ಶಿಯೋಮಿಯಿಂದ ಮಿ ಬ್ಯಾಂಡ್ 3 ಮಾರುಕಟ್ಟೆಗೆ...?

By: Precilla Dias

ಚೀನಾ ಮೂಲದ ಶಿಯೋಮಿ ಸ್ಮಾರ್ಟ್ ಫೋನ್ ಮಾತ್ರವಲ್ಲದೇ ಅನೇಕ ಸ್ಮಾರ್ಟ್ ಗ್ಯಾಜೆಟ್ ಗಳನ್ನು ನಿರ್ಮಿಸುವುದರಲ್ಲಿಯೂ ನಿಫುಣತೆಯನ್ನು ಸಾಧಿಸಿದ್ದು, ಈ ಬಾರಿ ಇದೇ ಮೊದಲ ಪ್ರಯತ್ನವಾಗಿ ಕ್ರೌಡ್ ಫಂಡಿಗ್ ಮೂಲಕ ತನ್ನ ಮುಂದಿನ ಪ್ರಾಡೆಕ್ಟ್ 'ಮಿ ಬ್ಯಾಂಡ್ 3’ ಅನ್ನು ಮಾರುಕಟ್ಟೆಗೆ ತರಲು ಚಿಂತನೆಯನ್ನು ನಡೆಸಿದೆ.

ಶಿಯೋಮಿಯಿಂದ ಮಿ ಬ್ಯಾಂಡ್ 3 ಮಾರುಕಟ್ಟೆಗೆ...?

ಈ ಬಾರಿ ಸ್ಫೋಟ್ಸ್ ವೆರಬಲ್ಸ್ ಅನ್ನು ತಯಾರಿಸುವ ಹ್ಯೊಮಿ ಈ ಬಾರಿ ಕ್ರೌಡ್ ಫಡಿಂಗ್ ಮೂಲಕ ಶಿಯೋಮಿ ಮಿ ಬ್ಯಾಂಡ್ 3 ತಯಾರಿಕೆಯ ಹಿಂದಿದೆ ಎನ್ನುವ ಮಾಹಿತಿಯೂ ಲಭ್ಯವಾಗಿದ್ದು, ಈಗಾಗಲೇ ಮಿ ಬ್ಯಾಂಡ್ 3 ಬಿಡುಗಡೆಗೆ ಸಿದ್ಧವಾಗಿದೆ ಎನ್ನುವ ಮಾಹಿತಿಯೂ ಟ್ವೀಟರ್ ನಿಂದ ಲಭ್ಯವಾಗಿದೆ.

ಆದರೆ ಈ ಕುರಿತಂತೆ ಮಿ ಯಾವುದೇ ಆಫಿಷಿಯಲ್ ಮಾಹಿತಿಯನ್ನು ನೀಡಲಿಲ್ಲವಾದರೂ ಪ್ರಸ್ತುತ ಸದ್ದು ಮಾಡುತ್ತಿರುವುದು ಮಿ ಬ್ಯಾಂಡ್ 3 ಎಂದು ಹೇಳಲಾಗುತ್ತಿದೆ. ಇದೇ ಬೇರೊಂದು ಸ್ಪೋರ್ಟ್ ವೆರಬಲ್ ಕಂಪನಿಯೊಂದು ಮತ್ತೊಂದು ಕಂಪನಿಗೆ ಫಿಟ್ ಬ್ಯಾಂಡ್ ತಯಾರಿಕೆಗೆ ಫಂಡಿಗ್ ಮಾಡುವುದು ಆಚ್ಚರಿಗೆ ಕಾರಣವಾಗಿದೆ.

ಸದ್ಯ ವಿಭೋ ಟ್ವೀಟರ್ ಅಕೌಂಟ್ ನಲ್ಲಿ ಪಬ್ಲಿಷ್ ಮಾಡಿರುವ ಚಿತ್ರಗಳು ಇದೊಂದು ಸ್ಪೋರ್ಟ್ ವೆರಬಲ್ ಎನ್ನುವುದನ್ನು ಎತ್ತಿ ತೋರಿಸುತ್ತಿದೆ. ಇದರಿಂದಾಗಿ ಇದನ್ನು ಸ್ಪೋರ್ಟ್ಸ್ ಫಿಟ್ ನೆಸ್ ಬ್ಯಾಂಡ್ ಎಂದು ಹೇಳಬಹುದು.

ಮಾರುಕಟ್ಟೆ ತಜ್ಞರ ಪ್ರಕಾರ ಮಿ ಬ್ಯಾಂಡ್ 3 ಆಮೆಜಿಂಗ್ ಫಿಟ್ ಬ್ಯಾಂಡ್ ಎಂದು ಹೇಳಲಾಗುತ್ತಿದ್ದು, ಈ ಪ್ರಾಡೆಕ್ಟ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಶಿಯೋಮಿ ಹೆಚ್ಚಿನ ಸಂಶೋಧನೆಯನ್ನು ನಡೆಸಿದೆ ಎನ್ನಲಾಗಿದ್ದು, ಮಿ ಬ್ಯಾಂಡ್ 2 ಯಶಸ್ಸಿನ ಬಳಿಕ ಮಿ ಬ್ಯಾಂಡ್ 3 ವಿನ್ಯಾಶ ಶುರುವಾಗಿದೆ ಎನ್ನಲಾಗಿದೆ.

SourceRead more about:
English summary
It looks like Xiaomi is all set to launch its 86th crowdfunding product.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot