ಶಿಯೋಮಿಯ ಡ್ಯುಯೆಲ್‌ಪೋರ್ಟ್ 'ಮಿ ಕಾರ್ ಚಾರ್ಜರ್‌ಪ್ರೊ' 18w ಬಿಡುಗಡೆ!
ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಲಗ್ಗೆ ಹಾಕಿದ ನಂತರ ಚಾರ್ಜಿಂಗ್ ಮಾರುಕಟ್ಟೆ ಕೂಡ ವಿಸ್ತಾರವಾಗಿದ್ದು ನಿಮಗೂ ಕೂಡ ತಿಳಿದಿದೆ. ಸ್ಮಾರ್ಟ್‌ಫೋನ್‌ಗಳ ಪವರ್ ದಾಹ ತಿರಿಸುವ ಪವರ್‌ಬ್ಯಾಂಕ್‌ಗಳು, ಚಾರ್ಜಿಂಗ್ ಪೋರ್ಟ್‌ಗಳು ಕೂಡ ಇಂದು ಮಾರುಕಟ್ಟೆಯಲ್ಲಿ ಲಭ್ಯವಿವೆ. ಅಷ್ಟೇ ಯಾಕೆ ನೀವು ಕಾರಿನಲ್ಲಿ ಪ್ರಯಾಣ ಮಾಡುವಾಗ ಸ್ಮಾರ್ಟ್‌ಫೋನ್ ಬಳಸುತ್ತಲೇ ಚಾರ್ಜಿಂಗ್ ಅನ್ನು ಸಹ ಹೊಂದುವುದಕ್ಕೆ ಕಾರ್ ಚಾರ್ಜರ್‌ಗಳು ಅವಕಾಶ ಮಾಡಿಕೊಟ್ಟಿವೆ. ಸದ್ಯ ಮಾರುಕಟ್ಟೆಯಲ್ಲಿ ಹಲವು ಮಾದರಿಯ ಕಾರ್ ಚಾರ್ಜರ್‌ಗಳು ಇಂದು ಲಬ್ಯವಿವೆ. ಇದೀಗ ಶಿಯೋಮಿ ಕಂಪೆನಿ ಕೂಡ ತನ್ನ ಭಿನ್ನ ಮಾದರಿಯ ಕಾರ್ ಚಾರ್ಜರ್ ಅನ್ನು ಪರಿಚಯಿಸಿದೆ.

ಹೌದು, ಚೀನಾ ಮೂಲದ ಜನಪ್ರಿಯ ಸ್ಮಾರ್ಟ್‌ಫೋನ್ ತಯಾರಕ ಶಿಯೋಮಿ ಕಂಪೆನಿ ತನ್ನ ಹೊಸ ಕಾರ್ ಚಾರ್ಜರ್ ಪ್ರೊ 18w ಅನ್ನು ಭಾರತದಲ್ಲಿ ಲಾಂಚ್ ಮಾಡಿದೆ. ಇದು ಡ್ಯುಯೆಲ್ ಚಾರ್ಜಿಂಗ್ ಮೊಡ್ ಅನ್ನು ಹೊಂದಿದ್ದು, ಏಕಕಾಲದಲ್ಲಿ ಎರಡು ಸ್ಮಾರ್ಟ್‌ಫೋನ್‌ಗಳನ್ನ ಚಾರ್ಜಿಂಗ್ ಮಾಡಬಹುದಾಗಿದೆ. ಇನ್ನು ಈ ಚಾರ್ಜರ್ ಹೊಸ ಮಾದರಿಯ ಫೀಚರ್ಸ್‌ಗಳನ್ನ ಹೊಂದಿದ್ದು, ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಇನ್ನು ಈ ಚಾರ್ಜರ್ ಮೆಟಾಲಿಕ್‌ಫಿನಿಶ್ ಡಿಸೈನ್ ಅನ್ನಯು ಒಳಗೊಂಡಿದೆ.

ಇದಲ್ಲದೆ ಶಿಯೋಮಿಯ ಮಿ ಕಾರ್ ಚಾರ್ಜರ್ ಪ್ರೊ 18 w ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಅಲ್ಲದೆ, ಈ ಡ್ಯುಯಲ್-ಪೋರ್ಟ್ ಇಂಟೆಲಿಜೆಂಟ್ ಡಿಸ್ಟ್ರಿಬ್ಯೂಶನ್ ಫಿಚರ್ಸ್ ಅನ್ನು ಒಳಗೊಂಡಿದೆ. ಜೊತೆಗೆ ಕನೆಕ್ಟ್ ಮಾಡಲಾದ ಪ್ರತಿಯೊಂದು ಡಿವೈಸ್‌ಗೂ ಸೂಕ್ತವಾದ ಪವರ್ ಅನ್ನು ಚಾರ್ಜಿಂಗ್ ಮಾಡುವಂತಹ ವಿನ್ಯಾಸವನ್ನು ಹೊಂದಿದೆ. ಹಾಗೇ ನೋಡುವುದಾದರೆ ಶಿಯೋಮಿ ಡಿಸೆಂಬರ್ 2018 ರಲ್ಲಿ, ಮಿ ಕಾರ್ ಚಾರ್ಜರ್ ಬೇಸಿಕ್ ಅನ್ನು ದೇಶದಲ್ಲಿ ಬಿಡುಗಡೆ ಮಾಡಿತು, ಅದು ಎರಡು ಸಾಧನಗಳನ್ನು ಏಕಕಾಲದಲ್ಲಿ ಚಾರ್ಜ್ ಮಾಡಲು ಡ್ಯುಯಲ್ ಯುಎಸ್ಬಿ ಪೋರ್ಟ್‌ಗಳನ್ನು ಹೊಂದಿತ್ತು. ಇದೀಗ ಅದರ ಮುಂದುವರೆದ ಅಪ್ಡೇಟ್ ಆವೃತ್ತಿಯನ್ನ ಬಿಡುಗಡೆ ಮಾಡಿದೆ.

ಇನ್ನು ಈ ಚಾರ್ಜರ್ ವೇಗದ ಚಾರ್ಜಿಂಗ್ ಜೊತೆಗೆ, ಇಂಟೆಲಿಜೆಂಟ್ ಡಿಸ್ಟ್ರಿಬ್ಯೂಶನ್ ಫೀಚರ್ಸ್ ಅನ್ನು ಹೊಂದಿದೆ. ಇದು ಒವರ್ ಪವರ್ ಚಾರ್ಜಿಂಗ್ ಅನ್ನು ಕಂಟ್ರೋಲ್ ಮಾಡುತ್ತದೆ. ಜೊತೆಗೆ ತನ್ನದೇ ಆದ ತಾಪಮಾನವನ್ನು ನಿಯಂತ್ರಿಸುವ ಇಂಟರ್‌ಬಿಲ್ಟ್ ಚಿಪ್ ಬಳಸಿ ಪ್ರತಿ ಡಿವೈಸ್‌ಗೆ ಚಾರ್ಜಿಂಗ್ ಅನ್ನು ಡಿಸ್ಟ್ರಿಬ್ಯೂಟೆಡ್ ಮಾಡಲಿದೆ ಎಂದು ಹೇಳಲಾಗಿದೆ. ಇದಲ್ಲದೆ ಈ ಚಾರ್ಜರ್ ಐದು ಪಟ್ಟು ಸರ್ಕ್ಯೂಟ್ ಪ್ರೊಟೆಕ್ಷನ್ ಅನ್ನು ಹೊಂದಿದ್ದು, ಪ್ರೊಟೆಕ್ಷನ್ ಗಾಗಿ ಐಸಿ ಚಿಪ್ ಅನ್ನು ಸಹ ಹೊಂದಿದೆ, ಇದು ಓವರ್‌ಕರೆಂಟ್ ಪ್ರೊಟೆಕ್ಷನ್, ಶಾರ್ಟ್-ಸರ್ಕ್ಯೂಟ್ ಪ್ರೊಟೆಕ್ಷನ್ ಮತ್ತು ಓವರ್‌ವೋಲ್ಟೇಜ್ ಪ್ರೊಟೆಕ್ಷನ್ ಅನ್ನು ನೀಡುತ್ತದೆ.

ಅಲ್ಲದೆ ಈ ಕಾರ್ ಚಾರ್ಜರ್ ತನ್ನ ಪವರ್ ಪ್ರೊಟೆಕ್ಷನ್‌ನಲ್ಲಿ ಅತ್ಯುತ್ತಮವಾದ ಫಿಚರ್ಸ್ ಅನ್ನು ಹೊ0ದಿದೆ. ಇದು ವಿದ್ಯುತ್ಕಾಂತೀಯ ಹಸ್ತಕ್ಷೇಪ ಮತ್ತು ಅತಿಯಾದ ಬಿಸಿಯಿಂದ ರಕ್ಷಿಸುತ್ತದೆ. ಇದಲ್ಲದೆ, ಮೂನ್ಲೈಟ್ ವೈಟ್ ಎಲ್ಇಡಿ ಫಲಕವನ್ನು ಸಹ ಒಳಗೊಂಡಿದೆ. ಜೊತೆಗೆ ಮಿ ಕಾರ್ ಚಾರ್ಜರ್ ಪ್ರೊ 18w ಹಿತ್ತಾಳೆಯಿಂದ ಮಾಡಿದ ರಕ್ಷಾ ಕವಚವನ್ನು ಸಹ ಒಳಗೊಂಡಿದೆ. ಇನ್ನು ಭಾರತದಲ್ಲಿ ಮಿ ಕಾರ್ ಚಾರ್ಜರ್ ಪ್ರೊ 18w, 799 ರೂ ಬೆಲೆಯನ್ನ ಹೊಂದಿದ್ದು, ಮಿ.ಕಾಂ ವೆಬ್‌ಸೈಟ್ ಮೂಲಕ ಚಾರ್ಜರ್ ಖರೀದಿಗೆ ಲಭ್ಯವಿದೆ.


Click it and Unblock the Notifications




