ಶೀಘ್ರದಲ್ಲೇ 75 ಇಂಚಿನ ಮಿ Tv 5 ಪ್ರೊ ಸ್ಮಾರ್ಟ್‌ಟಿವಿ ಖರೀದಿಗೆ ಲಭ್ಯ!
ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ಟಿವಿ ಮಾರುಕಟ್ಟೆ ಬಹಳ ವಿಸ್ತಾರವಾಗಿ ಬೆಳೆಯುತ್ತಿದೆ. ಹಲವಾರು ಪ್ರಸಿದ್ಧ ಕಂಪೆನಿಗಳು ಸ್ಮಾರ್ಟ್‌ಟಿವಿ ವಲಯದಲ್ಲಿ ಪ್ರಭುತ್ವ ಸಾಧಿಸವೆ. ಇವುಗಳಲ್ಲಿ ಶಿಯೋಮಿ ಕಂಪೆನಿ ಕೂಡ ಒಂದಾಗಿದ್ದು, ಈಗಾಗ್ಲೆ ಹಲವು ಮಾದರಿಯ ಸ್ಮಾರ್ಟ್‌ಟಿವಿಗಳನ್ನ ಪರಿಚಯಿಸಿ ಗ್ರಾಹಕರ ಮನಗೆದ್ದಿದೆ. ಅದರಲ್ಲೂ ಶಿಯೋಮಿ ತನ್ನ ಜನಪ್ರಿಯ ಮಿ Tv5 ಸರಣಿಯ ಸ್ಮಾರ್ಟ್‌ಟಿವಿಗಳನ್ನ ಪರಿಚಯಿಸಿದ್ದು, ಇದೀಗ ಶಿಯೋಮಿ ಮಿ Tv5 ಪ್ರೊ 75 ಇಂಚಿನ ಸರಣಿಯ ಸ್ಮಾರ್ಟ್‌ಟಿವಿಯನ್ನ ಚೀನಾದಲ್ಲಿ ಮಾರಾಟ ಮಾಡಲು ಪ್ಲ್ಯಾನ್ ರೂಪಿಸಿಕೊಂಡಿದೆ.

ಹೌದು, ಚೀನಾ ಮೂಲದ ಜನಪ್ರಿಯ ಕಂಪೆನಿ ಶಿಯೋಮಿ ತನ್ನ ಮಿ Tv5 ಸರಣಿಯಲ್ಲಿ 55 ಇಂಚು, 65 ಇಂಚು, 75 ಇಂಚಿನ ಮಾದರಿಗಳಲ್ಲಿ ಸ್ಮಾರ್ಟ್‌ಟಿವಿಗಳನ್ನ ಪರಿಚಯಿಸಿದೆ. ಅಲ್ಲದೆ ಮಿ Tv 5 ಪ್ರೊ ಸ್ಮಾರ್ಟ್‌ಟಿವಿಯನ್ನು ಸಹ ಪರಿಚಯಿಸಿದೆ. ಆದರೆ ಮಾರುಕಟ್ಟೆಯಲ್ಲಿ ಇಲ್ಲಿಯವರೆಗೂ ಮಿ Tv 5 ಪ್ರೊ 75 ಇಂಚಿನ ಸ್ಮಾರ್ಟ್‌ಟಿವಿ ಖರೀದಿಗೆ ಲಭ್ಯವಿರಲಿಲ್ಲ. ಆದರೆ ಇದೀಗ ಇದೇ ಮಾರ್ಚ್ 13 ರಿಂದ ಚೀನಾ ಮಾರುಕಟ್ಟೆಯಲ್ಲಿ ಮಿ Tv 5 ಪ್ರೊ 75 ಸ್ಮಾರ್ಟ್‌ಟಿವಿ ಮಾರಾಟವಾಗಲಿದೆ.

ಶಿಯೋಮಿ ಮಿ Tv 5 ಪ್ರೊ 75 ಇಂಚಿನ ಸ್ಮಾರ್ಟ್‌ಟಿವಿ
ಶಿಯೋಮಿ ಕಂಪೆನಿಯ ಮಿ Tv 5 ಪ್ರೊ ಸ್ಮಾರ್ಟ್‌ಟಿವಿ 75 ಇಂಚಿನ ಸ್ಕ್ರೀನ್ ಅನ್ನು ಹೊಂದಿರುವ ಸ್ಮಾರ್ಟ್‌ಟಿವಿ ಆಗಿದೆ. ಮನೆಯಲ್ಲಿಯೇ ಥಿಯೆಟರ್ ಅನುಭವವನ್ನು ಬಳಕೆದಾರರು ಪಡೆಯಬಹುದಾಗಿದೆ. ಅಲ್ಲದೆ ದೊಡ್ಡದಾದ ಪರದೆಯನ್ನ ಇದು ಹೊಂದಿರುವುದರಿಂದ ಕಾರ್ಯಕ್ರಮಗಳ ವೀಕ್ಷಣೆಯಲ್ಲಿ ರಿಯಾಲಿಟಿ ಎದ್ದು ಕಾಣಲಿದೆ. ಅಲ್ಲದೆ ಸ್ಕ್ರೀನ್‌ನ ಕಲರ್ ಕಾಂಬಿನೇಷನ್ ಕೂಡ ಗ್ರಾಹಕರಿಗೆ ಉತ್ತಮ ಅನುಭವ ನೀಡಲಿದೆ ಎಂದು ಕಂಪೆನಿ ಹೇಳಿಕೊಂಡಿದೆ.

