ಶಿಯೋಮಿ ಸಂಸ್ಥೆಯಿಂದ ಸೆಮಿ-ಇನ್‌-ಇಯರ್‌ ವಿನ್ಯಾಸದ ಇಯರ್‌ಫೋನ್‌ ಬಿಡುಗಡೆ!

|

ಜನಪ್ರಿಯ ಸ್ಮಾರ್ಟ್‌ಫೋನ್‌ ತಯಾರಕ ಶಿಯೋಮಿ ಸಮಸ್ಥೆ ತನ್ನ ಹೊಸ ಮಿ ಟ್ರೂ ವಾಯರ್‌ಲೆಸ್‌ 2C ಹೆಡ್‌ಫೋನ್‌ಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಇದು ಈ ಹಿಂದೆ ಭಾರತದಲ್ಲಿ ಬಿಡುಗಡೆಯಾಗಿದ್ದ ಮಿ ಟ್ರೂ ವಾಯರ್‌ಲೆಸ್ ಇಯರ್‌ಫೋನ್ಸ್ 2 ರ ಅಗ್ಗದ ಆವೃತ್ತಿಯಾಗಿದೆ. ಇನ್ನು ಈ ಇಯರ್‌ಫೋನ್‌ ಮೂಲ ಆವೃತ್ತಿಯು ಮೂಲ ಮಾದರಿಯಂತೆಯೇ 14.2mm ಆಡಿಯೋ ಡ್ರೈವರ್‌ಗಳನ್ನು ಹೊಂದಿದೆ. ಆದರೆ ಇದು LDHC ಹೈ-ರೆಸ್ ಆಡಿಯೊ ಕೊಡೆಕ್ ಬದಲಿಗೆ ಎಎಸಿ ಕೋಡೆಕ್ ಅನ್ನು ಹೊಂದಿದೆ, ಇನ್ನು ಈ ಇಯರ್‌ಫೋನ್‌ 2,499 ರೂ.ಬೆಲೆ ಯನ್ನುಹೊಂದಿದೆ.

ಶಿಯೋಮಿ

ಹೌದು, ಶಿಯೋಮಿ ಕಂಪೆನಿ ತನ್ನ ಹೊಸ ಮಿ ಟ್ರೂ ವಾಯರ್‌ಲೆಸ್‌ 2C ಹೆಡ್‌ಫೋನ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇನ್ನು ಈ ಇಯರ್‌ಫೋನ್‌ ಸಾಕಷ್ಟು ಸರಳ ಮತ್ತು ಸುಲಭವಾಗಿದೆ. ಇದು ಕರೆಗಳ ಸಮಯದಲ್ಲಿ ಬ್ಲೂಟೂತ್ 5.0 ಮತ್ತು ಡ್ಯುಯಲ್ ಮೈಕ್ರೊಫೋನ್‌ಗಳಿಗೆ ಆಂಬಿಯೆಂಟ್ ನಾಯಿಸ್‌ ಕ್ಯಾನ್ಸಲೇಶನ್‌ ಬೆಂಬಲವನ್ನು ಹೊಂದಿದೆ. ಇದು ಉತ್ತಮ ಧ್ವನಿ ಗುಣಮಟ್ಟವನ್ನು ನೀಡುತ್ತದೆ. ಇನ್ನುಳಿದಂತೆ ಈ ಇಯರ್‌ಫೋನ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ವಾಯರ್‌ಲೆಸ್

ಮಿ ಟ್ರೂ ವಾಯರ್‌ಲೆಸ್ ಇಯರ್‌ಫೋನ್ಸ್ 2C ಬ್ಲೂಟೂತ್ 5.0 ಬೆಂಬಲವನ್ನು ಹೊಂದಿದೆ. ಅಲ್ಲದೆ ಇದು 14.2 ಎಂಎಂ ಆಡಿಯೋ ಡ್ರೈವರ್‌ಗಳನ್ನು ಹೊಂದಿದೆ, ಆದರೆ ಇದು ಎಲ್‌ಡಿಹೆಚ್‌ಸಿ ಹೈ-ರೆಸ್ ಆಡಿಯೊ ಕೊಡೆಕ್ ಬದಲಿಗೆ ಎಎಸಿ ಕೋಡೆಕ್ ಅನ್ನು ಹೊಂದಿದೆ. ಇನ್ನು ಮಿ ಟ್ರೂ ವಾಯರ್‌ಲೆಸ್ 2C ಹೆಡ್‌ಸೆಟ್‌ಗಳು ಚಾರ್ಜಿಂಗ್ ಕೇಸ್‌ನಿಂದ ಹೆಡ್‌ಸೆಟ್ ತೆಗೆದುಕೊಂಡ ನಂತರ MIUI ಇಂಟರ್ಫೇಸ್ ಚಾಲನೆಯಲ್ಲಿರುವ ಸ್ಮಾರ್ಟ್‌ಫೋನ್‌ಗಳಿಗೆ ಸ್ವಯಂಚಾಲಿತ ಸಂಪರ್ಕವನ್ನು ಸಹ ಬೆಂಬಲಿಸುತ್ತದೆ.

