ಜನಪ್ರಿಯ ಶಿಯೋಮಿ ಮಿ ಬ್ಯಾಂಡ್‌ 6 ಬಿಡುಗಡೆ! ವಿಶೇಷತೆ ಏನು?

|

ಜನಪ್ರಿಯ ಶಿಯೋಮಿ ಕಂಪೆನಿ ಸ್ಮಾರ್ಟ್‌ಫೋನ್‌ ಮಾತ್ರವಲ್ಲದೆ ಫಿಟ್‌ನೆಸ್‌ಬ್ಯಾಂಡ್‌ ವಲಯದಲ್ಲೂ ಸೈ ಎನಿಸಿಕೊಂಡಿದೆ. ಈಗಾಗಲೇ ಹಲವು ಮಾದರಿಯ ಫಿಟ್‌ನೆಸ್‌ ಬ್ಯಾಂಡ್‌ಗಳನ್ನು ಪರಿಚಯಿಸಿ ಗ್ರಾಹಹಕರ ಗಮನ ಸೆಳೆದಿದೆ. ಸದ್ಯ ಇದೀಗ ತನ್ನ ಹೊಸ ಫಿಟ್‌ನೆಸ್ ಬ್ಯಾಂಡ್ ಮತ್ತು ಮಿ ಬ್ಯಾಂಡ್ 5 ರ ಉತ್ತರಾಧಿಕಾರಿಯಾದ ಶಿಯೋಮಿ ಮಿ ಬ್ಯಾಂಡ್ 6 ಅನ್ನು ಬಿಡುಗಡೆ ಮಾಡಿದೆ.

ಮಿ ಬ್ಯಾಂಡ್‌ 6

ಹೌದು, ಶಿಯೋಮಿ ತನ್ನ ಹೊಸ ಮಿ ಬ್ಯಾಂಡ್‌ 6 ಅನ್ನು ಲಾಂಚ್‌ ಮಾಡಿದೆ. ಇದು AMOLED ಡಿಸ್‌ಪ್ಲೇ , 15ಕ್ಕೂ ಹೆಚ್ಚುವರಿ ವರ್ಕೌಟ್‌ ಮೋಡ್‌ಗಳು, ಹೊಸ ಕಾರ್ಟೂನ್-ವಿಷಯವನ್ನು ಹೊಂದಿರುವ ವಾಚ್‌ ಫೇಸ್‌ಗಳನ್ನು ಹೊಂದಿದೆ. ಇದಲ್ಲದೆ ಹಲವು ಹೊಸ ಮಾದರಿಯ ಅಪ್ಡೇಟ್‌ಗಳನ್ನು ಪಡೆದುಕೊಂಡಿದೆ. ಇನ್ನುಳಿದಂತೆ ಈ ಹೊಸ ಫಿಟ್‌ನೆಸ್‌ ಬ್ಯಾಂಡ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಬ್ಯಾಂಡ್

ಶಿಯೋಮಿ ಸಂಸ್ಥೆಯ ಹೊಸ ಮಿ ಬ್ಯಾಂಡ್ 6 ಈಗ ಸ್ವಲ್ಪ ದೊಡ್ಡದಾದ AMOLED ಡಿಸ್‌ಪ್ಲೇಯನ್ನು ಹೊಂದಿದೆ. ಇದು ಮಿ ಬ್ಯಾಂಡ್ 5 ನಲ್ಲಿ ಕಂಡುಬರುವ 1.1-ಇಂಚಿನ AMOLED ಡಿಸ್‌ಪ್ಲೇ ಬದಲು 1.56-ಇಂಚಿನ ಫುಲ್‌-ಟಚ್‌ AMOLED ಸ್ಕ್ರೀನ್‌ ಅನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 326ppi ಪಿಕ್ಸೆಲ್ ಸಾಂದ್ರತೆಯನ್ನು ಹೊಂದಿದೆ. ಅಲ್ಲದೆ ಈ ಬ್ಯಾಂಡ್ 30 ಕ್ಕೂ ಹೆಚ್ಚು ವರ್ಕೌಟ್‌ ಮೋಡ್‌ಗಳನ್ನು ನೀಡುತ್ತದೆ.

