Just In
- 1 hr ago
ರೆಡ್ಮಿ ಮೊಬೈಲ್ ಖರೀದಿಸುವ ಗ್ರಾಹಕರೇ, ಅವಸರ ಬೇಡಾ!..ಇಲ್ಲಿ ಗಮನಿಸಿ!
- 16 hrs ago
ಮೆಸೆಂಜರ್ಗಾಗಿ ಕೆಲವು ಫೀಚರ್ಸ್ ಪರಿಚಯಿಸಿದ ಮೆಟಾ; ಬಳಕೆದಾರರಿಗೆ ಸಾಕಷ್ಟು ಅನುಕೂಲ!
- 16 hrs ago
ಟೆಲಿಗ್ರಾಮ್ನಲ್ಲಿರುವ ಈ ಆಯ್ಕೆಯು ವಾಟ್ಸಾಪ್ಗಿಂತ ಭಿನ್ನವಾಗಿದೆ! ಇದರ ಲಾಭವೇನು?
- 18 hrs ago
ಸ್ಪ್ಯಾಮ್ ಕರೆಗಳನ್ನು ನಿರ್ಬಂಧಿಸುವುದು ಹೇಗೆ ಗೊತ್ತಾ?..ಈ ಕ್ರಮಗಳನ್ನು ಅನುಸರಿಸಿ!
Don't Miss
- News
ಗಣರಾಜ್ಯೋತ್ಸವ 2023; ಕರ್ನಾಟಕ 'ನಾರಿ ಶಕ್ತಿ' ಸ್ತಬ್ಧಚಿತ್ರದ ವಿಶೇಷತೆಗಳು
- Finance
ಗಮನಿಸಿ: ಆಧಾರ್ ವೆರಿಫಿಕೇಶನ್ಗೆ ಯುಐಡಿಎಐ ಹೊಸ ಮಾರ್ಗಸೂಚಿ
- Movies
Pathaan Twitter Review: 'ಪಠಾಣ್' ಗೆದ್ನಾ, ಸೋತ್ನಾ?
- Sports
SA 20: ಎಸ್ಎ 20 ಲೀಗ್ನ ಮೊದಲ ಶತಕ ಗಳಿಸಿದ ಆರ್ಸಿಬಿ ನಾಯಕ ಫಾಫ್ ಡು ಪ್ಲೆಸಿಸ್
- Lifestyle
Horoscope Today 25 Jan 2023: ಬುಧವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Automobiles
ಈ ವರ್ಷವೇ ಖರೀದಿಗೆ ಸಿಗಲಿರುವ ಟಾಪ್ 5 ಎಲೆಕ್ಟ್ರಿಕ್ ಕಾರುಗಳು
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
12,999 ರೂ.ಗೆ ಲಭ್ಯವಿದ್ದ 'ಮಿ ಎಲ್ಇಡಿ ಟಿವಿ 4ಎ ಪ್ರೊ (32)' ಬೆಲೆ ಮತ್ತೆ ಇಳಿಕೆ!
ಭಾರತೀಯರಿಗೆ ಶಿಯೋಮಿ ಕಂಪೆನಿ ನೀಡಿರುವ ಬಿಗ್ ಸರ್‌ಪ್ರೈಸ್ ಮಿ ಎಲ್ಇಡಿ ಟಿವಿ 4ಎ ಪ್ರೊ' ಸ್ಮಾರ್ಟ್‌ಟಿವಿ ಮತ್ತೊಮ್ಮೆ ಬೆಲೆ ಕಳೆದುಕೊಂಡಿದೆ. ಭಾರತದ ಮೊಬೈಲ್ ಮಾರುಕಟ್ಟೆಯಷ್ಟೇ ಅಲ್ಲದೆ ಸ್ಮಾರ್ಟ್ ಟಿವಿ ಮಾರುಕಟ್ಟೆಯನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳುತ್ತಿರುವ ಶಿಯೋಮಿ, 12,999 ರೂಪಾಯಿಗಳಿಗೆ ಮಿ ಎಲ್ಇಡಿ ಟಿವಿ 4ಎ ಪ್ರೊ' ಟಿವಿಯನ್ನು ಬಿಡುಗಡೆ ಮಾಡಿತ್ತು. 32 ಇಂಚಿನ ಈ ಅತ್ಯುತ್ತಮ ಸ್ಮಾರ್ಟ್‌ಟಿವಿ ಅತ್ಯಂತ ಹೆಚ್ಚು ಸೇಲ್ ಆದ ಸ್ಮಾರ್ಟ್‌ಟಿವಿಗಳಲ್ಲಿ ಒಂದಾಗಿತ್ತು.
ಆದರೆ, ಇದೀಗ ಈ ಸ್ಮಾರ್ಟ್‌ಟಿವಿ ಕೂಡ ಮತ್ತೆ ಬೆಲೆ ಕಳೆದುಕೊಂಡಿದೆ. ಅಲ್ಟ್ರಾ ಬ್ರೈಟ್ ಹೆಚ್‌ಡಿ ರೆಡಿ ಟಿವಿಯಾಗಿರುವ 'ಮಿ ಎಲ್ಇಡಿ ಟಿವಿ 4ಎ ಪ್ರೊ' ದೆ. ಒನ್ ರಿಮೋಟ್, 64 ಬಿಟ್ ಕ್ವಾಡ್ ಕೋರ್ ಪ್ರೊಸೆಸರ್, 20 ವ್ಯಾಟ್ ಪವರ್‌ಫುಲ್ ಪ್ರೊಸೆಸರ್ ಸೇರಿದಂತೆ ಹಲವು ಅತ್ಯುತ್ತಮ ಫೀಚರ್ಸ್‌ಗಳನ್ನು ಹೊಂದಿರುವ 'ಮಿ ಎಲ್ಇಡಿ ಟಿವಿ 4ಎ ಪ್ರೊ' ಸ್ಮಾರ್ಟ್‌ಟಿವಿ ಇದೀಗ ಕೇವಲ 12,499 ರೂ. ಆಗಿದೆ. ಈ ಮೂಲಕ ಅತ್ಯಂತ ಕಡಿಮೆ ಬೆಲೆಯ ಅತ್ಯುತ್ತಮ ಸ್ಮಾರ್ಟ್‌ಟಿವಿಗಳಲ್ಲೇ ಮೊದಲ ಸ್ಥಾನದಲ್ಲಿ ಈ ಟಿವಿ ಕಂಡುಬಂದಿದೆ.

