Subscribe to Gizbot

2 ದಿನಗಳ ಶಿಯೋಮಿ 'ಮಿ ಫ್ಯಾನ್ ಫೆಸ್ಟಿವಲ್' ಆರಂಭ!..ಗ್ರಾಹಕರಿಗೆ ಬಂಪರ್ ಆಫರ್ಸ್!!

Written By:

ಭಾರತದಲ್ಲಿ ಅತಿ ಹೆಚ್ಚು ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡುತ್ತಿರುವ ಶಿಯೋಮಿ ಮೊಬೈಲ್ ಕಂಪೆನಿ ಎರಡು ದಿನಗಳ 'ಮಿ ಫ್ಯಾನ್ ಫೆಸ್ಟಿವಲ್' ಅನ್ನು ಆಯೋಜಿಸಿದೆ. ಏಪ್ರಿಲ್ 5 ಮತ್ತು 6 ರಂದು 'ಮಿ ಫ್ಯಾನ್ ಫೆಸ್ಟಿವಲ್' ಆಯೋಜನೆಯಾಗಿದ್ದು, ಶಿಯೋಮಿಯ ಎಲ್ಲಾ ಡಿವೈಸ್‌ಗಳ ಮೇಲೆ ಭರ್ಜರಿ ರಿಯಾಯಿತಿಯನ್ನು ಘೋಷಿಸಲಾಗಿದೆ.

ಎರಡು ದಿನಗಳ 'ಮಿ ಫ್ಯಾನ್ ಫೆಸ್ಟಿವಲ್'ನಲ್ಲಿ ಮಾರುಕಟ್ಟೆಯಲ್ಲಿ ಭಾರೀ ಹವಾ ಎಬ್ಬಸಿರುವ ರೆಡ್‌ಮಿ ನೋಟ್ 5, ರೆಡ್‌ಮಿ ನೋಟ್ 5 ಪ್ರೊ ಮತ್ತು ಶಿಯೋಮಿ ಸ್ಮಾರ್ಟ್ ಟಿವಿಗಳನ್ನು ಫ್ಲಾಶ್‌ಸೇಲ್‌ಗೆ ಇಡಲಾಗಿದ್ದು, ಮಿ ಮಿಕ್ಸ್ ಮತ್ತು ರೆಡ್‌ ಮಿ 4 ಹಾಗೂ ರೆಡ್‌ ಮಿ ವೈ1 ಸ್ಮಾರ್ಟ್‌ಫೋನ್‌ಗಳ ಮೇಲೆ 500 ರಿಂದ 3000 ರೂ.ವರೆಗೂ ಡಿಸ್ಕೌಂಟ್ ನೀಡಲಾಗಿದೆ.

2 ದಿನಗಳ ಶಿಯೋಮಿ 'ಮಿ ಫ್ಯಾನ್ ಫೆಸ್ಟಿವಲ್' ಆರಂಭ!..ಗ್ರಾಹಕರಿಗೆ ಬಂಪರ್ ಆಫರ್ಸ್!!

ಗ್ರಾಹಕರು ಕ್ಯಾಪೆನಿಂಗ್‌ನಲ್ಲಿರುವ ಶಿಯೋಮಿ ಡಿವೈಸ್‌ಗಳನ್ನು ಲೈಕ್ ಮಾಡಿ ಸ್ಮೇಹಿತರನ್ನು ಇನ್‌ವೈಟ್ ಮಾಡಿದರೆ ಸ್ಮಾರ್ಟ್‌ಫೋನ್‌ಗಳ ಮೇಲೆ ಹೆಚ್ಚುವರಿ ರಿಯಾಯಿತಿಯನ್ನು ಸಹ ಪಡೆಯಬಹುದಾಗಿದೆ. ಹಾಗಾದರೆ, ಶಿಯೋಮಿಯ ಎರಡು ದಿನಗಳ 'ಮಿ ಫ್ಯಾನ್ ಫೆಸ್ಟಿವಲ್' ಏನೆಲ್ಲಾ ಆಫರ್ಸ್ ಹೊಂದಿದೆ? ಗ್ರಾಹಕರಿಗೆ ಏನೆಲ್ಲಾ ಲಾಭ ಎಂಬುದನ್ನು ಮುಂದೆ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹೆಡ್‌ಫೋನ್‌ಗಳ ಮೇಲೆ ಡಿಸ್ಕೌಂಟ್ಸ್!!

