Home
ಸುದ್ದಿಜಾಲ

ಶಿಯೋಮಿ 'ಮಿ ಸೂಪರ್ ಸೇಲ್'..ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರೀ ಡಿಸ್ಕೌಂಟ್ಸ್!!

ಅಕ್ಟೋಬರ್ 10 ರಿಂದ ಆರಂಭವಾಗಿರುವ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಹಾಗೂ ಅಮೆಜಾನ್‌ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ಗಳ ನಡುವೆ ಮತ್ತೊಂದು ಆನ್‌ಲೈನ್ ಮೆಗಾಸೇಲ್ ಪ್ರಾರಂಭವಾಗಿದೆ. ಮೊಬೈಲ್ ಮಾರುಕಟ್ಟೆಯಲ್ಲಿ ಮಿಂಚಿನಂತೆ ಸಂಚಾರ ಮಾಡುತ್ತಿರುವ 'ಶಿಯೋಮಿ' ಕಂಪೆನಿ ಕೂಡ ಆನ್‌ಲೈನ್ ಮೆಗಾಸೇಲ್ ಅನ್ನು ಹಮ್ಮಿಕೊಂಡಿದೆ.

ಹೌದು, ಫ್ಲಿಪ್‌ಕಾರ್ಟ್, ಅಮೆಜಾನ್‌ ಸಂಸ್ಥೆಗಳ ಮಾರಾಟದ ಭರಾಟೆಯಲ್ಲಿ ತಾನೂ ಲಾಭ ಮಾಡಿಕೊಳ್ಳಲು ಮುಂದಾಗಿರುವ ಮೊಬೈಲ್ ದಿಗ್ಗಜ ಸಂಸ್ಥೆ ಶಿಯೋಮಿ "ಮಿ ಸೂಪರ್ ಸೇಲ್' ಅನ್ನು ಹಮ್ಮಿಕೊಂಡಿದೆ. ಈ 'ಮಿ ಸೂಪರ್ ಸೇಲ್'‌ನಲ್ಲಿ ತನ್ನ ಸ್ಮಾರ್ಟ್‌ಫೋನ್‌ಗಳು, ಟಿವಿಗಳು ಸೇರಿದಂತೆ ಬಹುತೇಕ ತನ್ನೆಲ್ಲಾ ಉತ್ಪನ್ನಗಳ ಮೇಲೂ ಭರ್ಜರಿ ರಿಯಾಯಿರಿ ಘೋಷಣೆ ಮಾಡಿದೆ.

ಶಿಯೋಮಿ 'ಮಿ ಸೂಪರ್ ಸೇಲ್'..ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರೀ ಡಿಸ್ಕೌಂಟ್ಸ್!!

ಇದೇ ಮೊದಲ ಬಾರಿಗೆ 'ರೆಡ್‌ ಮಿ ನೋಟ್ 5 ಪ್ರೊ' ಸ್ಮಾರ್ಟ್‌ಫೋನ್ ಬೆಲೆ 12,999 ರೂಪಾಯಿಗಳಿಗೆ ಇಳಿಕೆಯಾಗಿದ್ದರೆ, ಮಿ ಎಲ್‌ಇಡಿ ಟಿವಿ 4A ಬೆಲೆ 13,499 ರೂಪಾಯಿಗಳಿಗೆ ಇಳಿಕೆಯಾಗಿದೆ. ಹಾಗಾದರೆ, 'ಮಿ ಸೂಪರ್ ಸೇಲ್'‌ನಲ್ಲಿ ಶಿಯೋಮಿ ರಿಯಾಯಿತಿ ನೀಡಿರುವ ಎಲ್ಲಾ ಉತ್ಪನ್ನಗಳು ಯಾವುವು ಎಂಬ ಲೀಸ್ಟ್ ಅನ್ನು ಮುಂದಿನ ಸ್ಲೈಡರ್‌ಗಳಲ್ಲಿ ನೋಡಿ.

'ಮಿ ಸೂಪರ್ ಸೇಲ್'‌ ಪರಿಚಯ!

'ಮಿ ಸೂಪರ್ ಸೇಲ್'‌ ಪರಿಚಯ!

ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಹಾಗೂ ಅಮೆಜಾನ್‌ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ಗಳ ಭರಾಟೆ ನಡುವೆ ಶಿಯೋಮಿ ಅಕ್ಟೋರ್ 9 ರಿಂದ ಅಕ್ಟೋಬರ್ 15 ರ ವರೆಗೆ 'ಮಿ ಸೂಪರ್ ಸೇಲ್'‌ ಅನ್ನು ಆಯೋಜಿಸಿದೆ. ಈ ಆರು ದಿನಗಳಲ್ಲಿ ಶಿಯೋಮಿ ಅಫಿಷಿಯಲ್ ವೆಬ್‌ಸೈಟ್‌ನಲ್ಲಿ ಬಹುತೇಕ ಎಲ್ಲಾ ಉತ್ಪನ್ನಗಳ ಮೇಲೂ ಭಾರೀ ಡಿಸ್ಕೌಂಟ್ಸ್ ಪಡೆಯಬಹುದಾಗಿದೆ.

ನೋಟ್ 5 ಪ್ರೋ ಬೆಲೆ 2000 ಇಳಿಕೆ!

ನೋಟ್ 5 ಪ್ರೋ ಬೆಲೆ 2000 ಇಳಿಕೆ!

ಭಾರತೀಯ ಸ್ಮಾರ್ಟ್‌ಫೋನ್‌ನ ಮಧ್ಯಮ ಶ್ರೇಣಿಯ ಮಾರುಕಟ್ಟೆಯಲ್ಲಿ ಹೊಸ ಕ್ರಾಂತಿ ಸೃಷ್ಟಿಸಿದ್ದ ರೆಡ್‌ಮಿ ನೋಟ್ 5 ಪ್ರೋ ಈಗ ಮತ್ತಷ್ಟು ಕೈಗೆಟಕುವ ದರದಲ್ಲಿ ಸಿಗಲಿದೆ.4GB64 ವೆರಿಯಂಟ್ ನೋಟ್ 5 ಪ್ರೋ ಫೋನ್ ಬೆಲೆ 14,999 ರೂ.ಗಳಿಂದ 12,999 ರೂ.ಗಳಿಗೆ ಇಳಿಕೆಯಾಗಿದ್ದರೆ, 4GB64 ವೆರಿಯಂಟ್ ಫೋನ್ ಬೆಲೆ ಕೇವಲ 14,999 ರೂ.ಗಳಾಗಿವೆ.

ಮಿ ಮಿಕ್ಸ್ ಬೆಲೆ 7000 ಇಳಿಕೆ!

ಮಿ ಮಿಕ್ಸ್ ಬೆಲೆ 7000 ಇಳಿಕೆ!

ಶಿಯೋಮಿ ಕಂಪೆನಿಯ ಹೈ ಎಂಡ್ ಸ್ಮಾರ್ಟ್‌ಫೋನ್ ಶಿಯೋಮಿ ಮಿ ಮಿಕ್ಸ್ ಬೆಲೆ ಊಹಿಸಲಾಗದಷ್ಟು ಇಳಿಕೆಯಾಗಿದೆ. 29,999 ರೂಪಾಯಿಗಳ ಮೂಲ ಬೆಲೆಯನ್ನು ಹೊಂದಿದ್ದ ಶಿಯೋಮಿ ಮಿ ಮಿಕ್ಸ್ ಸ್ಮಾರ್ಟ್‌ಪೋನ್ ಮೇಲೆ 7000 ರೂ. ಡಿಸ್ಕೌಂಟ್ಸ್ ನೀಡಲಾಗಿದ್ದು, ಈಗ ಕೇವಲ 22,999 ರೂಪಾಯಿಗಳಿಗೆ ಈ ಸ್ಮಾರ್ಟ್‌ಫೋನ್ ಅನ್ನು ಖರೀದಿಸಬಹುದಾಗಿದೆ.

ಮಿ ಎ2 ಈಗ 14,999 ರೂ.!

ಮಿ ಎ2 ಈಗ 14,999 ರೂ.!

ಮೊಬೈಲ್ ಮಾರುಕಟ್ಟೆಯಲ್ಲಿ ಬಿಸಿತುಪ್ಪದಂತೆ ಖರ್ಚಾಗುತ್ತಿದ್ದ ಶಿಯೋಮಿ ಮಿ ಎ2 ಸ್ಮಾರ್ಟ್‌ಪೋನ್ ಅನ್ನು ಈಗ ಕೇವಲ 14,999 ರೂ.ಗಳಿಗೆ ಖರಿದಿಸಬಹುದಾಗಿದೆ. 16,999 ರೂಯಪಾಯಿಗಳ ಮೂಲ ಬೆಲೆಯನನ್ನು ಹೊಂದಿದ್ದ ಮಿ ಎ2 ಸ್ಮಾರ್ಟ್‌ಪೋನ್ ಮೇಲೆ 2000 ರೂ. ಬೆಲೆ ಇಳಿಕೆಯಾಗಿದ್ದು, ಈ ಬಾರಿಯ ಮಿ ಸೇಲ್‌ನ ಬೆಸ್ಟ್ ಡೀಲ್‌ಗಳಲ್ಲಿ ಇದು ಕೂಡ ಒಂದಾಗಿದೆ.

