'ಶಿಯೋಮಿ ಮಿ A3' ಖರೀದಿಸಲು ಇದಕ್ಕಿಂತ ಸಿಹಿಸುದ್ದಿ ಏನಿದೆ?

|

ನೆನ್ನೆಯಷ್ಟೇ ದೇಶದಲ್ಲಿ ಬಿಡುಗಡೆಯಾಗಿ ಇಂದಷ್ಟೇ ದೇಶದಲ್ಲಿ ಮಾರಾಟಕ್ಕೆ ಬರುತ್ತಿರುವ 'ಶಿಯೋಮಿ ಮಿ A3' ಸ್ಮಾರ್ಟ್‌ಫೋನ್ ಖರೀದಿಸುವ ಗ್ರಾಹಕರಿಗೊಂದು ಸಿಹಿಸುದ್ದಿ ಇದೆ. ಶಿಯೋಮಿ ಮಿ A3 ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ ಪೈನೊಂದಿಗೆ ಪ್ರಾರಂಭಿಸುತ್ತದೆ. ಆದರೆ. ಉಡಾವಣಾ ಸಮಾರಂಭದಲ್ಲಿ ಆಂಡ್ರಾಯ್ಡ್ ಕ್ಯೂ ಸಾಫ್ಟ್‌ವೇರ್ ನವೀಕರಣವನ್ನು ಪಡೆದ ಮೊದಲ ಸ್ಮಾರ್ಟ್‌ಫೋನ್‌ಗಳಲ್ಲಿ ಶಿಯೋಮಿ ಮಿ A3 ಕೂಡ ಒಂದಾಗಿರಲಿದೆ ಎಂದು ಕಂಪನಿ ಖಚಿತಪಡಿಸಿದೆ.

'ಶಿಯೋಮಿ ಮಿ A3' ಖರೀದಿಸಲು ಇದಕ್ಕಿಂತ ಸಿಹಿಸುದ್ದಿ ಏನಿದೆ?

ಹೌದು, ಗೂಗಲ್‌ನ ಆಂಡ್ರಾಯ್ಡ್ ಒನ್ ಪ್ರೋಗ್ರಾಂನಲ್ಲಿ ಕಾರ್ಯನಿರ್ವಹಿಸುವ ಶಿಯೋಮಿ ಮಿ A3 ಸ್ಮಾರ್ಟ್‌ಫೋನಿನಲ್ಲಿ ಯಾವುದೇ ಎಂಐಯುಐ ಇಲ್ಲ, ತೃತೀಯ ಅಪ್ಲಿಕೇಶನ್‌ಗಳಿಲ್ಲ ಮತ್ತು ಜಾಹೀರಾತುಗಳಿಲ್ಲ. ಜೊತೆಗೆ ಮಿ ಎ 3 ಆಂಡ್ರಾಯ್ಡ್ ಪೈನೊಂದಿಗೆ ಪ್ರಾರಂಭಿಸುತ್ತದೆ. ಆದರೆ, ಉಡಾವಣಾ ಸಮಾರಂಭದಲ್ಲಿ ಆಂಡ್ರಾಯ್ಡ್ ಕ್ಯೂ ಸಾಫ್ಟ್‌ವೇರ್ ನವೀಕರಣವನ್ನು ಪಡೆಯಲಿದೆ. ಪಿಕ್ಸೆಲ್ 4 ಸರಣಿಯು ಆಂಡ್ರಾಯ್ಡ್ ಕ್ಯೂನೊಂದಿಗೆ ಶೀಘ್ರದಲ್ಲೇ ಬರಲಿದ್ದು, ಈ ಅಪ್‌ಡೇಟ್ ಶಿಯೋಮಿ ಮಿ A3ಗೂ ಸಹ ದೊರೆಯಲಿದೆ.

ರೆಡ್‌ಮಿ ಕೆ 20 ಸರಣಿಯು ಶೀಘ್ರದಲ್ಲೇ ಆಂಡ್ರಾಯ್ಡ್ ಕ್ಯೂ ಅಪ್‌ಡೇಟ್ ಪಡೆಯಲಿದೆ ಎಂದು ಶಿಯೋಮಿ ಈಗಾಗಲೇ ಖಚಿತಪಡಿಸಿದೆ. ಆದರೆ, ಕೇವಲ 12,999 ರೂಪಾಯಿಗಳಿಂದ ಆರಭವಾಗಿರುವ 'ಶಿಯೋಮಿ ಮಿ A3' ಪೋನ್ ಕೂಡ ಆಂಡ್ರಾಯ್ಡ್ ಕ್ಯೂ ಅಪ್‌ಡೇಟ್ ಪಡೆಯುತ್ತಿರುವುದು ವಿಶೇಷ ಎಂದು ಹೇಳಬಹುದು. ಇನ್ನು ನೆನ್ನೆಯಷ್ಟೇ ಲಾಂಚ್ ಆಗಿರುವ ಶಿಯೋಮಿ ಮಿ ಎ3 ಸ್ಮಾರ್ಟ್‌ಫೋನ್‌ ಹೇಗಿದೆ?, ಯಾವೆಲ್ಲಾ ಫೀಚರ್ಸ್‌ಗಳನ್ನು ಹೊಂದಿದೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಡಿಸ್‌ಪ್ಲೇ ಹೇಗಿದೆ