1366 x 768 ರೆಸಲ್ಯೂಶನ್ ಸಾಮರ್ಥ್ಯದಲ್ಲಿ 180 ಡಿಗ್ರಿ ವ್ಯೂವಿಂಗ್ ಆಂಗಲ್ ಹೊಂದಿರುವ ಸ್ಮಾರ್ಟ್‌ಟಿವಿ 'ಮಿ ಎಲ್ಇಡಿ ಟಿವಿ 4ಎ ಪ್ರೊ' 60Hz ರಿಫ್ರೆಶ್ ರೇಡ್ ಹೊಂದಿದೆ. ಹಾಗಾದರೆ, ಅತ್ಯಂತ ಕಡಿಮೆ ಬೆಲೆಯಲ್ಲಿ ಭಾರತದ ಟಿವಿ ಮಾರುಕಟ್ಟೆಗೆ ಕಾಲಿಟ್ಟಿರುವ ಶಿಯೋಮಿಯ ನೂತನ 'ಮಿ ಎಲ್ಇಡಿ ಟಿವಿ 4ಎ ಪ್ರೊ' ಸ್ಮಾರ್ಟ್‌ಟಿವಿ ಹೇಗಿದೆ?, ಈ ಸ್ಮಾರ್ಟ್‌ಟಿವಿಯ ವಿಶೇಷತೆಗಳು ಯಾವುವು? ಈ ಸ್ಮಾರ್ಟ್‌ಟಿವಿ ಖರೀದಿಸಲು ಇರುವ ಕಾರಣಗಳು ಏನು ಎಂಬುದನ್ನು ಮುಂದೆ ಓದಿ ತಿಳಿಯಿರಿ.

