ಭಾರತದಲ್ಲಿ ಶಿಯೋಮಿ ಮಿ ಕ್ರೌಡ್ ಫಂಡಿಂಗ್: ಹೇಗೆ ಕಾರ್ಯನಿರ್ವಹಿಸಲಿದೆ..? ತಿಳಿದರೆ ಒಳ್ಳೆಯದು..!

|

ಭಾರತೀಯ ಮಾರುಕಟ್ಟೆಯಲ್ಲಿ ಪ್ರತಿ ಬಾರಿಯೂ ಹೊಸದಾಗಿ ಯಾವುದಾರರು ಒಂದನ್ನು ಟ್ರೈ ಮಾಡುವ ಶಿಯೋಮಿ, ಈ ಬಾರಿ ನಡೆಯುತ್ತಿರುವ ಫ್ಯಾನ್ ಫೆಸ್ಟಿವಲ್‌ನಲ್ಲಿ Mi ಕ್ರೌಡ್ ಫಂಡಿಂಗ್ ಕಾರ್ಯಕ್ರಮವನ್ನು ಮೊದಲ ಬಾರಿಗೆ ಪರಿಚಯ ಮಾಡಿದೆ. ಈ ಮೂಲಕ ಮಾರುಕಟ್ಟೆಯಲ್ಲಿ ಹೊಸ ಸಾಧ್ಯತೆಯನ್ನು ತೋರಿಸಿಕೊಡಲು ಮುಂದಾಗಿದೆ. ಹೊಸ ಆವಿಷ್ಕಾರದ ವಸ್ತುಗಳನ್ನು ಇಲ್ಲಿ ಪ್ರಸ್ತುತ ಪಡಿಸಲಿದ್ದು, ಒಂದು ಪ್ರಮಾಣದ ಬಳಕೆದಾರರು ಅದನ್ನು ಕೊಂಡಕೊಳ್ಳಲು ಮುಂದಾದರೆ ಆ ವಸ್ತುವನ್ನು ತಯಾರಿಸಿ ಬಳಕೆದಾರರಿಗೆ ತಲುಪಿಸಲಾಗುತ್ತದೆ. ಇಲ್ಲವಾದರೆ ಹಣವನ್ನು ವಾಪಾಸ್ ಮಾಡಲಾಗುತ್ತದೆ.

ಭಾರತದಲ್ಲಿ ಶಿಯೋಮಿ ಮಿ ಕ್ರೌಡ್ ಫಂಡಿಂಗ್: ಹೇಗೆ ಕಾರ್ಯನಿರ್ವಹಿಸಲಿದೆ..?

ಜಾಗತಿಕವಾಗಿ ಕ್ರೌಡ್ ಫಂಡಿಂಗ್ ಕಾರ್ಯಕ್ರಮ ಸಾಕಷ್ಟು ಖ್ಯಾತಿಯನ್ನು ಗಳಿಸಿಕೊಂಡಿದ್ದು, ಅನೇಕ ಹೊಸ ಆವಿಷ್ಕಾರಗಳಿಗೆ ಸಾಕ್ಷಿಯಾಗಿದೆ. ಈ ಕ್ರೌಡ್ ಫಂಡಿಂಗ್ ಸ್ಟ್ರಾಟ್ ಆಪ್‌ಗಳಿಗೆ ಜೀವನ್ನು ನೀಡಿವೆ. ಈ ಹಿನ್ನಲೆಯಲ್ಲಿ ಶಿಯೋಮಿ ಭಾರತೀಯರಿಗೆ ಮೊದಲ ಬಾರಿಗೆ ಕ್ರೌಡ್ ಫಂಡಿಂಗ್ ಕಾರ್ಯಕ್ರಮವನ್ನು ಪರಿಚಯಿಸಿದ್ದು, ಮೊದಲಿಗೆ ಎರಡು ಉತ್ಪನ್ನಗಳನ್ನು ಮಾತ್ರವೇ ಈ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಿದ್ದು, ದಿನ ಕಳೆದಂತೆ ಬೇರೆ ವಸ್ತುಗಳನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ.

