ಶಿಯೋಮಿಯಿಂದ ಕಣ್ಣಿಗೆ ರಕ್ಷಣೆ ನೀಡುವ ಸನ್ ಗ್ಲಾಸ್ ಗಳು ಕೇವಲ 899 ರುಪಾಯಿಗೆ ಲಭ್ಯ

By Gizbot Bureau
|

ಶಿಯೋಮಿ ಸಂಸ್ಥೆ 899 ರುಪಾಯಿಗೆ ಭಾರತದಲ್ಲಿ ಎಂಐ ಪೋಲರೈಸ್ಡ್ ಸ್ಕ್ವೇರ್ ಸನ್ ಗ್ಲಾಸ್ ನ್ನು ಬಿಡುಗಡೆಗೊಳಿಸಿದೆ. ದೇಶದಲ್ಲಿ ಈಗಾಗಲೇ ಖರೀದಿಗೆ ಈ ಸನ್ ಗ್ಲಾಸ್ ಗಳು ಲಭ್ಯವಿದೆ. ಎರಡು ಬಣ್ಣಗಳ ವೇರಿಯಂಟ್ ನಲ್ಲಿ ನೀವಿದನ್ನು ಖರೀದಿಸಬಹುದು- ನೀಲಿ ಮತ್ತು ಬೂದು ಬಣ್ಣಗಳ ಆಯ್ಕೆ ಭಾರತದಲ್ಲಿ ಲಭ್ಯವಿದೆ.ಎಂಐ ಸನ್ ಗ್ಲಾಸ್ ಗಳು ಪೋಲರೈಸ್ಡ್ ಲೆನ್ಸ್ ಗಳಿಂದ ಕೂಡಿರುತ್ತದೆ ಮತ್ತು ಬಳಕೆದಾರರಿಗೆ ಅತ್ಯುತ್ತಮವಾದ ವಿಷುವಲ್ ಕ್ಲಾರಿಟಿ ಇರಲಿದೆ ಎಂದು ಶಿಯೋಮಿ ಸಂಸ್ಥೆ ತಿಳಿಸುತ್ತದೆ.

ಶಿಯೋಮಿಯಿಂದ ಕಣ್ಣಿಗೆ ರಕ್ಷಣೆ ನೀಡುವ ಸನ್ ಗ್ಲಾಸ್ ಗಳು ಕೇವಲ 899 ರುಪಾಯಿಗೆ ಲಭ್ಯ

ಹಲವು ಫೀಚರ್ ಗಳಿಂದ ಈ ಸನ್ ಗ್ಲಾಸ್ ಗಳು ಕೂಡಿವೆ. 899 ರುಪಾಯಿ ಬೆಲೆಗೆ ಇದು ನಿಮಗೆ ಲಾಭದಾಯಕವೇ? ಅಂತಹ ಯಾವೆಲ್ಲಾ ಫೀಚರ್ ಗಳು ಈ ಸನ್ ಗ್ಲಾಸ್ ನಲ್ಲಿ ಲಭ್ಯವಿದೆ ಎಂಬ ಬಗ್ಗೆ ನಾವಿಲ್ಲಿ ನಿಮಗೆ ವಿವರ ನೀಡುತ್ತಿದ್ದೇವೆ.

--ಎಂಐ ಪೋಲರೈಸ್ಡ್ ಸ್ಕ್ವೇರ್ ಸನ್ ಗ್ಲಾಸ್ ಗಳು ಟಿಎಸಿ ಪೋಲರೈಸ್ಡ್ ಲೆನ್ಸ್ ಗಳಿಂದ ಕೂಡಿವೆ. ಇವು O6 ಲೇಯರ್ಡ್ ಲೆನ್ಸ್ ತಂತ್ರಗಾರಿಕೆಯನ್ನು ಹೊಂದಿರುತ್ತದೆ ಮತ್ತು ಗ್ಲೇರ್ ಆಗುವುದನ್ನು, ಪೋಲರೈಸ್ಡ್ ಲೈಟ್ ನ್ನು, ಯುವಿ ಕಿರಣಗಳಿಂದ ನಿಮ್ಮ ಕಣ್ಣುಗಳಿಗೆ ಆಗುವ ಹಾನಿಯನ್ನು ಇದು ತಡೆಯುತ್ತದೆ.

--ಕಣ್ಣಿಗೆ ಆಗುವ ಆಯಾಸವನ್ನು ಇದು ಕಡಿಮೆಗೊಳಿಸುತ್ತದೆ. ವಿಷುವಲ್ ಕ್ಲಾರಿಟಿಯನ್ನು ಹೆಚ್ಚಿಸುತ್ತದೆ ಮತ್ತು ಕಾಂಟ್ರ್ಯಾಸ್ಟ್ ನ್ನು ವೃದ್ಧಿಗೊಳಿಸುತ್ತದೆ.