ಮಿ ಎಲ್‌ಇಡಿ ಟಿವಿ 4A

ಮಿ ಎಲ್‌ಇಡಿ ಟಿವಿ 4A

ಬಾರತದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಶಿಯೋಮಿ ಕಂಪೆನಿ ಬಜೆಟ್ ಟಿವಿ 'ಮಿ ಎಲ್‌ಇಡಿ ಟಿವಿ 4A' ಬೆಲೆ ಕೂಡ ಇಳಿಕೆಯಾಗಿದೆ. 13,999 ರೂಪಾಯಿಗಳ ಮೂಲ ಬೆಲೆಯನ್ನು ಹೊಂದಿದ್ದ 'ಮಿ ಎಲ್‌ಇಡಿ ಟಿವಿ 4A' ಸ್ಮಾರ್ಟ್‌ಟಿವಿಯನ್ನು ಈಗ 13,499 ರೂಪಾಯಿಗಳಿಗೆ ಖರೀದಿಸಬಹುದಾಗಿದೆ. ಇದರ ಮೇಲೆ 500 ರೂ. ಬೆಲೆ ಕಡಿತವಾಗಿದೆ.

10000mAh ಮಿ ಪವರ್ ಬ್ಯಾಂಕ್ 2i!

10000mAh ಮಿ ಪವರ್ ಬ್ಯಾಂಕ್ 2i!

10000mAh ಬ್ಯಾಟಿ ಶಕ್ತ ಸಾಮರ್ಥ್ಯದ ಮಿ ಪವರ್ ಬ್ಯಾಂಕ್ 2i ಪವರ್‌ಬ್ಯಾಂಕ್ ಅನ್ನು ಈಗ ಕೇವಲ 699 ರೂಪಾಯಿಗಳಿಗೆ ಖರೀದಿಸಬಹುದಾಗಿದೆ. ಈ ಮೊದಲು 700 ರೂಪಾಯಿಗಳ ಮೂಲಬೆಲೆ ಹೊಂದಿದ್ದ ಈ ಪವರ್‌ಬ್ಯಾಂಕ್ ಮೇಲೆ 100 ರೂ. ಬೆಲೆ ಕಡಿತವಾಗಿದೆ. ಇದನ್ನು ಮಾರುಕಟ್ಟೆಯಲ್ಲೇ ಅತ್ಯಂತ ಕಡಿಮೆ ಬೆಲೆಯ ಗುಣಮಟ್ಟದ ಪವರ್ ಬ್ಯಾಂಕ್ ಎನ್ನಬಹುದು.

ಮಿ ಬೇಸಿಕ್ ಹೆಡ್‌ಫೋನ್

ಮಿ ಬೇಸಿಕ್ ಹೆಡ್‌ಫೋನ್

ಅಂತರ್ನಿರ್ಮಿತ ಮೈಕ್ ಜೊತೆ ಕೆಂಪು ಮತ್ತು ಕಪ್ಪು ಬಣ್ಣಗಳಲ್ಲಿ ಲಬ್ಯವಿರುವ ಮಿ ಬೇಸಿಕ್ ಹೆಡ್‌ಫೋನ್ ಬೆಲೆ ಈಗ ಕೇವಲ 49 ರೂಪಾಯಿಗಳಾಗಿವೆ. ಈ ಮೊದಲು 399 ರೂಪಾಯಿಗಳ ಬೆಲೆ ಹೊಂದಿದ್ದ ಮಿ ಬೇಸಿಕ್ ಹೆಡ್‌ಫೋನ್ ಅನ್ನು ಖರೀದಿಸಲು ಇದು ಶಿಯೋಮಿ ಸ್ಮಾರ್ಟ್‌ಫೋನ್ ಉಪಯೋಗಿಸುತ್ತಿರುವವರಿಗೆ ಇದು ಬೆಸ್ಟ್ ಟೈಮ್ ಎನ್ನಬಹುದು.

Best Mobiles in India

English summary
Xiaomi Mi MIX 2 will be available at a discounted price of Rs 22,999, while Redmi Note 5 Pro will be up for grabs for Rs 12,999 and Rs 14,999 respectively along with no cost EMI options. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+