ಡ್ಯುಯೆಲ್‌ ಕ್ಯಾಮೆರಾ ಒಳಗೊಂಡ ಶಿಯೋಮಿ ಮಿ ಬನ್ನಿ ವಾಚ್ 4 ಬಿಡುಗಡೆ!

|

ಟೆಕ್‌ ಮಾರುಕಟ್ಟೆಯಲ್ಲಿ ವಿಬಿನ್ನ ಮಾದರಿಯ ಸ್ಮಾರ್ಟ್‌ ಡಿವೈಸ್‌ಗಳು ಲಭ್ಯವಿವೆ. ಟೆಕ್ನಾಲಜಿ ಮುಂದುವರೆದಂತೆ ಇತ್ತೀಚಿನ ದಿನಗಳಲ್ಲಿ ಸಾಕಷ್ದಟು ವೈವಿಧ್ಯಮಯವಾದ ಸ್ಮಾರ್ಟ್‌ವಾಚ್‌ಗಳನ್ನ ನಾವಿಂದು ನೋಡಬಹುದಾಗಿದೆ. ಅಷ್ಟೇ ಯಾಕೆ ಮಲ್ಟಿ ಟಾಸ್ಕ್‌ ಮಾಡಬಲ್ಲ ಸ್ಮಾರ್ಟ್‌ವಾಚ್‌ಗಳು ಕೂಡ ನಮ್ಮ ಕಣ್ಣ ಮುಂದಿವೆ. ಈಗಾಗಲೇ ಹಲವು ಕಂಪೆನಿಗಳು ನಾನಾ ಮಾದರಿಯ ಸ್ಮಾರ್ಟ್‌ವಾಚ್‌ಗಳನ್ನ ಪರಿಚಯಿಸಿದ್ದು, ಇವುಗಳಲ್ಲಿ ಶಿಯೋಮಿ ಕೂಡ ಒಂದಾಗಿದೆ. ಸದ್ಯ ಶಿಯೋಮಿ ಕಂಪೆನಿ ಇದೀಗ ತನ್ನ ಹೊಸ ಮಾದರಿಯ ಸ್ಮಾರ್ಟ್‌ವಾಚ್‌ ಅನ್ನು ಬಿಡುಗಡೆ ಮಾಡಿದೆ.

ಹೌದು

ಹೌದು, ಚೀನಾ ಮೂಲದ ಜನಪ್ರಿಯ ಕಂಪೆನಿ ಶಿಯೋಮಿ ತನ್ನ ಹೊಸ ಆವೃತ್ತಿಯ ಮಿ ಬನ್ನಿ ವಾಚ್‌4 ಅನ್ನು ಲಾಂಚ್‌ ಮಾಡಿದೆ. ಈ ಸ್ಮಾರ್ಟ್‌ವಾಚ್‌ ಎಂಟು ದಿನಗಳ ಬ್ಯಾಟರಿ ಅವದಿಯನ್ನ ಹೊಂದಿದ್ದು ಜೊತೆಗೆ ಡ್ಯುಯೆಲ್‌ ಕ್ಯಾಮೆರಾಗಳನ್ನು ಸಹ ಒಳಗೊಂಡಿದೆ. ಇದಲ್ಲದೆ ಈ ಸ್ಮಾರ್ಟ್‌ವಾಚ್‌ 4G ನೆಟ್‌ವರ್ಕ್‌ಗೆ ಬೆಂಬಲಿಸಲಿದ್ದು, AI ಟೆಕ್ನಾಲಜಿಯನ್ನ ಸಹ ಒಳಗೊಂಡಿದೆ. ಇನ್ನು ಈ ಸ್ಮಾರ್ಟ್‌ವಾಚ್‌ ವಿನ್ಯಾಸ ಹಾಗೂ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಯೋಣ ಬನ್ನಿ.

ಶಿಯೋಮಿ

ಇನ್ನು ಶಿಯೋಮಿ ಕಂಪೆನಿ ಬಿಡುಗಡೆ ಮಾಡಿರುವ ಶಿಯೋಮಿ ಮಿ ಬನ್ನಿ ವಾಚ್‌4 ಡ್ಯುಯೆಲ್‌ ಕ್ಯಾಮೆರಾ ವನ್ನು ಒಳಗೊಂಡಿದ್ದು ಉತ್ತಮ ವಿನ್ಯಾಸವನ್ನು ಒಳಗೊಂಡಿದೆ. ಇದಲ್ಲದೆ ಈ ಸ್ಮಾರ್ಟ್‌ವಾಚ್‌ 1.78 ಇಂಚಿನ ಅಮೋಲೆಡ್ ಡಿಸ್‌ಪ್ಲೇ ಹೊಂದಿದ್ದು 326 ಪಿಪಿ ಪಿಕ್ಸೆಲ್ ಸಾಂದ್ರತೆಯನ್ನು ಹೊಂದಿದೆ. ಜೊತೆಗೆ ಇದು 2.5D ಬಾಗಿದ ಗಾಜಿನ ಡಿಸ್‌ಪ್ಲೇ ಹೊಂದಿದ್ದು, ಉತ್ತಮ ಸ್ಕ್ರೀನ್‌ ರೆಸಲ್ಯೂಶನ್‌ ಒಳಗೊಂಡಿದೆ. ಇನ್ನು ಈ ಡಿಸ್‌ಪ್ಲೇ ರಕ್ಷಣೆಗಾಗಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ಅನ್ನು ನೀಡಲಾಗಿದೆ.

