ಶಿಯೋಮಿ ಸಂಸ್ಥೆಯಿಂದ Mi TV E43K ಸ್ಮಾರ್ಟ್‌ಟಿವಿ ಬಿಡುಗಡೆ!
ಚೀನಾ ಮೂಲದ ಶಿಯೋಮಿ ಕಂಪೆನಿ ಟೆಕ್ ವಲಯದಲ್ಲಿ ಜನಪ್ರಿಯ ಸ್ಮಾರ್ಟ್‌ಫೋನ್ ತಯಾರಕ ಎನಿಸಿಕೊಂಡಿದೆ. ತನ್ನ ವೈವಿದ್ಯಮಯ ಸ್ಮಾರ್ಟ್‌ಫೋನ್‌ಗಳಿಂದ ಸ್ಮಾರ್ಟ್‌ಫೋನ್ ಪ್ರಿಯರ ನೆಚ್ಚಿನ ಬ್ರ್ಯಾಂಡ್ ಆಗಿ ಗುರುತಿಸಿಕೊಂಡಿದೆ. ಅಲ್ಲದೆ ಇತರೆ ಸ್ಮಾರ್ಟ್ ಪ್ರಾಡಕ್ಟ್‌ಗಳ ವಲಯದಲ್ಲೂ ಕೂಡ ಶಿಯೋಮಿ ತನ್ನ ಪ್ರಾಬಲ್ಯವನ್ನ ಸಾಧಿಸಿದೆ. ಇನ್ನು ಸ್ಮಾರ್ಟ್ ಟಿವಿ ಮಾರುಕಟ್ಟೆಯಲ್ಲಿ ಶಿಯೋಮಿ ತನ್ನ ಮಿ ಟಿವಿ ಪ್ರಾಡಕ್ಟ್‌ಗಳ ಮೂಲಕ ಸಂಚಲನವನ್ನೇ ಸೃಷ್ಟಿಸಿದೆ. ಇದೀಗ ಮತ್ತೊಂದು ಹೊಸ ಮಾದರಿಯ ಸ್ಮಾರ್ಟ್ ಟಿವಿಯನ್ನ ಬಿಡುಗಡೆ ಮಾಡಿದೆ.

ಹೌದು,ಜನಪ್ರಿಯ ಸ್ಮಾರ್ಟ್‌ಫೋನ್ ತಯಾರಕ ಶಿಯೋಮಿ ತನ್ನ ಹೊಸ ಮಿ ಟಿವಿ E43K ಅನ್ನು ಬಿಡುಗಡೆ ಮಾಡಿದೆ. ಇದು ಶಿಯೋಮಿ ಕಂಪೆನಿಯ E ಸರಣಿಯ ಸ್ಮಾರ್ಟ್ ಟಿವಿಗಳ ಸಾಲಿಗೆ ಸೇರಿದೆ. ಇನ್ನು ಈ ಮಿ ಟಿವಿ E43K, ಹೆಸರೇ ಸೂಚಿಸುವಂತೆ, 43 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಜೊತೆಗೆ ಎಲೆಕ್ಟ್ರಾನಿಕ್ಸ್ ಬಜೆಟ್ ಸ್ನೇಹಿ ವಿಧಾನವನ್ನು ಒಳಗೊಂಡಿದೆ. ಇನ್ನು ಈ ಸ್ಮಾರ್ಟ್‌ಟಿವಿ ಶಿಯೋಮಿಯ ಪ್ಯಾಚ್‌ವಾಲ್ ಇಂಟರ್ ಫೇಸ್ ಅನ್ನು ಒಳಗೊಂಡಿದೆ.ಇನ್ನು ಈ ಸ್ಮಾರ್ಟ್‌ಟಿವಿ ಅಂಚಿನ-ಕಡಿಮೆ ವಿನ್ಯಾಸ ಮತ್ತು ಫುಲ್-ಎಚ್ಡಿ ರೆಸಲ್ಯೂಶನ್ ಹೊಂದಿದೆ. ಇನ್ನು ಈ ಸ್ಮಾರ್ಟ್‌ಟಿವಿ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಮಿ tv E43k
ಶಿಯೋಮಿಯ Mi TV E43K 60Hz ರಿಫ್ರೆಶ್ ರೇಟ್ ಅನ್ನು ಹೊಂದಿರುವ ಡಿಸ್‌ಪ್ಲೇಯನ್ನ ಹೊಂದಿದೆ. ಇನ್ನು ಈ ಡಿಸ್‌ಪ್ಲೇಯು 1,920x1,080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಅನ್ನು ಹೊಂದಿದೆ. ಅಲ್ಲದೆ ಇದು 178 ಡಿಗ್ರಿ ವ್ಯೂವ್ ಪಾಯಿಂಟ್ ಅನ್ನು ಹೊಂದಿದೆ. ಇದಲ್ಲದೆ ಈ ಡಿಸ್‌ಪ್ಲೇ ಫುಲ್ ಹೆಚ್‌ಡಿ ಡಿಸ್ಪ್ಲೇ ಆಗಿದೆ ಎನ್ನಲಾಗಿದೆ. ಇನ್ನು ಈ ಸ್ಮಾರ್ಟ್‌ಟಿವಿ ಡ್ಯುಯಲ್ ಕೋರ್ ಪ್ರೊಸೆಸರ್ 1.4GHz ಕ್ಲಾಕ್ ವೇಗ ಮತ್ತು ಮಾಲಿ -450 mp 2 GPU ಹೊಂದಿದೆ. ಇದು 1GB RAM ಮತ್ತು 8GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ.

