Home
ಸುದ್ದಿಜಾಲ

'ಶಿಯೋಮಿ ಮೈ ಮಿಕ್ಸ್ 2' ಬಿಡುಗಡೆ!!..ಫೀಚರ್ಸ್ ನೋಡಿ ವಿಶ್ವದ ಬೆಸ್ಟ್ ಫೋನ್ ಎನ್ನಬಹುದೇ?

ಇಂದು ಬಿಡುಗಡೆಯಾಗದ ಮೈ ಮಿಕ್ಸ್ 2 ಫೋನ್ ತನ್ನ ಫೀಚರ್ಸ್‌ಗಳಿಂದಲೇ ವಿಶ್ವದಾಧ್ಯಂತ ಕೆಲವೇ ಕ್ಷಣಗಳಲ್ಲಿ ಸಂಚಲನ ಮೂಡಿಸಿದೆ.!!

By Bhaskar N J

ಪೂರ್ಣ ಡಿಸ್‌ಪ್ಲೇ ಮೂಲಕ ಮಾರುಕಟ್ಟೆಗೆ ಕಾಲಿಟ್ಟಿರುವ ನೂತನ ಶಿಯೋಮಿ ಮೈ ಮಿಕ್ಸ್ 2 ಸ್ಮಾರ್ಟ್‌ಫೋನ್ ಆಪಲ್ ಮತ್ತು ಸ್ಯಾಮ್‌ಸಂಗ್‌ ಕಂಪೆನಿಗಳಿಗೆ ಸೆಡ್ಡು ಹೊಡೆದಿದೆ.!! ಇಂದು ಬಿಡುಗಡೆಯಾಗದ ಮೈ ಮಿಕ್ಸ್ 2 ಫೋನ್ ತನ್ನ ಫೀಚರ್ಸ್‌ಗಳಿಂದಲೇ ವಿಶ್ವದಾಧ್ಯಂತ ಕೆಲವೇ ಕ್ಷಣಗಳಲ್ಲಿ ಸಂಚಲನ ಮೂಡಿಸಿದೆ.!!

ಐಫೋನ್ 7 ಗಿಂತಲೂ ಗಾತ್ರದಲ್ಲಿ ಚಿಕ್ಕದಾಗಿರುವ ಶಿಯೋಮಿ ಮೈ ಮಿಕ್ಸ್ 2 ಸ್ಮಾರ್ಟ್‌ಫೋನ್ 5.99 ಇಂಚ್‌ ಡಿಸ್‌ಪ್ಲೇ ಬೆಜೆಲ್‌ ಲೆಸ್ ಡಿಸ್‌ಪ್ಲೇ ಹೊಂದಿದ್ದು, ಅಲ್ಯೂಮಿನಿಯಂ ಚೌಕಟ್ಟನ್ನು ಫೋನ್‌ನಲ್ಲಿ ನೀಡಲಾಗಿದೆ.!! ಬೆಜೆಲ್ ಲೆಸ್ ಡಿಸ್‌ಪ್ಲೇ ಮಾತ್ರವಲ್ಲದೇ ಅತ್ಯಂತ ಹೆಚ್ಚು ಪೀಚರ್ಸ್ ಮತ್ತು ಕಡಿಮೆ ಬೆಲೆ ವಿಷಯಗಳಿಗೆ ಫೋನ್ ಎಲ್ಲೆಡೆ ವೈರಲ್ ಆಗಿದೆ.!! ಹಾಗಾದರೆ, ಬೆಲೆ ಎಷ್ಟು? ಏನೆಲ್ಲಾ ಫೀಚರ್ಸ್‌ಗಳಿವೆ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

403PPi ಡೆನ್‌ಸಿಟಿ ಡಿಸ್‌ಪ್ಲೇ !!

403PPi ಡೆನ್‌ಸಿಟಿ ಡಿಸ್‌ಪ್ಲೇ !!

5.99-ಇಂಚಿನ ಬೆಜೆಲ್ ಡಿಸ್‌ಪ್ಲೇ 1080x2160 ಪಿಕ್ಸೆಲ್‌ ಮೂಲಕ ಶಿಯೋಮಿ ಮೈ ಮಿಕ್ಸ್ 2 ಹೊರಬಂದಿದ್ದು, 403PPi ಡೆನ್‌ಸಿಟಿ ವೈಶಿಷ್ಟ್ಯ ಹೊಂದಿದೆ.!! 151.8x75.5x7.7 ಮಿಮೀ ಅಳತೆ, ಮತ್ತು 185 ಗ್ರಾಂ ತೂಕವಿರುವ ಮೈ ಮಿಕ್ಸ್ 2 ಆಪಲ್ ಮತ್ತು ಸ್ಯಾಮ್‌ಸಂಗ್‌ಗೆ ನೇರ ಸೆಡ್ಡು ಹೊಡೆದಿದೆ.!!

ಕ್ಯಾಮೆರಾ ಹೇಗಿದೆ?

ಕ್ಯಾಮೆರಾ ಹೇಗಿದೆ?