ಹೆಡ್‌ಫೋನ್‌ಗಳ ಮೇಲೆ ಡಿಸ್ಕೌಂಟ್ಸ್!!

ಶಿಯೋಮಿ ಸ್ಮಾರ್ಟ್‌ಫೋನ್‌fಗಳನ್ನು ಈಗಾಗಲೇ ಖರಿದಿಸಿದವರಿಗಾಗಿಯೂ ಶಿಯೋಮಿ ಭರ್ಜರಿ ಆಫರ್ ನೀಡಿದೆ. ಶಿಯೋಮಿ ಸ್ಮಾರ್ಟ್‌ಫೋನ್‌ಗಳಿಗೆ ಹೊಂದಾಣಿಕೆಯಾಗುವ ಶಿಯೋಮಿ ಹೆಡ್‌ಫೋನ್‌ಗಳ ಮೇಲೆ 300 ರೂಪಾಯಿ ಡಿಸ್ಕೌಂಟ್ಸ್ ನೀಡಿದೆ. ಹಾಗಾಗಿ, ಈಗಾಗಲೇ ಶಿಯೋಮಿ ಫೋನ್ ಅನ್ನು ಖರೀದಿಸಿದ್ದರೆ ಹೆಡ್‌ಫೋನ್ ಖರೀದಿಸಲು ಇದು ಒಳ್ಳೆಯ ಸಮಯವಾಗಿದೆ.

ಶಿಯೋಮಿ ಬ್ಯಾಕ್‌ಪ್ಯಾಕ್!

ಶಿಯೋಮಿ ಬ್ಯಾಕ್‌ಪ್ಯಾಕ್!

ಭಾರತಕ್ಕೆ ಶಿಯೋಮಿ ಪರಿಚಯಸಿರುವ ಮೂರು ಬ್ಯಾಗ್‌ಗಳನ್ನು ಎರಡು ದಿನಗಳ 'ಮಿ ಫ್ಯಾನ್ ಫೆಸ್ಟಿವಲ್' ಅಲ್ಲಿ ಖರೀದಿಸಬಹುದಾಗಿದೆ. ಮಿ ಬ್ಯಸಿನೆಸ್ ಬ್ಯಾಕ್‌ಪ್ಯಾಕ್ ಬೆಲೆ 999 ರೂ.ಗಳಾಗಿದ್ದರೆ, ಮಿ ಟ್ರಾವಲ್ ಬ್ಯಾಕ್‌ಪ್ಯಾಕ್ ಹಾಗೂ ಮಿ ಸಿಟಿ ಬ್ಯಾಕ್‌ಪ್ಯಾಕ್ ಬ್ಯಾಗ್‌ಗಳ ಬೆಲೆ ಕ್ರಮವಾಗಿ 1,999 ಹಾಗೂ 1,599 ರೂಪಾಯಿಗಳಾಗಿವೆ.

ನೋಟ್ 5 ಪ್ರೊ ಖರೀದಿಗೆ ಉಚಿತ ಹೆಡ್‌ಫೋನ್!!

ನೋಟ್ 5 ಪ್ರೊ ಖರೀದಿಗೆ ಉಚಿತ ಹೆಡ್‌ಫೋನ್!!