ಇನ್‌ಡೋರ್‌

ಇದಲ್ಲದೆ ಇನ್‌ಡೋರ್‌ ರನ್ನಿಂಗ್‌, ವಾಕಿಂಗ್, ಟ್ರೆಡ್‌ಮಿಲ್ ಚಾಲನೆಯಲ್ಲಿರುವ 6 ಸ್ವಯಂ-ಪತ್ತೆ ಫಿಟ್‌ನೆಸ್ ಟ್ರ್ಯಾಕಿಂಗ್ ಮೋಡ್‌ಗಳನ್ನು ನೀಡುತ್ತದೆ. ಇನ್ನು ಈ ಬ್ಯಾಂಡ್ 50 ಮೀ ನೀರಿನ ಪ್ರತಿರೋಧವನ್ನು ಹೊಂದಿದೆ. ಅಲ್ಲದೆ ರಕ್ತದ ಆಮ್ಲಜನಕದ ಮಟ್ಟವನ್ನು ಪತ್ತೆಹಚ್ಚಲು 24 × 7 ರಿಯಲ್‌-ಟೈಂ ಹೃದಯ ಬಡಿತ ಮಾನಿಟರ್ ಮತ್ತು SpO2 ಸೆನ್ಸಾರ್‌ ಅನ್ನು ಒಳಗೊಂಡಿದೆ. ಜೊತೆಗೆ 130+ ವಾಚ್‌ ಫೇಸ್‌ಗಳಿಗಿಂತ ಮಿ ಬ್ಯಾಂಡ್ 6 ಕ್ರೀಡೆಗಳು ಮತ್ತು ಮೂರು ಸ್ಪಾಂಗೆಬಾಬ್-ಥೀಮ್ಡ್‌ ವಾಚ್‌ಫೇಸ್‌ಗಳನ್ನು ಒಳಗೊಂಡಿದೆ. ಇನ್ನು ಬ್ಯಾಕಪ್ ವಿಷಯದಲ್ಲಿ, ಹೊಸ ಮಿ ಬ್ಯಾಂಡ್ 6 ಸಿಂಗಲ್‌ ಚಾರ್ಜ್‌ನಲ್ಲಿ 14 ದಿನಗಳ ಬ್ಯಾಟರಿ ಅವಧಿಯನ್ನು ತಲುಪಿಸಲು ಸಾಧ್ಯವಾಗುತ್ತದೆ ಎಂದು ಶಿಯೋಮಿ ಹೇಳಿಕೊಂಡಿದೆ.

ಶಿಯೋಮಿ

ಇನ್ನು ಈ ಹೊಸ ಶಿಯೋಮಿ ಮಿ ಬ್ಯಾಂಡ್ 6 ಯುವಾನ್ 229 (ಸುಮಾರು 2,600 ರೂ) ಬೆಲೆಯನ್ನು ಹೊಂದಿದೆ. ಇದಲ್ಲದೆ ಶಿಯೋಮಿ ಎನ್‌ಎಫ್‌ಸಿ ಚಿಪ್‌ನೊಂದಿಗೆ ವಿಶೇಷ ಆವೃತ್ತಿಯನ್ನು ಪರಿಚಯಿಸಿದೆ, ಇದರ ಬೆಲೆ ಯುವಾನ್ 279 (ಸರಿಸುಮಾರು 3,100 ರೂ.) ಆಗಿದೆ. ಸದ್ಯ ಶಿಯೋಮಿ ಈ ಬ್ಯಾಂಡ್‌ನ ಮಾರಾಟದ ಸಮಯವನ್ನು ಹಂಚಿಕೊಂಡಿಲ್ಲ. ಆದರೆ ಈ ಹೊಸ ಫಿಟ್‌ನೆಸ್ ಬ್ಯಾಂಡ್‌ ಬಿಳಿ, ಕಂದು, ಕಪ್ಪು, ನೀಲಿ, ಕಿತ್ತಳೆ, ಹಳದಿ, ಹಸಿರು ಮತ್ತು ಬೆಳ್ಳಿ ಬಣ್ಣ ಎಂಬ ಎಂಟು ಬಣ್ಣ ಆಯ್ಕೆಗಳಲ್ಲಿ ಬರಲಿದೆ.

Best Mobiles in India

English summary
Xiaomi Mi Band 6 with SpongeBob-themed watch faces launched.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X