ಮೊದಲಿಗೆ ಶಿಯೋಮಿ Mi ಸೆಲ್ಫಿ ಸ್ಟಿಕ್ ಟ್ರೈಪಾಡ್ ವೊಂದನ್ನು ಪರಿಚಯ ಮಾಡಿದ್ದು, ರೂ.1099ಕ್ಕೆ ಇದ್ನು ಮಾರಾಟ ಮಾಡಲಿದ್ದು, ಇದರೊಂದಿಗೆ ಬ್ಲೂಟೂತ್ ಶಟರ್ ರಿಮೋಟ್ ಸಹ ದೊರೆಯಲಿದೆ ಎನ್ನಲಾಗಿದೆ. ಬ್ಲೂಟೂತ್ 3.0ವನ್ನು ಇದರಲ್ಲಿ ನೋಡಬಹುದಾಗಿದ್ದು, ಆಂಡ್ರಾಯ್ಡ್ 4.3 ಹಾಗೂ iOS 5.0ಗಿಂತಲೂ ಮೇಲ್ಪಟ್ಟ ಸಾಧನಗಳೊಂದಿಗೆ ಕಾರ್ಯನಿರ್ವಹಿಸಲು ಇದು ಶಕ್ತವಾಗಿದೆ.

ಭಾರತದಲ್ಲಿ ಶಿಯೋಮಿ ಮಿ ಕ್ರೌಡ್ ಫಂಡಿಂಗ್: ಹೇಗೆ ಕಾರ್ಯನಿರ್ವಹಿಸಲಿದೆ..?

ಮತ್ತೊಂದು ಬ್ಲೂಟೂತ್ ಆಡಿಯೋ ರೀಸಿವರ್ ಅನ್ನು ಕ್ರೌಡ್ ಫಂಡಿಂಗ್ ಕಾರ್ಯಕ್ರಮದಲ್ಲಿ ಶಿಯೋಮಿ ಪರಿಚಯ ಮಾಡಿದ್ದು, ರೂ.999ಕ್ಕೆ ಇದು ಮಾರಾಟವಾಗಲಿದೆ. ಇದು ವೈರ್ ಲೈಸ್ ಮ್ಯೂಸಿಕ್ ಕೇಳಲು ಸಹಾಯಕಾರಿಯಾಗಿದೆ. ಅಲ್ಲದೇ ಕರೆಗಳನ್ನು ಸ್ವೀಕರಿಸಲು, ವಾಲ್ಯೂಮ್ ಹೆಚ್ಚು ಕಡಿಮೆ ಮಾಡಲು ಇದರಲ್ಲಿ ಬಟನ್ ಅನ್ನು ನೀಡಲಾಗಿದೆ. ಇದು ಬ್ಲೂಟೂತ್ 4.2ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಹೈಡ್ ಫೋನ್ ಆಂಪ್ಲಿಪೈಯರ್ ಮಾದರಿಯಲ್ಲಿ ಕಾರ್ಯನಿರ್ವಹಿಸಲಿದೆ. ಇದರಲ್ಲಿ 97mAh ಬ್ಯಾಟರಿಯನ್ನು ಕಾಣಬಹುದಾಗಿದೆ.

ನೀವು ಈ ಎರಡು ವಸ್ತುಗಳನ್ನು ಖರೀದಿ ಮಾಡಬೇಕಾಗಿದೆ. ಸಪೋರ್ಟ್ ನೌ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕಾಗಿದೆ. ಆ ನಂತರದಲ್ಲಿ ಆನ್‌ಲೈನಿನಲ್ಲಿ ಪೇಮೆಂಟ್ ಮಾಡಬೇಕಾಗಿದೆ. ಅಲ್ಲದೇ ನೀವು ಪ್ರಾಜೆಕ್ಟ್ ಯಾವ ಹಂತದಲ್ಲಿದೆ ಎಂಬುದನ್ನು ನೀವು ನೋಡಬಹುದಾಗಿದೆ. ಅಲ್ಲದೇ ಪ್ರಾಡೆಕ್ಟ್ ತಯಾರಾಗಿ ಶಿಪಿಂಗ್ ಆಗುವ ಮುಂಚೆ ಬೇಕಿದ್ದರೇ ನೀವು ಕ್ಯಾನ್ಸಲ್ ಮಾಡುವ ಅವಕಾಶವನ್ನು ನೀಡಲಾಗಿದೆ.

Best Mobiles in India

English summary
Xiaomi Mi Crowdfunding Launched in India: Here's How it Works. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X