--ಇದು ಸ್ಕ್ರ್ಯಾಷ್ ರೆಸಿಸ್ಟೆಂಟ್ ಆಗಿ ಕೆಲಸ ಮಾಡುತ್ತದೆ ಎಂದು ಶಿಯೋಮಿ ತಿಳಿಸಿದೆ.

--ಯುವಿಎ, ಯುವಿಬಿ ಮತ್ತು ಯುವಿಸಿ ಕಿರಣಗಳನ್ನು 400 ನ್ಯಾನೋ ಮೀಟರ್ ವರೆಗೆ 100 % ಕಣ್ಣಿಗೆ ರಕ್ಷಣೆ ನೀಡುತ್ತದೆ.

--ಎಂಐ ಪೋಲರೈಸ್ಡ್ ಸ್ಕ್ವೇರ್ ಸನ್ ಗ್ಲಾಸ್ ಗಳು ಫ್ಲೆಕ್ಸಿಬಲ್ ಟಿಆರ್90 ಫ್ರೇಮ್ ಗಳನ್ನು ಹೊಂದಿದೆ. ಇದು ಕಡಿಮೆ ತೂಕದ, ಹೆಚ್ಚು ಕಾಲ ಬಾಳಿಕೆ ಬರುವ ಮತ್ತು ಫ್ಲೆಕ್ಸಿಬಲ್ ಆಗಿರುವ ಫ್ರೇಮ್ ಗಳಾಗಿವೆ ಎಂದು ಶಿಯೋಮಿ ತಿಳಿಸಿದೆ.

--ಎಂಐ ಪೋಲರೈಸ್ಡ್ ಸ್ಕ್ವೇರ್ ಸನ್ ಗ್ಲಾಸ್ ಗಳ ತೂಕ 18ಗ್ರಾಂ. ಅಂದರೆ ಈ ಸನ್ ಗ್ಲಾಸ್ ಗಳು ಧರಿಸುವುದಕ್ಕೆ ಭಾರವಾಗಿಲ್ಲ ಎಂಬುದು ಖಾತ್ರಿ.

--ಎಂಐ ಸನ್ ಗ್ಲಾಸ್ ಗಳು ಯುನಿಸೆಕ್ಸ್. ಪುರುಷ ಅಥವಾ ಮಹಿಳೆ ಯಾರು ಬೇಕಿದ್ದರೂ ಧರಿಸಬಹುದು.

--6 ತಿಂಗಳ ಲಿಮಿಟೆಡ್ ವ್ಯಾರೆಂಟಿಯೊಂದಿಗೆ ಎಂಐ ಪೋಲರೈಸ್ಡ್ ಸ್ಕ್ವೇರ್ ಸನ್ ಗ್ಲಾಸ್ ಗಳು ಲಭ್ಯವಾಗುತ್ತದೆ.

ಆಸಕ್ತ ಗ್ರಾಹಕರು ಎಂಐ. ಕಾಮ್, ಶಿಯೋಮಿ ಇಂಡಿಯಾದ ಅಧಿಕೃತ ವೆಬ್ ಸೈಟ್ ಮೂಲಕ ಖರೀದಿಸಬಹುದು.

ಭಾರತದಲ್ಲಿ ಶಿಯೋಮಿ ಹಲವು ಲೈಫ್ ಸ್ಟೈಲ್ ವಸ್ತುಗಳನ್ನು ಮಾರಾಟ ಮಾಡುತ್ತದೆ. ಎಂಐ ಬ್ಯಾಕ್ ಪ್ಯಾಕ್ ಗಳು, ಎಂಐ ಶೂಗಳು, ಎಂಐ ಏರ್ ಪಾಪ್ ಮಾಸ್ಕ್, ಎಂಐ ಫೋಕಸ್ ಕ್ಯೂಬ್ ಇತ್ಯಾದಿಗಳು. ಇದೀಗ ಈ ಪಟ್ಟಿಗೆ ಹೊಸದಾಗಿ ಸನ್ ಗ್ಲಾಸ್ ಗಳು ಕೂಡ ಸೇರ್ಪಡೆಗೊಂಡಿವೆ.

Best Mobiles in India

English summary
Xioami the company which is known for its gadgets and smartphone has not debuted in India with their Mi Polarized Wayfarer and Mi Polarized Aviators as well.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X