ಇನ್ನು ಈ ಸ್ಮಾರ್ಟ್‌ಟಿವಿ ಇದು ವೈ-ಫೈ ಸಂಪರ್ಕವನ್ನ ಪಡೆದುಕೊಂಡಿದ್ದು ಅತಿಗೆಂಪು ಜೊತೆ ಬರುತ್ತದೆ. ಇನ್ನು Mi TV E43K ನಲ್ಲಿ ಯಾವುದೇ ಬ್ಲೂಟೂತ್ ಕನೆಕ್ಟಿವಿಟಯನ್ನ ಹೊಂದಿಲ್ಲ ಎನ್ನಲಾಗ್ತಿದೆ. ಆದರೆ ಇನ್ಫ್ರಾರೆಡ್ ಮೂಲಕ ರಿಮೋಟ್ ಕಾರ್ಯನಿರ್ವಹಿಸುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಮಿ ಟಿವಿ E43K ಎರಡು ಎಚ್‌ಡಿಎಂಐ ಪೋರ್ಟ್‌ಗಳನ್ನು ಹೊಂದಿರಲಿದೆ. ಅದರಲ್ಲಿ ಒಂದು ಎಚ್‌ಡಿಎಂಐ ಎಆರ್‌ಸಿ (ಹೈ ಡೆಫಿನಿಷನ್ ಮಲ್ಟಿಮೀಡಿಯಾ ಇಂಟರ್ಫೇಸ್ ಆಡಿಯೊ ರಿಟರ್ನ್ ಚಾನೆಲ್) ಅನ್ನು ಬೆಂಬಲಿಸಲಿದೆ.

ಇದಲ್ಲದೆ ಎರಡು ಯುಎಸ್‌ಬಿ ಪೋರ್ಟ್‌ಗಳು ಮತ್ತು ಎತರ್ನೆಟ್ ಪೋರ್ಟ್ ಅನ್ನು ಸಹ ನೀಡಲಾಗಿದೆ. ಆಡಿಯೊಗಾಗಿ, ಟಿವಿ ಡಿಟಿಎಸ್ 2.0 ನೊಂದಿಗೆ ಎರಡು 8 ಡಬ್ಲ್ಯೂ ಸ್ಪೀಕರ್‌ಗಳನ್ನು ಹೊಂದಿದೆ. ಇದು ಪ್ಯಾಚ್‌ವಾಲ್ ಇಂಟರ್ಫೇಸ್‌ನಲ್ಲಿ ರನ್ ಆಗಲಿದೆ ಎನ್ನಲಾಗಿದೆ. ಇದಲ್ಲದೆ ಒಂದೇ ಸ್ಥಳದಲ್ಲಿ ಹೆಚ್ಚು ಅನುಕೂಲಕರ ಮನರಂಜನಾ ಅನುಭವವನ್ನು ನೀಡಲಿದೆ. ಜೊತೆಗೆ ಮಿ ಆಪ್ ಸ್ಟೋರ್ ಅನ್ನು ಸಹ ನೀಡಲಾಗಿದೆ. ಇನ್ನು ಈ ಸ್ಮಾರ್ಟ್‌ಟಿವಿಯ ಬೆಲೆ CNY 1,099 (ಸರಿಸುಮಾರು 11,700 ರೂ.) ಆಗಿದೆ ಎನ್ನಲಾಗಿದೆ.


Click it and Unblock the Notifications