ಶಿಯೋಮಿ ಮಿ ಮ್ಯಾಕ್ಸ್ 2 ಭಾರತದಲ್ಲಿ ಲಾಂಚ್ ಆಗಲಿದೆ
ಶಿಯೋಮಿ ಮಿ ಮ್ಯಾಕ್ಸ್ 2 ಕಳೆದ ತಿಂಗಳಿನಲ್ಲಿ ಚೀನಾದಲ್ಲಿ ಲಾಂಚ್ ಆಗಿತ್ತು. 5.99 ಇಂಚಿನ FHD ಗುಣಮಟ್ಟದ ಡಿಸ್ ಪ್ಲೇಯನ್ನು ಕಾಣಬಹುದಾಗಿದೆ.
ಶಿಯೋಮಿ ಭಾರತೀಯ ಮಾರುಕಟ್ಟೆಗೆ ತನ್ನ ಅಭಿಮಾನಿಗಳಿಗಾಗಿ ಮಿ ಮ್ಯಾಕ್ಸ್ 2 ಅನ್ನು ಲಾಂಚ್ ಮಾಡಲು ತಯಾರಿ ನಡೆಸಿದ್ದು, ಇದೇ ಅಕ್ಟೋಬರ್ 10 ರಂದು ಲಾಂಚ್ ಮಾಡಲಿದೆ ಎನ್ನಲಾಗಿದೆ.

ಈ ಕುರಿತು ಕಂಪನಿಯ ಮೂಲಗಳು ತಿಳಿಸಿದ್ದು, ಭಾರೀ ಕುತೂಹಲಕ್ಕೆ ತೆರೆ ಬಿದ್ದಂತಾಗಿದೆ. ಈಗಾಗಲೇ ಜಾಗತಿಕ ಮಾರುಕಟ್ಟೆಯಲ್ಲಿ ಈ ಸ್ಮಾರ್ಟ್ ಫೋನ್ ಹೆಚ್ಚು ಸದ್ದು ಮಾಡುತ್ತಿದೆ.
ಶಿಯೋಮಿ ಮಿ ಮ್ಯಾಕ್ಸ್ 2 ಕಳೆದ ತಿಂಗಳಿನಲ್ಲಿ ಚೀನಾದಲ್ಲಿ ಲಾಂಚ್ ಆಗಿತ್ತು. 5.99 ಇಂಚಿನ FHD ಗುಣಮಟ್ಟದ ಡಿಸ್ ಪ್ಲೇಯನ್ನು ಕಾಣಬಹುದಾಗಿದೆ. ಅಲ್ಲದೇ ಇದು ಕ್ವಾಲ್ಕಮ್ ಸ್ನಾಪ್ ಡ್ರಾಗನ್ 835 ಪ್ರೋಸೆಸರ್ ಮತ್ತು 6GB RAM ಅನ್ನು ಇದರಲ್ಲಿ ನೀಡಲಾಗಿದೆ. 64GB, 128GB ಮತ್ತು 256GB ಆವೃತ್ತಿಯಲ್ಲಿ ಲಭ್ಯವಿದೆ.
ಇದರಲ್ಲಿ 12 MP ಕ್ಯಾಮೆರಾವನ್ನು ಹಿಂಭಾಗದಲ್ಲಿ ಮತ್ತು 5MP ಕ್ಯಾಮೆರಾವನ್ನು ಮುಂಭಾಗದಲ್ಲಿ ಕಾಣಬಹುದಾಗಿದೆ. ಅಲ್ಲದೇ 3400mAh ಬ್ಯಾಟರಿಯನ್ನು ಅಳವಡಿಸಲಾಗಿದ್ದು, ಕ್ವೀಕ್ ಚಾರ್ಜರ್ ಸಹ ನೀಡಲಾಗಿದೆ. ಅಲ್ಲದೇ ಇದು ಆಂಡ್ರಾಯ್ಡ್ ನ್ಯಾಗದಲ್ಲಿ ಕಾರ್ಯನಿರ್ವಹಿಸಲಿದೆ.
ಮಿ ಮ್ಯಾಕ್ಸ್ 2 ಮೂರು ಆವೃತ್ತಿಯಲ್ಲಿ ಲಭ್ಯವಿರಲಿದ್ದು, ಭಾರತದಲ್ಲಿ ಇನ್ನು ಬೆಲೆಗಳು ಬಹಿರಂಗಗೊಂಡಿಲ್ಲ. ವಿದೇಶಗಳಲ್ಲಿ ಲಭ್ಯರುವ ಪ್ರಕಾರ ಭಾರತೀಯ ರೂಪಾಯಿಗಳಲ್ಲಿ 6 GB ಮತ್ತು 64 GB ಇಂಟರ್ನಲ್ ಮೆಮೊರಿಯ ಫೋನ್ ರೂ. 32,390, 128 GB ಆವೃತ್ತಿ ರೂ.35,387 ಮತ್ತು 256 GB ಆವೃತ್ತಿ ರೂ. 39,210 ಆಗಲಿದೆ ಎನ್ನಲಾಗಿದೆ.


Click it and Unblock the Notifications








