ಶಿಯೋಮಿಯಿಂದ ಹೊಸ ಸ್ಮಾರ್ಟ್‌ ಟಿವಿ ಬಿಡುಗಡೆ; ಕೇವಲ 15,999 ರೂ.ಗೆ 32 ಇಂಚಿನ ಅತ್ಯಾಧುನಿಕ ಟಿವಿ ಲಭ್ಯ

By Gizbot Bureau
|

ಭಾರತದ ಸ್ಮಾರ್ಟ್‌ ಟಿವಿ ಮಾರುಕಟ್ಟೆಯಲ್ಲಿ ಈಗಾಗಲೇ ಶಿಯೋಮಿ ತನ್ನ ಕೈಗೆಟಕುವ ಮತ್ತು ಆಕರ್ಷಕ ಬೆಲೆಗಳಿಂದ ಪ್ರಾಬಲ್ಯ ಸ್ಥಾಪಿಸಿದೆ. ಇತ್ತೀಚಿನ ಬೆಳವಣಿಗೆಯಲ್ಲಿ ಕಂಪನಿ ಸದ್ದಿಲ್ಲದೇ 32 ಇಂಚಿನ ಹೊಸ ಶಿಯೋಮಿ Mi LED ಸ್ಮಾರ್ಟ್‌ ಟಿವಿ 4C ಅನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ.

ಶಿಯೋಮಿಯಿಂದ ಹೊಸ ಸ್ಮಾರ್ಟ್‌ ಟಿವಿ ಬಿಡುಗಡೆ; ಕೇವಲ 15,999 ರೂ

ಶಿಯೋಮಿ Mi LED ಸ್ಮಾರ್ಟ್ ಟಿವಿ 4C ಬೆಲೆ ಎಷ್ಟು..?

ಶಿಯೋಮಿ Mi LED ಸ್ಮಾರ್ಟ್ ಟಿವಿ 4Cಯ ಆರಂಭಿಕ ಬೆಲೆ 15,999 ರೂ. ಇದ್ದು, ಮುಂದೆ ಇದು ಇನ್ನು ಹೆಚ್ಚಾಗುವ ಸಾಧ್ಯತೆ ಇದೆ. ಆದರೆ, ಸದ್ಯಕ್ಕೆ ಖಚಿತ ಬೆಲೆಯನ್ನು ಶಿಯೋಮಿ ಬಿಡುಗಡೆಗೊಳಿಸಿಲ್ಲ. ಶಿಯೋಮಿ Mi LED ಸ್ಮಾರ್ಟ್ ಟಿವಿ 4C ಆಗಸ್ಟ್‌ 5ರಿಂದ ಭಾರತದಲ್ಲಿ ಮಾರಾಟವಾಗುತ್ತಿದೆ. ಹೊಸ ಸ್ಮಾರ್ಟ್‌ ಟಿವಿಯನ್ನು ಖರೀದಿಸಲು ಆಸಕ್ತಿ ಹೊಂದಿರುವವರು ಫ್ಲಿಪ್‌ಕಾರ್ಟ್‌ ಅಥವಾ Mi.com ಗೆ ಭೇಟಿ ನೀಡಿ ಖರೀದಿಸಬಹುದು. ಆಗಸ್ಟ್‌ 9 ರಿಂದ ಪ್ರಾರಂಭವಾಗುವ ಫ್ಲಿಪ್‌ಕಾರ್ಟ್‌ ಬಿಗ್‌ ಸೇವಿಂಗ್‌ ಡೇಸ್‌ ಸೇಲ್‌ ಭಾಗವಾಗಿ ಶಿಯೋಮಿ Mi LED ಸ್ಮಾರ್ಟ್ ಟಿವಿ 4C ಅನ್ನು ಬಿಡುಗಡೆಗೊಳಿಸಲಾಗಿದೆ.

ಶಿಯೋಮಿ Mi LED ಸ್ಮಾರ್ಟ್ ಟಿವಿ 4C ಫೀಚರ್ಸ್‌..!

