ಶಿಯೋಮಿ ಮಿ ಡಿಸ್‌ಪ್ಲೇ 1A ಮಾನಿಟರ್ ಬಿಡುಗಡೆ !
ಚೀನಾದ ಜನಪ್ರಿಯ ಸ್ಮಾರ್ಟ್‌ಫೋನ್ ತಯಾರಕ ಶಿಯೋಮಿ ತನ್ನ ಭಿನ್ನ ಮಾದರಿಯ ಸ್ಮಾರ್ಟ್‌ಫೋನ್‌ಗಳಿಂದ ಗುರುತಿಸಿಕೊಂಡಿದೆ. ಹಲವು ವೈವಿಧ್ಯಮಯ ಸ್ಮಾರ್ಟ್‌ಫೋನ್‌ಗಳನ್ನ ಪರಿಚಯಿಸಿ ಸೈ ಎನಿಸಿಕೊಂಡಿದೆ. ಹಲವು ಹೊಸತು ಎನ್ನುವ ಫೀಚರ್ಸ್‌ಗಳನ್ನ ಮಾರುಕಟ್ಟೆಗೆ ಪರಿಚಯಿಸಿದೆ. ಇಂತಹ ಶಿಯೋಮಿ ಸ್ಮಾರ್ಟ್‌ಫೋನ್ ಮಾತ್ರವಲ್ಲದೆ ಇತರೆ ಸ್ಮಾರ್ಟ್ ಪ್ರಾಡಕ್ಟ್‌ಗಳನ್ನು ಸಹ ಟೆಕ್ ವಲಯದಲ್ಲಿ ಬಿಡುಗಡೆ ಮಾಡಿದೆ. ಇವುಗಳಲ್ಲಿ ಶಿಯೋಮಿಯ ಮಿ ಲ್ಯಾಪ್‌ಟಾಪ್, ಮಿ ಡಿಸ್‌ಪ್ಲೇ, ಮಿ ಟ್ಯಾಬ್‌ಗಳು ಕೂಡ ಸೇರಿವೆ. ಸದ್ಯ ಇದೀಗ ಹೊಸ ಮಾದರಿಯ ಡಿಸ್‌ಪ್ಲೇಯನ್ನ ಬಿಡುಗಡೆ ಮಾಡಿದೆ.

ಹೌದು, ಜನಪ್ರಿಯ ಸ್ಮಾರ್ಟ್‌ಫೋನ್ ಕಂಪೆನಿ ಶಿಯೋಮಿ ತನ್ನ ಹೊಸ ಮಿ ಡಿಸ್‌ಪ್ಲೇ 1A ಮಾನಿಟರ್ ಅನ್ನು ಬಿಡುಗಡೆ ಮಾಡಿದೆ. ಈ ಡಿಸ್‌ಪ್ಲೇಯು ಹೊಸ ಆಕರ್ಷಕ ರೂಪದಲ್ಲಿ ಬಂದಿದೆ ಎಂದು ಹೇಳಲಾಗ್ತಿದೆ. ಹಾಗೇ ನೋಡುವುದಾದರೆ ಶಿಯೋಮಿ ಕಂಪೆನಿ ಕೆಲವು ತಿಂಗಳುಗಳ ಹಿಂದೆ, ತನ್ನದೇ ಆದ ಎರಡು ಹೊಸ ಡಿಸ್‌ಪ್ಲೇ ಮಾದರಿಗಳನ್ನ ಬಿಡುಗಡೆ ಮಾಡಿತ್ತು. ಅವುಗಳಲ್ಲಿ ಒಂದು 23.8-ಇಂಚಿನ ಶಿಯೋಮಿ ಫ್ಲಾಟ್ ಡಿಸ್‌ಪ್ಲೇ ಮತ್ತು ಎರಡನೆಯದು 34 ಇಂಚಿನ ಬಾಗಿದ ಡಿಸ್‌ಪ್ಲೇಯನ್ನು ಪರಿಚಯಿಸಿತ್ತು ಇದೀಗ 23.8 ಇಂಚಿನ ಫ್ಲಾಟ್ ಸ್ಕ್ರೀನ್ ಡಿಸ್‌ಪ್ಲೇಯನ್ನು ಬಿಡುಗಡೆ ಮಾಡಿದೆ. ಅಷ್ಟಕ್ಕೂ ಈ ಡಿಸ್‌ಪ್ಲೇಯಲ್ಲಿರುವ ವಿಶೇಷತೆಗಳೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿರಿ.

