Subscribe to Gizbot

ಬೆಂಗಳೂರಲ್ಲೇ ತೆರೆಯಲಿದೆ ಶಿಯೋಮಿ ಮಿ ಹೋಮ್: ವಿಶೇಷ ಏನು ಅಂದ್ರಾ..?

Written By:

ಸದ್ಯ ಸ್ಮಾರ್ಟ್‌ಫೋನ್ ಲೋಕದಲ್ಲಿ ಸಖತ್ ಸದ್ದು ಮಾಡುತ್ತಿರುವ ಚೀನಾ ಮೂಲದ ಮೊಬೈಲ್ ತಯಾರಕ ಶಿಯೋಮಿ ಕಂಪನಿಯೂ ಭಾರತೀಯರ ಮನಗೆದ್ದಿದೆ. ಕೇವಲ ಆನ್‌ಲೈನ್ ಮಾರಾಟಕ್ಕೆ ಮಾತ್ರ ಹೆಚ್ಚಿನ ಆದ್ಯತೆ ನೀಡುತ್ತಿದ್ದ ಶಿಯೋಮಿ, ಇದೇ ಮೊದಲ ಬಾರಿಗೆ ಆಫ್‌ಲೈನ್ ಮಾರುಕಟ್ಟೆ ಕಡೆಗೂ ಗಮನ ಹರಿಸಿದ್ದು, ಇದೇ ಮೊದಲ ಭಾರಿಗೆ ಭಾರತದಲ್ಲಿ ಅಧಿಕೃತ ಸ್ಟೋರ್ ಓಪನ್ ಮಾಡುತ್ತಿದೆ.

ಶಿಯೋಮಿ ಸಹ ನಮ್ಮ ಬೆಂಗಳೂರಿನಲ್ಲೇ ಮೊದಲ 'ಶಿಯೋಮಿ ಮಿ ಹೋಮ್' ತೆರೆಯುತ್ತಿರುವುದು ಹೆಮ್ಮೆಯ ಸಂಗತಿಯಾಗಿದ್ದು, ಇ -ಕಾಮರ್ಸ್ ಬಿಟ್ಟು ಸಾಮಾನ್ಯ ಮಾರುಕಟ್ಟೆಗೆ ಶಿಯೋಮಿ ಪ್ರವೇಶ ಪಡೆಯುತ್ತಿರುವುದು ಇತರೆ ಕಂಪನಿಗಳ ನಡುಕಕ್ಕೆ ಕಾರಣವಾಗಿದ್ದರೇ, ಗ್ರಾಹಕರಿಗೆ ಇದು ಸಂತೋಷದ ವಿಷಯವಾಗಿದೆ. ಅಂತರ್ಜಾಲದ ತಿಳವಳಿಕೆ ಇಲ್ಲದಿದ್ದವರು ಶಿಯೋಮಿ ಫೋನ್ ಖರೀದಿಸುವುದು ಈಗ ಸುಲಭವಾಗಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
'ಶಿಯೋಮಿ ಮಿ ಹೋಮ್' ವಿಶೇಷತೆ:

'ಶಿಯೋಮಿ ಮಿ ಹೋಮ್' ವಿಶೇಷತೆ:

ಚೀನಾ ಮೂಲದ ವಿವೋ ಮತ್ತು ಒಪ್ಪೋ ಸ್ಮಾರ್ಟ್‌ಫೋನ್‌ಗಳು ಸದ್ಯ ಭಾರತೀ ಆಫ್‌ಲೈನ್ ಮಾರುಕಟ್ಟೆಯಲ್ಲಿ ಭಾರಿ ಹೂಡಿಕೆಯನ್ನು ಮಾಡಿದ್ದು, ಉತ್ತಮ ಲಾಭವನ್ನು ಕಾಣುತ್ತಿವೆ. ಇದರಿಂದ ಪ್ರೇರಿತವಾಗಿರುವ ಶಿಯೋಮಿ ತನ್ನದೇ ಸ್ಟೋರ್‌ಗಳನ್ನು ತೆರೆಯಲು ಮುಂದಾಗಿದೆ. 'ಶಿಯೋಮಿ ಮಿ ಹೋಮ್' ನಲ್ಲಿ ಶಿಯೋಮಿ ಎಲ್ಲಾ ವಸ್ತುಗಳು ಮಾರಾಟವಾಗಲಿದೆ ಎನ್ನಲಾಗಿದೆ.

'ಶಿಯೋಮಿ ಮಿ ಹೋಮ್'ನಲ್ಲಿ ಏನೇನು ದೊರೆಯಲಿದೆ:

'ಶಿಯೋಮಿ ಮಿ ಹೋಮ್'ನಲ್ಲಿ ಏನೇನು ದೊರೆಯಲಿದೆ:

ಶಿಯೋಮಿ ಸ್ಟೋರ್‌ನಲ್ಲಿ ಶಿಯೋಮಿ ಸ್ಮಾರ್ಟ್‌ಫೋನ್‌ಗಳು, ಮೊಬೈಲ್ ಆಕ್ಸ್‌ಸಿರಿಸ್, ಮಿ ಪ್ಯೂರಿಫೈಯರ್, ಮಿ ಬಾಡ್, ಹಾಗೂ ಶಿಯೋಮಿ ತಯಾರಿಸುವ ಎಲ್ಲಾ ವಸ್ತುಗಳು ಒಂದೇ ಸೂರಿನಡಿಯಲ್ಲಿ ದೊರೆಯಲಿದೆ.

ಚೀನಾ ಬಿಟ್ಟು ಭಾರತದಲ್ಲಿ ಮೊದಲ ಸ್ಟೋರ್:

ಚೀನಾ ಬಿಟ್ಟು ಭಾರತದಲ್ಲಿ ಮೊದಲ ಸ್ಟೋರ್:

ಶಿಯೋಮಿ ಚೀನಾ ಮೂಲದ ಕಂಪನಿಯಾಗಿದ್ದರು 'ಶಿಯೋಮಿ ಮಿ ಹೋಮ್' ಸ್ಟೋರ್‌ ಅನ್ನು ತನ್ನ ದೇಶದಲ್ಲಿ ಬಿಟ್ಟು ಮೊದಲ ಭಾರಿಗೆ ಭಾರತದಲ್ಲಿ ತೆರೆಯುತ್ತಿದೆ. ಅದರಲ್ಲಿಯೂ ಐಟಿ ಸಿಟಿ ಬೆಂಗಳೂರಿನಲ್ಲಿ ಎನ್ನುವುದು ವಿಶೇಷ. ಅಲ್ಲದೇ ಭಾರತದಲ್ಲಿ ಸುಮಾರು 80 ಸ್ಟೋರ್‌ಗಳನ್ನು ಇದು ತೆರೆಯಲು ಪ್ಲಾನ್ ಮಾಡಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Read more about:
English summary
Xiaomi is planning on opening its first Mi Home store in the country. The first Mi Home Store will come up at Bengaluru. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot