾರ್ಟ್‌ಫೋನ್ ಬೆಲೆ ರೂ.16,999ಕ್ಕೆ ರೂ.ಗಳಾಗಿದ್ದು, ಶೀಘ್ರವೇ 6GB RAM / 128 GB ಆವೃತ್ತಿಯೂ ಲಾಂಚ್ ಆಗಲಿದೆ.

ಹಾನರ್​ ಪ್ಲೇ ಬೆಲೆ?

ಹಾನರ್​ ಪ್ಲೇ ಬೆಲೆ?

ಭಾರತದಲ್ಲಿ ಆಗಸ್ಟ್ 06ದಿಂದಲೇ ಮಾರಾಟ ಆರಂಭವಾಗಿರುವ ಹಾನರ್​ ಪ್ಲೇ4GB RAM ಮತ್ತು 6GB RAM ಹಾಗೂ 64 ಜಿಬಿ ಆಂತರಿಕ ಮೆಮೊರಿಯ ಎರಡು ವೆರಿಯಂಟ್‌ಗಳಲ್ಲಿ ಮಾರುಕಟ್ಟೆಗೆ ಬಂದಿದೆ. 4GB RAM ಮತ್ತು 64GB ಆಂತರಿಕ ಮೆಮೊರಿ ವೆರಿಯಂಟ್ ಸ್ಮಾರ್ಟ್‌ಫೋನ್ ಬೆಲೆ 19,999ರೂಪಾಯಿಗಳಾಗಿದ್ದರೆ, 6GB RAM ಮತ್ತು 64GB ಆಂತರಿಕ ಮೆಮೊರಿ ವೆರಿಯಂಟ್ ಸ್ಮಾರ್ಟ್‌ಫೋನ್ ಬೆಲೆ 23,999 ರೂಪಾಯಿಗಳಾಗಿವೆ.

ಶಿಯೋಮಿ 'ಮಿ ಎ2' ಡಿಸ್‌ಪ್ಲೇ

ಶಿಯೋಮಿ 'ಮಿ ಎ2' ಡಿಸ್‌ಪ್ಲೇ

ಇನ್ನು ಶಿಯೋಮಿ 'ಮಿ ಎ2' ಸ್ಮಾರ್ಟ್‌ಫೋನ್ ಯೂನಿಬಾಡಿ ಮೆಟಲ್ ಡಿಸೈನ್‌ನೊಂದಿಗೆ ಸದ್ಯದ ಮಾರುಕಟ್ಟೆಯಲ್ಲಿ ಟ್ರೆಂಡ್ ಆಗಿರುವ 18:9 ಅನುಪಾತ 5.99 ಇಂಚಿನ ಡಿಸ್‌ಪ್ಲೇಯನ್ನು ನೀಡಲಾಗಿದೆ. FHD+ ಗುಣಮಟ್ಟ ಡಿಸ್‌ಪ್ಲೇ ಇದಾಗಿದ್ದು, ಭಾರತದಲ್ಲಿ ಗೊರಿಲ್ಲಾ ಗ್ಲಾಸ್ 5 ಸುರಕ್ಷತೆ ಹೊಂದಿರುವ ಮೊದಲ ಫೋನ್ ಇದಾಗಿದೆ.

ಹಾನರ್​ ಪ್ಲೇ ಡಿಸ್‌ಪ್ಲೇ!

ಹಾನರ್​ ಪ್ಲೇ ಡಿಸ್‌ಪ್ಲೇ!

