Xiaomi: ಮಿ ಟ್ರೂ ವಾಯರ್‌ಲೆಸ್‌ ಇಯರ್‌ಫೋನ್‌ 2 ಬಿಡುಗಡೆ!

|

ಚೀನಾ ಮೂಲದ ಜನಪ್ರಿಯ ಸ್ಮಾರ್ಟ್‌ಫೋನ್‌ ಕಂಪೆನಿ ಶಿಯೋಮಿ ಸ್ಮಾರ್ಟ್‌ಫೋನ್‌ ಮಾತ್ರವಲ್ಲದೆ ಇತರೆ ಪ್ರಾಡಕ್ಟ್‌ಗಳಲ್ಲೂ ಕೂಡ ತನ್ನ ಪ್ರಾಬಲ್ಯವನ್ನ ಹೊಂದಿದೆ. ಇನ್ನು ನಿಮಗೆಲ್ಲಾ ತಿಳಿದಿರುವಂತೆ ಟೆಕ್‌ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್‌ಗಳಷ್ಟೇ ಜನಪ್ರಿಯತೆಯನ್ನ ಇಯರ್‌ಫೋನ್‌ಗಳು ಕೂಡ ಬಾರಿ ಜನಪ್ರಿಯತೆಯನ್ನ ಗಳಿಸಿವೆ. ಇದಲ್ಲದೆ ಮಾರುಕಟ್ಟೆಯಲ್ಲಿ ಸಾಕಷ್ಟು ವಿಭಿನ್ನ ಮಾದರಿಯ ಟ್ರೂ ವಾಯರ್‌ಲೆಸ್‌ ಇಯರ್‌ಫೋನ್‌ಗಳು ಲಬ್ಯವಿವೆ. ಆದರೂ ಗ್ರಾಹಕರು ಮಾತ್ರ ತಮ್ಮ ನೆಚ್ಚಿನ ಬ್ರ್ಯಾಂಡ್‌ಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಇದರಲ್ಲಿ ಶಿಯೋಮಿ ಕಂಪೆನಿ ಕೂಡ ಒಂದಾಗಿದ್ದು, ತನ್ನ ವೈವಿಧ್ಯಮಯ ಇಯರ್‌ಫೋನ್‌ಗಳಿಂದ ಗುರುತಿಸಿಕೊಂಡಿದೆ.

ಹೌದು

ಹೌದು, ಶಿಯೋಮಿ ಕಂಪೆನಿ ತನ್ನ ವೈವಿಧ್ಯಮಯವಾದ ಇಯರ್‌ಫೋನ್‌ಗಳನ್ನ ಈಗಾಗಲೇ ಮಾರುಕಟ್ಟೆಗೆ ಪರಿಚಯಿಸಿದೆ. ಸದ್ಯ ಇದೀಗ ತನ್ನ ಹೊಸ ಮಿ ಟ್ರೂ ವಾಯರ್‌ಲೆಸ್ ಇಯರ್‌ಫೋನ್ಸ್ 2 ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇನ್ನು ಈ ಇಯರ್‌ಫೋನ್‌ ಯುವಜನತೆಗೆ ತಕ್ಕಂತ ವಿನ್ಯಾಸವನ್ನ ಒಳಗೊಂಡಿದೆ ಎಂದು ಹೇಳಲಾಗ್ತಿದೆ. ಅಲ್ಲದೆ ಈ ಇಯರ್‌ಫೋನ್‌ ವಿನ್ಯಾಸ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಇಯರ್‌ಫೋನ್ಸ್

ಇನ್ನು ಶಿಯೋಮಿ ಇದೀಗ ಬಿಡುಗಡೆ ಮಾಡಿರುವ ಮಿ ಟ್ರೂ ವೈರ್‌ಲೆಸ್ ಇಯರ್‌ಫೋನ್ಸ್ 2 ಇಯರ್‌ಬಡ್‌ಗಳು 14.2mm ಡೈನಾಮಿಕ್ ಆಡಿಯೋ ಡ್ರೈವರ್ ಅನ್ನು ಒಳಗೊಂಡಿದೆ. ಅಲ್ಲದೆ ಈ ಇಯರ್‌ಫೋನ್‌ ಟೈಟಾನಿಯಂ ಕಾಂಪೋಸಿಟ್ ಡಯಾಫ್ರಾಮ್ ಅನ್ನು ಸಹ ಒಳಗೊಂಡಿರುತ್ತವೆ. ಇನ್ನು ಈ ಟ್ರೂಲಿ ವಾಯರ್‌ಲೆಸ್‌ ಇಯರ್‌ಬಡ್‌ಗಳಂತಹ ವಿನ್ಯಾಸದೊಳಗೆ ಕೇವಲ 15mm ಆಡಿಯೋ ಡ್ರೈವರ್ ಮಾತ್ರ ಹೊಂದಿಕೊಳ್ಳಬಹುದು ಎಂದು ಶಿಯೋಮಿ ಹೇಳಿದೆ. ಇದಲ್ಲದೆ ಮಿ ಟ್ರೂ ವೈರ್‌ಲೆಸ್ ಇಯರ್‌ಫೋನ್ಸ್ 2 ಅರ್ಧದಷ್ಟು ಕಿವಿಯ ವಿನ್ಯಾಸವನ್ನು ಹೊಂದಿದೆ ಮತ್ತು ಈ ವಿನ್ಯಾಸವು ರಿಪ್-ಆಫ್ ಅಲ್ಲ ಎಂದು ಹೇಳಿದೆ.

