ಧೂಳಿನಿಂದ ನಿಮ್ಮನ್ನ ರಕ್ಷಿಸಲು ಬಂದಿದೆ ಶಿಯೋಮಿ ಪಲ್ಯೂಷನ್ ಮಾಸ್ಕ್

|

ಬೆಂಗಳೂರಿನ ವಾಯುಮಾಲಿನ್ಯದಿಂದಾಗಿ ಬೇಸತ್ತಿದ್ದೀರಾ? ಮನೆಗೆ ಬರೋ ಅಷ್ಟರಲ್ಲಿ ನಿಮ್ಮ ಮೂಗಲ್ಲಿ ರಸ್ತೆಯ ಧೂಳು ಆವರಿಸಿ ಕಿರಿಕಿರಿ ಉಂಟು ಮಾಡುತ್ತಿದೆಯಾ? ಹಾಗಾದ್ರೆ ನೀವು ಈ ಸ್ಟೋರಿಯನ್ನು ಓದಲೇ ಬೇಕು. ನಿಮಗೆ ಅಗತ್ಯವಿರುವ ವಸ್ತುವೊಂದರ ಬಗ್ಗೆ ನಾವಿಲ್ಲಿ ಹೇಳುತ್ತಿದ್ದೇವೆ.

ಧೂಳಿನಿಂದ ನಿಮ್ಮನ್ನ ರಕ್ಷಿಸಲು ಬಂದಿದೆ ಶಿಯೋಮಿ ಪಲ್ಯೂಷನ್ ಮಾಸ್ಕ್

ಹೌದು,ಶಿಯೋಮಿ ಲೈಫ್ ಸ್ಟೈಲ್ ಗೆ ಸಂಬಂಧಿಸಿದ ವಸ್ತುಗಳನ್ನು ಬಿಡುಗಡೆಗೊಳಿಸುವ ತನ್ನ ವಿಭಿನ್ನತೆಯನ್ನು ಮುಂದುವರಿಸಿದ್ದು ಇದೀಗ ಭಾರತದಲ್ಲಿ Mi AirPOP PM2.5 ಆಂಟಿ(Anti))-ಪಲ್ಯೂಷನ್ ಮಾಸ್ಕ್ ನ್ನು ಬಿಡುಗಡೆಗೊಳಿಸಿದೆ.

ಕಡಿಮೆ ಬೆಲೆಯಲ್ಲಿ ಕೈಗೆಟುಕುವ ಮಾಸ್ಕ್:

ಕಡಿಮೆ ಬೆಲೆಯಲ್ಲಿ ಕೈಗೆಟುಕುವ ಮಾಸ್ಕ್:

ಎಂಐ.ಕಾಮ್ ನಲ್ಲಿ ಇತರೆ ಲೈಫ್ ಸ್ಟೈಲ್ ವಸ್ತುಗಳ ಜೊತೆಗೆ ಈ ಮಾಸ್ಕ್ ಕೂಡ ಬಿಡುಗಡೆಗೊಂಡಿದ್ದು ಖರೀದಿಸಲು ಲಭ್ಯವಿದೆ. ಸದ್ಯ ಕಂಪೆನಿಯು ಒಂದು ಜೊತೆಗೆ ಮಾಸ್ಕ್ ಗೆ 249 ರುಪಾಯಿ ನಿಗದಿಗೊಳಿಸಿದೆ. ಒಂದು ಜೊತೆ ಮಾಸ್ಕ್ ನ್ನು ಒಂದು ತಿಂಗಳವರೆಗೆ ಬಳಕೆ ಮಾಡುವುದಕ್ಕೆ ಯೋಗ್ಯವಾಗಿರುತ್ತದೆ. ಇನ್ನು ಯಾವುದೇ ಕಾರಣಕ್ಕೂ ಈ ಮಾಸ್ಕ್ ನ್ನು ತೊಳೆಯಬಾರದು ಎಂದು ಕಂಪೆನಿ ತಿಳಿಸಿದೆ.