ಮಧ್ಯಮ ಬೆಲೆಯಲ್ವ 'ಹಾನರ್​ ಪ್ಲೇ' ಸ್ಮಾರ್ಟ್‌ಫೋನ್ ವಿನ್ಯಾಸ ಹೈ ಎಂಡ್ ಸ್ಮಾರ್ಟ್‌ಫೋನ್‌ಗಳನ್ನು ಸಹ ನಾಚಿಸುವಂತಿದೆ. 6.3-ಇಂಚಿನ ಫುಲ್-HD+ (1080x2340 ಪಿಕ್ಸಲ್ಸ್) ಜೊತೆಗೆ 85 ಶೇಕಡಾ NTSC colour gamut ಇರುವ ಡಿಸ್‌ಪ್ಲೇ ಅತ್ಯುತ್ತಮ ಅನುಭವವನ್ನು ನೀಡಲಿದೆ. ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಹಾಗೂ ಫಿಂಗರ್‌ಪ್ರಿಂಟ್ ಆಯ್ಕೆಯನ್ನು ಈ ಫೋನ್ ಹೊಂದಿದೆ.

ಶಿಯೋಮಿ 'ಮಿ ಎ2' ಪ್ರೊಸೆಸರ್!

ಶಿಯೋಮಿ 'ಮಿ ಎ2' ಪ್ರೊಸೆಸರ್!

ಶಿಯೋಮಿ 'ಮಿ ಎ2' ಸ್ಮಾರ್ಟ್‌ಫೋನಿನಲ್ಲಿ 2.2GHz ವೇಗ ಕ್ವಾಲ್ಕಮ್ ಸ್ನಾಪ್ ಡ್ರಾಗನ್ 660 ಚಿಪ್ ಸೆಟ್ ಅನ್ನು ನೀಡಲಾಗಿದೆ. ಈ ಸ್ಮಾರ್ಟ್‌ಫೋನ್ ಗೂಗಲ್ ಸ್ಟಾಕ್ ಆಂಡ್ರಾಯ್ಡ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಇದಕ್ಕಾಗಿಯೇ ಆಂಡ್ರಾಯ್ಡ್ ಒನ್ OS ಅನ್ನು ಇದರಲ್ಲಿ ಅಳವಡಿಸಲಾಗಿದೆ. ಆದರೆ ಇದರೊಂದಿಗೆ ಶಿಯೋಮಿಯ ಕೇಲವು ಆಪ್‌ಗಳು ಸಹ ಲಭ್ಯವಿವೆ.

ಹಾನರ್​ ಪ್ಲೇ ಪ್ರೊಸೆಸರ್!

ಹಾನರ್​ ಪ್ಲೇ ಪ್ರೊಸೆಸರ್!

ಅಕ್ಟಾ-ಕೋರ್-ಹುವಾಯಿ HiSilicon Kirin 970 ಸಾಕೆಟ್‌, Mali-G72 GPU ಜೊತೆಗೆ ಮತ್ತು NPU( ನ್ಯೂಟ್ರಲ್ ಪ್ರೊಸೆಸಿಂಗ್ ಯುನಿಟ್) ಬಿಲ್ಟ್ ಇನ್ ಆದ ಪ್ರೊಸೆಸರ್ ಶಕ್ತಿ ಸ್ಮಾರ್ಟ್‌ಫೋನ್ ಕಾರ್ಯನಿರ್ವಹಣೆಯ ಹೊಣೆ ಹೊತ್ತಿದೆ. ಇನ್ನು ಮೊದಲೇ ಹೇಳಿದಂತೆ 4ಜಿಬಿ ಮತ್ತು 6ಜಿಬಿಯ ಎರಡು ವೆರಿಯಂಟ್‌ಗಳಲ್ಲಿ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ.

ಶಿಯೋಮಿ 'ಮಿ ಎ2' ಕ್ಯಾಮೆರಾ?

ಶಿಯೋಮಿ 'ಮಿ ಎ2' ಕ್ಯಾಮೆರಾ?