ಕಳೆದ ವರ್ಷ ಬಿಡುಗಡೆಯಾದ Mi TV 4A Horizon Edition ಮಾದರಿಯನ್ನು ಹೊಸ ಶಿಯೋಮಿ Mi LED ಸ್ಮಾರ್ಟ್ ಟಿವಿ 4C ಹೋಲುತ್ತದೆ. ಹೊಸ ಸ್ಮಾರ್ಟ್‌ ಟಿವಿಯಲ್ಲಿ ಪರದೆಯನ್ನು ಒಂದಿಷ್ಟು ವಿಭಿನ್ನವಾಗಿ ನೀಡಿದ್ದು ಬಿಟ್ಟರೆ, ಎರಡು ಟಿವಿಗಳ ನಡುವೆ ಅಷ್ಟೇನು ವ್ಯತ್ಯಾಸವಿಲ್ಲ. ಆದರೆ, ಆಡಿಯೋದ ಕಾರ್ಯಕ್ಷಮತೆಯಿಂದ ಹೊಸ ಟಿವಿ ವಿಭಿನ್ನವಾಗಿ ನಿಲ್ಲುತ್ತದೆ. ಕಂಪನಿ ಹೊಸ ಟಿವಿಯಲ್ಲಿ ಎರಡು 10W ಶಕ್ತಿಶಾಲಿ ಸ್ಟಿರಿಯೋ ಸ್ಪೀಕರ್‌ಗಳನ್ನು ಅಳವಡಿಸಿದೆ. ಈ ಸ್ಪೀಕರ್‌ಗಳು ಅಸಾಧಾರಣ ಆಡಿಯೋ ಅನುಭವವನ್ನು ನೀಡಬಲ್ಲವು ಎಂದು ಕಂಪನಿ ಹೇಳಿಕೊಂಡಿದೆ.

ಇನ್ನು, ಟಿವಿ ಸ್ಕ್ರೀನ್‌ 1366 x 768 ಪಿಕ್ಸೆಲ್‌ ಎಚ್‌ಡಿ ರೆಸಲ್ಯೂಶನ್ ಮತ್ತು ವೈವಿಡ್‌ ಪಿಕ್ಚರ್ ಎಂಜಿನ್ ಹೊಂದಿದೆ. ಕೊನೆಯದಾಗಿ ಶಿಯೋಮಿ Mi LED ಸ್ಮಾರ್ಟ್ ಟಿವಿ 4C ಅನ್ನು ವೆಬ್‌ ಸಿರೀಸ್‌ ಅಥವಾ ಸಿನಿಮಾಗಳನ್ನು ವೀಕ್ಷಿಸಲು ಬಳಸಿದರೆ, ಅನುಭವವನ್ನು ನೀವು ಇಷ್ಟಪಡುತ್ತೀರಿ ಎಂದು ಶಿಯೋಮಿ ಹೇಳಿಕೊಂಡಿದೆ. ಕ್ವಾಡ್‌ ಕೋರ್‌ 64-ಬಿಟ್ ಪ್ರೊಸೆಸರ್ ಹಾಗೂ 1GB RAM ಮತ್ತು 8GB ಸ್ಟೋರೇಜ್ ಸ್ಪೇಸ್‌ನೊಂದಿಗೆ ಹೊಸ ಟಿವಿ ಬರುತ್ತಿದ್ದು, ವೈಫೈ ಮತ್ತು ಬ್ಲೂಟೂತ್ ಸಂಪರ್ಕ ಬೆಂಬಲದೊಂದಿಗೆ ವಿವಿಧ ಪೋರ್ಟ್‌ಗಳನ್ನು ಹೊಂದಿದೆ. ಗ್ರಾಹಕರ ಇಷ್ಟದಂತೆ ಟೇಬಲ್‌ ಮೇಲೆ ಇಡುವ ಅಥವಾ ಗೋಡೆಗೆ ಅಳವಡಿಸುವ ಆಯ್ಕೆಯನ್ನು ಕಂಪನಿ ನೀಡುತ್ತದೆ.

ಸಾಕಷ್ಟು ಮನರಂಜನೆಯ ಕಂಟೆಂಟ್‌..!

ಶಿಯೋಮಿ ತನ್ನ ಬಳಕೆದಾರರು ವೀಕ್ಷಿಸಲು ಸಾಕಷ್ಟು ವಿಷಯಗಳನ್ನು ಈ ಹೊಸ ಟಿವಿಯಲ್ಲಿ ನೀಡಲು ಮುಂದಾಗಿದೆ. AI ಅಳವಡಿತ ಪ್ಯಾಚ್‌ವಾಲ್ ಓಎಸ್‌ನೊಂದಿಗೆ ಶಿಯೋಮಿ Mi LED ಸ್ಮಾರ್ಟ್ ಟಿವಿ 4C ಬರುತ್ತಿದ್ದು, ಅಮೆಜಾನ್ ಪ್ರೈಮ್ ವಿಡಿಯೋ, ನೆಟ್‌ಫ್ಲಿಕ್ಸ್, ಡಿಸ್ನಿ+ ಹಾಟ್‌ಸ್ಟಾರ್, ಜೀ5, ಆಲ್ಟ್‌ ಬಾಲಾಜಿ, ಸೋನಿ ಲೈವ್ ಮತ್ತು ಜಿಯೋ ಸಿನಿಮಾ ಸೇರಿ 25ಕ್ಕೂ ಹೆಚ್ಚು ವೇದಿಕೆಗಳಿಗೆ ಪ್ರವೇಶ ನೀಡುತ್ತದೆ. ಅದಲ್ಲದೇ, ಸ್ಥಳೀಯ ಕಂಟೆಂಟ್‌ ವೇದಿಕೆಗಳಾದ ಸನ್‌ನೆಕ್ಸ್ಟ್‌, ಕುಟುಕ್‌, ಎಪಿಕಾನ್‌ ಮತ್ತು ಹೋಯ್‌ಚೋಯ್‌ ಕೂಡ ಬಳಕೆದಾರರಿಗೆ ಲಭ್ಯವಿದ್ದು, ಓಎಸ್ 16 ಭಾಷೆಗಳಲ್ಲಿ ನಿಮಗೆ ವಿಡಿಯೋ ಕಂಟೆಂಟ್‌ ನೀಡುತ್ತದೆ.