ಇದಲ್ಲದೆ

ಇದಲ್ಲದೆ ಈಗಾಗಲೇ ತಿಳಿಸಿರುವಂತೆ ಈ ಸ್ಮಾರ್ಟ್‌ವಾಚ್‌ ಡ್ಯುಯೆಲ್ ಕ್ಯಾಮೆರಾ ಸೆಟ್‌ಅಪ್‌ ಹೊಂದಿದ್ದು, ಎರಡು ಕ್ಯಾಮೆರಾಗಳು ಕೂಡ 5 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದೆ. ಇವುಗಳಲ್ಲಿ ಒಂದು ಕ್ಯಾಮೆರಾ ವಿಡಿಯೊ ಕರೆಗಾಗಿ ವಾಚ್‌ನ ಮೇಲ್ಬಾಗದಲ್ಲಿ ನೀಡಲಾಗಿದೆ. ಹಾಗೇಯೆ ಮತ್ತೊಂದು ಕ್ಯಾಮೆರಾವನ್ನ ಇನ್ನೊಂದು ಬದಿಯಲ್ಲಿ ನೀಡಲಾಗಿದೆ. ಇನ್ನು ಈ ವಾಚ್‌ ಎನ್‌ಎಫ್‌ಸಿ, ವೈ-ಫೈ, 4G, ಸ್ಪೀಕರ್‌ಗಳು ಮತ್ತು ಮೈಕ್ರೊಫೋನ್‌ಅನ್ನು ಸಹ ನೀಡಲಾಗಿದೆ.

ವಾಚ್‌

ಇನ್ನು ಈ ವಾಚ್‌ ವಾಟರ್‌ಪ್ರೂಪ್‌ ವ್ಯವಸ್ಥೆಯನ್ನ ಹೊಂದಿದ್ದು, 20 ಮೀಟರ್ ವರೆಗೂ ನೀರಿನಿಂದ ರಕ್ಷಣೆ ನೀಡಲಿದೆ. ಜೊತೆಗೆ ಈ ವಾಚ್‌ AI ಅನ್ನು ಹೊಂದಿದ್ದು, ಮನೆಯ ಮಕ್ಕಳ ಮೇಲೆ ನಿಗಾವಹಿಸಲು ಉಪಯುಕ್ತವಾಗಲಿದೆ. ಇದಲ್ಲದೆ ಈ ಸ್ಮಾರ್ಟ್‌ವಾಚ್‌ ದೇಶಾದ್ಯಂತ 4000 ಕ್ಕೂ ಹೆಚ್ಚು ಶಾಪಿಂಗ್ ಮಾಲ್‌ಗಳು, ರೈಲು ನಿಲ್ದಾಣಗಳು ಮತ್ತು ವಿಮಾನ ನಿಲ್ದಾಣಗಳ ಡೇಟಾಬೇಸ್ ಹೊಂದಿದೆ. ಇಂಟರ್‌ ಬಿಲ್ಟ್ ವಾಯ್ಸ್‌ ಅಸಿಸ್ಟೆಂಟ್‌ ಮುಲಕ ಅಲಾರಮ್‌ಗಳನ್ನು ಹೊಂದಿಸಲು, ಮ್ಯೂಸಿಕ್‌ ಪ್ಲೇ ಮಾಡಲು, ಹಾಗೂ ಇಂಗ್ಲಿಷ್ ಕಲಿಯಲು ಸಹಾಯ ಮಾಡುತ್ತದೆ.

ವಾಚ್

ಅಲ್ಲದೆ ಈ ವಾಚ್ ಇಂಗ್ಲಿಷ್ ಭಾಷೆಗಾಗಿ AI ಮೌಲ್ಯಮಾಪನವನ್ನು ಬೆಂಬಲಿಸುತ್ತದೆ ಮತ್ತು ಮಕ್ಕಳಿಗೆ ನಿರರ್ಗಳವಾಗಿ ಇಂಗ್ಲಿಷ್ ಮಾತನಾಡಲು ಸಹಾಯ ಮಾಡಲಿದ್ದು. ಇದಕ್ಕಾಗಿ ನಾಲ್ಕು ಮಾಡ್ಯೂಲ್‌ಗಳೊಂದಿಗೆ ಬರುತ್ತದೆ. ಜೊತೆಗೆ ವೈವಿಧ್ಯಮಯ ಅಪ್ಲಿಕೇಶನ್‌ಗಳನ್ನು ಸಹ ನೀಡಲಾಗಿದೆ. ಸದ್ಯ ಈ ವಾಚ್‌ 920mAh ಬ್ಯಾಟರಿ ಹೊಂದಿದ್ದು 296 ಗ್ರಾಂ ತೂಕ ಹೊಂದಿದೆ. ಇನ್ನು ಇದರ ಬೆಲೆ CNY 899 (ಸುಮಾರು 9,600 ರೂ.) ಆಗಿದ್ದು, ಬ್ಲೂ ಮತ್ತು ಪಿಂಕ್ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ. ಏಪ್ರಿಲ್ 9 ರಿಂದ ಖರೀದಿಸಲು ಲಭ್ಯವಾಗಲಿದೆ ಎಂದು ಹೇಳಲಾಗಿದೆ.

Best Mobiles in India

English summary
Xiaomi Mi Bunny Watch 4 With 8-Day Battery and Dual Cameras Launched.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X