ವಿನ್ಯಾಸ
ಈ ಸ್ಮಾರ್ಟ್‌ಟಿವಿ 4K ಕ್ವಾಂಟಮ್ ಡಾಟ್ ಸ್ಕ್ರೀನ್ ಮಾದರಿಯನ್ನ ಹೊಂದಿದೆ. ಇದು 106% NTSC ಬಣ್ಣದ ಪದರವನ್ನು ಒಳಗೊಂಡಿದೆ. ಅಲ್ಲದೆ ಈ ಸ್ಮಾರ್ಟ್‌ಟಿವಿ 8K ಪ್ಲೇ ಬ್ಯಾಕ್ ಕಂಟೆಂಟ್ ಅನ್ನು ಹೊಂದಿದ್ದು, HDR10+ MEMC ಚಿಪ್‌ನಿಂದ ಆವೃತ್ತ ಆಗಿದೆ. ಇನ್ನು ಈ ಸ್ಮಾರ್ಟ್‌ಟಿವಿಯ ಸ್ಕ್ರೀನ್ ಟು ಬಾಡಿ ನಡುವಿನ ಅನುಪಾತ 97% ರಷ್ಟಿದೆ. ಜೊತೆಗೆ TV5 ಪ್ರೊ 75 ಸ್ಮಾರ್ಟ್‌ಟಿವಿ ಮೆಟಲ್ ಬಾಡಿ ವಿನ್ಯಾಸವನ್ನ ಹೊಂದಿದ್ದು, ಇದರ ದೇಹ ರಚನೆ 10.9mm ಥಿಕ್‌ನೆಸ್‌ನಿಂದ ಕೂಡಿದೆ.

ವಿಶೇಷತೆ
Tv5 ಪ್ರೊ 75 ಇಂಚಿನ ಸ್ಮಾರ್ಟ್‌ಟಿವಿ 12nm ಪ್ರೊಸೆಸರ್ ಅನ್ನು ಒಳಗೊಂಡಿದೆ. ಇನ್ನು ಈ ಸ್ಮಾರ್ಟ್‌ಟಿವಿಯಲ್ಲಿ ಕ್ಸಿಯೋ AI ವಾಯ್ಸ್ ಅಸಿಸ್ಟೆಂಟ್ ಅನ್ನು ನೀಡಲಾಗಿದ್ದು, ಇದು ಪ್ರಮುಖ ಧ್ವನಿಯನ್ನು ಗುರುತಿಸಬಲ್ಲದು. ಅಲ್ಲದೆ ಈ ವಾಯಿಸ್ ಅಸಿಸ್ಟೆಂಟ್ ಮೂಲಕ ನಿಮ್ಮ ಸ್ಮಾರ್ಟ್‌ಟಿವಿಯನ್ನು ನಿಂಯತ್ರಿಸಬಹುದಾಗಿದೆ. ಈ ದೊಡ್ಡ ಟಿವಿ ನಿಮ್ಮ ಸ್ಮಾರ್ಟ್ ಹೋಮ್ ಕಂಟ್ರೋಲ್ ಸೆಂಟರ್ ಆಗಿಯೂ ಕೂಡ ಕಾರ್ಯನಿರ್ವಹಿಸಲಿದೆ. ಇದಕ್ಕಾಗಿ ಇದರಲ್ಲಿ AI ಚಾಲಿತ ಪ್ಯಾಚ್‌ವಾಲ್ ಇಂಟರ್ಫೇಸ್ ಅನ್ನು ಅಳವಡಿಸಲಾಗಿದೆ.

ಬೆಲೆ ಮತ್ತು ಲಭ್ಯತೆ
ಸದ್ಯ ಈ ಸ್ಮಾರ್ಟ್‌ಟಿವಿ ಇದೇ ಮಾರ್ಚ್ 13 ರಿಂದ ಚೀನಾ ಮಾರುಕಟ್ಟೆಯಲ್ಲಿ ಮಾರಾಟವಾಗಲಿದ್ದು, ಇದು ಯುವಾನ್ 9,999 (ಅಂದಾಜು 1,06,623.ರೂ,) ಬೆಲೆಯನ್ನ ಹೊಂದಿದೆ. ಇದರ ಜೊತೆಗೆ 55 ಇಂಚು ಮತ್ತು 65 ಇಂಚಿನ ಶಿಯೋಮಿ ಮಿ Tv 5 ಪ್ರೊ ಸ್ಮಾರ್ಟ್‌ಟಿವಿಗಳು ಕೂಡ ಮಾರಾಟವಾಗಲಿವೆ. ಇದರಲ್ಲಿ 55 ಇಂಚಿನ ಮಿ Tv 5 ಪ್ರೊ ಆವೃತ್ತಿಯು ಯುವಾನ್ 3,699 (ಅಂದಾಜು 39,548.ರೂ ) ಬೆಲೆಯನ್ನು ಹೊಂದಿದೆ. ಅಲ್ಲದೆ 65-ಇಂಚಿನ ಮಿ Tv 5 ಪ್ರೊ ಯುವಾನ್ 4,999 (ಅಂದಾಜು 53,348.ರೂ,) ಬೆಲೆಗೆ ಲಭ್ಯವಾಗಲಿದೆ.


Click it and Unblock the Notifications




