Xiaomi: ಶಿಯೋಮಿಯ ಮಿ ಬಾಕ್ಸ್ 4K ಆಂಡ್ರಾಯ್ಡ್ ಸ್ಟ್ರೀಮಿಂಗ್ ಡಿವೈಸ್‌ ಬಿಡುಗಡೆ!

|

ಚೀನಾ ಮೂಲದ ಜನಪ್ರಿಯ ಸ್ಮಾರ್ಟ್‌ಫೋನ್‌ ತಯಾರಕ ಶಿಯೋಮಿ ಭಿನ್ನ ಮಾದರಿಯ ಸ್ಮಾರ್ಟ್‌ಫೋನ್‌ಗಳಿಗೆ ಹೆಸರುವಾಸಿಯಾಗಿದೆ. ಈಗಾಗಲೇ ಮಾರುಕಟ್ಟೆಗೆ ಹಲವು ಮಾದರಿಯ ಸ್ಮಾರ್ಟ್‌ಫೋನ್‌ಗಳ ಪರಿಚಯಿಸಿ ಸೈ ಎನಿಸಿಕೊಂಡಿದೆ. ಇದಲ್ಲದೆ ಸ್ಮಾರ್ಟ್‌ಫೋನ್‌ ಮಾತ್ರವಲ್ಲದೆ ಇತರೆ ಸ್ಮಾರ್ಟ್‌ ಪ್ರಾಡಕ್ಟ್‌ಗಳ ಮೂಲಕವೂ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸುವ ಶಿಯೋಮಿ ಇದೀಗ ತನ್ನ ಹೊಸ ಮಾದರಿಯ ಸ್ಮಾರ್ಟ್‌ ಮಿ ಬಾಕ್ಸ್‌ ಅನ್ನು ಪರಿಚಯಿಸಿದೆ. ಇದು 4K ಸ್ಟ್ರೀಮಿಗ್‌ ಡಿವೈಸ್‌ ಆಗಿದ್ದು, ಸ್ಮಾರ್ಟ್‌ಟಿವಿಗೆ ಕನೆಕ್ಟ್‌ ಮಾಡುವ ಮೂಲಕ ಇಂಟರ್‌ನೆಟ್‌ಗೆ ಕನೆಕ್ಟ್ ಮಾಡಬಹುದಾಗಿದೆ.

ಹೌದು

ಹೌದು, ಜನಪ್ರಿಯ ಸ್ಮಾರ್ಟ್‌ಫೋನ್‌ ಕಂಪೆನಿ ಶಿಯೋಮಿ ಇಂದು ಭಾರತದಲ್ಲಿ ತನ್ನ ಮಿ ಬ್ರಾಂಡ್‌ನ ಸ್ಮಾರ್ಟ್ ಪ್ರಾಡಕ್ಟ್‌ಗಳ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸಿದೆ. ಸದ್ಯ ಇದೀಗ ಬಹು ನಿರೀಕ್ಷಿತ ಮಿ10 5G ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿದ್ದು, ಇದರ ಜೊತೆಗೆ ಶಿಯೋಮಿ ಮಿ ಬಾಕ್ಸ್ 4K ಅನ್ನು ಲಾಂಚ್‌ ಮಾಡಿದೆ. ಸದ್ಯ ಮಿ ಬಾಕ್ಸ್‌ 4K ಮೂಲಕ ಶಿಯೋಮಿ ತನ್ನ ಫೈರ್ ಟಿವಿ ಸ್ಟಿಕ್‌ನೊಂದಿಗೆ ಅಮೆಜಾನ್ ಪ್ರಾಬಲ್ಯ ಹೊಂದಿರುವ ವಿಭಾಗಕ್ಕೆ ಎಂಟ್ರಿ ನೀಡಿದೆ. ಅಷ್ಟಕ್ಕೂ ಮಿ ಬಾಕ್ಸ್‌ 4K ವಿಶೇಷತೆ ಏನು. ಅನ್ನೊದರ ಮಾಹಿತಿಯನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಬನ್ನಿರಿ.