ಶಿಯೋಮಿ ರೆಡ್ ಮಿ ನೋಟ್ 5 ಸ್ಮಾರ್ಟ್‌ಪೋನ್ ಖರೀದಿಗೆ ಶಿಯೋಮಿ 399 ರೂಪಾಯಿ ಬೆಲೆ ಹೊಂದಿರುವ ಹೆಡ್‌ಫೋನ್ ಅನ್ನು ಉಚಿತವಾಗಿ ನಿಡುತ್ತಿದೆ. ಇದೇ ಮೊದಲ ದಾರಿ ಶಿಯೋಮಿ ಸ್ಮಾರ್ಟ್‌ಫೋನ್ ಜೊತೆಗೆ ಹೆಡ್‌ಫೋನ್ ಅನ್ನು ಉಚಿತವಾಗಿ ನೀಡುತ್ತಿದ್ದು, ರೆಡ್ ಮಿ ನೋಟ್ 5 ಸ್ಮಾರ್ಟ್‌ಪೋನ್ ಖರೀದಿದಾರರಿಗೆ ಸಿಹಿಸುದ್ದಿಯಾಗಿದೆ.

ಅಸೆಸರಿಸ್ ಕಾಂಬೋಸ್!!

ಅಸೆಸರಿಸ್ ಕಾಂಬೋಸ್!!

ಶಿಯೋಮಿ ಕಂಪೆನಿ ಅಸೆಸರಿಸ್ ಕಾಂಬೋಸ್ ಅನ್ನು ಪರಿಚಯಿಸಿದೆ. ಮಿ ಬ್ಯಾಕ್‌ಪ್ಯಾಕ್ ಮತ್ತು ಸೆಲ್ಫಿ ಸ್ಟಿಕ್‌ ಅನ್ನು ಒಟ್ಟಾಗಿ ಖರೀದಿಸಿದರೆ ಕೇವಲ 2498 ರೂಪಾಯಿಗಳಿಗೆ ಎರಡೂ ವಸ್ತುಗಳು ದೊರೆಯಲಿವೆ. ಹೀಗೆಯೇ, ಮಿ ಬ್ಯಾಂಡ್ 2 ಹಾಗೂ ವಿಆರ್ ಪ್ಲೇ ಒಟ್ಟಾಗಿ ಖರೀದಿಸಿದರೆ ಕೇವಲ 2898 ರೂಪಾಯಿಗಳಿಗೆ ದೊರೆಯಲಿವೆ.

40 ಲಕ್ಷ ಶಿಯೋಮಿ ಕೂಪನ್ಸ್!!

40 ಲಕ್ಷ ಶಿಯೋಮಿ ಕೂಪನ್ಸ್!!

ಈ ಬಾರಿ ಶಿಯೋಮಿ ರೂ. 40 ಲಕ್ಷ ಮೌಲ್ಯದ ಶಿಯೋಮಿ ಕೂಪನ್‌ಗಳನ್ನು ಅಭಿಮಾನಿಗಳಿಗೆ ನೀಡಲು ಮುಂದಾಗಿದೆ. ಇಬ್ಬರು ಸ್ನೇಹಿತರನ್ನು ಇನ್‌ವೈಟ್ ಮಾಡಿದರೆ ರೂ.300 ಕೂಪನ್ ಪಡೆಯಬಹುದಾಗಿದೆ. ಮೋರ್ ಲೈಕ್ ಮೋರ್ ಡಿಸ್ಕೌಂಟ್ಸ್ ಅಡಿಯಲ್ಲಿ ಶಿಯೋಮಿ ಸ್ಮಾರ್ಟ್‌ಫೋನ್‌ಗಳ ಮೇಲೆ ಡಿಸ್ಕೌಂಟ್ಸ್ ಅನ್‌ಲಾಕ್ ಮಾಡಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Xiaomi Mi Fan Festival: Free Earphones with Redmi Note 5 Pro and Discounts on Mi Mix 2, Mi Max 2 and Redmi 4. to know more visit to kannad. gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot