Home
ಸುದ್ದಿಜಾಲ

ಶಿಯೋಮಿ ಮಿ ಕ್ಯೂ 1 75 ಸ್ಮಾರ್ಟ್‌ಟಿವಿ ಲಾಂಚ್‌!..QLED 4K UHD ಡಿಸ್‌ಪ್ಲೇ ವಿಶೇಷತೆ!

ಜನಪ್ರಿಯ ಶಿಯೋಮಿ ಕಂಪೆನಿ ಸ್ಮಾರ್ಟ್‌ಫೋನ್‌ ಮಾತ್ರವಲ್ಲದೆ ಸ್ಮಾರ್ಟ್‌ಟಿವಿ ವಲಯದಲ್ಲಿಯೂ ಸಹ ಸೈ ಎನಿಸಿಕೊಂಡಿದೆ. ಈಗಾಗಲೇ ಹಲವು ಆಕರ್ಷಕ ಸ್ಮಾರ್ಟ್‌ಟಿವಿಗಳನ್ನು ಪರಿಚಯಿಸಿರುವ ಶಿಯೋಮಿ ಇದೀಗ ತನ್ನ ಹೊಸ ಮಿ ಟಿವಿ ಕ್ಯೂ 1 75-ಇಂಚನ್ನು ಬಿಡುಗಡೆ ಮಾಡಿದೆ. ಇದು 120Hz ರಿಫ್ರೆಶ್ ರೇಟ್‌ ಅನ್ನು ಹೊಂದಿದ್ದು, ಹೆಚ್‌ಡಿಆರ್ + ಪ್ಯಾನಲ್ ಅನ್ನು ಒಳಗೊಂಡಿದೆ. ಜೊತೆಗೆ ಈ ಸ್ಮಾರ್ಟ್‌ಟಿವಿ 2GB RAM ಅನ್ನು ಹೊಂದಿದೆ.

ಶಿಯೋಮಿ

ಹೌದು, ಶಿಯೋಮಿ ಕಂಪೆನಿ ತನ್ನ ಮಿ ಟಿವಿ Q1 75 ಇಂಚಿನ ಸ್ಮಾರ್ಟ್ ಟಿವಿಯನ್ನು ಬಿಡುಗಡೆ ಮಾಡಿದೆ. ಇದು 75 ಇಂಚಿನ QLED 4K UHD ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ಟಿವಿ ಕ್ವಾಂಟಮ್‌ ಡಾಟ್‌ ಟೆಕ್ನಾಲಜಿ, ಡಾಲ್ಬಿ ವಿಷನ್‌ ಮತ್ತು ಹೆಚ್‌ಡಿಆರ್‌ 10+ ಬೆಂಬಲವನ್ನು ಹೊಂದಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಟಿವಿ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಶಿಯೋಮಿ

ಶಿಯೋಮಿ ಮಿ ಕ್ಯೂ 1 75 ಸ್ಮಾರ್ಟ್‌ಟಿವಿ 3,840 x 2,160 ಪಿಕ್ಸೆಲ್‌ಗಳ ರೆಸಲ್ಯೂಶನ್ ಸಾಮರ್ಥ್ಯದ 75 ಇಂಚಿನ QLED 4K UHD ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ ಮತ್ತು ವಿಶಾಲ ಗೋಚರತೆಗಾಗಿ 178 ಡಿಗ್ರಿ ವ್ಯೂವ್‌ ಪಾಯಿಂಟ್‌ ಅನ್ನು ಹೊಂದಿದೆ. ಇದಲ್ಲದೆ ಈ ಸ್ಮಾರ್ಟ್‌ಟಿವಿ 30W ಸ್ಟಿರಿಯೊ ಸ್ಪೀಕರ್ ವ್ಯವಸ್ಥೆಯನ್ನು ಎಂಬೆಡ್ ಮಾಡುತ್ತದೆ, ಇದರಲ್ಲಿ ಎರಡು ಟ್ವೀಟರ್‌ಗಳು ಮತ್ತು ನಾಲ್ಕು ವೂಫರ್‌ಗಳು ಸೇರಿವೆ. ಸ್ಪೀಕರ್ ಸಿಸ್ಟಮ್ ಡಾಲ್ಬಿ ಆಡಿಯೋ ಮತ್ತು ಡಿಟಿಎಸ್-ಎಚ್ಡಿ ಬೆಂಬಲವನ್ನು ಪಡೆಯುತ್ತದೆ.

ಸ್ಮಾರ್ಟ್‌ಟಿವಿ

ಇನ್ನು ಈ ಸ್ಮಾರ್ಟ್‌ಟಿವಿ 1.5GHz ಮೀಡಿಯಾ ಟೆಕ್ MT9611 ಪ್ರೊಸೆಸರ್ ಹೊಂದಿದ್ದು,ಇದು ಆಂಡ್ರಾಯ್ಡ್ 10 ಓಎಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಜೊತೆಗೆ ಮಾಲಿ G52 P 2 GPU, 2GB RAM ಮತ್ತು 32GB ಲೋಕಲ್‌ ಸ್ಟೋರೇಜ್‌ ಅನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ಟಿವಿ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಯೂಟ್ಯೂಬ್ ಅಪ್ಲಿಕೇಶನ್‌ಗಳನ್ನು ಹೊಂದಿದೆ. ಈ ಸ್ಮಾರ್ಟ್‌ಟಿವಿ ಅಲೆಕ್ಸಾ ಮತ್ತು ಗೂಗಲ್ ಅಸಿಸ್ಟೆಂಟ್ ಅನ್ನು ಬೆಂಬಲಿಸಲಿದೆ. ಇದು ಇಂಟರ್‌ ಬಿಲ್ಟ್‌ ಮೈಕ್ರೊಫೋನ್ ಹ್ಯಾಂಡ್ಸ್-ಫ್ರೀ ಕಂಟ್ರೋಲ್‌ ಅನ್ನು ಸಹ ಒಳಗೊಂಡಿದೆ. ಜೊತೆಗೆ ಕ್ವಾಂಟಮ್ ಡಾಟ್ ತಂತ್ರಜ್ಞಾನ ವನ್ನು ಸಹ ಬೆಂಬಲಿಸಲಿದೆ.

ಅಮೆಜಾನ್

ಇದಲ್ಲದೆ, ಮಿ ವಾಯ್ಸ್ ರಿಮೋಟ್‌ನೊಂದಿಗೆ ನೆಟ್‌ಫ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್ ವೀಡಿಯೊಗಾಗಿ ಮೀಸಲಾದ ಗುಂಡಿಗಳನ್ನು ನೀವು ಪಡೆಯುತ್ತೀರಿ. ಲೋಕಲ್‌ ಟಿವಿ ಸ್ಟೇಷನ್ ಪ್ರಸಾರಕ್ಕಾಗಿ ಇಂಟರ್‌ಬಿಲ್ಟ್‌ ಡಿಜಿಟಲ್ ಟ್ಯೂನರ್ ಇದೆ. ವೈಡ್‌ಸ್ಕ್ರೀನ್‌ನಲ್ಲಿ ಉತ್ತಮ ಗೇಮಿಂಗ್ ಅನುಭವವನ್ನು ಹೊಂದಲು ಬಯಸುವ ಬಳಕೆದಾರರಿಗಾಗಿ ಶಿಯೋಮಿ ಕಡಿಮೆ ಲ್ಯಾಟೆನ್ಸಿ ಮೋಡ್ ಅನ್ನು ಸಂಯೋಜಿಸಿದೆ. ಮಿ ಟಿವಿ ಕ್ಯೂ 1 75-ಇಂಚಿನ ಕನೆಕ್ಟಿವಿಟಿ ಆಯ್ಕೆಗಳಲ್ಲಿ- ವೈಫೈ, ಬ್ಲೂಟೂತ್ 5.0, ಒಂದು ಹೆಚ್‌ಡಿಎಂಐ 2.1 ಪೋರ್ಟ್, ಎರಡು ಹೆಚ್‌ಡಿಎಂಐ 2.0 ಪೋರ್ಟ್‌ಗಳು, ಎರಡು ಯುಎಸ್‌ಬಿ ಪೋರ್ಟ್‌ಗಳು, 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಅನ್ನು ಬೆಂಬಲಿಸಲಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಹೊಸ ಮಿ ಟಿವಿ ಕ್ಯೂ 1 75-ಇಂಚಿನ ಸ್ಮಾರ್ಟ್‌ಟಿವಿ ಬೆಲೆ ಯುರೋ 1,299 (ಅಂದಾಜು 1,14,145 ರೂ.) ನಲ್ಲಿ ನಿಗದಿಪಡಿಸಲಾಗಿದೆ. ಇದು ಮಾರ್ಚ್ 2021 ರಿಂದ ಯುರೋಪಿನಲ್ಲಿ ಮಾರಾಟವಾಗಲಿದೆ. ಶಿಯೋಮಿಯಿಂದ ಹೊಸ ಸ್ಮಾರ್ಟ್ ಟಿವಿ ಫ್ರಾನ್ಸ್, ಜರ್ಮನಿ, ಇಟಲಿಯಲ್ಲಿ ಖರೀದಿಗೆ ಲಭ್ಯವಿರುತ್ತದೆ. ಇನ್ನು ಮಾರಾಟದ ಮೊದಲ ದಿನದಂದು ಯುರೋ 999 (ಸುಮಾರು 87,900 ರೂ.) ಬೆಲೆಗೆ ಸ್ಮಾರ್ಟ್ ಟಿವಿಯನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಶಿಯೋಮಿ ಉಲ್ಲೇಖಿಸಿದೆ.

Best Mobiles in India

English summary
Xiaomi Mi TV Q1 75-inch with 30W stereo speaker system launched.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+