ಡಿಸ್‌ಪ್ಲೇ ಹೇಗಿದೆ

ಶಿಯೋಮಿಮಿ ಎ3 ಸ್ಮಾರ್ಟ್‌ಫೋನ್‌ 1560x720 ಪಿಕ್ಸಲ್ ರೆಸಲ್ಯೂಶನ್‌ ಸಾಮರ್ಥ್ಯದೊಂದಿಗೆ 6.1 ಇಂಚಿನ ಹೆಚ್‌ಡಿ ಪ್ಲಸ್‌ AMOLED ಡಿಸ್‌ಪ್ಲೇಯನ್ನು ಒಳಗೊಂಡಿದ್ದು, ಡಿಸ್‌ಪ್ಲೇ ಅನುಪಾತವು 19.5:9 ಆಗಿದೆ. ಡಿಸ್‌ಪ್ಲೇಯಲ್ಲಿಯೇ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಆಯ್ಕೆ ಹೊಂದಿದ್ದು, ಸ್ಕ್ರೀನ್‌ ರಕ್ಷಣೆಗಾಗಿ ಗೊರಿಲ್ಲಾ ಗ್ಲಾಸ್‌ 5 ಅನ್ನು ಒಳಗೊಂಡಿದೆ. ಗ್ರೇಡಿಯಂಟ್‌ ಪ್ಯಾನೆಲ್ ರಚನೆ ಪಡೆದಿದ್ದು, ಸುತ್ತಳತೆಯು 153.48x71.85x8.5mm ಆಗಿದೆ.

ಪ್ರೊಸೆಸರ್ ಹಾಗೂ ಮೆಮೊರಿ

ಪ್ರೊಸೆಸರ್ ಹಾಗೂ ಮೆಮೊರಿ

ಶಿಯೋಮಿ ಮಿ ಎ3 ಸ್ಮಾರ್ಟ್‌ಫೋನ್ ಸ್ನ್ಯಾಪ್‌ಡ್ರಾಗನ್ 665 SoC ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲಿದ್ದು, ಆಂಡ್ರಾಯ್ಡ್‌ 9 ಓಎಸ್‌ ಬೆಂಬಲ ಪಡೆದಿದೆ. 4GB RAM + 64GB ಮತ್ತು 6GB RAM + 128GB ಸಾಮರ್ಥ್ಯದ ವೇರಿಯಂಟ್‌ ಮಾದರಿಗಳ ಆಯ್ಕೆ ಇದ್ದು, ಮೈಕ್ರೋ ಎಸ್‌ಡಿ ಕಾರ್ಡ್‌ ಮೂಲಕ ಬಾಹ್ಯಮೆಮೊರಿಯನ್ನು 256GB ವರೆಗೂ ವಿಸ್ತರಿಸಬಹುದಾಗದ ಅವಕಾಶ ಇದೆ.

ಹೈ ಸೆನ್ಸಾರ್‌ ಕ್ಯಾಮೆರಾ

ಹೈ ಸೆನ್ಸಾರ್‌ ಕ್ಯಾಮೆರಾ

ಶಿಯೋಮಿ ಮಿ ಎ3 ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ತ್ರಿವಳಿ ರಿಯರ್ ಕ್ಯಾಮೆರಾ ಹೊಂದಿದ್ದು, ಅವುಗಳಲ್ಲಿ ಪ್ರಾಥಮಿಕ ಕ್ಯಾಮೆರಾವು ಎಫ್ / 1.78 ಅಪರ್ಚರ್ನೊಂದಿಗೆ 48ಎಂಪಿ ಸೆನ್ಸಾರ್ ಹೊಂದಿದೆ. ಸೆಕೆಂಡರಿ ಕ್ಯಾಮೆರಾವು 8ಎಂಪಿ ಅಲ್ಟ್ರಾ-ವೈಡ್ ಆಂಗಲ್ ಸೆನ್ಸಾರ್ ಹೊಂದಿದ್ದು, ಇನ್ನು ತೃತೀಯ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಸಾಮರ್ಥ್ಯವನ್ನು ಪಡೆದುಕೊಂಡಿದೆ.