ಶಿಯೋಮಿ 'ಮಿ ಎ2' ಸ್ಮಾರ್ಟ್‌ಫೋನ್ 12 MP + 20 MP ಸಾಮರ್ಥ್ಯದಲ್ಲಿ ಡ್ಯುಯಲ್ ರಿಯಲ್ ಕ್ಯಾಮೆರಾಗಳನ್ನು ಹೊಂದಿದೆ. ಸೆಲ್ಫಿ ಕ್ಯಾಮೆರಾ 20 MP ಸಾಮರ್ಥ್ಯವನ್ನು ಹೊಂದಿದೆ. ರಾತ್ರಿ ವೇಳೆಯಲ್ಲಿ ಉತ್ತಮ ಚಿತ್ರಗಳನ್ನು ಸೆರೆಹಿಡಿಯುವ ಹಾಗೂ ಎರಡು ಕಡೆಗಳಲ್ಲಿಯೂ ಆಟೋ HDR ಆಯ್ಕೆಯನ್ನು ಕಾಣಬಹುದಾಗಿದೆ. ಬೋಕೆ ಮೋಡ್ ಅನ್ನು ಕಾಣಬಹುದಾಗಿದೆ.

ಹಾನರ್​ ಪ್ಲೇ ಕ್ಯಾಮೆರಾ !

ಹಾನರ್​ ಪ್ಲೇ ಕ್ಯಾಮೆರಾ !

ಹಾನರ್​ ಪ್ಲೇ' ಡ್ಯುಯಲ್ ರಿಯರ್ ಕ್ಯಾಮೆರಾ ಡ್ಯುಯಲ್ ಕ್ಯಾಮರಾ ಸೆಟ್‌ಅಪ್ ಅನ್ನು ಹೊಂದಿದ್ದು, ಒಂದು 16 ಮೆಗಾಪಿಕ್ಸಲ್ ಪ್ರೈಮರಿ ಲೆನ್ಸ್ f/2.2 ದ್ಯುತಿರಂದ್ರ ಮತ್ತು PDAF ಆಗಿದ್ದರೆ, ಇನ್ನೊಂದು 2 ಮೆಗಾಪಿಕ್ಸಲ್ ಸೆಂಕೆಂಡರಿ ಲೆನ್ಸ್ ಜೊತೆಗೆ f/2.4 ದ್ಯುತಿರಂದ್ರವನ್ನು ಹೊಂದಿದೆ. ಮುಂಭಾಗದಲ್ಲಿ 16 ಮೆಗಾಪಿಕ್ಸಲ್ ನ ಕ್ಯಾಮರಾವು f/2.0 ದ್ಯುತಿರಂದ್ರವನ್ನು ಹೊಂದಿದೆ.

ಶಿಯೋಮಿ 'ಮಿ ಎ2' ಇತರೆ ಫೀಚರ್ಸ್?

ಶಿಯೋಮಿ 'ಮಿ ಎ2' ಇತರೆ ಫೀಚರ್ಸ್?

ಶಿಯೋಮಿ 'ಮಿ ಎ2' ಸ್ಮಾರ್ಟ್‌ಫೋನಿನಲ್ಲಿ 3000mAh ಸಾಮರ್ಥ್ಯದ ಬ್ಯಾಟರಿ ಮತ್ತು ವೇಗದ ಚಾರ್ಜಿಂಗ್‌ಗಾಗಿ ಕ್ವಿಕ್ ಚಾರ್ಜರ್ ತಂತ್ರಜ್ಞಾನವಿದೆ. 4G VoLTE, ವೈ-ಫೈ 802.11ac, ಬ್ಲೂಟೂತ್ 4.2, ಜಿಪಿಎಸ್, ಮತ್ತು USB ಟೈಪ್-C ಸೇರಿದಂತೆ ಮಧ್ಯಮ ಬಜೆಟ್ ಸ್ಮಾರ್ಟ್‌ಪೋನ್ ಹೊಂದಿರಬಹುದಾದ ಬಹುತೇಕ ಎಲ್ಲಾ ಸಾಮಾನ್ಯ ಫೀಚರ್ಸ್ ಸ್ಮಾರ್ಟ್‌ಪೋನಿನ ಬೆಲೆಯನ್ನು ಹೆಚ್ಚಿಸಿದೆ. ಇಯರ್ ಫೋನ್ ಜಾಕ್ ಇಲ್ಲದಿರುವುದು ಆಶ್ಚರ್ಯಮೂಡಿಸಿದೆ.