ನಾಲ್ಕು ಲೇಯರ್ ಫಿಲ್ಟ್ರೇಷನ್,99% ಸುರಕ್ಷತೆ:

ನಾಲ್ಕು ಲೇಯರ್ ಫಿಲ್ಟ್ರೇಷನ್,99% ಸುರಕ್ಷತೆ:

ಶಿಯೋಮಿ ಎಂಐ ಏರ್ ಪಾಪ್ PM2.5 ಆಂಟಿ ಪಲ್ಯೂಷನ್ ಮಾಸ್ಕ್ ನಾಲ್ಕು ಲೇಯರ್ ಫಿಲ್ಟ್ರೇಷನ್ ನ್ನು ಹೊಂದಿದ್ದು 99% ಸುರಕ್ಷತೆಯನ್ನು PM 2.5 ನಿಂದ ನೀಡುತ್ತದೆ ಎಂದು ಭರವಸೆ ನೀಡುತ್ತದೆ.

ಯಾವುದರಿಂದ ರಕ್ಷಣೆ ನೀಡುತ್ತದೆ?

ಯಾವುದರಿಂದ ರಕ್ಷಣೆ ನೀಡುತ್ತದೆ?

ನಾಲ್ಕು ಲೇಯರ್ ಗಳ ಹೈಟೆಕ್ ಫಿಲ್ಟರ್ ಗಳನ್ನು ಇದು ಹೊಂದಿದ್ದು ಪ್ರಾಕೃತಿಕವಾಗಿ ರೂಪಗೊಳ್ಳುವ ಮಬ್ಬು,ಧೂಳಿನ ಕಣಗಳು,ಶೀತ ಮತ್ತು ಜ್ವರ ಹರಡುವ ರೋಗಕಾರಕಗಳು, ಅಲರ್ಜಿ ಹರಡುವ ಪರಾಗಗಳು, ಹೊಗೆ ಮತ್ತು ಮಾಲಿನ್ಯಕಾರಕಗಳು, ಗ್ರೀಸ್ ಹೊಗೆ ಸೇರಿದಂತೆ ವಿವಿಧ ಮಾಲಿನ್ಯ ಕಾರಕಗಳಿಂದ ನಿಮಗೆ ರಕ್ಷಣೆ ನೀಡುತ್ತದೆ. ತಯಾರಕರು ತಿಳಿಸುವಂತೆ ಈ ಮಾಸ್ಕ್ ನ್ನು ಮುಖ್ಯವಾಗಿ ಭಾರತಕ್ಕಾಗಿಯೇ ತಯಾರಿಸಲಾಗಿದ್ದು 3ಡಿ ಡಿಸೈನ್ ಮತ್ತು ಚರ್ಮಕ್ಕೆ ಸ್ನೇಹಿಯಾಗಿರುವ ಮಾಸ್ಕ್ ಇದಾಗಿದೆ ಎಂದು ಹೇಳುತ್ತಾರೆ.

ಉಸಿರಾಟಕ್ಕೆ ಸಹಕಾರ:

ಉಸಿರಾಟಕ್ಕೆ ಸಹಕಾರ:

ಶಿಯೋಮಿ ಎಂಐ ಏರ್ ಪಾಪ್ ಪಿಎಂ 2.5 ಆಂಟಿ ಪಲ್ಯೂಷನ್ ಮಾಸ್ಕ್ ನಲ್ಲಿ ನೂತನವಾಗಿರುವ ಗಾಳಿಯ ಪ್ರಸರಣ ಥೆರಪಿಯನ್ನು ಕೂಡ ಹೊಂದಿರುತ್ತದೆ. ಮಾಲಿನ್ಯಕಾರಕಗಳನ್ನು ತಡೆಯುವಾಗ ದೊಡ್ಡ ಸುಳಿಯು ಉಸಿರಾಟದ ಪ್ರಕ್ರಿಯೆಗೆ ತ್ವರಿತವಾಗಿ ಬೆಚ್ಚಗಿನ ಗಾಳಿ ಮತ್ತು ಆವಿಯನ್ನು ಹೊರಹಾಕುತ್ತದೆ. ಹಾಗಾಗಿ ಉಸಿರಾಟವು ಕೂಡ ಸರಾಗವಾಗಿರುತ್ತದೆ. ಅಷ್ಟೇ ಅಲ್ಲ ಇದು ಕನ್ನಡಕವು ಮಾಲಿನ್ಯದಿಂದಾಗಿ ಮಬ್ಬಾಗುವುದನ್ನು ಕೂಡ ತಡೆಯುತ್ತದೆ.