ಶಿಯೋಮಿ

ಶಿಯೋಮಿ ತನ್ನ ಮಿ ಟಿವಿಗಳನ್ನು ಲಾಂಚ್‌ ಮಾಡುವುದರ ಮೂಲಕ ಭಾರತದ ಸ್ಮಾರ್ಟ್ ಟಿವಿ ಮಾರುಕಟ್ಟೆಯಲ್ಲಿ ಕ್ರಾಂತಿಯನ್ನುಂಟು ಮಾಡಿತು. ಇದೀಗ ಮಿ ಬಾಕ್ಸ್ 4K ಬಿಡುಗಡೆ ಮಾಡುವ ಮೂಲಕ ತನ್ನ ಪ್ರತಿಸ್ಪರ್ಧಿಗಳಿಗೆ ಪ್ರಬಲ ಪೈಪೋಟಿ ನೀಡಲು ಮುಂದಾಗಿದೆ. ಸದ್ಯ ಮಿ ಬಾಕ್ಸ್‌ 4K ಸ್ಟ್ರೀಮಿಂಗ್‌ ಅನ್ನು ಹೊಂದಿರುವುದರಿಂದ ಇನ್ನೂ ಸ್ಮಾರ್ಟ್ ಟಿವಿ ಬಳಸದ ಗ್ರಾಹಕರಿಗೂ ಇದು ಉಪಯೋಗವಾಗಲಿದೆ. ಈ ಮೂಲಕ ಟಿವಿ ಬಳಕೆದಾರರನ್ನ ತನ್ನತ್ತ ಸೆಳೆಯಲು ಶಿಯೋಮಿ ಪ್ಲ್ಯಾನ್‌ ಮಾಡಿದೆ. ಕೆಲವು ಮೂಲ ಸ್ಮಾರ್ಟ್ ಟಿವಿಗಳು ನೆಟ್‌ಫ್ಲಿಕ್ಸ್ ಮತ್ತು ಬ್ರೌಸರ್ ಅನ್ನು ಮಾತ್ರ ನೀಡುತ್ತವೆ. ಆದರೆ ನೀವು ಅಮೆಜಾನ್ ಪ್ರೈಮ್ ವಿಡಿಯೋ ಅಥವಾ ಹಾಟ್‌ಸ್ಟಾರ್ ಅನ್ನು ಪಡೆಯಲು ಸಾಧ್ಯವಾಗುವುದಿಲ್ಲ, ಈ ಗ್ರಾಹಕರಿಗೆ ಮಿ ಬಾಕ್ಸ್ 4K ಪರಿಹಾರ ರೂಪದಲ್ಲಿ ಬರಲಿದೆ ಎಂದು ಶಿಯೋಮಿ ಹೇಳಿಕೊಂಡಿದೆ.

ಬಾಕ್ಸ್

ಇನ್ನು ಮಿ ಬಾಕ್ಸ್ 4K, ಹೆಸರೇ ಸೂಚಿಸುವಂತೆ, 4K ಸ್ಟ್ರೀಮಿಂಗ್ ಸಾಧನವಾಗಿದೆ. ಆದಾಗ್ಯೂ, ಇದನ್ನ ಯಾವುದೇ ಟಿವಿಯೊಂದಿಗೆ ಕನೆಕ್ಟ್‌ ಮಾಡಬಹುದು ಮತ್ತು ನಿಮ್ಮ ಟಿವಿಯ ರೆಸಲ್ಯೂಶನ್‌ಗೆ ಇಂಟೆಲಿಜೆನ್ಸ್‌ ಮೂಲಕ ಹೊಂದಿಕೊಳ್ಳುತ್ತದೆ. ಅಲ್ಲದೆ ಇದು Chromecast ಇಂಟರ್‌ ಬಿಲ್ಟ್‌ Android TV ಇಂಟರ್ಫೇಸ್ ಅನ್ನು ರನ್‌ ಮಾಡಲಿದೆ. ಜೊತೆಗೆ ಇದು ಡ್ಯುಯಲ್ ಬ್ಯಾಂಡ್ ವೈಫೈ ಅನ್ನು ಸಹ ಬೆಂಬಲಿಸುತ್ತದೆ. ಇದಲ್ಲದೆ ಮಿ ಬಾಕ್ಸ್‌ ಡಾಲ್ಬಿ ಆಡಿಯೋವನ್ನು ಬೆಂಬಲಿಸಲಿದೆ. ಅಲ್ಲದೆ ಸ್ಮಾರ್ಟ್ ಹೋಮ್ ಡಿವೈಸ್‌ಗಳನ್ನ ಕಂಟ್ರೋಲ್‌ ಮಾಡುವ ಸಾಮರ್ಥ್ಯ ಹೊಂದಿದೆ.