ಹಾನರ್​ ಪ್ಲೇ ಇತರೆ ಫೀಚರ್ಸ್?

ಹಾನರ್​ ಪ್ಲೇ ಇತರೆ ಫೀಚರ್ಸ್?

3750 mAh ಬ್ಯಾಟರಿ , 256 ಜಿಬಿ ವರೆಗೂ ಹಿಗ್ಗಿಸಿಕೊಳ್ಳುವ ಅವಕಾಶವಿರುವ ಈ ಫೋನಿನಲ್ಲಿ ಕನೆಕ್ಟಿವಿಟಿ ವಿಚಾರಕ್ಕೆ ಬಂದರೆ 4G VoLTE, ವೈ-ಫೈ 802.11ac, ಬ್ಲೂಟೂತ್ 4.2, ಜಿಪಿಎಸ್, ಮತ್ತು USB ಟೈಪ್-C ಯನ್ನು ಹೊಂದಿದೆ. ಸೆನ್ಸರ್ ಗಳಲ್ಲಿ ಎಕ್ಸೆಲೋಮೀಟರ್, ಏಂಬಿಯಂಟ್ ಲೈಟ್ ಸೆನ್ಸಾರ್, gyroscope ಮತ್ತು ಪ್ರಾಕ್ಸಿಮಿಟಿ ಸೆನ್ಸರ್ ಗಳನ್ನು ಒಳಗೊಂಡಿರುತ್ತದೆ.

ಖರೀದಿಸಲು ಯಾವ ಫೋನ್ ಬೆಸ್ಟ್?

ಖರೀದಿಸಲು ಯಾವ ಫೋನ್ ಬೆಸ್ಟ್?

ಹಾನರ್ ಮತ್ತು ಶಿಯೋಮಿ 'ಮಿ ಎ2' ಎರಡೂ ಸ್ಮಾರ್ಟ್‌ಪೋನ್‌ಗಳು ನಾವು ನೀಡುವ ಬೆಲೆಗೆ ಯೋಗ್ಯವಾದ ಫೋನ್‌ಗಳೆಂದು ಹೇಳಹುದಾಗಿದೆ. ಶಿಯೋಮಿ 'ಮಿ ಎ2' ಸ್ಮಾರ್ಟ್‌ಫೋನ್ ಸ್ಟಾಕ್ ಆಂಡ್ರಾಯ್ಡ್ ಮತ್ತು ಕ್ವಾಲ್ಕಮ್ ಸ್ನಾಪ್ ಡ್ರಾಗನ್ 660 ಚಿಪ್ ಸೆಟ್ ಹೊಂದಿರುವುದು ಗ್ರಾಹಕರನ್ನು ಸೆಳೆಯಲು ಸಹಾಯಕವಾಗಿದೆ. ಆದರೆ, ಅಕ್ಟಾ-ಕೋರ್-ಹುವಾಯಿ HiSilicon Kirin 970 ಪ್ರೊಸೆಸರ್ ಕೂಡ ಶಕ್ತಿಶಾಲಿಯಾಗಿದೆ.! ನನ್ನ ಪ್ರಕಾರ, ಎರಡರಲ್ಲಿ ಯಾವ ಸ್ಮಾರ್ಟ್‌ಫೋನ್ ಖರೀದಿಸಿದರೂ ಗ್ರಾಹಕರಿಗೆ ಲಾಭವೇ ಹೆಚ್ಚು.!

Best Mobiles in India

English summary
Xiaomi and Honor both of the smartphone company had recently launched a mid-range smartphone known as Xiaomi Mi A2 and Honor Play respectively.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+