ಎಮ್ ಐ ನೋಟ್ ಫ್ಯಾಬ್ಲೆಟ್ ಅನ್ನು ಲಾಂಚ್ ಮಾಡುವ ಹೊರತಾಗಿಯೂ ಶ್ಯೋಮಿ, ಎಮ್ ಐ ನೋಟ್ ಪ್ರೊವನ್ನು ಹೊರತಂದಿದೆ. ಕಂಪೆನಿ ಹೇಳುವಂತೆ ಎಮ್ ಐ ನೋಟ್ ಪ್ರೊ ಎಮ್ ಐ ನೋಟ್ ಗಿಂತಲೂ ಉತ್ತಮವಾಗಿದ್ದು ಇದರ ವಿಶೇಷತೆಗಳತ್ತ ಗಮನ ಹರಿಸಿದಾಗ ಇದು ಗ್ರಾಹಕರಿಗೆ ಇಷ್ಟವಾಗುವುದು ಖಂಡಿತ ಎಂಬುದನ್ನು ತಿಳಿಸುತ್ತಿದೆ. ಶ್ಯೋಮಿ ಎಮ್ ಐ ನೋಟ್ ಪ್ರೊ ದರವು 32,900 ಆಗಿದ್ದು ಮಾರ್ಚ್ ಕೊನೆಯಲ್ಲಿ ಮಾರುಕಟ್ಟೆಯನ್ನು ಪ್ರವೇಶಿಸಲಿದೆ. ಇನ್ನು ಫೋನ್ ನ ವಿಶೇಷತೆಗಳತ್ತ ಗಮನ ಹರಿಸಿದಾಗ ಇದು ಓಕ್ಟಾ ಕೋರ್ 64 ಬಿಟ್ ಕ್ವಾಲ್ ಕಾಮ್ ಸ್ನ್ಯಾಪ್ ಡ್ರಾಗನ್ 810 ಪ್ರೊಸೆಸರ್ ಜೊತೆಗೆ ಬಂದಿದ್ದು 4ಜಿಬಿ RAM ಡಿವೈಸ್ ನಲ್ಲಿದೆ. ಆಂಡ್ರಾಯ್ಡ್ 4.4.4 ಕಿಟ್ ಕ್ಯಾಟ್ ಆಧಾರಿತ MIUI 6 ಇದರಲ್ಲಿದ್ದು ಇದು ಸಿಂಗಲ್ ಸಿಮ್ ಗೆ ಮಾತ್ರ ಬೆಂಬಲವನ್ನು ನೀಡುತ್ತಿದೆ. ಇನ್ನು ಶ್ಯೋಮಿ ಎಮ್ ನೋಟ್ ನಂತೆಯೇ, ಎಮ್ ಐ ನೋಟ್ ಪ್ರೊ 5.7 ಇಂಚಿನ ಡಿಸ್ ಪ್ಲೇಯೊಂದಿಗೆ ಬಂದಿದ್ದು, ಹೆಚ್ಚಿನ QHD (1440x2560 ಪಿಕ್ಸೆಲ್ ಗಳು) ರೆಸಲ್ಯೂಶನ್ ಇದರಲ್ಲಿದೆ ಇದು 515ppi ಪಿಕ್ಸೆಲ್ ಡೆನ್ಸಿಟಿಯನ್ನು ಒದಗಿಸುತ್ತಿದೆ. ಇನ್ನು ಫೋನ್ ನ ಆಂತರಿಕ ಸಂಗ್ರಹಣಾ ಸಾಮರ್ಥ್ಯ 64 ಜಿಬಿಯಾಗಿದ್ದು ಇದನ್ನು ಎಸ್ ಡಿ ಕಾರ್ಡ್ ಬಳಸಿ ವಿಸ್ತರಿಸಬಹುದಾಗಿದೆ. ಫೋನ್ ನ ರಿಯರ್ ಕ್ಯಾಮೆರಾ 13 ಮೆಗಾಪಿಕ್ಸೆಲ್ ಆಗಿದ್ದು ಮುಂಭಾಗ ಕ್ಯಾಮೆರಾ 4 ಮೆಗಾಪಿಕ್ಸೆಲ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. 3000mAh ಬ್ಯಾಟರಿ ಡಿವೈಸ್ ನಲ್ಲಿದ್ದು ತ್ವರಿತ ಚಾರ್ಜಿಂಗ್ ಸಾಮರ್ಥ್ಯವನ್ನು ಫೋನ್ ಪಡೆದುಕೊಂಡಿದೆ.