ಸೆಲ್ಫಿ ಕ್ಯಾಮೆರಾ ವಿಶೇಷ

ಸೆಲ್ಫಿ ಕ್ಯಾಮೆರಾ ವಿಶೇಷ

ಶಿಯೋಮಿ ಮಿ ಎ3 ಸ್ಮಾರ್ಟ್‌ಫೋನಿನಲ್ಲಿ ಸೆಲ್ಫಿ ಕ್ಯಾಮೆರಾ ಹೆಚ್ಚಿನ ಗಮನ ನೀಡಿದ್ದು, ಎಫ್ / 2.0 ಅಪರ್ಚರ್ನೊಂದಿಗೆ 32 ಮೆಗಾಪಿಕ್ಸೆಲ್ ಸೆನ್ಸಾರ್ ಕ್ಯಾಮೆರಾವನ್ನು ನೀಡಲಾಗಿದೆ. ಹಾಗೆಯೇ ಈ ಕ್ಯಾಮೆರಾವು ಎಐ ಪೋರ್ಟ್ರೇಟ್ ಮೋಡ್, 3 ಡಿ ಬ್ಯೂಟಿ, ಪನೋರಮಾ, ಗೆಸ್ಚರ್ ಫೋಟೋ, ಫ್ರಂಟ್ ಎಚ್‌ಡಿಆರ್ ಮತ್ತು ಫ್ರಂಟ್ ಸ್ಕ್ರೀನ್ ಫಿಲ್ ಸೇರಿದಂತೆ ಹಲವು ಅಗತ್ಯ ಕ್ಯಾಮೆರಾ ತಂತ್ರಜ್ಞಾನಗಳನ್ನು ಹೊಂದಿದೆ.

ಬ್ಯಾಟರಿ ಮತ್ತು ಇತರೆ ಫೀಚರ್ಸ್

ಬ್ಯಾಟರಿ ಮತ್ತು ಇತರೆ ಫೀಚರ್ಸ್

ಶಿಯೋಮಿ ಮಿ ಎ3 ಸ್ಮಾರ್ಟ್‌ಫೋನ್ 4,030mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದ್ದು, 18W ಸಾಮರ್ಥ್ಯದ ಫಾಸ್ಟ್ ಚಾರ್ಜಿಂಗ್ ಸೌಲಭ್ಯದ ಬೆಂಬಲವನ್ನು ಒಳಗೊಂಡಿದೆ. ಇದರೊಂದಿಗೆ 4ಜಿ ವೋಲ್ಟ್, ಸ್ಲೊ ಮೋಷನ್ ವಿಡಿಯೋ ರೆಕಾರ್ಡಿಂಗ್, ಬ್ಲೂಟೂತ್ ವಿ 5.0, ಜಿಪಿಎಸ್ / ಎ-ಜಿಪಿಎಸ್, ಯುಎಸ್‌ಬಿ ಟೈಪ್-ಸಿ ಮತ್ತು 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಸೇರಿದಂತೆ ಅಗತ್ಯ ಆಯ್ಕೆಗಳನ್ನು ಹೊಂದಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಅಮೆಜಾನ್, Mi.com, ಮಿ ಹೋಮ್ ತಾಣಗಳಲ್ಲಿ ಖರೀದಿಗೆ ಲಭ್ಯವಾಗಲಿದ್ದು, 4GB RAM + 64GB ವೇರಿಯಂಟ್ ಆರಂಭಿಕ ಬೆಲೆಯು 12,999ರೂ.ಗಳಾಗಿದೆ. ಎಚ್‌ಡಿಎಫ್‌ಸಿ ಕ್ರೆಡಿಟ್‌ ಕಾರ್ಡ್‌ ಗ್ರಾಹಕರಿಗೆ 750ರೂ.ಗಳ ಕ್ಯಾಶ್‌ಬ್ಯಾಕ್‌ ದೊರೆಯಲಿದ್ದು, ಹಾಗೂ ಇಎಮ್‌ಐಗಳ ಟ್ರಾನ್ಶಾಕ್ಷನ್‌ ಮೇಲೆ 250ರೂ ಕ್ಯಾಶ್‌ಬ್ಯಾಕ್‌ ಸಿಗಲಿದೆ. ಹಾಗೆಯೇ ಏರ್‌ಟೆಲ್‌ನಿಂದ (249ರೂ. ರೀಚಾರ್ಜ್‌) ಡಬಲ್ ಡೇಟಾ ಮತ್ತು ಅನಿಯಮಿತ ಕರೆಯ ಕೊಡುಗೆ ಲಭ್ಯವಾಗಲಿದೆ.

Best Mobiles in India

English summary
The key highlight of the Mi A3 is its clean software. The Mi A3 runs on Google's Android One program this means there's no MIUI, no third-party apps, and no Ads. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X