ವಾಯರ್‌

ಅಲ್ಲದೆ ಈ ಟ್ರೂಲಿ ವಾಯರ್‌ ಲೆಸ್ ಇಯರ್‌ಬಡ್‌ ಧ್ವನಿ ಗುಣಮಟ್ಟ, ಕರೆ ಸ್ಪಷ್ಟತೆ ಮತ್ತು ಬ್ಯಾಟರಿ ದೀರ್ಘ ಬಾಳಿಕೆಯನ್ನು ಇನ್ನಷ್ಟು ಸುಧಾರಿಸಲಾಗಿದೆ. ಅಲ್ಲದೆ ಇದು 14 ಗಂಟೆಗಳ ರೇಟಿಂಗ್ ಬ್ಯಾಟರಿ ಹೊಂದಿದೆ. ಜೊತೆಗೆ ಈ ಇಯರ್‌ಬಡ್ಸ್‌ನ ಮೊಗ್ಗುಗಳು ಒಂದೇ ಚಾರ್ಜ್‌ನಲ್ಲಿ ನಾಲ್ಕು ಗಂಟೆಗಳವರೆಗೆ ಇರುತ್ತದೆ ಎನ್ನಲಾಗ್ತಿದೆ. ಇನ್ನು ಈ ಬ್ಯಾಟರಿ ಜೀವಿತಾವಧಿಯು 80 ಪ್ರತಿಶತ ಪರಿಮಾಣವನ್ನು ಆಧರಿಸಿದೆ ಎಂದು ಹೇಳಲಾಗಿದೆ. ಅಲ್ಲದೆ ಮಿ ಟ್ರೂ ವಾಯರ್‌ಲೆಸ್‌ ಇಯರ್‌ಫೋನ್ಸ್ 2 ಬ್ಲೂಟೂತ್ 5.0 ಮತ್ತು ಡ್ಯುಯಲ್ ನಾಯ್ಸ್‌ ಕ್ಯಾನ್ಸೆಲೇಶನ್‌ ಮೈಕ್ರೊಫೋನ್‌ಗಳನ್ನು ಬೆಂಬಲಿಸುತ್ತದೆ.

ಇಯರ್‌ಬಡ್ಸ್‌

ಇನ್ನು ಈ ಇಯರ್‌ಬಡ್ಸ್‌ ಚಾರ್ಜಿಂಗ್‌ಗಾಗಿ ಯುಎಸ್‌ಬಿ ಟೈಪ್-ಸಿ ಪೋರ್ಟ್ ಇದೆ ಮತ್ತು ಫುಲ್‌ ಚಾರ್ಜ್‌ಗೆ ಸುಮಾರು ಒಂದು ಗಂಟೆ 10 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ ಎನ್ನಲಾಗಿದೆ. ಇದಲ್ಲದೆ ಈ ಟ್ರೂಲಿ ವಾಯರ್‌ಲೆಸ್‌ ಇಯರ್‌ಫೋನ್‌ ಎಲ್‌ಎಚ್‌ಡಿಸಿ ಕೋಡೆಕ್‌ಗೆ ಬೆಂಬಲಿಸಲಿದೆ. ಇನ್ನು ಇದು ಡ್ಯುಯಲ್ ನಾಯ್ಸ್‌ ಕ್ಯಾನ್ಸೆಲೇಶನ್‌ ಮೈಕ್ರೊಫೋನ್ಗಳನ್ನು ಹೊಂದಿದ್ದು ಅದು ಎಕೋ ಸೌಂಡ್‌ ಅನ್ನು 30 ಡೆಸಿಬಲ್‌ಗೆ ಇಳಿಸುತ್ತದೆ. ಜೊತೆಗೆ ತ್ವರಿತ ಜೋಡಣೆಯ ಮೂಲಕ ಮಿ ಸ್ಮಾರ್ಟ್‌ಫೋನ್‌ಗಳೊಂದಿಗೆ ತಡೆರಹಿತ ಸಂಪರ್ಕವನ್ನು ಇದು ಬೆಂಬಲಿಸುತ್ತದೆ.

ಶಿಯೋಮಿ

ಅಲ್ಲದೆ ಶಿಯೋಮಿ ಮಿ ಟ್ರೂ ವಾಯರ್‌ಲೆಸ್‌ ಇಯರ್‌ಫೋನ್ 2 ಭಾರತದಲ್ಲಿ 4,999 ರೂ.ಬೆಲೆಯನ್ನ ಹೊಂದಿದ್ದು, ಇದೇ ಮೇ 12 ರಿಂದ ಮೇ 17 ರವರೆಗೆ 1,000 ರೂ.ಗಳ ರಿಯಾಯಿತಿಯಲ್ಲಿ ಲಭ್ಯವಾಗಲಿದೆ. ಇದಲ್ಲದೆ ಈ ಇಯರ್‌ಬಡ್ಸ್‌ಗಳು ಆರಂಭದಲ್ಲಿ ಅಮೆಜಾನ್ ಇಂಡಿಯಾ, ಮಿ.ಕಾಮ್ ಮತ್ತು ಮಿ ಹೋಮ್ ಸ್ಟೋರ್‌ಗಳಿಂದ 3,999 ರೂಗಳಿಗೆ ಲಭ್ಯವಿರುತ್ತವೆ ಎನ್ನಲಾಗಿದೆ.

Best Mobiles in India

English summary
With its first True Wireless Earbuds in India, Xiaomi is directly competing with Realme. Check price, features and availability of Mi True Wireless Earphones 2.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X