ಆಂಡ್ರಾಯ್ಡ್

ಇದು ಆಂಡ್ರಾಯ್ಡ್ ಟಿವಿಯನ್ನು ಚಲಾಯಿಸುವುದರಿಂದ, ಇದು ಗೂಗಲ್ ಅಸಿಸ್ಟೆಂಟ್ ಅನ್ನು ಸಹ ಬೆಂಬಲಿಸುತ್ತದೆ. ಇದಲ್ಲದೆ ಈ ಬಾಕ್ಸ್‌ ಒಟಿಎ ಅಪ್‌ಡೇಟ್‌ನೊಂದಿಗೆ ಗೂಗಲ್ ಡಾಟಾ ಸೇವರ್ ಫಿಚರ್ಸ್‌ ಅನ್ನು ನೀಡಲಿದ್ದು, ಇದನ್ನ ನೀಡುವ ವಿಶ್ವದ ಮೊದಲ ಆಂಡ್ರಾಯ್ಡ್ ಸ್ಟ್ರೀಮಿಂಗ್ ಡಿವೈಸ್‌ ಇದಾಗಿದೆ. ಇನ್ನು ಶಿಯೋಮಿ ಮಿ ಬಾಕ್ಸ್ 4K ಡಿವೈಸ್‌ ಅನ್ನು ಎಚ್‌ಡಿಎಂಐ ಮೂಲಕ ಟಿವಿಗೆ ಸಂಪರ್ಕಿಸ ಬಹುದಾಗಿದೆ. ಅಲ್ಲದೆ ಇದು ಇಂಟರ್‌ನೆಟ್‌ಗೆ ಸಂಪರ್ಕಿಸುವ ಮೂಲಕ ಕಾರ್ಯನಿರ್ವಹಿಸುತ್ತದೆ. ಇದು ಯುಎಸ್‌ಬಿ ಪೋರ್ಟ್ ಅನ್ನು ಹೊಂದಿದ್ದು ಮತ್ತು ವೈರ್‌ಲೆಸ್ ಹೆಡ್‌ಫೋನ್‌ಗಳನ್ನು ಕನೆಕ್ಟ್‌ ಮಾಡಲು ಬ್ಲೂಟೂತ್ 4.2 ಅನ್ನು ಹೊಂದಿದೆ.

ಅಮೆಜಾನ್

ಇದಲ್ಲದೆ ಇದು ಅಮೆಜಾನ್ ಪ್ರೈಮ್ ವಿಡಿಯೋ, ನೆಟ್‌ಫ್ಲಿಕ್ಸ್ ಮತ್ತು ಗೂಗಲ್ ಅಸಿಸ್ಟೆಂಟ್‌ಗಾಗಿ ಮೀಸಲಾದ ಬಟನ್ ಹೊಂದಿರುವ ರಿಮೋಟ್‌ನೊಂದಿಗೆ ಬರುತ್ತದೆ. ಇನ್ನು ಇದರ ಬೆಲೆ 3,499 ರೂ. ಆಗಿದ್ದು, ಇದು ಅಮೆಜಾನ್ ಫೈರ್ ಟಿವಿ 4K ಗಿಂತ ಅಗ್ಗವಾಗಿದೆ, ಸದ್ಯ ಇದು ಮೇ 11 ರಿಂದ ಫ್ಲಿಪ್‌ಕಾರ್ಟ್, ಮಿ.ಕಾಮ್ ಮಿ ಸ್ಟುಡಿಯೋ ಮತ್ತು ಮಿ ಹೋಮ್ ಮೂಲಕ ಮಾರಾಟವಾಗಲಿದೆ.

Best Mobiles in India

English summary
The Mi Box 4K is the Android streaming device from Xiaomi that will challenge the popular Amazon Fire TV in India.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X