ಪ್ರೀಮಿಯಮ್ ಆವೃತ್ತಿಯಲ್ಲಿ ಶಿಯೋಮಿ ಮಿ ಮಿಕ್ಸ್ 2
ಶಿಯೋಮಿ ಮಿ ಮಿಕ್ಸ್ 2 ಸ್ಪೆಷಲ್ ಮತ್ತು ಪ್ರೀಮಿಯಮ್ ಅಡಿಷನ್ ಅನ್ನು ಬಿಡುಗಡೆ ಮಾಡಲಿದೆ ಎನ್ನಲಾಗಿದೆ ಎಂದು ಚೀನಿ ಟೆಕ್ ಮಾಧ್ಯಮಗಳು ವರದಿ ಮಾಡಿವೆ.
ಇದೇ ಒಂದು ತಿಂಗಳ ಹಿಂದೆ ಶಿಯೋಮಿ ಮಿ ಮಿಕ್ಸ್ 2 ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡಿತ್ತು. ಬಿಜಿಲ್ ಲೈಸ್ ವಿನ್ಯಾಸದ ಈ ಪೋನ್ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಎಬ್ಬಿಸಿತ್ತು. ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿಯೂ ಈ ಫೋನ್ ಲಭ್ಯವಿದೆ ಎನ್ನಲಾಗಿದೆ. ಅಲ್ಲದೇ ಈ ಫೋನ್ ಕುರಿತ ಮತ್ತೊಂದು ರೂಮರ್ ಶುರುವಾಗಿದ್ದು, ಶಿಯೋಮಿ ಹೊಸದೊಂದು ಆವೃತ್ತಿಯನ್ನು ಬಿಡುಗಡೆ ಮಾಡಲಿದೆ ಎಂದು.

ಶಿಯೋಮಿ ಮಿ ಮಿಕ್ಸ್ 2 ಸ್ಪೆಷಲ್ ಮತ್ತು ಪ್ರೀಮಿಯಮ್ ಅಡಿಷನ್ ಅನ್ನು ಬಿಡುಗಡೆ ಮಾಡಲಿದೆ ಎನ್ನಲಾಗಿದೆ ಎಂದು ಚೀನಿ ಟೆಕ್ ಮಾಧ್ಯಮಗಳು ವರದಿ ಮಾಡಿವೆ. ಈ ಹೊಸ ಆವೃತ್ತಿಯ ಫೋನ್ 8GB RAM ನೊಂದಿಗೆ ಸೆರಾಮಿಕ್ ವೈಟ್ ಬಾಡಿಯೊಂದಿಗೆ ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ.
ಈಗಾಗಲೇ ಈ ಸೆರಾಮಿಕ್ ವೈಟ್ ಬಾಡಿ ಹೊಂದಿರುವ ಫೋನ್ ಆನ್ ಲೈನಿನಲ್ಲಿ ಲೀಕ್ ಆಗಿದ್ದು, ಸದ್ದು ಮಾಡುತ್ತಿದೆ. 8GB RAM ಈ ಫೋನಿನ ಹೈಲೆಟ್ ಗಳಲ್ಲಿ ಒಂದಾಗಲಿದ್ದು, ಶೀಘ್ರವೇ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಈ ಹೊಸ ಆವೃತ್ತಿಯಲ್ಲಿ RAM ಮತ್ತು ನ್ಯೂ ಡಿಸೈಟ್ ಬಿಟ್ಟರೇ ಉಳಿದೆಲ್ಲ ವಿಶೇಷತೆಗಳು ಹಿಂದಿನ ಫೋನ್ ನಂತೆಯೇ ಇರಲಿದೆ ಎನ್ನಲಾಗಿದೆ.

ಈ ಫೋನಿನ ಬೆಲೆಯೂ ಈಗಾಗಲೇ ಲೀಕ್ ಆಗಿದ್ದು, ರೂ.46000ಕ್ಕೆ ದೊರೆಯಲಿದೆ. ಆದರೆ ಭಾರತೀಯ ಮಾರುಕಟ್ಟೆಗೆ ಕಾಲಿಟ್ಟ ಸಮಯದಲ್ಲಿ ಇದರ ಬೆಲೆಯೂ ರೂ. 40000ದ ಆಸುಪಾಸಿನಲ್ಲಿರಲಿದೆ.


Click it and Unblock the Notifications








