ಡಿಜಿಟಲ್‌ ಪೇಮೆಂಟ್‌ಗೆ ಶಿಯೋಮಿ ಎಂಟ್ರಿ: ಟಚ್ ಮಾಡದೇ ಪೇ ಮಾಡಿ..!

|

ಭಾರತೀಯ ಮಾರುಕಟ್ಟೆಯಲ್ಲಿ ಬೇರೂರಿದ್ದ ಸ್ಯಾಮ್‌ಸಂಗ್‌ನಂತಹ ದೈತ್ಯ ಕಂಪನಿಯನ್ನು ಹಿಂದಿಕ್ಕಿ, ದೇಶದಲ್ಲಿ ಅತೀ ಹೆಚ್ಚು ಸ್ಮಾರ್ಟ್‌ಫೋನ್ ಮಾರಾಟ ಮಾಡಿದ ಕೀರ್ತಿಗೆ ಪಾತ್ರವಾಗಿರುವ ಚೀನಾ ಮೂಲದ ಸ್ಮಾರ್ಟ್‌ಫೋನ್ ತಯಾಕರ ಕಂಪನಿ ಶಿಯೋಮಿ, ಭಾರತೀಯ ಮಾರುಕಟ್ಟೆಗೆ ಹಲವು ಸ್ಮಾರ್ಟ್‌ವಸ್ತುಗಳನ್ನು ಪರಿಚಯಿಸುತ್ತಾ ಬಂದಿದೆ. ಈಗಾಗಲೇ ಗ್ರಾಹಕರ ನಂಬುಗೆಗೆ ಪಾತ್ರವಾಗಿದ್ದು, ಶೀಘ್ರವೇ ಮತ್ತೊಂದು ಹೊಸ ಸೇವೆಯನ್ನು ಹೊತ್ತು ಬರಲಿದೆ.

ಡಿಜಿಟಲ್‌ ಪೇಮೆಂಟ್‌ಗೆ ಶಿಯೋಮಿ ಎಂಟ್ರಿ: ಟಚ್ ಮಾಡದೇ ಪೇ ಮಾಡಿ..!

ಈಗಾಗಲೇ ದೇಶಿಯ ಮಾರುಕಟ್ಟೆಯಲ್ಲಿ ಶಿಯೋಮಿ ಸ್ಮಾರ್ಟ್‌ಫೋನ್‌ಗಳನ್ನು ನಾವು ಎಲ್ಲಿ ಬೇಕಾದರೂ ಕಾಣಬಹುದಾಗಿದೆ. ಬಜೆಟ್ ಬೆಲೆಯಿಂದ ಹಿಡಿದು ಸದ್ಯ ಪ್ರೀಮಿಯಮ್ ಸರಣಿಯ ಸ್ಮಾರ್ಟ್‌ಫೋನ್‌ಗಳು ಸಹ ಶಿಯೋಮಿಯಿಂದ ಬಿಡುಗಡೆಗೊಂಡಿದೆ. ಇದೇ ಮಾದರಿಯಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಡಿಜಿಟಲ್ ಪೇಮೆಂಟ್ ಸೇವೆಯೂ ಹೆಚ್ಚಿನ ಖ್ಯಾತಿಯನ್ನು ಪಡೆಯುತ್ತಿರುವ ಹಿನ್ನಲೆಯಲ್ಲಿ ಶಿಯೋಮಿ ತನ್ನದೇ ಪೇಮೆಂಟ್ ಸೇವೆಯನ್ನು ಶುರು ಮಾಡಲಿದೆ ಎನ್ನಲಾಗಿದೆ.

ಚೀನಾದಲ್ಲಿದೆ:

ಚೀನಾದಲ್ಲಿದೆ:

ಚೀನಾ ಮೂಲದ ಕಂಪನಿಯಾಗಿರುವ ಶಿಯೋಮಿ, ಈಗಾಗಲೇ ಚೀನಾದಲ್ಲಿ ಪೇಮೆಂಟ್ ಸೇವೆಯನ್ನು ನೀಡುತ್ತಿದೆ. Mi ಪೇ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಚೀನಾ ಡಿಜಿಟಲ್ ಪೇಮೆಂಟ್ ಮಾರ್ಕೆಟ್ ನಲ್ಲಿ ಹೆಸರುವಾಸಿಯಾಗಿದೆ. ಈ ಹಿನ್ನಲೆಯಲ್ಲಿ ಈಗಾಗಲೇ ಭಾರತದಲ್ಲಿಯೂ ಖ್ಯಾತಿಯನ್ನು ಪಡೆಯುತ್ತಿರುವ ಶಿಯೋಮಿ, ಶೀಘ್ರವೇ ಇಲ್ಲಿಯೂ ಶಿಯೋಮಿ Mi ಪೇ ಪೇಮೆಂಟ್ ಸೇವೆಯನ್ನು ನೀಡಲಿದೆ.

WhatsApp group voice and video calling is now live - KANNADA GIZBOT
ಕ್ರೆಡಿಟ್-ಡೆಬಿಟ್:

ಕ್ರೆಡಿಟ್-ಡೆಬಿಟ್:

ಶಿಯೋಮಿ Mi ಪೇ ಪೇಮೆಂಟ್ ಸೇವೆಯಲ್ಲಿ ಬಳಕೆದಾರರು ವಿವಿಧ ಬ್ಯಾಂಕ್‌ಗಳ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ ಗಳನ್ನು ಬಳಕೆ ಮಾಡಿಕೊಂಡು ಪೇಮೆಂಟ್ ಮಾಡಬಹುದಾಗಿದೆ. ಚೀನಾದಲ್ಲಿ ಇದೇ ಮಾದರಿಯಲ್ಲಿ 2016ನಿಂದಲೇ ಕಾರ್ಯನಿರ್ವಹಿಸುತ್ತಿದೆ.