ಶಿಯೋಮಿ ಕಂಪೆನಿ ಮಿ ಡಿಸ್‌ಪ್ಲೇ 1A ಮಾನಿಟರ್ ಇದು 1920 x 1080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಹೊಂದಿದ್ದು, 23.8-ಇಂಚಿನ ಐಪಿಎಸ್ ಫ್ಲಾಟ್ ಸ್ಕ್ರೀನ್ ಅನ್ನು ಒಳಗೊಂಡಿದೆ. ಇನ್ನು ಈ ಡಿಸ್‌ಪ್ಲೇಯು 16:9 ರಚನೆಯ ಅನುಪಾತವನ್ನು ಹೊಂದಿದೆ. ಅಲ್ಲದೆ 178-ಡಿಗ್ರಿ ವ್ಯೂವ್ ಆಂಗಲ್ ಅನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ ಮಾನಿಟರ್ ಸಾಮಾನ್ಯ ವಿನ್ಯಾಸವನ್ನು ಹೊಂದಿದೆ. ಅಲ್ಲದೆ ಇದರಲ್ಲಿ ಮೂರು ಕಡೆಯ ಅಂಚುಗಳು ಕಿರಿದಾದ ಬೆಜೆಲ್ಸ್ ಮತ್ತು ಅಗಲವಾದ ಅಂಚನ್ನು ಹೊಂದಿರುತ್ತವೆ.

ಇನ್ನು ಈ ಡಿಸ್‌ಪ್ಲೇ 60Hz ರಿಫ್ರೆಶ್ ರೇಟ್ ಅನ್ನು ಮಾತ್ರ ಬೆಂಬಲಿಸುವುದರಿಂದ ಇದು ಗೇಮಿಂಗ್‌ಗೆ ಸೂಕ್ತವಲ್ಲ. ಇದಲ್ಲದೆ ಈ ಡಿಸ್‌ಪ್ಲೇ ಮಾನಿಟರ್ ವೀಡಿಯೊ ಫ್ಲ್ಯಾಷ್ ಇಲ್ಲದೆ ಕಡಿಮೆ ನೀಲಿ ಬೆಳಕನ್ನು ಮಾನಿಟರ್ ಸಹ ಬೆಂಬಲಿಸುತ್ತದೆ. ಈ ಡಿವೈಸ್‌ನಲ್ಲಿ ಬ್ರೈಟ್‌ನೆಶ್ ಅನ್ನು ಹೊಂದಿಸಲು ಇಂಟೆಲಿಜೆಂಟ್ ಡಿಸಿ ಟೆಕ್ನಾಲಜಿಯನ್ನ ಹೊಂದಿದೆ ಎಂದು ಕಂಪನಿ ಹೇಳಿಕೊಂಡಿದೆ. ಜೊತೆಗೆ ಇದರಲ್ಲಿ ಬ್ರೈಟ್‌ನೆಶ್ 250 cd/ m², ಕಾಂಟ್ರಾಸ್ಟ್ ರೇಶಿಯೋ 1000: 1, ಮತ್ತು ಪ್ರತಿಕ್ರಿಯೆ ಸಮಯ 6mm ಎಂದು ಗಿಜ್ಚಿನಾ ವರದಿ ಮಾಡಿದೆ.

ಇದಲ್ಲದೆ, ಶಿಯೋಮಿ ಮಿ ಡಿಸ್‌ಪ್ಲೇ 1a ಮೂರು-ಮೈಕ್ರೋ ಎಡ್ಜ್ ಇಂಟಿಗ್ರೇಟೆಡ್ ಪ್ಯಾನಲ್ ವಿನ್ಯಾಸದೊಂದಿಗೆ ಬರುತ್ತದೆ. ಇದು ಹೆಚ್ಚುವರಿಯಾಗಿ, ಉತ್ತಮ ದೃಶ್ಯ ಅನುಭವಕ್ಕಾಗಿ ಮಲ್ಟಿ ಸ್ಕ್ರೀನ್ ಗಳನ್ನ ಸ್ಟಿಚ್ ಮಾಡುವ ಅವಕಾಶ ನೀಡಲಾಗಿದೆ. ಸದ್ಯ ಈ ಡಿಸ್‌ಪ್ಲೇಯನ್ನು ಆಸಕ್ತ ಖರೀದಿದಾರರು ಶಿಯೋಮಿ ಇಂಡಿಯಾದ ಅಧಿಕೃತ ವೆಬ್‌ಸೈಟ್ ಮೂಲಕ ಹಾಗೂ ಶಿಯೋಮಿ ಮಾಲ್‌ಗಳಲ್ಲಿ ಖರೀದಿಸಬಹುದಾಗಿದೆ. ಇನ್ನು ಇದರ ಬೆಲೆ RMB 699 ಆಗಿದ್ದು, ಭಾರತದಲ್ಲಿ ಸುಮಾರು 7,560 ರೂ.ಆಗಿದೆ.


Click it and Unblock the Notifications