ಇದಲ್ಲದೇ, Mi Quick Wake ಫೀಚರ್ ಬಳಕೆದಾರರು ತಾವು ನೋಡುತ್ತಿರುವ ಕಂಟೆಂಟ್ ಅನ್ನು ಪುನರಾರಂಭಿಸಲು ಅನುವು ಮಾಡಿಕೊಡುತ್ತದೆ. ಅದು ಚಲನಚಿತ್ರವಾಗಿರಲಿ ಅಥವಾ ಶೋ ಆಗಿರಲಿ. ಗೂಗಲ್ ಅಸಿಸ್ಟೆಂಟ್ ಕೂಡ ಶಿಯೋಮಿ Mi LED ಸ್ಮಾರ್ಟ್ ಟಿವಿ 4Cಯಲ್ಲಿ ಇದ್ದು, ಬಳಕೆದಾರರು ತಮ್ಮ ಧ್ವನಿಯ ಮೂಲಕವೇ ಸ್ಮಾರ್ಟ್‌ ಟಿವಿಯನ್ನು ನಿಯಂತ್ರಿಸಬಹುದು.

ಶಿಯೋಮಿ Mi LED ಸ್ಮಾರ್ಟ್ ಟಿವಿ 4Cಗೆ ಸ್ಪರ್ಧೆ ಹೇಗಿದೆ..?

ಶಿಯೋಮಿ Mi LED ಸ್ಮಾರ್ಟ್ ಟಿವಿ 4C ಇತರೆ ಸ್ಮಾರ್ಟ್‌ ಟಿವಿಗಳಿಗೆ ಭಾರೀ ಸ್ಪರ್ಧೆಯನ್ನು ನೀಡುತ್ತಿದೆ. ಪ್ರಮುಖವಾಗಿ ರಿಯಲ್‌ಮಿ, ಸ್ಯಾಮ್‌ಸಂಗ್, ಟಿಸಿಎಲ್, ಎಲ್‌ಜಿ ಮತ್ತು ಇತರ ಹಲವು ಬ್ರಾಂಡ್‌ಗಳಿಂದ ಹೆಚ್ಚು ಮಾರಾಟವಾಗುವ ಮಾದರಿಗಳಿವೆ. ಇವುಗಳಲ್ಲಿ ಹೆಚ್ಚಿನ ಸ್ಮಾರ್ಟ್ ಟಿವಿ ಮಾದರಿಗಳು ಬಹುತೇಕ ಒಂದೇ ರೀತಿಯ ಫೀಚರ್‌ ಮತ್ತು ಬೆಲೆಯನ್ನು ಹೊಂದಿವೆ. ಆದರೆ, Mi TV ಶ್ರೇಣಿಯಲ್ಲಿ ಆಂಡ್ರಾಯ್ಡ್ ಟಿವಿ OS , ಕಸ್ಟಮೈಸ್ ಪ್ಯಾಚ್‌ವಾಲ್ UI ಹಾಗೂ ಕ್ರೋಮ್‌ಕ್ಯಾಸ್ಟ್‌ಗೆ ಬೆಂಬಲವಿರುವುದರಿಂದ ಇತರೆ ಟಿವಿಗಳಿಗಿಂತ ಭಿನ್ನವಾಗಿ ನಿಲ್ಲುತ್ತದೆ.

Best Mobiles in India

Read more about:
English summary
Xiaomi is already dominating the smart TV market segment in India with its affordable offerings. Now, Xiaomi has launched yet another model in the country silently. The model in question is the Xiaomi Mi LED Smart TV 4C 32-inch. Here’s all that the Xiaomi Mi TV 4C 32-inch has to offer for Rs. 15,999.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X