ಹೆಡ್‌ಫೋನ್‌ಗಳು

ಇನ್ನು ಈ ಹೆಡ್‌ಫೋನ್‌ಗಳು 5 ಗಂಟೆಗಳ ಬ್ಯಾಟರಿ ಅವಧಿಯನ್ನು ನಿರಂತರ ಬಳಕೆಯೊಂದಿಗೆ ಮತ್ತು ಕೇಸ್‌ನಲ್ಲಿ ಚಾರ್ಜ್ ಮಾಡಿದರೆ 20 ಗಂಟೆಗಳ ಬಳಕೆಯನ್ನು ನೀಡುತ್ತದೆ. ಕಂಪನಿಯ ಪ್ರಕಾರ, ಈ ಕೇಸ್‌ ಯುಎಸ್‌ಬಿ ಟೈಪ್-ಸಿ ಪೋರ್ಟ್ ಮೂಲಕ ಚಾರ್ಜ್ ಮಾಡಬಹುದು ಮತ್ತು 1.5 ಗಂಟೆಗಳಲ್ಲಿ ಫುಲ್‌ ಬ್ಯಾಟರಿಯನ್ನು ಹೊಂದಿರುತ್ತದೆ. ಅಲ್ಲದೆ ಈ ಹೊಸ ಹೆಡ್‌ಫೋನ್‌ಗಳು ಪರಿಮಾಣವನ್ನು ಬದಲಾಯಿಸಲು ಅಥವಾ ಮ್ಯೂಸಿಕ್‌ ಅನ್ನು ಬದಲಾಯಿಸಲು ಟಚ್‌ ಕಂಟ್ರೋಲ್‌ ಅನ್ನು ಸಹ ಹೊಂದಿವೆ.

ಡಿವೈಸ್‌

ಇದಲ್ಲದೆ, ಇದು ಬುದ್ಧಿವಂತ ಬಳಕೆ ಪತ್ತೆಗಾಗಿ ಅತಿಗೆಂಪು ಸೆನ್ಸಾರ್‌ ಅನ್ನು ಹೊಂದಿದೆ. ಬಳಕೆದಾರರು ಕಿವಿಯಿಂದ ತೆಗೆದುಹಾಕಿದಾಗ ಅದನ್ನು ಸ್ವಯಂಚಾಲಿತವಾಗಿ ಪ್ಲೇಬ್ಯಾಕ್ ಮಾಡುವುದನ್ನು ನಿಲ್ಲಿಸುತ್ತದೆ. ಇನ್ನು ಈ ಡಿವೈಸ್‌ಗಳು semi-in-ear ವಿನ್ಯಾಸವನ್ನು ಹೊಂದಿವೆ. ಇದನ್ನು ಕಿವಿಯ ವಿನ್ಯಾಸಕ್ಕೆ ತಕ್ಕಂತೆ ಹೊಂದಿಕೊಳ್ಳಲು ಅನುಕೂಲಕರವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಸದ್ಯ ಮಿ ಟ್ರೂ ವಾಯರ್‌ಲೆಸ್ ಇಯರ್‌ಫೋನ್ಸ್ 2C ಭಾರತದಲ್ಲಿ 2,499 ರೂ.ಬೆಲೆ ಯನ್ನುಹೊಂದಿದ್ದು, ಫ್ಲಿಪ್‌ಕಾರ್ಟ್ ಆನ್‌ಲೈನ್ ಸ್ಟೋರ್ ಮತ್ತು ಅಧಿಕೃತ ಶಿಯೋಮಿ ಸ್ಟೋರ್‌ನಲ್ಲಿ ಖರೀದಿಸಬಹುದಾಗಿದೆ.

Most Read Articles
Best Mobiles in India

English summary
Mi True Wireless 2C headsets also support automatic connection to smartphones running the MIUI interface.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X