ಸೋನಿ IMX386 ಸೆನ್ಸಾರ್, 1.25-ಮೈಕ್ರಾನ್ ಪಿಕ್ಸೆಲ್ ಹಾಗೂ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್, 5-ಪೀಸ್ ಲೆನ್ಸ್ ಮತ್ತು ಎಫ್ / 2.0 ಅಪರ್ಚರ್‌ನೊಂದಿದಗೆ 18k ಚಿನ್ನ ಲೇಪಿತ ಕ್ಯಾಮೆರಾ ರಿಂಗ್ ಮೂಲಕ ಶಿಯೋಮಿ ಮೈ ಮಿಕ್ಸ್ 2 ರಿಯರ್ ಕ್ಯಾಮೆರಾ ಹೊರಬಂದಿದೆ.!! ರಿಯರ್ ಕ್ಯಾಮೆರಾ 12 ಮೆಗಾಪಿಕ್ಸೆಲ್ ಸಾಮರ್ಥ್ಯ ಹೊಂದಿದ್ದರೆ, 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಫೋನ್‌ನಲ್ಲಿದೆ.!!

ಪ್ರೊಸೆಸರ್ ಮತ್ತು ಕನೆಕ್ಟಿವಿಟಿ!!

ಪ್ರೊಸೆಸರ್ ಮತ್ತು ಕನೆಕ್ಟಿವಿಟಿ!!

ಶಿಯೋಮಿ ಮೈ ಮಿಕ್ಸ್ 2 ಸ್ಮಾರ್ಟ್‌ಫೋನ್ ಕ್ವಾಲ್ಕಮ್‌ನ ಸ್ನ್ಯಾಪ್‌ಡ್ರಾಗನ್ 835 SoC ಪ್ರೊಸೆಸರ್ ಹಾಗೂ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್‌ ಮೂಲಕ ಕಾರ್ಯನಿರ್ವಹಿಸಲಿದೆ. ಜೊತೆಗೆ 4ಜಿ ಎಲ್‌ಟಿಇ, ಡ್ಯೂಯಲ್-ಬ್ಯಾಂಡ್ (2.4GHz ಮತ್ತು 5GHz), Wi-Fi, ಜಿಪಿಎಸ್ / ಎ-ಜಿಪಿಎಸ್, ಬ್ಲೂಟೂತ್ ವಿ 5.0, ಮತ್ತು ಟೈಪ್ ಸಿ ಯುಎಸ್‌ಬಿ ಎಲ್ಲವಕ್ಕೂ ಕನೆಕ್ಟಿವಿಟಿ ಹೊಂದಿದೆ.!!

ಬೇರೆ ಏನೆಲ್ಲಾ ಪೀಚರ್ಸ್!!

ಬೇರೆ ಏನೆಲ್ಲಾ ಪೀಚರ್ಸ್!!

ವಿಶ್ವದ ಟಾಪ್‌ ಕಂಪೆನಿಗಳಿಗೂ ಸೆಡ್ಡು ಹೊಡೆಯುವಂತಹ ಸಂವೇದಕಗಳಿಂದ ಮೈ ಮಿಕ್ಸ್ 2 ಹೊರಬಂದಿದೆ.!! ಅಕ್ಸೆಲೆರೊಮೀಟರ್, ಆಂಬಿಯೆಂಟ್ ಲೈಟ್ ಸೆನ್ಸರ್, ಬಾರೋಮೀಟರ್, ಡಿಜಿಟಲ್ ದಿಕ್ಸೂಚಿ, ಜ್ಯೋರೋಸ್ಕೋಪ್ ಮತ್ತು ಅಲ್ಟ್ರಾಸಾನಿಕ್ ಪೀಚರ್ಸ್‌ಗಳು ಸ್ಮಾರ್ಟ್‌ಫೋನ್‌ನಲ್ಲಿವೆ.!! ಮತ್ತು 3400mAh ಬ್ಯಾಟರಿ ಶಕ್ತಿಯನ್ನು ಹೊಂದಿದೆ.!!

ಶಿಯೋಮಿ ಮಿಕ್ಸ್ 2 ಬೆಲೆ ಹೀಗಿದೆ.!!

ಶಿಯೋಮಿ ಮಿಕ್ಸ್ 2 ಬೆಲೆ ಹೀಗಿದೆ.!!

ಶಿಯೋಮಿ ಮಿಕ್ಸ್ 2 6GB RAM ಹಾಗೂ 128GB ವೆರಿಯಂಟ್ ಸ್ಮಾರ್ಟ್‌ಫೊನ್ ಬೆಲೆ CNY 3,599 ಆಗಿದ್ದು, ಭಾರತದ ರೂಪಾಯಿಗಳಲ್ಲಿ ಲೆಕ್ಕಹಾಕಿದರೆ 35,300 ರೂಪಾಯಿಗಳಾಗುತ್ತದೆ.!!6GB RAM / 256GB ವೆರಿಯಂಟ್ ಫೋನ್ ಬೆಲೆ ಸರಿಸುಮಾರು 39,000 ರೂ.ಗಳಾದರೆ, 8GB RAM ಮತ್ತು 128GB ವೆರಿಯಂಟ್ ಸ್ಮಾರ್ಟ್‌ಫೋನ್ ಬೆಲೆ 46,000 ರೂಪಾಯಿಗಳಾಗಿವೆ.!!

Best Mobiles in India

English summary
Xiaomi on Monday launched the Mi MIX 2 smartphone.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+