ಮಾರುಕಟ್ಟೆಯಲ್ಲಿ ಸಂಚಲನ:

ಮಾರುಕಟ್ಟೆಯಲ್ಲಿ ಸಂಚಲನ:

ಶಿಯೋಮಿ Mi ಪೇ ಪೇಮೆಂಟ್ ಸೇವೆಯ ದೇಶಿಯ ಮಾರುಕಟ್ಟೆಯಲ್ಲಿ ಶುರುವಾಗಲಿದೆ ಎನ್ನುವ ವಿಷಯವು ಸಂಚಲನವನ್ನು ಮೂಡಿಸಿದೆ. ಇದರಿಂದಾಗಿ ಬೇರೆ ಪೇಮೆಂಟ್ ಆಪ್‌ ಗಳು ಬೇಡಿಕೆಯನ್ನು ಕಳೆದುಕೊಳ್ಳುವ ಸ್ಥಿತಿಯೂ ನಿರ್ಮಾಣವಾಗುವ ಸಾಧ್ಯತೆ ಅತಿಯಾಗಿದೆ.

ಈ ವರ್ಷದ ಅಂತ್ಯಕ್ಕೆ:

ಈ ವರ್ಷದ ಅಂತ್ಯಕ್ಕೆ:

ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಶಿಯೋಮಿ Mi ಪೇ ಪೇಮೆಂಟ್ ಸೇವೆಯನ್ನು ಆರಂಭಿಸಲು ಎಲ್ಲಾ ರೀತಿಯ ತಯಾರಿಯನ್ನು ನಡೆಸಲಾಗುತ್ತಿದೆ. ಈ ವರ್ಷದ ಅಂತ್ಯಕ್ಕೆ ಇಲ್ಲವೇ ಮುಂದಿನ ವರ್ಷದ ಆರಂಭದಲ್ಲಿ ಶಿಯೋಮಿ Mi ಪೇ ಪೇಮೆಂಟ್ ಸೇವೆ ಪ್ರಾರಂಭಗೊಳ್ಳಲಿದೆ.

RBI:

RBI:

ಈಗಾಗಲೇ ದೇಶಿಯ ಮಾರುಕಟ್ಟೆಯಲ್ಲಿ ಶಿಯೋಮಿ Mi ಪೇ ಪೇಮೆಂಟ್ ಸೇವೆಯೂ ಪ್ರಾರಂಭವಾಗಲು RBI ಗ್ರೀನ್ ಸಿಗ್ನಲ್ ನೀಡಿದೆ ಎನ್ನಲಾಗಿದ್ದು, ಇದರಿಂದಾಗಿ ಶಿಯೋಮಿ Mi ಪೇ ಪೇಮೆಂಟ್ ಲಾಂಚಿಂಗ್ ಹಾದಿ ಸುಗಮವಾಗಿದೆ.

ಸ್ಯಾಮ್‌ಸಂಗ್ ಮಾದರಿ:

ಸ್ಯಾಮ್‌ಸಂಗ್ ಮಾದರಿ:

ಶಿಯೋಮಿ Mi ಪೇ ಪೇಮೆಂಟ್ ಸೇವೆಯೂ ಈಗಾಗಲೇ ಮಾರುಕಟ್ಟೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ಯಾಮ್‌ಸಂಗ್ ಪೇ ಮಾದರಿಯಲ್ಲಿ ಕಾಣಿಸಿಕೊಳ್ಳಲಿದೆ. NFC ಸಹಾಯದಿಂದ ಬಳಕೆದಾರರು ಪೇಮೆಂಟ್ ಮಾಡುವ ಅವಕಾಶವನ್ನು ಶಿಯೋಮಿ Mi ಪೇ ಪೇಮೆಂಟ್ ನಲ್ಲಿ ಪಡೆಯಬಹುದಾಗಿದೆ.

Mi ಕ್ರೆಡಿಟ್:

Mi ಕ್ರೆಡಿಟ್:

ಶಿಯೋಮಿ Mi ಪೇ ಪೇಮೆಂಟ್ ಸೇವೆಯಲ್ಲಿ ಬಳಕೆದಾರರು ಕ್ರೆಡಿಟ್ ಅನ್ನು ಪಡೆದುಕೊಳ್ಳಬಹುದಾಗಿದೆ. ರೂ.1 ರಿಂದ 1ಲಕ್ಷದ ವರೆಗೂ ಇದು ದೊರೆಯಲಿದೆ ಎನ್ನಲಾಗಿದೆ. ಇದಕ್ಕಾಗಿ ಕ್ರೆಡಿಟ್ ಬಿ ಎನ್ನುವ ಕಂಪನಿಯೊಂದಿಗೆ ಶಿಯೋಮಿ ಒಪ್ಪಂದವನ್ನು ಮಾಡಿಕೊಳ್ಳಲಿದೆ ಎನ್ನಲಾಗಿದೆ.

Best Mobiles in India

English summary
Xiaomi Mi Pay could be coming soon to India: All you need to know. to know more visit kananda.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X