'ಮಿ ಎಲ್ಇಡಿ ಟಿವಿ 4ಎ ಪ್ರೊ' ಡಿಸ್‌ಪ್ಲೇ ಹೇಗಿದೆ?
ಶಿಯೋಮಿ 'ಮಿ ಎಲ್ಇಡಿ ಟಿವಿ 4ಎ ಪ್ರೊ ಸ್ಮಾರ್ಟ್‌ಟಿವಿ '1366 x 768 ರೆಸಲ್ಯೂಶನ್ ಸಾಮರ್ಥ್ಯದಲ್ಲಿ 180 ಡಿಗ್ರಿ ವ್ಯೂವಿಂಗ್ ಆಂಗಲ್ ಹೊಂದಿದೆ. 32 ಇಂಚಿನ ಡಿಸ್‌ಪ್ಲೇಯನ್ನು ಹೊಂದಿರುವ ಈ ಟಿವಿಯ ಡಿಸ್‌ಪ್ಲೇ ಅಲ್ಟ್ರಾ ಬ್ರೈಟ್ ಹೆಚ್‌ಡಿ ರೆಡಿ ಡಿಸ್‌ಪ್ಲೇಯಾಗಿದೆ. ಇನ್ನು 435mm ಎತ್ತರದ (478mm ಬೇಸ್ ಎತ್ತರ) ಈ ಟಿವಿ 3.9 ಕೆಜಿ ತೂಗುತ್ತಿದ್ದು, ಟಿವಿಯು 732mm ನಷ್ಟು ಅಗಲವಾಗಿದೆ.

'ಮಿ ಎಲ್ಇಡಿ ಟಿವಿ 4ಎ ಪ್ರೊ' ಪ್ರೊಸೆಸರ್!
7ನೇ ತಲೆಮಾರಿನ ಇಮೇಜಿಂಗ್ ಎಂಜಿನ್ ಹೊಂದಿರುವ ಅಮ್ಲಾಜಿಕ್ 64-ಬಿಟ್ ಪ್ರೊಸೆಸರ್ ಮತ್ತು ಆಂಡ್ರಾಯ್ಡ್ ಟಿವಿ 8.1 ಮೂಲಕ 'ಮಿ ಎಲ್ಇಡಿ ಟಿವಿ 4ಎ ಪ್ರೊ ಸ್ಮಾರ್ಟ್‌ಟಿವಿ ಕಾರ್ಯನಿರ್ವಹಣೆ ನೀಡಲಿದೆ. ಹಾಗೆಯೇ, ಹಿಂದಿನ ಮಿ ಸ್ಮಾರ್ಟ್‌ಟಿವಿಗಳಂತೆ ಈ 32 ಇಂಚಿನ ಹೊಸ ಮಿ ಎಲ್ಇಡಿ ಟಿವಿ 4ಎ ಪ್ರೊ ನಲ್ಲೂ ಬ್ಲೂಟೂತ್ ರಿಮೋಟ್ ಅನ್ನು ನೀಡಲಾಗಿದೆ.

'ಮಿ ಎಲ್ಇಡಿ ಟಿವಿ 4ಎ ಪ್ರೊ' RAM!
ಮಿ ಎಲ್ಇಡಿ ಟಿವಿ 4ಎ ಪ್ರೊ ಸ್ಮಾರ್ಟ್‌ಟಿವಿಯು 1ಜಿಬಿ RAM ಮತ್ತು 8 ಜಿಬಿ ಇಎಮ್ಎಂಸಿ ಆಂತರಿಕ ಸ್ಟೋರೇಜ್ ಅನ್ನು ಹೊಂದಿದೆ. ಆಂಡ್ರಾಯ್ಡ್ 8.1 ಓರಿಯೊದಲ್ಲಿ ರನ್ ಆಗುವ ಈ ಟಿವಿಯು ಪ್ಲೇ ಸ್ಟೋರ್ ಜೊತೆಗೆ ಕ್ರೋಮೊಕಾಸ್ಟ್ ಬೆಂಬಲದೊಂದಿಗೆ ಬಂದಿದೆ. ಮತ್ತೊಂದು ಖಿಷಿಯ ವಿಚಾರ ಎಂದರೆ ವಿವಿಧ ಪಾಲುದಾರರಿಂದ ಆಂತರಿಕ ಕಂಟೆಂಟ್‌ಗಳನ್ನು ಟಿವಿ ಹೊಂದಿದೆ.