ಜೀನ್ಸ್ ನಲ್ಲೂ ಇಟ್ಟುಕೊಳ್ಳಬಹುದು:

ಜೀನ್ಸ್ ನಲ್ಲೂ ಇಟ್ಟುಕೊಳ್ಳಬಹುದು:

ಮಾಸ್ಕ್ ಫೋಲ್ಡ್ ಮಾಡುವ ಡಿಸೈನ್ ನ್ನು ಕೂಡ ಹೊಂದಿದ್ದು, ಫೋಲ್ಡ್ ಮಾಡಿದ ನಂತರ ನಿಮ್ಮ ಜೀನ್ಸ್ ನ ಜೋಬಿನಲ್ಲಿ ಸರಾಗವಾಗಿ ಇಟ್ಟುಕೊಳ್ಳಬಹುದಾಗಿದೆ.

ಮೂರು ಸಂಸ್ಥೆಗಳ ದೃಢೀಕರಣ:

ಮೂರು ಸಂಸ್ಥೆಗಳು ಈ ಏರ್ ಪಲ್ಯೂಷನ್ ಮಾಸ್ಕ್ ನ್ನು ಟೆಸ್ಟ್ ಮಾಡಿವೆ. ಚೀನಾದ ನ್ಯೂ ಲೆವೆಲ್ ಬಿ ಫಿಲ್ಟ್ರೇಷನ್ ಸ್ಟ್ಯಾಂಡರ್ಡ್ ನಲ್ಲಿ ಪಾಸ್ ಆಗಿರುವ ಇದು ಸ್ಕಿನ್ ಫ್ರೆಂಡ್ಲಿ ಟೆಸ್ಟ್ ಆಫ್ ಜರ್ಮನ್ ಇನ್ಸಿಟ್ಯೂಟ್ ನಲ್ಲೂ ಕೂಡ ಉತ್ತೀರ್ಣವಾಗಿದೆ. ಅಷ್ಟೇ ಅಲ್ಲ ಚೀನಾದ ವಾಸನೆ ಟೆಸ್ಕ್ ಮಾಡುವ ಸಂಸ್ಥೆಯಿಂದಲೂ ಕೂಡ ದೃಢೀಕೃತಕೊಂಡಿರುವ ಪ್ರೊಡಕ್ಟ್ ಇದಾಗಿದೆ.

ಖಂಡಿತ ನೀವು ಬೆಂಗಳೂರಿನ ಧೂಳಿನಿಂದ ಬೇಸತ್ತಿದ್ದರೆ ಖರೀದಿಸಲು ಯೋಗ್ಯವಾಗಿರುವ ಪ್ರೊಡಕ್ಟ್ ಇದಾಗಿದೆ. ಹೆಚ್ಚು ಬೆಲೆಯೂ ಇಲ್ಲದ ಇದು ನಿಮ್ಮ ಆರೋಗ್ಯ ಕಾಪಾಡುವುದಕ್ಕೆ ಪ್ರಮುಖ ಪಾತ್ರ ವಹಿಸಬಲ್ಲದು. ನಿಮ್ಮ ಅಭಿಪ್ರಾಯ ಏನು ಎಂಬುದನ್ನು ಕಮೆಂಟ್ ಮಾಡಿ ತಿಳಿಸಿ.

Best Mobiles in India

Read more about:
English summary
Xiaomi Mi AirPOP PM2.5 air pollution mask launched in India; Price and more

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X