'ಮಿ ಎಲ್ಇಡಿ ಟಿವಿ 4ಎ ಪ್ರೊ' ಮಲ್ಟಿಪಲ್ ಪೋರ್ಟ್ಸ್
'ಮಿ ಎಲ್ಇಡಿ ಟಿವಿ 4ಎ ಪ್ರೊ ಸ್ಮಾರ್ಟ್‌ಟಿವಿಯಲ್ಲಿ ಮೂರು ಹೆಚ್‌ಡಿಎಂಐ ಪೋರ್ಟ್‌ಗಳನ್ನು ನೀಡಲಾಗಿದೆ. 2 x 2.0 ಯುಎಸ್‌ಬಿ, ಒಂದು ಇಯರ್‌ಫೋನ್ ಔಟ್, ಒಂದು ಎತರ್‌ನೆಟ್ ಹಾಗೂ ಒಂದು ಎವಿ ಕನೆಕ್ಷನ್ ಅನ್ನು ಹೊಂದಿರುವ ಈ ಸ್ಮಾರ್ಟ್‌ಟಿವಿಯಲ್ಲಿ 2.4GHz 802.11 ಬಿ / ಜಿ/ ಎನ್ ಸಾಮರ್ಥ್ಯದ ವೈಫೈ ಆಯ್ಕೆಯನ್ನು ನೀಡಿರುವುದನ್ನು ನೋಡಬಹುದು.

'ಮಿ ಎಲ್ಇಡಿ ಟಿವಿ 4ಎ ಪ್ರೊ' ಸ್ಪೀಕರ್ಸ್!
'ಮಿ ಎಲ್ಇಡಿ ಟಿವಿ 4ಎ ಪ್ರೊ ಸ್ಮಾರ್ಟ್‌ಟಿವಿ MPEG1 / 2/4, REAL, H.265, H.264 ಆಡಿಯೊ ಪ್ರೊಫೈಲ್ ಅನ್ನು ಬೆಂಬಲಿಸಲಿದ್ದು, 10W ಸಾಮರ್ಥ್ಯದ ಎರಡು ಡಿಟಿಎಸ್ ಸ್ಪೀಕರ್‌ಗಳನ್ನು ಹೊಂದಿದೆ. ಇನ್ನು ಜೊತೆಗೆ ಈ ಟಿವಿ ವಾಯ್ಸ್ ಅಸಿಸ್ಟೆಂಟ್ ಅನ್ನು ಬೆಂಬಲಿಸಲಿದ್ದು, ಗೂಗಲ್ ವಾಯ್ಸ್ ಸರ್ಚ್ ಜೊತೆಗೆ ಸುಲಭ ನಿಯಂತ್ರಣಕ್ಕಾಗಿ ಬಳಕೆದಾರರಿಗೆ ಅವಕಾಶ ನೀಡುತ್ತದೆ.

'ಮಿ ಎಲ್ಇಡಿ ಟಿವಿ 4ಎ ಪ್ರೊ' ಲಭ್ಯತೆ
32 ಇಂಚಿನ 'ಮಿ ಎಲ್ಇಡಿ ಟಿವಿ 4ಎ ಪ್ರೊ ಸ್ಮಾರ್ಟ್ ಟಿವಿ ಫ್ಲಿಪ್‌ಕಾರ್ಟ್, ಮೈ.ಕಾಂ, ಮಿ ಹೋಮ್ ಮತ್ತು ಶಿಯೋಮಿಯ ಮಳಿಗೆಗಳಲ್ಲಿ ಗ್ರಾಹಕರಿಗೆ ಲಭ್ಯವಿದೆ. 12,999 ಬೆಲೆಗೆ ಕಳೆದೆರಡು ತಿಂಗಳ ಹಿಂದಷ್ಟೇ ಬಿಡುಗಡೆಯಾಗಿದ್ದ ಈ ಟಿವಿ ಬೆಲೆಯಲ್ಲಿ 500 ರೂ. ಇಳಿಕೆಯಾಗಿದ್ದು, ಮಿ ಎಲ್ಇಡಿ ಟಿವಿ 4ಎ ಪ್ರೊ ಒಂದು ಅತ್ಯುತ್ತಮ ಸ್ಮಾರ್ಟ್‌ಟಿವಿ ಎಂದು ಹೇಳಬಹುದು.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470